»   » ಗಾಯನದ ರಿಯಾಲಿಟಿ ಶೋಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ತೀರ್ಪುಗಾರರು.!

ಗಾಯನದ ರಿಯಾಲಿಟಿ ಶೋಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ತೀರ್ಪುಗಾರರು.!

Posted By:
Subscribe to Filmibeat Kannada

ಮಕ್ಕಳಲ್ಲಿ ಅಡಗಿರುವ ನೈಪುಣ್ಯತೆಯನ್ನು ಕರುನಾಡ ಜನತೆಗೆ ತೋರಿಸಲು ನಾನಾ ರೀತಿಯ ಟ್ಯಾಲೆಂಟ್ ಹೊಂದಿರುವ 'ಕಿಲಾಡಿ ಕಿಡ್ಸ್' ಎಂಬ ರಿಯಾಲಿಟಿ ಶೋ ಬಳಿಕ ಇದೀಗ 'ಉದಯ ಟಿವಿ'ಯಲ್ಲಿ 4 ವರ್ಷದ ನಂತರ ಮಕ್ಕಳಿಗಾಗಿ ಮತ್ತೆ ಸಿಂಗಿಂಗ್ ರಿಯಾಲಿಟಿ ಶೋ ಪ್ರಸಾರ ಆಗಲಿದೆ.

5 ರಿಂದ 13 ವರ್ಷದ ಮಕ್ಕಳು ಭಾಗವಹಿಸುವ 'ಉದಯ ಸಿಂಗರ್ ಜೂನಿಯರ್ಸ್' ಇದೇ ನವೆಂಬರ್ 18 ರಿಂದ ಪ್ರಸಾರ ಆಗಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಉದಯ ಟಿವಿಯಲ್ಲಿ ರಾತ್ರಿ 9 ಗಂಟೆಗೆ 'ಉದಯ ಸಿಂಗರ್ ಜ್ಯೂನಿಯರ್ಸ್' ಪ್ರಸಾರವಾಗಲಿದೆ.

'ಉದಯ ಸಿಂಗರ್ ಜೂನಿಯರ್ಸ್' ರಿಯಾಲಿಟಿ ಶೋ ಆಡಿಷನ್ಸ್ ವಿವರ

16 ಮಕ್ಕಳ ಈ ಸ್ಪರ್ಧೆಯಲ್ಲಿ ಇಬ್ಬರು ಮುಖ್ಯ ತೀರ್ಪುಗಾರರು ಹಾಗೂ ಒಬ್ಬ ಮೆಂಟರ್ ಇದ್ದು, ಪ್ರತಿ ವಾರವೂ ಹೆಸರಾಂತ ಸಂಗೀತಗಾರರು ಮತ್ತು ಸೆಲೆಬ್ರಿಟಿಗಳು ಈ ಶೋಗೆ ವಿಶೇಷ ನಿರ್ಣಾಯಕರಾಗಿ ಭಾಗವಹಿಸಲಿದ್ದಾರೆ. ಮುಂದೆ ಓದಿರಿ....

ರವಿಚಂದ್ರನ್ - ಮುಖ್ಯ ತೀರ್ಪುಗಾರ

ಕನ್ನಡ ಚಿತ್ರರಂಗ ಕಂಡ ಹೆಸರಾಂತ ನಟ, ನಿರ್ದೇಶಕ, ನಿರ್ಮಾಪಕ, ಗೀತರಚನೆಕಾರ, ಸಂಗೀತ ಸಂಯೋಜಕ, 'ಕನಸುಗಾರ' ಕ್ರೇಜಿಸ್ಟಾರ್ ವಿ.ರವಿಚಂದ್ರನ್ 'ಉದಯ ಸಿಂಗರ್ ಜ್ಯೂನಿಯರ್ಸ್' ಕಾರ್ಯಕ್ರಮದ ಮುಖ್ಯ ತೀರ್ಪುಗಾರ.

ನಿರೂಪಕಿ - ಸಂಗೀತಾ ರವೀಂದ್ರನಾಥ್

ಸಂಗೀತ ದಿಗ್ಗಜ ಮನೋ ಎಂದೇ ಪ್ರಖ್ಯಾತಿ ಪಡೆದಿರುವ ನಾಗೂರು ಬಾಬು ಮತ್ತೊಬ್ಬ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತಿ ಹೊಂದಿರುವ ಮನೋ ಹಿನ್ನಲೆ ಗಾಯಕರಾಗಿ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ 30 ಸಾವಿರಕ್ಕೂ ಹೆಚ್ಚು ಹಾಡನ್ನು ಹಾಡಿದ್ದಾರೆ. ಹಾಗೆ ಸುಚೇತನ್ ಈ ಶೋಗೆ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರೇ, ಹಿನ್ನಲೆ ಗಾಯಕಿ ಸಂಗೀತಾ ರವೀಂದ್ರನಾಥ್ ನಿರೂಪಕಿಯಾಗಿ ನಿರ್ವಹಿಸಲಿದ್ದಾರೆ.

ಆಯ್ಕೆ ಆಗಿದ್ದಾರೆ 16 ಪುಟಾಣಿಗಳು

ಈಗಾಗಲೇ ರಾಜ್ಯದ ಹಲವೆಡೆ ಆಡಿಶನ್ ಮಾಡಲಾಗಿದ್ದು, ಉತ್ತಮ ಹಾಡುಗಾರಿಕೆ ಮತ್ತು ವಾಕ್ ಚಾತುರ್ಯವನ್ನು ಹೊಂದಿದ 16 ಪುಟಾಣಿಗಳನ್ನು ಆಯ್ಕೆಮಾಡಲಾಗಿದೆ. ಈ ಶೋನಲ್ಲಿ ಚಲನಚಿತ್ರಗಳ ಹಾಡುಗಳೊಂದಿಗೆ ಶಾಸ್ತ್ರೀಯ ಸಂಗೀತ, ಜಾನಪದ, ಭಕ್ತಿಗೀತೆ ಮತ್ತು ಇಂಡೋವೆಸ್ಟರ್ನ್ ಹಾಡುಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ.

ಹರಿಯಲಿದೆ ಸಂಗೀತ ಸುರಿಮಳೆ

ಪ್ರತಿಯೊಂದು ಸಂಚಿಕೆಯಲ್ಲಿಯೂ ವಿವಿಧ ರೀತಿಯ ವಿಷಯಗಳನ್ನು ಇಟ್ಟುಕೊಂಡು ಮಕ್ಕಳಿಂದ ವರ್ಣರಂಜಿತ ವೇದಿಕೆಯಲ್ಲಿ ಸಂಗೀತದ ಸುರಿಮಳೆ ಹರಿಯಲಿದ್ದು, ವೀಕ್ಷಕರಿಗೆ ಸಂಗೀತ ರಸದೌತಣವನ್ನು ನೀಡುವುದು ಉದಯ ಟಿವಿಯ ಆಶಯ. ಫಿಕ್ಷನ್ ಮತ್ತು ರಿಯಾಲಿಟಿ ಶೋಗಳಿಗೆ ಹೆಸರಾದ ಸಾಯಿಬಾಬಾ ಟೆಲಿಫಿಲ್ಮ್ಸ್ ಸಂಸ್ಥೆ 'ಉದಯ ಸಿಂಗರ್ ಜ್ಯೂನಿಯರ್ಸ್' ಕಾರ್ಯಕ್ರಮವನ್ನು ನಿರ್ಮಾಣ ಮಾಡಲಿದೆ. ಪ್ರತಿವಾರವೂ ಒಂದು ಎಲಿಮಿನೇಷನ್ ರೌಂಡನ್ನು ಹೊಂದಿದ್ದು ಕೊನೆಗೆ ಗ್ರ್ಯಾಂಡ್‍ ಫಿನಾಲೆ ನಡೆಯಲಿದೆ.

English summary
Crazy Star V.Ravichandran to judge Udaya Singer Juniors reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada