Just In
Don't Miss!
- Automobiles
ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಯ್ತು 2021ರ ಬಜಾಜ್ ಪಲ್ಸರ್ 220ಎಫ್ ಬೈಕ್
- News
"ಸೋಂಕಿನ ವಿರುದ್ಧ ಲಸಿಕೆಗಳು ಸಂಜೀವಿನಿಯಂತೆ ಕಾರ್ಯ ನಿರ್ವಹಿಸಲಿವೆ"
- Sports
ಭಾರತ vs ಆಸ್ಟ್ರೇಲಿಯಾ: ರೋಹಿತ್ ಶರ್ಮಾ ಹೆಸರಿಗೆ ಕೆಟ್ಟ ದಾಖಲೆ
- Finance
ಅಮೆಜಾನ್ ಪ್ರೈಮ್ ವೀಡಿಯೋ: 89 ರೂಪಾಯಿಗೂ ಲಭ್ಯವಿದೆ!
- Lifestyle
ನೀವು ಅಸಡ್ಡೆ ಮಾಡುವ ಆಲೂಗಡ್ಡೆಯಲ್ಲಿದೆ ಸೌಂದರ್ಯವರ್ಧಕ ಗುಣಗಳು
- Education
NIA Recruitment 2021: 15 ಡೆಪ್ಯುರಿಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆ ಬಗ್ಗೆ ಕೇಳಿದ್ರೆ ಅಚ್ಚರಿ ಪಡುತ್ತೀರಾ
ಹಳ್ಳಿಗಳು ಅಭಿವೃದ್ಧಿ ಆಗದೆ ದೇಶದ ಪ್ರಗತಿ ಅಸಾಧ್ಯ ಎಂದು ಮಹಾತ್ಮ ಗಾಂಧೀಜಿ ಹೇಳುತ್ತಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಗ್ರಾಮೀಣಾ ಜನರ ಅಭಿವೃದ್ಧಿಗಾಗಿ ಪ್ರಾರಂಭಿಸಿದ ಅತೀ ದೊಡ್ಡ ಯೋಜನೆ 'ಗ್ರಾಮೀಣಾಭಿವೃದ್ಧಿ ಯೋಜನೆ'. ಈ ಯೋಜನೆಯಿಂದ ಇದರಿಂದ ಲಕ್ಷಾಂತರ ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.
ಧರ್ಮಸ್ಥಳದ ಸುತ್ತಮುತ್ತ ಗ್ರಾಮಗಳಲ್ಲಿ ಪ್ರಾರಂಭವಾದ ಈ ಯೋಜನೆ ಇಂದು ರಾಜ್ಯಾದಾದ್ಯಂತ, ದೇಶದಾದ್ಯಂತ ಖ್ಯಾತಿ ಗಳಿಸಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಅದೆಷ್ಟೋ ಮಹತ್ತರವಾದ ಯೋಜನೆಗಳಲ್ಲಿ ಅತೀ ದೊಡ್ಡ ಯೋಜನೆ ಅಂದ್ರೆ 'ಗ್ರಾಮೀಣಾಭಿವೃದ್ಧಿ ಯೋಜನೆ'. 1982ರಲ್ಲಿ ಪ್ರಾರಂಭವಾದ ಈ ಯೋಜನೆ ಅಡಿಯಲ್ಲಿ ಇಂದು ಕೋಟ್ಯಾಂತರ ಜನರು ನೆಮ್ಮದೆಯ ಬದುಕು ಕಟ್ಟಿಕೊಂಡಿದ್ದಾರೆ.
ಅಬ್ಬಬ್ಬಾ..1 ದಿನಕ್ಕೆ ಧರ್ಮಸ್ಥಳದಲ್ಲಿ ಊಟ ಮಾಡುವ ಭಕ್ತರ ಸಂಖ್ಯೆ ಕೇಳಿದ್ರೆ ಅಚ್ಚರಿ ಆಗುತ್ತೆ!
ಹಳ್ಳಿಗಳಿಗೆ ಹೋಗಿ, ಅವರ ಮನೆ ಬಾಗಿಲ ಬಳಿ ಹೋಗಿ ಸಹಾಯ ಮಾಡುವ ಯೋಜನೆ ಇದು. ಗ್ರಾಮೀಣ ಜನರ ಮೂಲಭೂತ ಅವಶ್ಯತೆಗಳನ್ನು ಪೂರೈಸುವ ಮೂಲಕ ಅವರ ಬದುಕಿಗೆ ದಾರಿದೀಪ ಆಗಿದೆ ಈ ಯೋಜನೆ. ಮುಂದೆ ಓದಿ..

ಈ ಕಲ್ಪನೆ ಹುಟ್ಟಿದ್ದು ಹೀಗೆ
ಡಾ.ವಿರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳಕ್ಕೆ ಬರುವ ಜನರನ್ನು ಭೇಟಿಯಾಗುತ್ತಿದ್ದರು. ಅದರಲ್ಲಿ ಹೆಚ್ಚಾಗಿ ಗ್ರಾಮೀಣ ಭಾಗದ ಜನರೇ ಇರುತ್ತಿದ್ದರು. ಜನ ಸಂಪರ್ಕ ಶಕ್ತಿಯಿಂದನೇ 'ಗ್ರಾಮೀಣಾಭಿವೃದ್ಧಿ ಯೋಜನೆ' ಎಂಬ ಮಹತ್ತರವಾದ ಕಲ್ಪನೆ ಹುಟ್ಟಿ ಕೊಂಡಿದ್ದು. ಹೀಗೆ ಪ್ರಾರಂಭವಾದ ಈ ಯೋಜನೆ ಗ್ರಾಮೀಣ ಭಾಗದ ಜನರ ಕಷ್ಟಗಳಿಗೆ ನೆರವಾಗಿ, ಕೋಟ್ಯಂತರ ಕುಟುಂಬಗಳ ಬದುಕಿಗೆ ದಾರಿ ಮಾಡಿಕೊಟ್ಟಿದೆ.

27 ಗ್ರಾಮಗಳಿಂದ ಪ್ರಾರಂಭವಾದ ಯೋಜನೆ
ಈ ಯೋಜನೆ ಮೊದಲು ಧರ್ಮಸ್ಥಳದ ಬಳಿ ಬೆಳತಂಗಡಿಯ 27 ಗ್ರಾಮಗಳಲ್ಲಿ ಪ್ರಾರಂಭ ಮಾಡಲಾಯಿತು. ಯಾರೋ ಏನೋ ಸಹಾಯ ಮಾಡ್ತಾರೆ ಅಂತ ಆಲೋಚಿಸುತ್ತಾ ಕೂರುವುದಕ್ಕಿಂತ ತಮ್ಮ ದುಡಿಮೆಯನ್ನು ನಾವೆ ಮಾಡಿಕೊಳ್ಳುಬೇಕು ಎನ್ನುವ ಉದ್ದೇಶದಿಂದ ಪ್ರಾರಂಭವಾದ ಯೋಜನೆ, ಇಂದು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಸ್ವಸಹಾಯ ಸಂಘಗಳ ಸ್ಥಾಪನೆ, ಕಿರು ಆರ್ಥಿಕ ವ್ಯವಹಾರ ಪ್ರಾರಂಭ ಮಾಡುವ ಮೂಲಕ ಗ್ರಾಮೀಣ ಜನರ ಜೀವನಕ್ಕೆ ದಾರಿದೀಪ ಆಗಿದೆ.
ಧರ್ಮಸ್ಥಳದಲ್ಲಿ ಎಷ್ಟು ಕಾರುಗಳಿವೆ? : ಬೆರಗುಗೊಳಿಸುತ್ತದೆ ಶ್ರೀಗಳ ಕಾರ್ ಜ್ಞಾನ

ಫುಡ್ ಫಾರ್ ವರ್ಕ್ ಯೋಜನೆ
ದುಡಿಯುವುದೇ ಮೂರು ಹೊತ್ತಿನ ಊಟಕ್ಕಾಗಿ. ಆದ್ರೆ ಕೆಲಸವಿಲ್ಲದೆ, ಒಂದು ಹೊತ್ತಿನ ಊಟಕ್ಕು ಪರದಾಡುವ ಅದೆಷ್ಟೋ ಮಂದಿ ಇದ್ದಾರೆ. ಅಂತವರ ಹಸಿವನ್ನು ನೀಗಿಸಿದ ಯೋಜನೆ ಇದು. 1982ರಲ್ಲಿ ಆರಂಭವಾದ 'ಫುಡ್ ಫಾರ್ ವರ್ಕ್' ಯೋಜನೆಯಿಂದ ಗ್ರಾಮೀಣ ಭಾಗದ ರೈತರಿಗೆ ಕೃಷಿ ಉತ್ಪನ್ನ ನೀಡುವುದು, ಧರ್ಮಸ್ಥಳದಿಂದ ಹಳ್ಳಿಗಳಿಗೆ ಅಕ್ಕಿ ವಿತರಣೆ ಮಾಡುವುದು. ಧರ್ಮಸ್ಥಳದಿಂದ ಕಳುಹಿಸಲಾಗುತ್ತಿದ್ದ ಕ್ವಿಂಟಾಲ್ ಗಟ್ಟಲೆ ಅಕ್ಕಿ ಬಡ ಜನರ ಮನೆ ಸೇರಿ ಹಸಿದವರ ಹೊಟ್ಟೆ ತುಂಬಿಸುತ್ತಿತ್ತು.

200ಕ್ಕು ಹೆಚ್ಚು ಕೆರೆಗಳ ಅಭಿವೃದ್ಧಿ
ಅಲ್ಪಕಾಲಕ್ಕೆ ಹೆಚ್ಚು ಆದಾಯ ಬರುವಂತಹ ಹೈನು ಗಾರಿಕೆ, ತರಕಾರಿ ಕೃಷಿ, ಪುಷ್ಪ ಕೃಷಿಗೆ ಪ್ರೋತ್ಸಾಹ ಮಾಡುವುದು ಮತ್ತು ಯುವಕ, ಯುವತಿರೆಗೆ ಸ್ವ-ಉದ್ಯೋಗದ ತರಬೇತಿ, ರಸ್ತೆ ನಿರ್ಮಾಣ, ಶಿಶುವಿಹಾರ ಕಠಡ ನಿರ್ಮಾಣ, 80 ಸಾವಿರ ಸೌರವಿದ್ಯುತ್ ಘಟಕ ಸ್ಥಾಪನೆ, 25 ಸಾವಿರ ಗೋಬರ್ ಗ್ಯಾಸ್ ಬಳಕೆ, 5.5 ಲಕ್ಷ ಶೌಚಾಲಯ ನಿರ್ಮಾಣ ಜೊತೆಗೆ 200ಕ್ಕು ಹೆಚ್ಚು ಕೆರೆಗಳ ಪುನರ್ನಿಮಾಣ ಧರ್ಮಸ್ಥಳದ ಗ್ರಾಮೀಣನಾಭಿವೃದ್ಧಿಯ ಮಹತ್ತರ ಯೋಜನೆಗಳಾಗಿವೆ.
ಧರ್ಮಸ್ಥಳದ 'ಬಾಹುಬಲಿ' ನಿರ್ಮಿಸಲು ಆದ ಖರ್ಚು ಎಷ್ಟು?

ಮಹಿಳಾ ಸಬಲೀಕರಣ ಕಾರ್ಯಕ್ರಮ
ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಮಹಿಳೆಯರ ಸಬಾಲಿಕಾರಣಕ್ಕಾಗಿ ಹಾಕಿಕೊಂಡ ಯೋಜನೆ. ಅದರಲ್ಲು ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕಾ ಶಕ್ತಿ ಅಭಿವೃದ್ಧಿ ಮಾಡುವ ಉದ್ದೇಶದಿಂದ ಮಾಡಿದ ಯೋಜನೆ. ಮಹಿಳೆಯರೇ ಉಳಿತಾಯ ಮಾಡಿ ಅವರಿಗೇ ಸಾಲ ಸಿಗುವಂತಾಗಬೇಕು, ಆ ಹಣದಿಂದ ಅವರ ಕುಟುಂಬ ನೆಡೆಯಬೇಕು. ಎನ್ನುವುದು ಇದರ ಉದ್ದೇಶ.

ಜನ ಜಾಗೃತಿ ವೇದಿಕೆ
ಮದ್ಯಪಾನ ಸೇವನೆ ದೊ ಡ್ಡ ಪಿಡುಗಾಗಿ ಗ್ರಾಮೀಣ ಭಾಗದ ಅದೆಷ್ಟು ಕುಟುಂಬವನ್ನು ಕಾಡುತ್ತಿದೆ. ಕುಡಿತ ಎನ್ನುವುದು ಎಷ್ಟೋ ಕುಟುಂಬಗಳ ಬದುಕನ್ನು ಕಿತ್ತುಕೊಂಡಿದೆ . ಇಂತಹ ಮದ್ಯಪಾನ ವ್ಯಸನಿಗಳು ಕುಡಿಯುವುದನ್ನ ಬಿಡಿಸುವ ಮಹತ್ತರವಾದ ಯೋಜನೆ ಜನ ಜಾಗೃತಿ ಯೋಜನೆ. ಇದರಿಂದ ಲಕ್ಷಾಂತರ ಜನರು ಕುಡಿಯುವುದನ್ನ ಬಿಟ್ಟಿದ್ದಾರೆ. ಅದೆಷ್ಟೊ ಕುಟುಂಬಗಳೀಗ ನೆಮ್ಮದಿಯಿಂದ ಜೀವನ ನಡೆಸುತ್ತಿವೆ.

ಗ್ರಾಮೀಣ ಜನರಿಗೂ ಬ್ಯಾಂಕಿನ ವ್ಯವಹಾರ ಗೊತ್ತಾಗಬೇಕು
ಗ್ರಾಮೀಣ ಭಾಗದ ಜನರಿಗೆ ಬ್ಯಾಂಕಿನ ವ್ಯವಹಾರಗಳ ಬಗ್ಗೆ ಹೆಚ್ಚು ತಿಳಿಸಲು ಮಾಡಿರುವ ಯೋಜನೆ ಇದು. ಕಿರು ಆರ್ಥಿಕ ಯೋಜನೆ ಮೂಲಕ ಎಲ್ಲಾ ಗ್ರಾಮೀಣ ಜನರಿಗೆ ಅದರಲ್ಲು ಕಡು ಬಡವರಿಗೆ ನೆರವಾಗುವ ಯೋಜನೆ ಇದು. 1996ರಲ್ಲಿ ಪ್ರಾರಂಭವಾದ ಈ ಯೋಜನೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಯೋಜನೆಯಾಗಿ ಹೊರಹೊಮ್ಮಿದೆ. ಈ ಯೆಜನೆಯಿಂದ ಕೋಟಿಗಟ್ಟಲೆ ಹಣ ಬ್ಯಾಂಕ್ ಮತ್ತು ಬಡ ಜನರ ನಡುವೆ ಎಕ್ಸ್ ಚೇಂಜ್ ಆಗುತ್ತಿದೆ.