ಶೈವರ ಮುನಿಸು, ಏನಿದು ತಿಮ್ಮಪ್ಪನ ಟಿವಿ ಗದ್ದಲ

By ಶಂಭು

ತಿರುಮಲೇಶ ವೆಂಕಪ್ಪನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಜಗತ್ತಿನೆಲ್ಲೆಡೆ ಎಲ್ಲೆಲ್ಲಿ ಭಾರತೀಯರಿದ್ದಾರೋ ಅವರಿಗೆಲ್ಲಾ ಗೊತ್ತಿದ್ದಾನೆ ನಮ್ಮ ಗೋವಿಂದ. ನಮ್ಮ ಕನ್ನಡದವರೂ ಕೂಡ ವೆಂಕಪ್ಪನ ಬಳಿ ಹೋಗಿ ಬರುತ್ತಾರೆ ಸಾಕಷ್ಟು ಜನ.

ತಿರುಪತಿ ದೇವಸ್ಥಾನ ಸಮಿತಿಯು ಸ್ವಂತದ್ದೊಂದು ಟಿವಿ ಚಾನೆಲ್ ಹೊಂದಿದೆ. ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ (ಎಸ್ವಿಬಿಸಿ) ಎಂಬ ಹೆಸರಿನ ಈ ಚಾನೆಲ್ ನಲ್ಲಿ ತಿರುಮಲದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳ ನೇರ ಪ್ರಸಾರವಿರುತ್ತದೆ.

ಕೂಡಲೇ ತಿರುಮಲದ ದರ್ಶನ ಪಡೆಯಬೇಕೆಂದರೆ ಎಸ್ವಿಬಿಸಿ ಚಾನೆಲ್ ನೋಡಿಕೊಂಡರೆ ಸಾಕು ವೆಂಕಪ್ಪನ ದರ್ಶನವಾದಂತೆ ಭಾಸವಾಗುತ್ತದೆ ಅಪ್ಪಟ ಆಸ್ತಿಕರಿಗೆ.[ತಿರುಪತಿ ತಿಮ್ಮಪ್ಪನ ಬ್ರಹ್ಮೋತ್ಸವ ಸಂಭ್ರಮ]

Vishnu devotees protest over Sri Venkateswara Bhakthi Channel (SVBC)

ಆದರೆ, ಈಗ ಎಸ್ವಿಬಿಸಿನಲ್ಲಿ ಶಿವನ ಬಗ್ಗೆ ಬಹಳಷ್ಟು ಕಾರ್ಯಕ್ರಮಗಳನ್ನು ತೋರಿಸಲಾಗುತ್ತದೆ ಎಂದು ವಿಷ್ಣುಪ್ರಿಯ ಭಕ್ತರು ಚಾನೆಲ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಸ್ಪಂದಿಸಿದ ಚಾನೆಲ್ ಸಿಬ್ಬಂದಿ ಭಕ್ತರ ಬೇಡಿಕೆಗೆ ಮನ್ನಣೆ ನೀಡಿ ಶಿವನ ಕುರಿತಾದ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿದ್ದಾರೆ.

ಆದರೆ, ಮಜವಾದ ವಿಷಯವೆಂದರೆ ವೆಂಕಟೇಶ್ವರನಲ್ಲಿಯೇ ಈಶ್ವರನಿದ್ದಾನೆ ಎಂಬುದು ವಿಷ್ಣುಪ್ರಿಯರಿಗೆ ಅರ್ಥವಾಗದೇ ಇರುವುದು ವಿಪರ್ಯಾಸ. ಯಾಕೆಂದರೆ ವೆಂಕಟ+ಈಶ್ವರ= ವೆಂಕಟೇಶ್ವರ ಎಂಬುದನ್ನು ಆ ವೆಂಕಪ್ಪನಿಗೆ ಅವರಿಗೆ ತಿಳಿ ಹೇಳಬೇಕು.

ಆಂಧ್ರಪ್ರದೇಶದಲ್ಲಿರುವ ಶ್ರೀಶೈಲ, ಮಲ್ಲವರಂ, ವಲ್ಲುರಮ್ಮ, ಸಿಂಗರಾಯನಕೊಂಡ, ಅಲ್ಲದೆ ಅನೇಕ ಕಡೆ ಇರುವ ಪ್ರಸನ್ನ ಆಂಜನೇಯ ದೇಗುಲಗಳು, ಸಾಯಿಬಾಬಾ ದೇಗುಲ ಎಲ್ಲವನ್ನು ದೇಗುಲ ಪ್ರವಾಸ ಮಾಲಿಕೆಯಡಿಯಲ್ಲಿ ಪ್ರಸಾರ ಮಾಡಲು ಎಸ್ ವಿಬಿಸಿ ಮುಂದಾಗಿದೆ. ಅಲ್ಲದೆ, ಕಾರ್ತಿಕ ಸೋಮವಾರದಂದು ವಿಶೇಷ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ.

More from Filmibeat

English summary
Vishnu devotees protest over Sri Venkateswara Bhakthi Channel (SVBC) for promoting Shaivite pilgrimage centres. But, Channel has defended that it is promoting the temple tourism in association with Tourism department.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X