»   » 'ಅಭಿನಯ ಚಕ್ರವರ್ತಿ' ಸುದೀಪ್ ಗೆ 'ಐರನ್ ಲೆಗ್' ಎಂದವರು ಯಾರು?

'ಅಭಿನಯ ಚಕ್ರವರ್ತಿ' ಸುದೀಪ್ ಗೆ 'ಐರನ್ ಲೆಗ್' ಎಂದವರು ಯಾರು?

Posted By:
Subscribe to Filmibeat Kannada

ಕಿಚ್ಚ ಸುದೀಪ್ ಕಾಲ್ ಶೀಟ್ ಗಾಗಿ ಇಂದು ಎಲ್ಲಾ ನಿರ್ಮಾಪಕರು ಕ್ಯೂ ನಿಂತಿದ್ದಾರೆ. ಬರೀ ಕನ್ನಡ ನಿರ್ಮಾಪಕರು ಮಾತ್ರ ಅಲ್ಲ, 'ಅಭಿನಯ ಚಕ್ರವರ್ತಿ' ಸುದೀಪ್ ಗೆ ಪರಭಾಷೆಯಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.

ಇಂತಿಪ್ಪ ಕಿಚ್ಚ ಸುದೀಪ್ ಗೆ ಒಂದ್ಕಾಲದಲ್ಲಿ 'ಐರನ್ ಲೆಗ್' ಅಂತ ಪತ್ರಕರ್ತರು ಬ್ರ್ಯಾಂಡ್ ಮಾಡಿದ್ದರಂತೆ. ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಹೊಸತರಲ್ಲಿ ಸುದೀಪ್ ಅಭಿನಯಿಸಿದ 'ತಾಯವ್ವ', 'ಪ್ರತ್ಯರ್ಥ' ಚಿತ್ರಗಳು ಮಕಾಡೆ ಮಲಗಿತ್ತು.[ನಾಗತಿಹಳ್ಳಿ ಚಂದ್ರಶೇಖರ್ ರಿಜೆಕ್ಟ್ ಮಾಡಿದ ನಟ ಸುದೀಪ್.! ನಿಮ್ಗೊತ್ತಾ?]

ಇನ್ನೂ ಸುದೀಪ್ ನಟಿಸಿದ 'ಬ್ರಹ್ಮ' ಮತ್ತು 'ಓ ಕುಸುಮ ಬಾಲೆ' ಅರ್ಧಕ್ಕೆ ನಿಂತು ಹೋಗಿತ್ತು. ಹೀಗಾಗಿ, ಕಿಚ್ಚ ಸುದೀಪ್ ಕಾಲಿಡುವ ಚಿತ್ರಗಳು 'ಮಟ್ಯಾಶ್' ಎಂಬ ಹಣೆ ಪಟ್ಟಿ ಹೊರೆಸಿದ್ದರಂತೆ.[ಸುದೀಪ್ ಜೀವನದ 'ಬೆಸ್ಟ್ ಫ್ರೆಂಡ್ಸ್' ಯಾರು ಅಂದ್ಕೊಂಡ್ರೀ.? 'ಇವರೇ'.!]

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಸುದೀಪ್ ಬಿಚ್ಚಿಟ್ಟ ಕೆಲ ಸತ್ಯ ಸಂಗತಿಗಳು ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ....

ಮೊದಲ ಸಿನಿಮಾ ಅರ್ಧಕ್ಕೆ ನಿಂತುಹೋಯ್ತು!

''ಬ್ರಹ್ಮ' ಅಂತ ಒಂದು ಸಿನಿಮಾದಲ್ಲಿ ಅವಕಾಶ ಸಿಕ್ತು. ಹದಿನೈದು ದಿನ ಶೂಟಿಂಗ್ ಮಾಡಿದ್ರು. ಆಮೇಲೆ ಅದು ಸ್ಟಾಪ್ ಆಯ್ತು'' - ಸುದೀಪ್ [ಕಿಚ್ಚ ಸುದೀಪ್ ತಂದೆಗೆ ಅಮಿತಾಬ್ ಬಚ್ಚನ್ ಹೇಳಿದ ಮುತ್ತಿನಂಥ ಮಾತು]

ಅಡ್ವರ್ಟೈಸ್ಮೆಂಟ್ ಮಾಡಿದ್ರು!

''ನಿಮ್ಮ ಮೊದಲ ಅಡ್ವರ್ಟೈಸ್ ಹಾಗೂ ಟಿವಿ ಸೀರಿಯಲ್ ಮಾಡುವ ಅವಕಾಶ ನನಗೆ ಸಿಕ್ತು. ಆ ಬಗ್ಗೆ ನನಗೆ ಸಂತೋಷ ಇದೆ. ಹೆಮ್ಮೆನೂ ಇದೆ'' - ಸುಧಾಕರ್ ಭಂಡಾರಿ, ನಿರ್ದೇಶಕ

ಸೀರಿಯಲ್ ನಲ್ಲಿ ನಟಿಸಿದರು!

''ನಿಮ್ಮ ಪರ್ಫಾಮೆನ್ಸ್ ನೋಡಿ ನಾನು ಇಷ್ಟ ಪಟ್ಟು, ಒಂದು ರೋಮ್ಯಾಂಟಿಕ್ ಟಿವಿ ಸೀರಿಯಲ್ ಗೆ ನಿಮ್ಮ ಆಯ್ಕೆ ಮಾಡಿದೆ. ಆಕ್ಟ್ ಮಾಡೋಕೆ ನಿಮ್ಮದೇನು ತಕರಾರು ಇರ್ಲಿಲ್ಲ. ಆದ್ರೆ ಟಿವಿ ಸೀರಿಯಲ್ ಮಾಡೋವಾಗ, ಕ್ವಾಲಿಟಿ ಕಾಂಪ್ರೊಮೈಸ್ ಮಾಡ್ತಾರಾ ಅನ್ನೋ ಡೌಟ್ ನಿಮ್ಮಲ್ಲಿತ್ತು'' - ಸುಧಾಕರ್ ಭಂಡಾರಿ, ನಿರ್ದೇಶಕ

ಸುಧಾಕರ್ ಭಂಡಾರಿ ಮರೆಯುವ ಹಾಗೇ ಇಲ್ಲ!

''ನನಗೆ ಮೊದಲು ಅಡ್ವರ್ಟೈಸ್ಮೆಂಟ್ ಕೊಟ್ಟಿದ್ದೇ ಅವರು. ಅವರನ್ನ ನಾನು ಮರೆಯೋಕೆ ಸಾಧ್ಯವಿಲ್ಲ'' - ಸುದೀಪ್

'ತಾಯವ್ವ' ಓಡಲಿಲ್ಲ!

''ನಂತರ 'ಓ ಕುಸುಮ ಬಾಲೆ' ಶುರು ಆಯ್ತು. ಅದೂ ಕೂಡ ನಿಂತುಹೋಯ್ತು. 'ತಾಯವ್ವ' ಸಿನಿಮಾ ಮಾಡಿದೆ. ಅದು ಮೂರೇ ದಿನ ಓಡಿದ ಸಿನಿಮಾ'' - ಸುದೀಪ್

ಐರನ್ ಲೆಗ್!

''ನಂತರ ಸಿನಿಮಾ ಮಾಡೋದು ಬೇಡ ಅಂದುಕೊಂಡೆ. ಅಷ್ಟರೊಳಗೆ ಸುದೀಪ್ ಐರನ್ ಲೆಗ್ ಅಂತೆಲ್ಲಾ ಬರೆಯೋಕೆ ಶುರು ಮಾಡಿಬಿಟ್ಟಿದ್ದರು'' - ಸುದೀಪ್

ದುಡ್ಡು ಬೇಕಾಗಿತ್ತು!

''ನಂತರ ಮತ್ತೆ ಸುಧಾಕರ್ ಭಂಡಾರಿ ಭೇಟಿ ಮಾಡಿದೆ. ಒಂದು ಸೀರಿಯಲ್ ಇದೆ ಅಂತ ಹೇಳಿದರು. ನನಗೆ ಆಗ ದುಡ್ಡು ಬೇಕಾಗಿತ್ತು. ಎಷ್ಟು ಕೊಡ್ತೀರಾ ಅಂತ ಕೇಳಿದೆ. ಅವತ್ತಿಗೆ ಹದಿಮೂರು ಎಪಿಸೋಡ್, 25 ಸಾವಿರ ಕೊಡ್ತೀನಿ ಅಂತ ಹೇಳಿದರು. ಅವತ್ತು ಅವರು ಕೊಟ್ಟ ಹಣ ನನಗೆ ತುಂಬಾ ಸಹಾಯ ಆಯ್ತು'' - ಸುದೀಪ್

'ಪ್ರೇಮದ ಕಾದಂಬರಿ'

''ಪ್ರೇಮದ ಕಾದಂಬರಿ' ಸೀರಿಯಲ್ ಆದ್ಮೇಲೆ ಒಂದು ಪೂಜೆಗೆ ಅಂತ ಕೊಲ್ಲೂರು ದೇವಸ್ಥಾನಕ್ಕೆ ಹೋಗಿದ್ವಿ. ನನ್ನನ್ನ ಜನ ಮೊದಲು ಗುರುತು ಹಿಡಿಯಲು ಶುರು ಮಾಡಿದ್ದು ಆ ಸೀರಿಯಲ್ ನಿಂದ. ನಟನಾಗಿ ನಮಗೆ ಬೇಕಾಗಿರುವುದೇ ಅದು'' - ಸುದೀಪ್

ಪ್ರತ್ಯರ್ಥ ಶುರು ಆಯ್ತು!

''ಅದಾದ್ಮೇಲೆ ನನಗೆ 'ಪ್ರತ್ಯರ್ಥ' ಚಿತ್ರದಲ್ಲಿ ಅವಕಾಶ ಸಿಕ್ತು. ಅಲ್ಲಿಂದ ನನ್ನ ಕೆರಿಯರ್ ಶುರು ಆಗಿದ್ದು'' - ಸುದೀಪ್

English summary
Kannada Actor, Director Kiccha Sudeep revealed his intial days in Sandalwood in Zee Kannada channel's popular show Weekend With Ramesh season2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada