»   » ಪ್ರೋಮೋ ನೋಡಿ: ಸಾಧಕರ ಸೀಟ್ ಮೇಲೆ ಕೂತು ಕಣ್ಣೀರಿಟ್ಟ ರಕ್ಷಿತ್ ಶೆಟ್ಟಿ

ಪ್ರೋಮೋ ನೋಡಿ: ಸಾಧಕರ ಸೀಟ್ ಮೇಲೆ ಕೂತು ಕಣ್ಣೀರಿಟ್ಟ ರಕ್ಷಿತ್ ಶೆಟ್ಟಿ

Posted By:
Subscribe to Filmibeat Kannada

ತಾವು ನಡೆದುಬಂದ ಹಾದಿಯ ಒಂದೊಂದೇ ಪುಟಗಳನ್ನು ತಿರುವಿ ಹಾಕುತ್ತಿದ್ದರೆ, ಎಂಥವರ ಕಣ್ಣಾಲಿಗಳು ಒದ್ದೆ ಆಗುವುದು ಸಹಜ. ಈ ಅನುಭವ ಕನ್ನಡ ನಟ 'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ ರವರಿಗೂ ಆಯ್ತು.

ಜೀ ಕನ್ನಡ ವಾಹಿನಿಯ ಜನಪ್ರಿಯ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾವುಕರಾಗಿದ್ದಾರೆ ನಟ ರಕ್ಷಿತ್ ಶೆಟ್ಟಿ. ಅದಕ್ಕೆ ಸಾಕ್ಷಿ ಈಗಷ್ಟೇ ಬಿಡುಗಡೆ ಆಗಿರುವ ಕಾರ್ಯಕ್ರಮದ ಪ್ರೋಮೋ....

ಪ್ರೋಮೋ ನೋಡಿ....

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನಟ ರಕ್ಷಿತ್ ಶೆಟ್ಟಿ ಭಾವುಕರಾಗಿರುವ ವಿಡಿಯೋ ಔಟ್ ಆಗಿದೆ. ಅದರ ಲಿಂಕ್ ಇಲ್ಲಿದೆ. ಕ್ಲಿಕ್ ಮಾಡಿ ನೋಡಿ....

ರಕ್ಷಿತ್ ಶೆಟ್ಟಿಯ ಹುಲಿಕುಣಿತ

ಬಾಲ್ಯದಿಂದಲೂ 'ಹುಲಿಕುಣಿತ' ಮಾಡಬೇಕು ಎಂಬ ಆಸೆ ರಕ್ಷಿತ್ ಶೆಟ್ಟಿ ರವರದ್ದು. 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ವೇದಿಕೆ ಮೇಲೆ ರಕ್ಷಿತ್ 'ಹುಲಿಕುಣಿತ' ಮಾಡಿರುವ ವಿಡಿಯೋ ಲಿಂಕ್ ಇಲ್ಲಿದೆ. ಕ್ಲಿಕ್ ಮಾಡಿ ನೋಡಿ...

'ಯುವ' ಸಾಧಕ

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಕಿರಿಕ್ ಪಾರ್ಟಿ'... ಹೀಗೆ ಸಾಲು ಸಾಲು ಯಶಸ್ವಿ ಕನ್ನಡ ಚಿತ್ರಗಳನ್ನ ನೀಡಿರುವ ರಕ್ಷಿತ್ ಶೆಟ್ಟಿ ಈ ವಾರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಅತಿಥಿ. [ಸಾಧಕರ ಸೀಟ್ ಮೇಲೆ ಕುಳಿತ 'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ.!]

ರಕ್ಷಿತ್ ಶೆಟ್ಟಿಯ ಜೀವನ ಚರಿತ್ರೆ 'ವೀಕೆಂಡ್'ನಲ್ಲಿ

ನಟ ರಕ್ಷಿತ್ ಶೆಟ್ಟಿ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಅದೆಷ್ಟೋ ವಿಷಯಗಳು ಈ ವಾರಾಂತ್ಯದಲ್ಲಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಹಿರಂಗವಾಗಲಿದೆ. ಮಿಸ್ ಮಾಡದೆ ನೋಡಿ....

English summary
Kannada Actor Rakshit Shetty has taken part in Zee Kannada Channel's popular show Weekend with Ramesh-3. Watch promo here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada