For Quick Alerts
  ALLOW NOTIFICATIONS  
  For Daily Alerts

  ಪಬ್ಲಿಕ್ ಟಿವಿಯಲ್ಲಿ ಅಣ್ಣಾ ಹಜಾರೆ ಲೈವ್

  By Rajendra
  |

  ಪಬ್ಲಿಕ್ ಟಿವಿ ಆರಂಭವಾಗಿ ಬುಧವಾರ ಫೆಬ್ರವರಿ 12ಕ್ಕೆ 2 ವರ್ಷ. ಈ ಹಿನ್ನೆಲೆಯಲ್ಲಿ ವಾಹಿನಿ ನಾಲ್ಕು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಿರಿಯ ಗಾಂಧೀವಾದಿ ಅಣ್ಣಾ ಹಜಾರೆ ಈ ಸಂಭ್ರಮದಲ್ಲಿ ಜೊತೆಯಾಗುತ್ತಿರುವುದು ವಿಶೇಷ.

  ಫೆ. 12ರ ಬೆಳಗ್ಗೆ 7.30ಕ್ಕೆ ಆರಂಭವಾಗುವ ನ್ಯೂಸ್ ಕೆಫೆಯಿಂದ ವಾರ್ಷಿಕೋತ್ಸವ ಸಂಭ್ರಮಗಳು ಶುರುವಾಗಲಿದೆ. ಚಾನಲ್ ಮುಖ್ಯಸ್ಥ ಎಚ್.ಆರ್. ರಂಗನಾಥ್ ನಡೆಸಿಕೊಡುವ ನ್ಯೂಸ್ ಕೆಫೆಯಲ್ಲಿ ಸುದ್ದಿಯ ವಿಶ್ಲೇಷಣೆ ಮಾಡಲಿದ್ದಾರೆ ಪುಟಾಣಿ ಮಕ್ಕಳು. [ಪಬ್ಲಿಕ್ ಟಿವಿ ಕನ್ನಡ ಚಾನಲ್ ಈಗ ನಂ. 2]

  ಬೆಳಗ್ಗೆ 8.30ಕ್ಕೆ ಪಬ್ಲಿಕ್ ಟಿವಿ ಹುಟ್ಟು ಮತ್ತು ಬೆಳೆಯುತ್ತಿರುವ ಕಥೆ ಹೇಳುತ್ತೆ "ಜರ್ನಿ ಆಫ್ ಪಬ್ಲಿಕ್ ಟಿವಿ". ಬೆಳಗ್ಗೆ 10ಕ್ಕೆ ಸಿಎಂ ಸಿದ್ದರಾಮಯ್ಯ ಅವರು ಪಬ್ಲಿಕ್ ಸಂಭ್ರಮಕ್ಕೆ ಚಾಲನೆ ನೀಡಿ ಪಬ್ಲಿಕ್ ಟಿವಿಯ ಸಂಪನ್ಮೂಲ ವ್ಯಕ್ತಿಗಳ ಜೊತೆ ಸಂವಾದ ನಡೆಸಲಿದ್ದಾರೆ.

  ಮಧ್ಯಾಹ್ನ 1 ಗಂಟೆಗೆ ಪಬ್ಲಿಕ್ ಸಂಭ್ರಮದ ಅತಿ ವಿಶಿಷ್ಠ "ಪಬ್ಲಿಕ್ ಟಿವಿಯಲ್ಲಿ ಗಾಂಧೀವಾದಿ ಅಣ್ಣಾ ಹಜಾರೆ" ಕಾರ್ಯಕ್ರಮ ಆರಂಭವಾಗಲಿದೆ. ಸ್ಟುಡಿಯೋದಲ್ಲಿ ಅಣ್ಣಾ ಹಜಾರೆ ಅವರೊಂದಿಗೆ ನಿವೃತ್ತ ಲೋಕಾಯುಕ್ತ ಸಂತೋಷ ಹೆಗ್ಡೆ, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ನಿರ್ದೇಶಕ ಟಿ.ಎನ್. ಸೀತಾರಾಮ್, ಜ್ಞಾನಪೀಠ ಪುರಸ್ಕೃತರಾದ ಯು.ಆರ್. ಅನಂತಮೂರ್ತಿ, ಉದಯವಾಣಿ ಗ್ರೂಪ್ ಎಡಿಟರ್ ರವಿ ಹೆಗಡೆ, ವಿಜಯ ಕರ್ನಾಟಕ ಪ್ರಧಾನ ಸಂಪಾದಕ ಸುಗತ ಶ್ರೀನಿವಾಸ್ ರಾಜು ಪಾಲ್ಗೊಳ್ಳಲಿದ್ದಾರೆ.

  ಸಾಮಾಜಿಕ ಕಾರ್ಯಕರ್ತರಾದ ಎಸ್.ಆರ್. ಹಿರೇಮಠ, ವಿವೇಕಾನಂದ ಯೂತ್ ಮೂವ್ಮೆಂಟ್ ನ ಡಾ. ಬಾಲಸುಬ್ರಮಣ್ಯಂ, ನಟ ಉಪೇಂದ್ರ, ನಟಿ ಶ್ರುತಿ, ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಜನಶಕ್ತಿಯ ಶಂಕರ ಬಿದರಿ, ಉದ್ಯಮಿ ಎಂ.ಪಿ. ಶ್ಯಾಮ್, ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಗೋಪಾಲಕೃಷ್ಣ, ನಿವೃತ್ತ ಪೊಲೀಸ್ ಅಧಿಕಾರಿ ಕೆ.ಸಿ. ರಾಮಮೂರ್ತಿ, ಸಾಹಿತಿ ಹಾಗೂ ಮಾಜಿ ಸಚಿವೆ ಪ್ರೊ.ಬಿ.ಟಿ. ಲಲಿತಾನಾಯಕ್, ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಸ್ಪರ್ಶ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಶರಣ್ ಪಾಟೀಲ್, ಮಾಜಿ ಸಚಿವ ಸುರೇಶ್ ಕುಮಾರ್, ಖ್ಯಾತ ಗಾಯಕರಾದ ಕವಿತಾ ಕೃಷ್ಣಮೂರ್ತಿ, ಎಲ್. ಸುಬ್ರಮಣ್ಯಂ ಮತ್ತು ಸಂಗೀತ ಕಟ್ಟಿ ಭಾಗವಹಿಸಿ ಸಂವಾದ ನಡೆಸಲಿದ್ದಾರೆ.

  ಜೊತೆಗೆ ಆಯ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂವಾದಕ್ಕೆ ದನಿಗೂಡಿಸಲಿದ್ದಾರೆ. ಇದರ ಮರು ಪ್ರಸಾರ ಸಂಜೆ 7ಕ್ಕೆ ಇರುತ್ತದೆ. ರಾತ್ರಿ 10ಕ್ಕೆ ಸ್ಪೆಷಲ್ 'ಹಾಟ್ ಸೀಟ್' ಕಾರ್ಯಕ್ರಮ ಪ್ರಸಾರವಾಗಲಿದೆ. ಸದಾ ರಾಜಕಾರಣಿಗಳಿಗೆ ನೇರ ಪ್ರಶ್ನೆ ಹಾಕಿ ಬೆವರಿಳಿಸುವ ವಾಹಿನಿಯ ಮುಖ್ಯಸ್ಥ ಎಚ್ ಆರ್ ರಂಗನಾಥ್ ಗೆ ಪ್ರಶ್ನೆ ಹಾಕಿದ್ದಾರೆ, ಉತ್ತರವನ್ನೂ ಪಡೆದಿದ್ದಾರೆ ಮಾಜಿ ಸಚಿವೆ ಶೋಭಾ ಕರಂದ್ಲಾಜೆ. ತಪ್ಪದೆ ವೀಕ್ಷಿಸಿ. (ಒನ್ಇಂಡಿಯಾ ಕನ್ನಡ)

  English summary
  Anna Hazare will be the chief guest at the Public TV second anniversary celebrations Bangalore. Anna will take questions from Public on phone and from invited guests in the studio, starting 1 PM Wednesday, 12 Feb 2014.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X