For Quick Alerts
ALLOW NOTIFICATIONS  
For Daily Alerts

ಅಬ್ಬಬ್ಬಾ..1 ದಿನಕ್ಕೆ ಧರ್ಮಸ್ಥಳದಲ್ಲಿ ಊಟ ಮಾಡುವ ಭಕ್ತರ ಸಂಖ್ಯೆ ಕೇಳಿದ್ರೆ ಅಚ್ಚರಿ ಆಗುತ್ತೆ!

|
Weekend with Ramesh Season 4: ಕಾರುಗಳ ಬಗ್ಗೆ ಅಸಮಾನ್ಯ ಜ್ಞಾನವನ್ನ ಹೊಂದಿದ್ದಾರೆ ಡಾ ವೀರೇಂದ್ರ ಹೆಗಡೆ

''ಅನ್ನ ದೇವರಿಗಿಂತ ಅನ್ಯ ದೇವರಿಲ್ಲ..'' ಅಂತಾರೆ. ಹಸಿದವನಿಗೆ ಊಟ ಹಾಕುವುದಕ್ಕಿಂತ ದೊಡ್ಡದು ಬೇರೆ ಯಾವುದು ಇಲ್ಲ. ಅದನ್ನು ಸುಮಾರು 400 ವರ್ಷಗಳಿಂದ ನಿರಂತರವಾಗಿ ಪಾಲಿಸಿಕೊಂಡು ಬರುತ್ತಿರುವ ಕ್ಷೇತ್ರ ಧರ್ಮಸ್ಥಳ.

ಕನ್ನಡಿಗರು ಧರ್ಮಸ್ಥಳಕ್ಕೆ ಹಲವು ಬಾರಿ ಹೋಗಿದ್ದರೂ, ಆ ಕ್ಷೇತ್ರದ ಅನೇಕ ವಿಷಯಗಳು 'ವಿಕೇಂಡ್ ವಿತ್ ರಮೇಶ್' ಕಾರ್ಯಕ್ರಮದ ಮೂಲಕ ತಿಳಿಯುತ್ತಿದೆ. ಅದರಲ್ಲಿ ಧರ್ಮಸ್ಥಳದ ಅನ್ನ ದಾಸೋಹ ವಿಷಯ ನಿಜಕ್ಕೂ ಅದ್ಭುತ ಅನಿಸುತ್ತದೆ.

ಧರ್ಮಸ್ಥಳದಲ್ಲಿ ಎಷ್ಟು ಕಾರುಗಳಿವೆ? : ಬೆರಗುಗೊಳಿಸುತ್ತದೆ ಶ್ರೀಗಳ ಕಾರ್ ಜ್ಞಾನ

ಭಕ್ತಧಿಗಳನ್ನು ತಮ್ಮ ಅತಿಥಿಗಳು ಎಂದು ಧರ್ಮಸ್ಥಳದಲ್ಲಿ ಪ್ರಸಾದ ವಿನಿಯೋಗ ಮಾಡಲಾಗುತ್ತದೆ. ''ದಾಸೋಹ ಭಕ್ತಾದಿಗಳಿಗೆ ತೃಪ್ತಿ ನೀಡಿದರೆ, ಮಂಜುನಾಥ ಸ್ವಾಮಿಗೆ ತೃಪ್ತಿ ಆಗುತ್ತದೆ'' ಎಂಬ ನಂಬಿಕೆ ಇದೆ. ಅದೇ ರೀತಿ ಅಲ್ಲಿಗೆ ಬಂದ ಭಕ್ತರು ಖಾಲಿ ಹೊಟ್ಟೆಯಲ್ಲಿ ಮರಳಿದ ಉದಾಹರಣೆ ಇಲ್ಲ. ಮುಂದೆ ಓದಿ...

ವರ್ಷಕ್ಕೆ 66 ಲಕ್ಷದ 40 ಸಾವಿರ ಜನರು ಊಟ ಮಾಡುತ್ತಾರೆ

ಒಂದು ವರ್ಷಕ್ಕೆ ಧರ್ಮಸ್ಥಳದಲ್ಲಿ ಎಷ್ಟು ಜನ ಊಟ ಮಾಡಬಹುದು ಎನ್ನುವ ಕುತೂಹಲ ಅನೇಕರಿಗೆ ಇರಬಹುದು. ಕಳೆದ ವರ್ಷ ಅಂದರೆ 2017 - 18ರಲ್ಲಿ ಶ್ರೀಕ್ಷೇತ್ರದಲ್ಲಿ ಸುಮಾರು 66 ಲಕ್ಷದ 40 ಸಾವಿರ ಜನರು ಊಟ ಮಾಡಿದ್ದರೆ. ಪ್ರತಿ ವರ್ಷ ಕೂಡ ಇಷ್ಟು ಸಂಖ್ಯೆಯ ಭಕ್ತರಿಗೆ ಪ್ರಸಾದ ನೀಡಲಾಗುತ್ತಿದೆ. ಅಷ್ಟೊಂದು ಜನಕ್ಕೆ ಅನ್ನ ದಾಸೋಹ ಮಾಡಿದ ಕೀರ್ತಿ ಧರ್ಮಸ್ಥಳಕ್ಕೆ ಸಲ್ಲುತ್ತದೆ.

120 ಟನ್ ತೂಕದ ಬಾಹುಬಲಿ ಮೂರ್ತಿ ಧರ್ಮಸ್ಥಳಕ್ಕೆ ಸಾಗಿಸಿದ ಅಸಾಮಾನ್ಯ ಕಥೆ

ಸುಮಾರು 400 ವರ್ಷ ಅನ್ನ ದಾಸೋಹ ನಿಂತಿಲ್ಲ

ಸುಮಾರು 400 ವರ್ಷದ ಹಿಂದೆ ಧರ್ಮಸ್ಥಳದಲ್ಲಿ ಅನ್ನದಾನ ಶುರುವಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಒಂದು ದಿನವೂ ಅಲ್ಲಿ ಅನ್ನದಾನ ನಿಂತಿಲ್ಲ. ಎರಡನೇ ಮಹಾಯುದ್ಧ ಆದ ಸಮಯದಲ್ಲಿ ತುಂಬ ಸಮಸ್ಯೆ ಇದ್ದರೂ ಅನ್ನದಾಸೋಹ ಮಾಡಲಾಯಿತು. ಭಾರತದಲ್ಲಿ ಗೆಸ್ಟ್ ಕಂಟ್ರೋಲ್ ಆಕ್ಟ್ ಬಂದಾಗ ಸಹ ಭಕ್ತರಿಗೆ ಅನ್ನದಾಸೋಹಕ್ಕೆ ತೊಂದರೆ ಆಗಲಿಲ್ಲ. 1975-76ರಲ್ಲಿ ಅಕ್ಕಿಯನ್ನು ಸಾಗಣೆ ಮಾಡುವ ಹಾಗೆ ಇರಲಿಲ್ಲ ಎಂಬ ಕಾನೂನು ಬಂತು. ಆಗಲೂ ಧರ್ಮಸ್ಥಳದಲ್ಲಿ ಅನ್ನದಾನ ನಿಲ್ಲಬಾರದು ಎಂದು ರಾಜ್ಯ ಸರ್ಕಾರವೇ ವಿಶೇಷ ಅನುಮತಿ ನೀಡಿತ್ತು.

ವಿಷ್ಣುವರ್ಧನ್ ಧರ್ಮಸ್ಥಳಕ್ಕೆ ಬಂದಾಗ ಕಾಲು ಬಳಿ ಕೂರುತ್ತಿದ್ದರು: ಹೆಗ್ಗಡೆ

ದಿನಕ್ಕೆ 50 ರಿಂದ 60 ಕ್ವಿಂಟಾಲ್ ಅಕ್ಕಿ

ಧರ್ಮಸ್ಥಳದ ಭೋಜನಾ ಶಾಲೆಯಲ್ಲಿ ಒಮ್ಮೆ 3000 ಸಾವಿರ ಜನ ಊಟಕ್ಕೆ ಕೂರಬಹುದು. ಪ್ರತಿ 20 ನಿಮಿಷಕ್ಕೆ ಮತ್ತೊಂದು ಪಂತಿ ಜನರ ಊಟ ಪ್ರಾರಂಭ ಆಗುತ್ತದೆ. ಮಧ್ಯಾಹ್ನ ಮತ್ತು ರಾತ್ರಿ ಭಕ್ತಾಧಿಗಳಿಗೆ ಪ್ರಸಾದ ನೀಡಲಾಗುತ್ತದೆ. ದಿನಕ್ಕೆ 30 ರಿಂದ 50 ಸಾವಿರ ಜನರು ಇಲ್ಲಿ ಊಟ ಮಾಡುತ್ತಾರೆ. ಒಂದು ದಿನಕ್ಕೆ 50 ರಿಂದ 60 ಕ್ವಿಂಟಾಲ್ ಅಕ್ಕಿ ಬೇಕಾಗುತ್ತದೆ.

ಪ್ರಸಾದ ವಿಭಾಗದಲ್ಲಿ 300 ಜನ ಕೆಲಸ ಮಾಡುತ್ತಾರೆ

ಭಕ್ತಾಧಿಗಳ ಪ್ರಸಾದ ವ್ಯವಸ್ಥೆಯಲ್ಲಿ ಶುಚಿ ಮತ್ತು ರುಚಿಗೆ ಮಹತ್ವ ನೀಡಲಾಗುತ್ತದೆ. ತರಕಾರಿ ಕತ್ತರಿಸುವುದರಿಂದ ಹಿಡಿದು ಪ್ರಸಾದ ತಟ್ಟೆಗೆ ಹಾಕುವವರೆಗೆ ಯಾರು ಕೂಡ ಅದನ್ನು ಬರೀ ಕೈನಲ್ಲಿ ಮುಟ್ಟುವುದಿಲ್ಲ. ಸುಮಾರು 300 ಜನ ಕೆಲಸ ಮಾಡುತ್ತಾರೆ ಈ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಇದನ್ನು ಶ್ರೀಗಳ ಸಹೋದರ ನೋಡಿಕೊಳ್ಳುತ್ತಾರೆ.

ಅಡಿಗೆ ಮಾಡಲು ಕಟ್ಟಿಗೆ ಬಳಸುವುದಿಲ್ಲ

ವಿಶೇಷ ಎಂದರೆ, ಕಳೆದ 30 ವರ್ಷದಿಂದ ಧರ್ಮಸ್ಥಳದಲ್ಲಿ ಅಡಿಗೆ ಮಾಡಲು ಕಟ್ಟಿಗೆ ಬಳಕೆ ಮಾಡುತ್ತಿಲ್ಲ. ಬದಲಿಗೆ ಆಧುನಿಕ ತಂತ್ರಜ್ಞಾನದ ಮೂಲಕ ಅಡಿಗೆ ಮಾಡಲಾಗುತ್ತಿದೆ. ಭೋಜನ ಶಾಲೆಯಲ್ಲಿ ಮೊದಲು ಬರೀ 300 ರಿಂದ 400 ಜನ ಕೂರಬಹುದಿತ್ತು. ಆದರೆ, ಭಕ್ತದಿಗಳ ಸಂಖ್ಯೆ ಜಾಸ್ತಿಯಾದಂತೆ. ವಿಶಾಲ ಬೋಜನ ಶಾಲೆ ವ್ಯವಸ್ಥೆ ಮಾಡಲಾಯಿತು.

ಭಾರತದ ಅತಿ ಉನ್ನತ ಅನ್ನದಾತ ಕ್ಷೇತ್ರ

ನಾಲ್ಕು ವರ್ಷದ ಹಿಂದೆ ಧರ್ಮಸ್ಥಳದ ಬಗ್ಗೆ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ವರದಿ ಮಾಡಿತ್ತು. ನಾಲ್ಕೈದು ದಿನಗಳ ಕಾಲ ಧರ್ಮಸ್ಥಳ ಚಿತ್ರೀಕರಣ ಮಾಡಿದ್ದ ವಾಹಿನಿ, ಭಾರತದ ಅತಿ ಉನ್ನತ ಅನ್ನದಾತ ಕ್ಷೇತ್ರ ಎಂದು ಜಗತ್ತಿಗೆ ತಿಳಿಸಿತ್ತು.

English summary
Dharmasthala dharmadhikari Veerendra Heggade spoke about Dharmasthala Anna Dasoha in weekend with ramesh 4.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more