»   » 'ಪಬ್ಲಿಕ್ ಟಿವಿ' ಮತ್ತು ಎಚ್.ಆರ್.ರಂಗನಾಥ್ ಬಗ್ಗೆ ಯಶ್ ಬಾಯಿಂದ ಬಂದ ಮಾತುಗಳಿವು

'ಪಬ್ಲಿಕ್ ಟಿವಿ' ಮತ್ತು ಎಚ್.ಆರ್.ರಂಗನಾಥ್ ಬಗ್ಗೆ ಯಶ್ ಬಾಯಿಂದ ಬಂದ ಮಾತುಗಳಿವು

Posted By: ಒನ್ಇಂಡಿಯಾ ಕನ್ನಡ ಸಿಬ್ಬಂದಿ
Subscribe to Filmibeat Kannada

'ಸ್ಟಾರ್ ನಟರನ್ನ ಪ್ರಶ್ನೆ' ಮಾಡುವ ಮಾಧ್ಯಮಗಳಿಗೆ ಯಶ್ ಓಪನ್ ಚಾಲೆಂಜ್ ಹಾಕಿದ್ದರು. ಆ ಸವಾಲನ್ನ 'ಪಬ್ಲಿಕ್ ಟಿವಿ' ಕೂಡ ಸ್ವೀಕರಿಸಿತ್ತು. ಬಳಿಕ 'ಪಬ್ಲಿಕ್ ಟಿವಿ'ಗೆ ಶಹಬ್ಬಾಸ್ ಹೇಳುತ್ತಾ ರಾಕಿಂಗ್ ಸ್ಟಾರ್ ಯಶ್ ವಿಡಿಯೋ ಕೂಡ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.

ಈಗ ಅದೇ 'ಪಬ್ಲಿಕ್ ಟಿವಿ' ಹಾಗೂ ವಾಹಿನಿಯ ಮುಖ್ಯಸ್ಥ ಎಚ್.ಆರ್.ರಂಗನಾಥ್ ಹೆಸರನ್ನು ಪ್ರಸ್ತಾಪ ಮಾಡುತ್ತಾ, ನಟ ಯಶ್ ಮತ್ತೊಂದು ವಿಡಿಯೋ ಅಪ್ ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ನಟ ಯಶ್ ಏನೇನೆಲ್ಲಾ ಹೇಳಿದ್ದಾರೆ ಅಂತ ಅವರ ಮಾತುಗಳಲ್ಲೇ ಓದಿರಿ...ಓವರ್ ಟು ಯಶ್....

ಇದು 'ಪಬ್ಲಿಕ್ ಟಿವಿ' ಮತ್ತು 'ಯಶ್' ನಡುವಿನ ಯುದ್ಧ ಅಲ್ಲ.!

''ಕೆಲವು ವಿಷಯಗಳನ್ನ ನಾನು ಮೊದಲು ಕ್ಲಾರಿಫೈ ಮಾಡಲು ಇಷ್ಟ ಪಡುತ್ತೇನೆ. ಈ ಒಂದು ವಿಷಯ ಏನು ನಡೆಯುತ್ತಿದೆ ಇವಾಗ, ಅದು ನನ್ನ ಮತ್ತು ಎಚ್.ಆರ್.ರಂಗನಾಥ್ ನಡುವೆ ಅಥವಾ ನನ್ನ ಮತ್ತು ಪಬ್ಲಿಕ್ ಟಿವಿ ನಡೆಯುತ್ತಿರುವ ವಿಷಯ ಅಲ್ಲ'' - ಯಶ್, ನಟ [ಯಶ್ ಹಾಕಿದ ಸವಾಲಿಗೆ ಪಬ್ಲಿಕ್ ಟಿವಿಯ ಎಚ್.ಆರ್.ರಂಗನಾಥ್ ಏನಂತಾರೆ.?]

ಇದೆಲ್ಲ ಶುರು ಆಗಿದ್ದು ಎಲ್ಲಿಂದ?

''ಇದೆಲ್ಲ ಶುರು ಆಗಿದ್ದು 'ರೂಪತಾರಾ' ಎನ್ನುವ ಮ್ಯಾಗಝೀನ್ ಗೆ ಇಂಟರ್ ವ್ಯೂ ಮಾಡಿದರು. ಅದರಲ್ಲಿ ಕಾವೇರಿ ಹೋರಾಟದಲ್ಲಿ ನಾನು ಭಾಗವಹಿಸದಿರುವ ಬಗ್ಗೆ ಜನರಿಗೆ ಅಸಮಾಧಾನ ಇದೆ ಅಂತ ಕೆಲವು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ನಾನು ಕೊಟ್ಟ ನೇರ ಉತ್ತರ - ''ಈ ಪ್ರಶ್ನೆ ಕೇಳುವುದಕ್ಕೆ ಜನರಿಗೆ ಅರ್ಹತೆ ಮತ್ತು ಅಧಿಕಾರ ಎರಡೂ ಇದೆ'' ಅಂತ ಹೇಳಿದ್ದೆ'' - ಯಶ್, ನಟ

ಯಶ್ ಓಪನ್ ಚಾಲೆಂಜ್ ಹಾಕಿದ್ಯಾಕೆ?

''ಇದಾದ ಬಳಿಕ ನಾನು ಒಂದು ಓಪನ್ ಚಾಲೆಂಜ್ ಹಾಕಿದೆ. ಮಾಧ್ಯಮಗಳು 'ಎಲ್ಲಿದ್ದಾರೆ ಸಿನಿಮಾ ನಟರು?' ಅಂತ ಪ್ರಶ್ನೆ ಕೇಳಿದಾಗ ನಾನೇ ಹೇಳಿದ್ದು 'ಎಲ್ಲರೂ ಬನ್ನಿ...ಒಟ್ಟಿಗೆ ಏನಾದರೂ ಮಾಡೋಣ. ಮಾಧ್ಯಮಗಳು ರೆಡಿ ಎನ್ನುವ ಹಾಗಿದ್ರೆ ಪ್ರೈಮ್ ಸ್ಲಾಟ್ ಕೊಡಿ ರೈತರ ಸಮಸ್ಯೆ ಬಗ್ಗೆ ಮಾತನಾಡೋಣ. ಟಿವಿ ಕಮರ್ಶಿಯಲ್ಸ್ ಕೊಡಿ, ಅದರ ಮುಖಾಂತರ ರೈತರಿಗೆ ಸಹಾಯ ಮಾಡೋಣ. ನಾನು ಫ್ರೀ ಆಗಿ ಭಾಗವಹಿಸುತ್ತೇನೆ. ನೀವೂ ಬನ್ನಿ' ಅಂತ ಹೇಳಿದೆ'' - ಯಶ್, ನಟ

ಸೇರಿಗೆ ಸವ್ವಾ ಸೇರು!

''ಈ ಸವಾಲಿಗೆ 'ಪಬ್ಲಿಕ್ ಟಿವಿ' ಮುಂದೆ ಬಂದು 'ಸೇರಿಗೆ ಸವ್ವಾ ಸೇರು' ಎನ್ನುವ ಒಂದು ಕಾರ್ಯಕ್ರಮ ಮಾಡ್ತು. ಆ ಕಾರ್ಯಕ್ರಮದ ಮುಖಾಂತರ 'ಪಬ್ಲಿಕ್ ಟಿವಿ' 'ನಾವು ರೆಡಿ ಇದ್ದೀವಿ' ಎಂಬ ಅನಿಸಿಕೆ ವ್ಯಕ್ತ ಪಡಿಸಿದರು. ಅದಕ್ಕೆ ರಿಯಾಕ್ಟ್ ಮಾಡಿ ನಾನು ಒಂದು ವಿಡಿಯೋ ಮಾಡಿದೆ. ಆ ವಿಡಿಯೋದಲ್ಲಿ ನಾನು ಕ್ಲಿಯರ್ ಆಗಿ ಎಲ್ಲಾ ವಿಷಯಗಳನ್ನು ಹೇಳಿದ್ದೆ'' - ಯಶ್, ನಟ [ಯಶ್ v/s ಕನ್ನಡ ಮಾಧ್ಯಮ: ಕಥೆ ಶುರು ಆಗಿದ್ದು ಎಲ್ಲಿಂದ?]

ಪಬ್ಲಿಕ್ ಟಿವಿ ಕಡೆಯಿಂದ ಫೋನ್ ಬರ್ಲಿಲ್ಲ!

''ನಂತರ 9.30ಗೆ 'ಪಬ್ಲಿಕ್ ಟಿವಿ'ಯ ಎಚ್.ಆರ್.ರಂಗನಾಥ್ ನನ್ನ ಜೊತೆ ಮಾತನಾಡುತ್ತಾರೆ ಅಂತ ಹೇಳಿದ್ದರು. ನಾನೂ ಕೂಡ ಫೋನ್ ಕಾಲ್ ಗಾಗಿ ಕಾಯುತ್ತಿದ್ದೆ. ಆದ್ರೆ, ನನಗೆ ಅವರ ಕಡೆಯಿಂದ ಯಾವುದೇ ಕರೆ ಬರಲಿಲ್ಲ'' - ಯಶ್, ನಟ [ಖಾಸಗಿ ನ್ಯೂಸ್ ಚಾನೆಲ್ ವಿರುದ್ಧ ತೊಡೆ ತಟ್ಟಿ ನಿಂತ ಯಶ್]

ಪಬ್ಲಿಕ್ ಟಿವಿ ಬಗ್ಗೆ ಯಶ್ ಕಾಮೆಂಟ್

''ಟಿವಿಯಲ್ಲಿ ''ನಾವೂ ರೆಡಿ, ಅವರೂ ರೆಡಿ, ಟೈಮ್ ನಿಗದಿ ಆಗಬೇಕು. ಈಗ ಅವರ (ಯಶ್) ಸಿನಿಮಾ ಇರುವುದರಿಂದ ರಿಲೀಸ್ ಆದ್ಮೇಲೆ ಮಾತನಾಡೋಣ'' ಅಂತ ಅವರೇ (ಎಚ್.ಆರ್.ರಂಗನಾಥ್) ಹೇಳಿದರು. ಜೊತೆಗೆ ''ಕೆಲವು ಸಂದರ್ಭಗಳಲ್ಲಿ ಅವರ (ಯಶ್) ವೈಯುಕ್ತಿಕ ತೇಜೋವಧೆ ಆಗಬೇಕಾದರೆ ನಾವು (ಪಬ್ಲಿಕ್ ಟಿವಿ) ಹೇಗೆ ನಡೆದುಕೊಂಡಿದ್ದೀವಿ'' ಅಂತ ಅವರು (ಎಚ್.ಆರ್.ರಂಗನಾಥ್) ಹೇಳಿದರು. ಖಂಡಿತವಾಗಲೂ ಪಬ್ಲಿಕ್ ಟಿವಿ ನಡೆದುಕೊಂಡಿರುವ ರೀತಿ ಕರೆಕ್ಟಾಗಿದೆ. ನಾವು ಕರೆಕ್ಟಾಗಿ ಇದ್ದಿದ್ದಕ್ಕೆ ಕರೆಕ್ಟ್ ಆದ ಪ್ಲಾಟ್ ಫಾರ್ಮ್ ಕ್ರಿಯೇಟ್ ಮಾಡಿ ಕೊಟ್ಟಿದೆ. ಅದಕ್ಕೆ ನಾನು ಧನ್ಯವಾದಗಳನ್ನು ಹೇಳುತ್ತೇನೆ'' - ಯಶ್, ನಟ

'ಪಬ್ಲಿಕ್ ಟಿವಿ' ಜೊತೆ ನಡೆಯುತ್ತಿರುವ ಜಟಾಪಟಿ ಅಲ್ಲ

''ಮತ್ತೊಮ್ಮೆ ಹೇಳುತ್ತಿದ್ದೇನೆ ಇದು ಪಬ್ಲಿಕ್ ಟಿವಿ ಮತ್ತು ನನ್ನ ಮಧ್ಯೆ ನಡೆಯುತ್ತಿರುವ ಜಟಾಪಟಿ ಅಲ್ಲವೇ ಅಲ್ಲ. ಎಂಟೈರ್ ಮಾಧ್ಯಮ ನಡೆದುಕೊಳ್ಳುತ್ತಿರುವ ರೀತಿ ಅಥವಾ ಈ ಸಂದರ್ಭದಲ್ಲಿ ಮಾಧ್ಯಮ ನಮ್ಮನ್ನ ಕರೆದುಕೊಂಡು ಹೋಗುತ್ತಿರುವ ರೀತಿ ಬಗ್ಗೆ ಜನರ ಹೇಳುತ್ತಿರುವುದನ್ನ ನಾನು ಕೇಳುತ್ತಿದ್ದೇನೆ ಅಷ್ಟೆ'' - ಯಶ್, ನಟ

ಏನು ಮಾಡಬೇಕು ಹೇಳಿ....

''ನಾನು ಜನರ ಪ್ರತಿನಿಧಿ ಆಗಿ ಪ್ರಶ್ನೆ ಮಾಡುತ್ತಿದ್ದೇನೆ. ನನಗೆ ಸ್ಫೂರ್ತಿ ನೀಡುತ್ತಿರುವವರು ಮಾಧ್ಯಮದವರೇ....'ಏನು ಮಾಡುತ್ತಿದ್ದೀರಾ?' ಎಂಬ ಪ್ರಶ್ನೆಗೆ 'ಏನು ಮಾಡಬೇಕು?' ಅಂತ ಬಂದು ನಾನು ಕೇಳುತ್ತಿದ್ದೇನೆ'' - ಯಶ್, ನಟ

ಪಬ್ಲಿಸಿಟಿ ಗಿಮಿಕ್ ಅಲ್ಲ ಇದು!

''ಪಬ್ಲಿಕ್ ಟಿವಿ ಯವರು ಸಿನಿಮಾ ರಿಲೀಸ್ ಆದ್ಮೇಲೆ ಪ್ರೋಗ್ರಾಂ ಮಾಡ್ತೀವಿ ಎಂದಿದ್ದಾರೆ. ನಾನು ಇಲ್ಲಿ ಒಂದು ಪಾಯಿಂಟ್ ಕ್ಲಿಯರ್ ಮಾಡಬೇಕು. ಸಿನಿಮಾ ರಿಲೀಸ್ ಟೈಮ್ ನಲ್ಲಿ ಇದೆಲ್ಲ ಗಿಮಿಕ್ ಮಾಡುತ್ತಿರಬಹುದು ಅಂತ ಅನಿಸುವುದು ಸಹಜ. ಹಾಗೆ ಅನಿಸಿದ್ರೆ, 'ನನ್ನ ಸಿನಿಮಾ ರಿಲೀಸ್ ಆದ್ಮೇಲೆ ಈ ಪ್ರೋಗ್ರಾಂ ಮಾಡೋಣ'. ಇಲ್ಲ, ಈಗಲೇ ಆಗಲಿ ಅಂದ್ರೂ ನಾನು ರೆಡಿ ಇದ್ದೀನಿ'' - ಯಶ್, ನಟ

ಸಿನಿಮಾ ಪಕ್ಕಕ್ಕೆ ಇಡಿ

''ನನ್ನ ಸಿನಿಮಾ ಪ್ರಮೋಷನ್ ಯಾರೂ ಮಾಡೋದು ಬೇಕಾಗಿಲ್ಲ. ಅಂದ್ರೆ, ಆ ಎಕ್ಸ್ ಪೆಕ್ಟೇಷನ್ ಇಂದ ನಾನು ಇದನ್ನೆಲ್ಲಾ ಮಾಡುತ್ತಿಲ್ಲ. ಇವತ್ತು ನಾನು ಏನೇ ಆಗಿದ್ದರೂ, ಎಲ್ಲಾ ಮಾಧ್ಯಮಗಳ ಸಹಕಾರದಿಂದ. ಸಿನಿಮಾ ಎನ್ನುವುದನ್ನ ಪಕ್ಕಕ್ಕೆ ಇಡೋಣ. ನೀವೇ ಪ್ರಶ್ನೆ ಕೇಳಿದಂತೆ 'ಏನು ಮಾಡಬಹುದು' ಅಂತ ನಾನು ಕೇಳುತ್ತಿದ್ದೇನೆ ಅಷ್ಟೆ'' - ಯಶ್, ನಟ

ಯಶ್ ಗೆ 'ನೀತಿ ಪಾಠ'

''ನಿನ್ನೆ 'ಪಬ್ಲಿಕ್ ಟಿವಿ'ಯವರು ರಾಜ್ ಕುಮಾರ್ ಕುರಿತು ತೋರಿಸಿ, 'ಯಶ್ ನೀತಿ ಪಾಠ' ಅಂತ ಒಂದು ಕಾರ್ಯಕ್ರಮ ಮಾಡಿದರು. ಡಾ.ರಾಜ್ ಕುಮಾರ್ ಹಾಗೂ ಮಹಾತ್ಮ ಗಾಂಧಿ ರವರನ್ನು ನೀವು ನನಗೆ ನೆನಪಿಸಿದ್ರಿ. ಇದು ನನಗೆ ಇನ್ನೂ ಒಳ್ಳೆಯದ್ದು ಆಯಿತು. ಅವರು ಹಾಕಿದ ದಾರಿಯಲ್ಲೇ ನಡೆಯೋಣ, ಗೆಲುವು ಸಿಗುವವರೆಗೂ ಹೋರಾಟ ಮಾಡೋಣ ಅಂತಲೇ ನಾನು ಹೇಳುತ್ತಿರುವುದು'' - ಯಶ್, ನಟ

ವಿಡಿಯೋ ನೋಡಿ....

'ಪಬ್ಲಿಕ್ ಟಿವಿ' ಮತ್ತು ಎಚ್.ಆರ್.ರಂಗನಾಥ್ ಹೆಸರನ್ನು ಯಶ್ ಪ್ರಸ್ತಾಪಿಸಿರುವ ವಿಡಿಯೋ ಇಲ್ಲಿದೆ ನೋಡಿ....ಈ ಲಿಂಕ್ ಕ್ಲಿಕ್ ಮಾಡಿ....

English summary
Kannada Actor Yash has spoken about Public TV and HR Ranganath in a video, which he has shared in his Facebook Account. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada