»   » 'ನಾನು ಒಳ್ಳೆಯ ಮಗಳು ಅಲ್ಲ' ಎಂದ ನಟಿ ಐಶ್ವರ್ಯ.!

'ನಾನು ಒಳ್ಳೆಯ ಮಗಳು ಅಲ್ಲ' ಎಂದ ನಟಿ ಐಶ್ವರ್ಯ.!

Posted By:
Subscribe to Filmibeat Kannada

ನಟಿ ಐಶ್ವರ್ಯ ಎಂದಕೂಡಲೆ ಬಾಲಿವುಡ್ ಬೆಡಗಿ, ಮಾಜಿ ವಿಶ್ವ ಸುಂದರಿ, ಅಮಿತಾಬ್ ಬಚ್ಚನ್ ಸೊಸೆ ಐಶ್ವರ್ಯ ರೈ ಬಚ್ಚನ್ ಅಂತ ಭಾವಿಸಬೇಡಿ. ನಾವು ಹೇಳುತ್ತಿರುವುದು ಬಹುಭಾಷಾ ನಟಿ 'ಜ್ಯೂಲಿ' ಲಕ್ಷ್ಮಿ ಪುತ್ರಿ ನಟಿ ಐಶ್ವರ್ಯ ಬಗ್ಗೆ.

ತಾಯಿ ಲಕ್ಷ್ಮಿ ರವರನ್ನ ಹೊಗಳುತ್ತಾ, ''ನನಗೆ ಗೊತ್ತು ನಾನು ಒಳ್ಳೆ ಮಗಳು ಅಲ್ಲ. ಆದ್ರೆ ನನ್ನನ್ನ ನೀನು ಯಾವಾಗ್ಲೂ ಕ್ಷಮಿಸುತ್ತಾಯಿದ್ದೆ'' ಅಂತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಲಕ್ಷ್ಮಿ ಪುತ್ರಿ, ತಮಿಳು ನಟಿ ಐಶ್ವರ್ಯ ಹೇಳಿದರು. [ಸ್ವಿಮ್ ಸೂಟ್ ಹಾಕ್ತೀಯಾ ಅಂದಿದ್ದಕ್ಕೆ, ಕಾಲು ತೋರಿಸಿಬಿಟ್ರು ನಟಿ ಲಕ್ಷ್ಮಿ!]

ತಾಯಿ ಲಕ್ಷ್ಮಿ ಕುರಿತು ಪುತ್ರಿ ಐಶ್ವರ್ಯ ಏನೆಲ್ಲಾ ಹೇಳಿದರು ಅಂತ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ.....

ಲಕ್ಷ್ಮಿ ರದ್ದು ಲವ್ ಮ್ಯಾರೇಜ್

''ನನ್ನ ಪತಿ ಸಿನಿಮಾ ಪ್ರೊಡ್ಯೂಸ್ ಮಾಡೋದು ಬೇಡ ಅಂತ ಈಗ ಸುಮ್ಮನಿದ್ದಾರೆ. ಬುಕ್ಸ್ ನಿಂದ ನಮ್ಮಿಬ್ಬರ ಲವ್ ಶುರು ಆಗಿದ್ದು. ಅರ್ಥ ಮಾಡಿಕೊಂಡು ಮದುವೆ ಆದ್ವಿ. ಇಬ್ಬರು ಮಕ್ಕಳು. ಒಬ್ಬಳು ಐಶ್ವರ್ಯ, ಮತ್ತೊಬ್ಬಳು ಸಂಯುಕ್ತ'' - ಲಕ್ಷ್ಮಿ [ನಟಿ ಲಕ್ಷ್ಮಿ ಕೊಟ್ಟ 'ತೊಂದರೆ' ಬಗ್ಗೆ ರಾಜೇಂದ್ರ ಸಿಂಗ್ ಬಾಬು ಹೇಳಿದ ಸತ್ಯ]

ತಾಯಿ ಬಗ್ಗೆ ಐಶ್ವರ್ಯ ಮಾತು

''ನೀನು ತಾಯಿ ಮಾತ್ರ ಅಲ್ಲ. ಅಪ್ಪನಾಗಿ, ಅಮ್ಮನಾಗಿ ಎರಡೂ ಕಡೆಯಿಂದಲೂ ದಾರಿ ತೋರಿಸಿದ್ದೀಯಾ. ಚಿಕ್ಕ ವಯಸ್ಸಿನಲ್ಲಿ ನನಗೆ ಆಗಾಗ ಆರೋಗ್ಯ ಕೆಡುತ್ತಿತ್ತು. ಆಗ ಯಾವ ವ್ಯವಸ್ಥೆ ಇರ್ಲಿಲ್ಲ. ಅಂತಹ ಸಮಯದಲ್ಲಿ ಯಾರಾದರೂ ಈ ರೀತಿ ಆಗಿದೆ ಅಂದ್ರೆ ಎಲ್ಲವನ್ನೂ ಬಿಟ್ಬಿಟ್ಟು ಓಡಿ ಬರ್ತಿದ್ದೆ'' - ಐಶ್ವರ್ಯ, ನಟಿ ಲಕ್ಷ್ಮಿ ಪುತ್ರಿ [ವಿಷ್ಣುವರ್ಧನ್, ಅಂಬರೀಶ್ ಬಗ್ಗೆ 'ಜ್ಯೂಲಿ' ಲಕ್ಷ್ಮಿ ಮಾಡಿದ ಕಾಮೆಂಟ್ ಏನು?]

ಆಗ ಕಷ್ಟ ಗೊತ್ತಾಗ್ಲಿಲ್ಲ!

''ಆಗ ನೀನು ಪಟ್ಟ ಕಷ್ಟ ನನಗೆ ಗೊತ್ತೇ ಆಗ್ಲಿಲ್ಲ. ನಾನು ಹೀರೋಯಿನ್ ಆದ್ಮೇಲೆ ಇದೆಲ್ಲಾ ಗೊತ್ತಾಯ್ತು. ನೀನು ಎಲ್ಲದಕ್ಕೂ ಸ್ಫೂರ್ತಿ. ನೀನು ತಂದೆ ತರಹ. ನಿನ್ನಿಂದ ನನಗೆ ಎಲ್ಲಾ ರೀತಿಯ ಸುಖಭೋಗ ಸಿಕ್ತು. ಅದರಿಂದಾಗಿ ನನಗೆ ಕಷ್ಟ ಅನ್ನೋದೇ ದೇವರು ಕೊಟ್ಟಿಲ್ಲ'' - ಐಶ್ವರ್ಯ, ನಟಿ ಲಕ್ಷ್ಮಿ ಪುತ್ರಿ [ಚೆನ್ನೈ ಪ್ರವಾಹ; ಸಾವಿನ ಕೊನೆ ಕ್ಷಣಗಳನ್ನು ಕಂಡು ಕಣ್ಣೀರಿಟ್ಟಿದ್ದ ನಟಿ ಲಕ್ಷ್ಮಿ]

ರಾಣಿಯಾಗಿ ಇಂಡಸ್ಟ್ರಿಗೆ ಬಂದೆ

''ಇಂಡಸ್ಟ್ರಿಯಲ್ಲೂ ಕೂಡ ಸ್ಟಾರ್ ಮಗಳು ಅಂತ ಹೋಲಿಕೆ ಮಾತಾಡೋದು ಬರಬಹುದು. ಆದರೆ ನೀನು ಯಾವಾಗಲೂ ರಾಣಿಯ ಹಾಗೆ. ನಿನ್ನಿಂದಾಗಯೇ ನಾನು ರಾಣಿಯಾಗೇ ಇಂಡಸ್ಟ್ರಿಗೆ ಪರಿಚಯವಾದೆ'' - ಐಶ್ವರ್ಯ, ನಟಿ ಲಕ್ಷ್ಮಿ ಪುತ್ರಿ

ನಾನು ಒಳ್ಳೆಯ ಮಗಳು ಅಲ್ಲ!

''ನನಗೆ ಗೊತ್ತು ನಾನು ಒಳ್ಳೆಯ ಮಗಳು ಅಲ್ಲ. ಆದ್ರೆ ನೀನು ಯಾವಾಗ್ಲೂ ಕ್ಷಮಿಸುತ್ತಾ ಬಂದೆ. ಎಲ್ಲಿ ತಪ್ಪು ಮಾಡಿದ್ರೂ ಕ್ಷಮಿಸುತ್ತಾ ಬಂದೆ'' - ಐಶ್ವರ್ಯ, ನಟಿ ಲಕ್ಷ್ಮಿ ಪುತ್ರಿ

ಬುದ್ಧಿವಂತ ತಾಯಿ!

''ನೀನು ಬುದ್ಧಿವಂತ ತಾಯಿ. ಈ ಪ್ರಪಂಚದಲ್ಲಿ ನಾನು ತುಂಬಾ ಪ್ರೀತ್ಸೋದು ಅಂದ್ರೆ ಅದು ನೀನೇ. ಒಳ್ಳೆಯದಾಗಲಿ'' - ಐಶ್ವರ್ಯ, ನಟಿ ಲಕ್ಷ್ಮಿ ಪುತ್ರಿ

English summary
Tamil Actress Aishwarya spoke about her mother Actress Lakshmi in Zee Kannada Channel's popular show Weekend With Ramesh season 2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada