»   » ಸುದೀಪ್ ತಪ್ಪದೇ ಕೇಳಿಸಿಕೊಳ್ಳಿ... ಹುಚ್ಚ ವೆಂಕಟ್ 'ತಪ್ಪು ಮಾಡಿಲ್ಲ'ವಂತೆ.!

ಸುದೀಪ್ ತಪ್ಪದೇ ಕೇಳಿಸಿಕೊಳ್ಳಿ... ಹುಚ್ಚ ವೆಂಕಟ್ 'ತಪ್ಪು ಮಾಡಿಲ್ಲ'ವಂತೆ.!

Posted By:
Subscribe to Filmibeat Kannada

''ಬಿಗ್ ಬಾಸ್' ಮನೆಯೊಳಗೆ ಹೋಗಿ, ಸ್ಪರ್ಧಿ ಮೇಲೆ ಹಲ್ಲೆ ನಡೆಸಿ ಬಂದಿರುವ ಹುಚ್ಚ ವೆಂಕಟ್ ರವರ ನಡವಳಿಕೆ ಅಕ್ಷಮ್ಯ. ಅವರಿಗೆ ಶಿಕ್ಷೆ ಆಗುವವರೆಗೂ ನಾನು 'ಬಿಗ್ ಬಾಸ್' ಶೋ ಹೋಸ್ಟ್ ಮಾಡಲ್ಲ'' ಅಂತ ಟ್ವಿಟ್ಟರ್ ಮೂಲಕ ಕಿಚ್ಚ ಸುದೀಪ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

'ಬಿಗ್ ಬಾಸ್ ಕನ್ನಡ-4' ವೇದಿಕೆ ಮೇಲೆ ಸುದೀಪ್ ಕಾಣಿಸಿಕೊಳ್ಳುವುದು ಅನುಮಾನ ಎಂಬ ಸುದ್ದಿ ಎಲ್ಲೆಡೆ ಹಬ್ಬಿರುವ ಬೆನ್ನಲ್ಲೆ, ಸುದೀಪ್ ರವರಿಗೆ ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಒಂದು ವಿಡಿಯೋ ಸಂದೇಶ ನೀಡಿದ್ದಾರೆ. [ಹುಚ್ಚ ವೆಂಕಟ್ 'ಕಿರಿಕ್': ಕೆರಳಿದ 'ಹೆಬ್ಬುಲಿ' ಕಿಚ್ಚ ಸುದೀಪ್.!]

''ನಾನು ಮಾಡಿರುವುದು ತಪ್ಪಲ್ಲ. ನನ್ನ ಮೇಲಿನ ಕೋಪಕ್ಕೆ 'ಬಿಗ್ ಬಾಸ್' ಶೋ ಅಟೆಂಡ್ ಮಾಡಲ್ಲ ಅಂತ ಹೇಳಬೇಡಿ'' ಅಂತ ಸುದೀಪ್ ಗೆ ಹುಚ್ಚ ವೆಂಕಟ್ ಕೇಳಿಕೊಂಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಹುಚ್ಚ ವೆಂಕಟ್ ಏನೆಲ್ಲ ಹೇಳಿದ್ದಾರೆ ಅಂತ ಅವರ ಮಾತುಗಳಲ್ಲೇ ಓದಿರಿ....

ಸುದೀಪ್....ಕೇಳಿಸಿಕೊಳ್ಳಿ....

''ಸುದೀಪ್ ಅವರೇ....ದಯವಿಟ್ಟು ನನ್ನ ಮೇಲಿರುವ ಕೋಪಕ್ಕೆ 'ಬಿಗ್ ಬಾಸ್' ಪ್ರೋಗ್ರಾಂ ಅಟೆಂಡ್ ಮಾಡಲ್ಲ ಅಂತ ಹೇಳಬೇಡಿ. ನಾನು ಹೊಡೆದಿರುವುದು ಕೆಟ್ಟ ವ್ಯಕ್ತಿಯನ್ನ. ಒಳ್ಳೆ ವ್ಯಕ್ತಿಯನ್ನಲ್ಲ'' - ಹುಚ್ಚ ವೆಂಕಟ್ [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

'ಸಾರಿ' ಕೇಳಬೇಕಾ.?

''ಒಳ್ಳೆ ವ್ಯಕ್ತಿಯನ್ನ ಹೊಡೆದಿದ್ದರೆ ನಾನೇ 'ಸಾರಿ' ಕೇಳುತ್ತಿದ್ದೆ. ನಾನೇ ಶಿಕ್ಷೆ ತೆಗೆದುಕೊಳ್ಳುತ್ತಿದ್ದೆ. ನಾನು ಹೊಡೆದಿರುವುದು ಕೆಟ್ಟ ವ್ಯಕ್ತಿಯನ್ನ. ಸೋ, ನಾನು 'ಸಾರಿ' ಕೇಳುವ ಅವಶ್ಯಕತೆ ಇಲ್ಲ'' - ಹುಚ್ಚ ವೆಂಕಟ್ ['ಬಿಗ್' ಅವಾಂತರ: 'ಒಳ್ಳೆ ಹುಡುಗ' ಪ್ರಥಮ್ ಗೆ ಪಂಚ್ ಕೊಟ್ಟ ಹುಚ್ಚ ವೆಂಕಟ್.!]

ಕ್ಷಮೆ ಕೇಳಿರುವುದು ಯಾರಿಗೆ?

''ಆದರೂ, ಒಂದೇ ಒಂದು ಬಾರಿ 'ಸಾರಿ' ಕೇಳಲೇಬೇಕು. ಅದು 'ಬಿಗ್ ಬಾಸ್' ಅವರಿಗೆ, ಕಲರ್ಸ್ ಕನ್ನಡಗೆ, ಪರಮ್ ರವರಿಗೆ. ಯಾಕಂದ್ರೆ, ಅವರು ನನ್ನನ್ನ ನಂಬಿಕೊಂಡು ಒಳಗೆ ಕಳುಹಿಸಿದರು'' - ಹುಚ್ಚ ವೆಂಕಟ್ [ಅಷ್ಟಕ್ಕೂ, ಸಡನ್ನಾಗಿ ಹುಚ್ಚ ವೆಂಕಟ್ ಗೆ ಪಿತ್ತ ನೆತ್ತಿಗೇರಿದ್ದು ಯಾಕೆ.?]

ತಾಳ್ಮೆ ಕಳೆದುಕೊಂಡ ಮೇಲೆ...

''ನಾನು ಯಾರ ಮೇಲೂ ಕೈ ಮಾಡಲ್ಲ ಅಂತ ಒಳಗೆ ಕಳುಹಿಸಿದರು. ಆದ್ರೆ ನಾನು ಏನು ಮಾಡಲಿ. ನನಗೆ ತಾಳ್ಮೆ ಇಲ್ಲ. ಅವನು (ಪ್ರಥಮ್) ಬಹಳ ಕೆದಕಿಬಿಟ್ಟ. ಹೆಣ್ಮಕ್ಕಳ ಬಗ್ಗೆ ಮಾತನಾಡಿದ. ನಾನು ಹೊಡೆದಿರುವುದು ಪ್ರಥಮ್ ಗೆ, ಅದು ಕನ್ನಡ ಬಾವುಟಕ್ಕೆ ಅವಮಾನ ಮಾಡಿರುವುದಕ್ಕಾಗಿ ಮತ್ತು ಹೆಣ್ಮಕ್ಕಳಿಗೆ ಗೌರವ ಕೊಡದೇ ಇದ್ದಿದ್ದಕ್ಕಾಗಿ'' - ಹುಚ್ಚ ವೆಂಕಟ್

ಬೇರೆಯವರೂ ಹೊಡೆಯುತ್ತಾರೆ, ನೋಡಿ...

''ನಾನೇ ಅವನ ಹತ್ತಿರ 10 ನಿಮಿಷ ಇರೋದಕ್ಕೆ ಆಗಲಿಲ್ಲ. ಇನ್ನೂ ಮಿಕ್ಕಿದ್ದವರು 24 ಗಂಟೆ ಹೇಗಿದ್ದರೋ...ಹೆಂಗಿರ್ತಾರೋ...ಗೊತ್ತಿಲ್ಲ. ಇನ್ಮುಂದೆ ಯಾರಾದರೂ ಒಬ್ಬರು ಹೊಡೆಯುತ್ತಾರೆ....ನೀವು ನೋಡ್ಕೊಳ್ಳಿ....'' - ಹುಚ್ಚ ವೆಂಕಟ್

ತಪ್ಪು ಮಾಡಿಲ್ಲ

''ನನಗೋಸ್ಕರ ದಯವಿಟ್ಟು 'ಬಿಗ್ ಬಾಸ್' ಪ್ರೋಗ್ರಾಂನ ಅಟೆಂಡ್ ಮಾಡಿ...ನಾನೇನಾದರೂ ತಪ್ಪು ಮಾಡಿದ್ದೀನಿ ಅಂತ ನಿಮಗೆ ಅನಿಸಿದ್ರೆ, ನಾನು ತಪ್ಪು ಮಾಡಿಲ್ಲ ಅಂತ ಹೇಳೋಕೆ ಇಷ್ಟ ಪಡುತ್ತೇನೆ'' - ಹುಚ್ಚ ವೆಂಕಟ್

ವಿಡಿಯೋ ನೋಡಿ....

ಕಿಚ್ಚ ಸುದೀಪ್ ರವರಿಗೆ ಹುಚ್ಚ ವೆಂಕಟ್ ನೀಡಿರುವ ವಿಡಿಯೋ ಲಿಂಕ್ ಇಲ್ಲಿದೆ, ಕ್ಲಿಕ್ ಮಾಡಿ...

English summary
Huccha Venkat defends himself in a video in which he apologizes Colors Kannada for his act of hitting Pratham in 'Bigg Boss Kannada-4'. Watch the video

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada