»   » ಬಹುನಿರೀಕ್ಷಿತ 'ವೀಕೆಂಡ್' ಆರಂಭ: ಮೊದಲ ಅತಿಥಿ ಬಹಿರಂಗ.!

ಬಹುನಿರೀಕ್ಷಿತ 'ವೀಕೆಂಡ್' ಆರಂಭ: ಮೊದಲ ಅತಿಥಿ ಬಹಿರಂಗ.!

Posted By:
Subscribe to Filmibeat Kannada

ಇಷ್ಟು ದಿನ 'ರಮೇಶ್ ಜೊತೆಗಿನ ಸಾಧಕರ ವೀಕೆಂಡ್' ಯಾವಾಗ ಶುರುವಾಗುತ್ತೋ ಅಂತ ಕಾತರದಿಂದ ಕಾಯುತ್ತಿದ್ದವರಿಗೆ ಮಾರ್ಚ್ 25 ಸೂಪರ್ ಸ್ಪೆಷಲ್ ಆಗಿರುವುದರಲ್ಲಿ ಡೌಟೇ ಇಲ್ಲ. ಯಾಕಂದ್ರೆ, ಜೀ ಕನ್ನಡ ವಾಹಿನಿಯ ಜನಪ್ರಿಯ ಟಾಕ್ ಶೋ 'ವೀಕೆಂಡ್ ವಿತ್ ರಮೇಶ್' ಮೂರನೇ ಆವೃತ್ತಿಯ ಮೊದಲ ಸಂಚಿಕೆಯ ಪ್ರಸಾರ ಅಂದೇ.!

ಹೌದು, ಬಹು ನಿರೀಕ್ಷಿತ 'ವೀಕೆಂಡ್ ವಿತ್ ರಮೇಶ್-3' ಮಾರ್ಚ್ 25 ರಿಂದ ಆರಂಭವಾಗಲಿದೆ. ಈಗಾಗಲೇ ಮೊದಲ ಸಂಚಿಕೆಯ ಪ್ರೋಮೋ ಕೂಡ ಬಿಡುಗಡೆ ಆಗಿದ್ದು, 'ಸಾಧಕರ ಸೀಟ್' ಮೇಲೆ ಕೂರುವ ಮೊದಲ ಅತಿಥಿ ಯಾರು ಎಂಬುದು ಬಹಿರಂಗವಾಗಿದೆ. ಮುಂದೆ ಓದಿ....

ಮೊದಲ 'ಸಾಧಕ' ಪ್ರಕಾಶ್ ರೈ

'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಪ್ರತಿಷ್ಟಿತ 'ಸಾಧಕರ ಸೀಟ್' ಮೇಲೆ ಕೂರುತ್ತಿರುವ ಮೊದಲ ಅತಿಥಿ ಕನ್ನಡಿಗ ಪ್ರಕಾಶ್ ರೈ.['ವೀಕೆಂಡ್ ವಿತ್ ರಮೇಶ್-3' ಮೊಟ್ಟಮೊದಲ ಅತಿಥಿ ಯಾರು?]

ಪ್ರಕಾಶ್ ರೈ ಸಾಧನೆ ಪಯಣ ಅನಾವರಣ

ಇಂದು ಬಹುಭಾಷೆಯಲ್ಲಿ ಬಹುಬೇಡಿಕೆ ಗಿಟ್ಟಿಸಿಕೊಂಡಿರುವ ಪ್ರಕಾಶ್ ರೈ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಹೇಗೆ, ಅವರ ಸಾಧನೆಯ ಹಿಂದಿನ ಶ್ರಮವೆಂಥದ್ದು ಎಂಬುದರ ಅನಾವರಣ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಆಗಲಿದೆ.

ಪ್ರೊಮೋ ನೋಡಿದ್ರಾ.?

'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಪ್ರಕಾಶ್ ರೈ ಭಾಗವಹಿಸಿರುವ ಪ್ರೊಮೋ ಔಟ್ ಅಗಿದೆ. ನೋಡಲು ಈ ಲಿಂಕ್ ಕ್ಲಿಕ್ ಮಾಡಿ....[ಮತ್ತೆ 'ವೀಕೆಂಡ್' ಜೊತೆ ನಿಮ್ಮನೆಗೆ ಬರ್ತಿದ್ದಾರೆ ರಮೇಶ್]

ಈ 'ವೀಕೆಂಡ್' ಮಿಸ್ ಮಾಡ್ಬೇಡಿ...

ಮಾರ್ಚ್ 25 ಹಾಗೂ 26 ರಾತ್ರಿ 9ಕ್ಕೆ ಪ್ರಕಾಶ್ ರೈ ರವರ ಸಾಧನೆ 'ವೀಕೆಂಡ್ ವಿತ್ ರಮೇಶ್-3' ಶೋನಲ್ಲಿ... ತಪ್ಪದೇ ವೀಕ್ಷಿಸಿ...

English summary
Actor Prakash Rai will be the first guest in Weekend with Ramesh 3. Watch promo.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada