»   » ಕಿರುತೆರೆಯಲ್ಲಿ ನೋಡಿ ಆನಂದಿಸಿ ದ ಡರ್ಟಿ ಪಿಕ್ಚರ್

ಕಿರುತೆರೆಯಲ್ಲಿ ನೋಡಿ ಆನಂದಿಸಿ ದ ಡರ್ಟಿ ಪಿಕ್ಚರ್

Posted By:
Subscribe to Filmibeat Kannada

"ಊ ಲಾಲಾ ಊ ಲಾಲಾ ತೂ ಹೈ ಮೇರಿ ಫ್ಯಾಂಟಸಿ..." ಎಂದು ಹಾಡಿ ಕುಣಿದು ಪ್ರೇಕ್ಷಕರನ್ನು ಎಂಬತ್ತರ ದಶಕಕ್ಕೆ ಕರೆದೊಯ್ದ ತಾರೆ ವಿದ್ಯಾ ಬಾಲನ್. ಆಕೆ ಅಭಿನಯದ ಬಹುಚರ್ಚಿತ 'ದ ಡರ್ಟಿ ಪಿಕ್ಚರ್' ಇದೇ ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ.

ರು.18 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ಈ ಚಿತ್ರ ಬಾಕ್ಸಾಫೀಸಲ್ಲಿ ರು.117 ಕೋಟಿ ಬಾಚಿ ಹೊಸ ದಾಖಲೆ ನಿರ್ಮಿಸಿದೆ. ಹಾಗೆಯೇ ವಿದ್ಯಾ ಬಾಲನ್ ಅವರ ವೃತ್ತಿ ಜೀವನದಲ್ಲೂ ಮಹತ್ತರ ತಿರುವು ನೀಡಿದ ಚಿತ್ರ.

ಏಕ್ತಾ ಕಪೂರ್ ಹಾಗೂ ಶೋಭಾ ಕಪೂರ್ ನಿರ್ಮಾಣದ ಈ ಚಿತ್ರಕ್ಕೆ ಮಿಲನ್ ಲೂತ್ರಿಯಾ ಆಕ್ಷನ್ ಕಟ್ ಹೇಳಿದ್ದರು. ನಾಸಿರುದೀನ್ ಶಾ, ತುಷಾರ್ ಕಪೂರ್, ಇಮ್ರಾನ್ ಹಸ್ಮಿ ಪಾತ್ರವರ್ಗದಲ್ಲಿದ್ದಾರೆ. ಈ ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ವಿದ್ಯಾ ಬಾಲನ್ ರಾಷ್ಟ್ರ ಪ್ರಶಸ್ತಿಗೂ ಪಾತ್ರರಾದರು.

ಮಾದಕ ತಾರೆ ಸಿಲ್ಕ್ ಸ್ಮಿತಾ ಅವರ ಜೀವನ ಕತೆಯಾಧಾರಿತ ಎಂಬ ಕಾರಣಕ್ಕೆ ಈ ಚಿತ್ರ ಹಲವಾರು ವಿವಾದಗಳಿಗೆ ಕಾರಣವಾಗಿತ್ತು. ಸಿಲ್ಕ್ ಸ್ಮಿತಾ ಪಾತ್ರ ತುಂಬಲೆಂದೇ ತಮ್ಮ ದೇಹವನ್ನೂ ವಿದ್ಯಾ ಬಾಲನ್ ತುಂಬಿಕೊಂಡು ದುಂಡದುಂಡಗಾಗಿದ್ದರು.

ಸಿನೆಮಾ ತಾರೆಯೊಬ್ಬಳ ಯಶಸ್ಸು, ಅಹಂಕಾರ, ಪ್ರೀತಿಗೆ ಹಾತೊರೆಯುವ ಪಾತ್ರದಲ್ಲಿ ವಿದ್ಯಾ ಬಾಲನ್ ಅಭಿನಯಿಸಿದ್ದರು. 'ದ ಡರ್ಟಿ ಪಿಕ್ಚರ್' ಇದೇ ಸೆಪ್ಟೆಂಬರ್ 9ರಂದು ಮಧ್ಯಾಹ್ನ 12ಕ್ಕೆ ಹಾಗೂ ಅಂದೇ ರಾತ್ರಿ 9ಕ್ಕೆ ಸೋನಿ ಮ್ಯಾಕ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ನೋಡಿ ಆನಂದಿಸಿ. (ಒನ್ ಇಂಡಿಯಾ ಕನ್ನಡ)

English summary
Actress Vidya Balan lead The Dirty Picture is playing Sunday 9th September at 9:00 PM on Sony MAX Channel. film inspired by the life of Silk Smitha, a South Indian actress noted for her erotic roles.
Please Wait while comments are loading...