»   » ವೀಕೆಂಡ್ ನಲ್ಲಿ ದರ್ಶನ್ ಬಗ್ಗೆ ಬುಲೆಟ್ ಪ್ರಕಾಶ್ ಏನೇನು ಹೇಳಿದ್ರು?

ವೀಕೆಂಡ್ ನಲ್ಲಿ ದರ್ಶನ್ ಬಗ್ಗೆ ಬುಲೆಟ್ ಪ್ರಕಾಶ್ ಏನೇನು ಹೇಳಿದ್ರು?

Posted By:
Subscribe to Filmibeat Kannada

ಬುಲೆಟ್ ಪ್ರಕಾಶ್ ಮತ್ತು ದಿನಕರ್ ತೂಗುದೀಪ ಕಿತ್ತಾಡಿಕೊಂಡಿರಬಹುದು. ಆದ್ರೆ, ಬುಲೆಟ್ ಪ್ರಕಾಶ್ ಮನಸ್ಸಲ್ಲಿ ದರ್ಶನ್ ಗೊಂದು ಒಳ್ಳೆ ಸ್ಥಾನ ಇದೆ.

ತಾವು ಕಷ್ಟದಲ್ಲಿದ್ದ ಸಮಯದಲ್ಲಿ ಸಹಾಯ ಮಾಡಿದ್ದ ದರ್ಶನ್ ರನ್ನ ಬುಲೆಟ್ ಪ್ರಕಾಶ್ ಸದಾ ನೆನೆಯುತ್ತಾರೆ. ಮನಸ್ಸಲ್ಲಿ ಪೂಜಿಸುತ್ತಾರೆ. ಈ ಬಗ್ಗೆ ಬುಲೆಟ್ ಪ್ರಕಾಶ್, 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ದರ್ಶನ್ ಸಮ್ಮುಖದಲ್ಲಿ ಹೇಳಿದ್ದರು. [ನೀವು ಕೇಳರಿಯದ ಸತ್ಯ ಸಂಗತಿಗಳ 'ದರ್ಶನ' ವೀಕೆಂಡ್ ನಲ್ಲಾಯ್ತು!]

ಇನ್ನೂ ಕಳೆದ ವಾರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲೂ ದರ್ಶನ್ ರವರನ್ನ ಹಾಡಿ ಹೊಗಳಿದರು ಬುಲೆಟ್ ಪ್ರಕಾಶ್. ಮುಂದೆ ಓದಿ....

ಕಾರ್ಯಕ್ರಮಕ್ಕೆ ಬರಬೇಡ ಅಂತ ಬುಲೆಟ್ ಗೆ ದರ್ಶನ್ ಹೇಳಿದ್ರಂತೆ!

ಆಪ್ತ ಸ್ನೇಹಿತ ಬುಲೆಟ್ ಪ್ರಕಾಶ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಎಂಟ್ರಿ ಆಗುತ್ತಿದ್ದಂತೆ ದರ್ಶನ್ ಹೇಳಿದ್ದು ಹೀಗೆ - ''ಅವನಿಗೆ ನಾನು ಹೇಳಿದ್ದೆ. ನೀನು ಬರಬೇಡ ಅಂತ'', ಅದಕ್ಕೆ ರಮೇಶ್ ಅರವಿಂದ್ ನೀಡಿದ ಪ್ರತಿಕ್ರಿಯೆ - ''ನಾನು ಹೇಳಿದೆ ಬರಲೇಬೇಕು ಅಂತ ಅದಕ್ಕೆ ಅವ್ರು ಬಂದು ಬಿಟ್ಟರು''. [ಪೈಸೆ-ಪೈಸೆಗೂ ಕಷ್ಟ ಪಟ್ಟ ದರ್ಶನ್ ಬದುಕಿನ ನೋವಿನ ಕಥೆ]

ದರ್ಶನ್ ಬಗ್ಗೆ ಬುಲೆಟ್ ಮಾತು

''ಒಂದು ವೈಟ್ ಶೀಟ್ ಇದ್ಹಂಗೆ ದರ್ಶನ್. ಅವನನ್ನ ಕೆಟ್ಟದಾಗಿ ಆದರೂ ಬಳಸಿಕೊಳ್ಳಬಹುದು. ಒಳ್ಳೆಯದಾಗಿ ಆದರೂ ಬಳಸಿಕೊಳ್ಳಬಹುದು. ಬಟ್ ಸುಮಾರು ಜನ ಕೆಟ್ಟದಾಗೇ ಬಳಸಿಕೊಂಡರು. ತುಂಬ ಹೆಲ್ಪ್ ಮಾಡಿಸಿಕೊಂಡು, ಕೆಲಸ ಮಾಡಿಸಿಕೊಂಡು ಬಳಸಿಕೊಂಡರು. ಆದರೂ ಎಲ್ಲರನ್ನೂ ಒಂದೇ ರೀತಿಯಲ್ಲೇ ನೋಡ್ತಾನೆ. ಎಲ್ಲರಿಗೂ ಒಳ್ಳೆಯದೇ ಬಯಸುತ್ತಾನೆ. ಹೀಗಾಗಿ ದೇವರು ಅವನನ್ನ ಚೆನ್ನಾಗಿ ಇಟ್ಟಿರಲಿ'' ಅಂತ ಬುಲೆಟ್ ಪ್ರಕಾಶ್ ಹಾರೈಸಿದರು. [ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅವಮಾನ ಮಾಡಿದವರು ಯಾರು?]

'ಸುಲ್ತಾನ್' ದರ್ಶನ್

''ಅವನು ಬಾಕ್ಸ್ ಆಫೀಸ್ ಸುಲ್ತಾನ ಮಾತ್ರ ಅಲ್ಲ. ಹೃದಯ ವೈಶಾಲ್ಯದಲ್ಲೂ ಸುಲ್ತಾನ'' ಅಂತ ದರ್ಶನ್ ರವರನ್ನ ಬುಲೆಟ್ ಪ್ರಕಾಶ್ ಕೊಂಡಾಡಿದರು. ['ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಮುಚ್ಚಿಟ್ಟ ರಹಸ್ಯವೇನು?]

ಬುಲೆಟ್ ಪ್ರಕಾಶ್ ಬಗ್ಗೆ ದರ್ಶನ್ ಹೇಳಿದಿಷ್ಟು

''ದೇವರು ಅವನಿಗೆ ಆಯಸ್ಸು ಆರೋಗ್ಯ ಕೊಟ್ಟು, ಇದೇ ತರಹ ನಕ್ಕೊಂಡು, ಎಲ್ಲರನ್ನೂ ನಗಿಸಿಕೊಂಡು ಇದ್ದರೆ ಸಾಕು'' ಅಂತ ಹಾರೈಸಿದರು ದರ್ಶನ್.

ನಿರ್ಮಾಪಕ ಬುಲೆಟ್ ಪ್ರಕಾಶ್ ಬಗ್ಗೆ....

''ಈಗ ಪಾಪಾ, ಪ್ರೊಡ್ಯೂಸರ್ ಆಗಿದ್ದಾನೆ. ನನಗೇ ಬೈಯುತ್ತಿರುತ್ತಾನೆ. ನೀನು ನನ್ನ ಪ್ರೊಡ್ಯೂಸರ್ ಮಾಡಿದೆ, ನನ್ನ ಯಾರು ಈಗ ಕೆಲಸಕ್ಕೇ ಕರೆಯುತ್ತಿಲ್ಲ ಅಂತ. ಅದಕ್ಕೆ ಹೋಗಲಿ ಬಿಡಪ್ಪಾ, ಬಾರಪ್ಪ ನಾವೇ ಕೆಲಸ ಮಾಡೋಣ ಅಂತ ಹೇಳಿದ್ದೀನಿ'' - ದರ್ಶನ್

English summary
Bullet Prakash entered as a guest in Weekend With Ramesh Darshan special program. Read the article to know what Bullet Prakash spoke about Kannada Actor Darshan.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada