For Quick Alerts
  ALLOW NOTIFICATIONS  
  For Daily Alerts

  ವಾಯ್ಸ್ ಆಫ್ ಇಂಡಿಯಾ ಛೋಟೆ ಉಸ್ತಾದ್ ನಾಪತ್ತೆ

  By ಜೇಮ್ಸ್ ಮಾರ್ಟಿನ್
  |

  ವಾಯ್ಸ್ ಆಫ್ ಇಂಡಿಯಾ ಛೋಟೆ ಉಸ್ತಾದ್ ರಿಯಾಲಿಟಿ ಶೋ ಗೆದಿದ್ದ ಯುವ ಗಾಯಕಿ ಸೋನಿಯಾ ನಾಪತ್ತೆಯಾಗಿದ್ದಾಳೆ. 16ರ ಹರೆಯದ ಹುಡುಗಿ ತನ್ನ ಮನೆಯಿಂದ ನಾಪತ್ತೆಯಾಗಿರುವ ಪ್ರಕರಣ ಹರ್ಯಾಣದ ಕುರುಕ್ಷೇತ್ರದ ಪೆಹೊವಾದಲ್ಲಿ ನಡೆದಿದೆ.

  2009ರಲ್ಲಿ ಸ್ಟಾರ್ ಟಿವಿಯಲ್ಲಿ ಪ್ರಸಾರವಾದ ವಾಯ್ಸ್ ಆಫ್ ಇಂಡಿಯಾ-ಛೋಟೆ ಉಸ್ತಾದ್ ಗಾಯನ ರಿಯಾಲಿಟಿ ಷೋದ ವಿಜೇತಯಾಗಿರುವ 16ರ ಹರೆಯದ ಬಾಲಕಿ ಸೋನಿಯಾಗಾಗಿ ಹುಡುಕಾಟ ಜಾರಿಯಲ್ಲಿದೆ. ಆದರೆ ಪೊಲೀಸರಿಗೆ ಇದುವರೆಗೆ ಆಕೆ ಬಗ್ಗೆ ಮಾಹಿತಿ ಸಿಕ್ಕಿಲ್ಲ ಏಕೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

  ಸೋಮವಾರ ಬೆಳಗ್ಗೆ ಪೆಹೊವಾದಲ್ಲಿ ಮಂದಿರಕ್ಕೆ ತೆರಳಿದ್ದ ಆಕೆ ಮರಳಿಲ್ಲ. ಆಕೆ ಮಂದಿರಕ್ಕೆ ತೆರಳಲೇ ಇಲ್ಲ ಮತ್ತು ಆಕೆಯ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

  ನಾಪತ್ತೆಯಾಗಿರುವ ಸೋನಿಯಾಗಾಗಿ ಹುಡುಕಾಟಕ್ಕೆ ತಂಡಗಳನ್ನು ರಚಿಸಲಾಗಿದೆ. ಆಕೆಯ ನಾಪತ್ತೆ ಹಿಂದೆ ಯಾರಿದ್ದಾರೆ ಬಗ್ಗೆ ಕುಟುಂಬದವರು ಯಾವುದೇ ಮಾಹಿತಿ ನೀಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

  ಖ್ಯಾತ ಅಡಿಯೋ ಕಂಪನಿ ಟೀ ಸೀರಿಸ್ ಕೂಡಾ ಸೋನಿಯಾ ದನಿಯಲ್ಲ್ ಹೊಸ ಆಲ್ಬಂ ಹೊರ ತಂದಿತ್ತು. ಸೋನಿಯಾ ಜನಪ್ರಿಯತೆ ಸಹಿಸದೆ ಯಾರೋ ಆಕೆಯನ್ನು ಕಿಡ್ನಾಪ್ ಮಾಡಿರುವ ಸಾಧ್ಯತೆ ಇದೆ ಎಂದು ಆಕೆ ಸೋದರ ದೀಪಕ್ ಶರ್ಮ ಶಂಕಿಸಿದ್ದಾರೆ.

  ಅಮೆಜಿಂಗ್ ಕಿಡ್ಸ್ ಪ್ರಶಸ್ತಿಗಾಗಿ ನಡೆದ ಸ್ಪರ್ಧೆಯಲ್ಲಿ ಏಷ್ಯಾದ ಅನೇಕ ಸ್ಪರ್ಧಿಗಳನ್ನು ಸೋನಿಯಾ ಸೋಲಿಸಿ ಮನೆ ಮಾತಾಗಿದ್ದಳು.

  English summary
  Winner of television reality show ‘Voice of India-Chote Ustad’ has gone missing from her native city Kurukshetra, in Haryana. As per reports, she left home for a temple on Monday morning, but never reached there. Her mobile phone was also switched off. The worried family members informed police.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X