»   » ಚೆನ್ನೈ ಪ್ರವಾಹ; ಸಾವಿನ ಕೊನೆ ಕ್ಷಣಗಳನ್ನು ಕಂಡು ಕಣ್ಣೀರಿಟ್ಟಿದ್ದ ನಟಿ ಲಕ್ಷ್ಮಿ

ಚೆನ್ನೈ ಪ್ರವಾಹ; ಸಾವಿನ ಕೊನೆ ಕ್ಷಣಗಳನ್ನು ಕಂಡು ಕಣ್ಣೀರಿಟ್ಟಿದ್ದ ನಟಿ ಲಕ್ಷ್ಮಿ

Posted By:
Subscribe to Filmibeat Kannada

ಶತಮಾನ ಕಂಡು ಕೇಳರಿಯದ ಕುಂಭದ್ರೋಣ ಮಳೆಗೆ ತಮಿಳುನಾಡಿನ ಚೆನ್ನೈ ಮಹಾನಗರ ತತ್ತರಿಸಿತ್ತು. ಚೆನ್ನೈನಲ್ಲಿ ಉಂಟಾದ ಜಲ ಪ್ರಳಯದಿಂದ ನೂರಾರು ಜನ ಅಸುನೀಗಿದ್ದರು.

ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಅತಿವೃಷ್ಠಿಯಲ್ಲಿ ನಟಿ ಲಕ್ಷ್ಮಿ ಕೂಡ ಸಿಲುಕಿದ್ದರು. ಮನೆಯಲ್ಲಿ ತುಂಬಿದ 6 ಅಡಿ ನೀರು, ಅಕ್ಕ-ಪಕ್ಕ ತೇಲುತ್ತಿದ್ದ ಹೆಣಗಳನ್ನು ಕಂಡ ನಟಿ ಲಕ್ಷ್ಮಿ ಅಸಹಾಯಕ ಸ್ಥಿತಿಯಲ್ಲಿ! ಎಂದೂ ಕಂಡಿರದ ಪ್ರವಾಹ ನೋಡಿದ ನಟಿ ಲಕ್ಷ್ಮಿಗೆ ಸಾವಿನ ಕದ ತಟ್ಟಿದ ದುರಂತ ಅನುಭವ! [ನಟಿ ಲಕ್ಷ್ಮಿ ಕೊಟ್ಟ 'ತೊಂದರೆ' ಬಗ್ಗೆ ರಾಜೇಂದ್ರ ಸಿಂಗ್ ಬಾಬು ಹೇಳಿದ ಸತ್ಯ]

ಅಂತಹ ಅನುಭವವನ್ನ ನಟಿ ಲಕ್ಷ್ಮಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಬಾಲ್ಯ, ತಂದೆ-ತಾಯಿ ಬೇರೆ ಬೇರೆ ಆದ ಬಳಿಕ ತಮ್ಮ ತಾಯಿ ಪಟ್ಟ ಕಷ್ಟ, ಲಾಯರ್ ಆಗ್ಬೇಕಂತಿದ್ದ ನಟಿ ಲಕ್ಷ್ಮಿ ಬಣ್ಣ ಹಚ್ಚಿದ ಕಥೆ ಹಾಗೂ ಚೆನ್ನೈ ಪ್ರವಾಹದ ಬಗ್ಗೆ ನಟಿ ಲಕ್ಷ್ಮಿ ರವರ ಮನದಾಳದ ಮಾತುಗಳು ಇಲ್ಲಿವೆ. ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸಿ....

ನಟಿ ಲಕ್ಷ್ಮಿ ಕುರಿತು...

ಪೂರ್ಣ ಹೆಸರು - ವೆಂಕಟಲಕ್ಷ್ಮಿ
ಊರು - ಟಿ.ನಗರ, ಚೆನ್ನೈ
ಹುಟ್ಟಿದ ದಿನಾಂಕ - ಡಿಸೆಂಬರ್ 13, 1952
ತಂದೆ - ಯರಗುಡಿಪತಿ ವರದ ರಾವ್ ತಾಯಿ - ರುಕ್ಮಿಣಿ
ಪತಿ - ಶಿವಚಂದ್ರನ್
ಮಕ್ಕಳು - ಐಶ್ವರ್ಯ, ಸಂಯುಕ್ತ

ಲಕ್ಷ್ಮಿ ತಾಯಿ ರುಕ್ಮಿಣಿ ಕೂಡ ನಟಿ!

''ನನ್ನ ತಾಯಿ ಚೈಲ್ಡ್ ಆರ್ಟಿಸ್ಟ್ ಆಗಿದ್ದರು. ನಮ್ಮ ತಾಯಿ 4 ವರ್ಷ ಇದ್ದಾಗ ಟಿ.ಪಿ.ರಾಜಲಕ್ಷ್ಮಿ ಅವರು ತಮಿಳಿನಲ್ಲಿ ದೊಡ್ಡ ಡೈರೆಕ್ಟರ್ ಮತ್ತು ಪ್ರೊಡ್ಯೂಸರ್. ಅವರೇ ಪ್ರೊಡ್ಯೂಸ್ ಮಾಡಿ 'ಸತ್ಯ ಹರಿಶ್ಚಂದ್ರ' ಸಿನಿಮಾ ಮಾಡ್ತಿದ್ರು. ಅವಾಗ, ಚಿಕ್ಕ ಹುಡುಗನ ರೋಲ್ ಗೆ ನಮ್ಮ ಅಮ್ಮ ಪಾರ್ಟ್ ಮಾಡಿದ್ರು'' - ಲಕ್ಷ್ಮಿ [ವಿಷ್ಣುವರ್ಧನ್, ಅಂಬರೀಶ್ ಬಗ್ಗೆ 'ಜ್ಯೂಲಿ' ಲಕ್ಷ್ಮಿ ಮಾಡಿದ ಕಾಮೆಂಟ್ ಏನು?]

ಲವ್ ಮಾಡಿ ಮದುವೆ ಆದ ತಾಯಿ

''ನಮ್ಮ ತಾಯಿ 17 ವರ್ಷ ಇದ್ದಾಗ ಲವ್ ಮಾಡಿ ಮದುವೆ ಆದರು. ಮದುವೆ ಆದ ಮೇಲೆ ಅವರಿಗೆ ನಟಿಸಲು ನಮ್ಮ ತಂದೆ ಬಿಡಲಿಲ್ಲ. ಅಮ್ಮನಿಗಿಂತ ನಮ್ಮ ತಂದೆ 22 ವರ್ಷ ದೊಡ್ಡವರು. ಮನೆಯಲ್ಲಿ ತಾಯಿಯನ್ನ ಕೂರಿಸಿದ್ದಾರೆ. ಅವರನ್ನ ಯಾರೂ ಕೂಡ ನೋಡಬಾರದು. ಯಾಕಂದ್ರೆ ಅವರು ಅಷ್ಟು ಸುಂದರವಾಗಿದ್ದರು'' - ಲಕ್ಷ್ಮಿ [ಸ್ವಿಮ್ ಸೂಟ್ ಹಾಕ್ತೀಯಾ ಅಂದಿದ್ದಕ್ಕೆ, ಕಾಲು ತೋರಿಸಿಬಿಟ್ರು ನಟಿ ಲಕ್ಷ್ಮಿ!]

ವೆಂಕಟೇಶ್ವರನ ಆಶೀರ್ವಾದದಿಂದ ಹುಟ್ಟಿದ್ದು!

''ಮದುವೆ ಆಗಿ ಹತ್ತು ವರ್ಷ ಆದರೂ ಮಕ್ಕಳು ಆಗಲಿಲ್ಲ. ನಂತರ ತಿರುಪತಿ ವೆಂಕಟೇಶ್ವರನಿಗೆ ಬೇಡಿಕೊಂಡ ಮೇಲೆ ನಾನು ಹುಟ್ಟಿದೆ. ಅದಕ್ಕೆ ನನ್ನ ಹೆಸರು ವೆಂಕಟಲಕ್ಷ್ಮಿ'' - ಲಕ್ಷ್ಮಿ

ತಂದೆ-ತಾಯಿ ಬೇರೆ ಬೇರೆ ಆದರು!

''ನನ್ನ ಸಾಕಿದ್ದು ನನ್ನ ತಾಯಿ. ಅಪ್ಪ-ಅಮ್ಮ ಡಿವೋರ್ಸ್ ಅಂತ ಮಾಡಿಕೊಳ್ಳಲಿಲ್ಲ. ಆದ್ರೆ, ನಾನು 5 ವರ್ಷ ಇರುವಾಗ ಅವರಿಬ್ಬರು ಬೇರೆ ಬೇರೆ ಆದರು. ತಂದೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿದ್ದರು. ಅಮ್ಮ ಚೆನ್ನೈನಲ್ಲಿದ್ದರು. ಹೀಗಾಗಿ ನಾನು ಅಲ್ಲೇ ಬೆಳೆದೆ'' - ಲಕ್ಷ್ಮಿ

ಮನೆಗೆ ಮೊದಲ ಮಗಳು

''ನೀನು ಹುಟ್ಟಿದಾಗ ನಾವೆಲ್ಲಾ ನಿನ್ನನ್ನು ನೋಡಲು ಬಂದ್ವಿ. ತುಂಬಾ ಸುಂದರವಾಗಿದ್ದೆ. ಆಗ ನೀನೇ ಮೊದಲು ಮಗಳಾಗಿ ಹುಟ್ಟಿದ್ದು. ಅದಕ್ಕೆ ಎಲ್ಲರಿಗೂ ನಿನ್ನ ಮೇಲೆ ಪ್ರೀತಿ ಇತ್ತು. ನಿನಗೆ ತುಪ್ಪದ ಊಟ, ಹಾಗಲಕಾಯಿ ಉಪ್ಪಿನಕಾಯಿ ಅಂದ್ರೆ ತುಂಬಾ ಇಷ್ಟ. ಜೊತೆಗೆ ಹಪ್ಪಳವನ್ನು ಚೆನ್ನಾಗಿ ನುಚ್ಚು ಮಾಡಿ ತಿಂತಿದ್ದೆ. ಈಗಲೂ ಹಾಗೇ ಊಟ ಮಾಡ್ತೀಯಾ'' - ನಟಿ ಲಕ್ಷ್ಮಿ ಚಿಕ್ಕಮ್ಮ

ಅಮ್ಮನ ಆಸೆ ಈಡೇರಿಸಿದರು!

''ಕುಟುಂಬದಲ್ಲಿ ನೀನೇ ಹಿರಿಯಳು. ನಿನ್ನ ಅಮ್ಮನ ಆಶೀರ್ವಾದ, ಅವಳು ಬೆಳೆಸಿದ ರೀತಿ ಇಂದು ಇಷ್ಟೊಂದು ಸಾಧನೆ ಮಾಡಲು ಸಾಧ್ಯವಾಯಿತು. ಅಮ್ಮನ ಉಸಿರು ಹೋಗುವುದಕ್ಕೂ ಮುಂಚೆ ಕೂಡ ನನ್ನ ಎಷ್ಟು ಚೆನ್ನಾಗಿ ನೋಡಿಕೊಂಡಳು ಅಂತ ಅವಳು ಹೇಳ್ತಾ ಅಳ್ತಿದ್ಲು'' - ನಟಿ ಲಕ್ಷ್ಮಿ ಚಿಕ್ಕಮ್ಮ

ಲಾಯರ್ ಆಗ್ಬೇಕು ಅಂತ ಆಸೆ!

''ಸ್ಕೂಲ್ ನಲ್ಲಿ ಚೆನ್ನಾಗಿ ಓದ್ತಿದ್ದೆ. ಮಾರ್ಕ್ಸ್ ಬರ್ಲಿಲ್ಲ ಅಂದ್ರೆ ಚೆನ್ನಾಗಿ ಬೈಯ್ತಿದ್ರು. ಅದಕ್ಕೆ ಓದ್ತಿದ್ದೆ. ನನಗೆ ಲಾಯರ್ ಆಗ್ಬೇಕು. ಅದ್ರಲ್ಲೂ ಸುಪ್ರೀಂ ಕೋರ್ಟ್ ಲಾಯರ್ ಆಗ್ಬೇಕು ಅಂತ ತುಂಬಾ ಆಸೆ ಇತ್ತು'' - ಲಕ್ಷ್ಮಿ

ಒಂದೇ ದಿನಕ್ಕೆ ಕಾಲೇಜು ಸಾಕಾಯ್ತು!

''ಕಾಲೇಜ್ ಗೆ ಒಂದು ದಿನ ಹೋದೆ. ಅಲ್ಲಿ ಲೆಕ್ಚರರ್ ಒಬ್ಬರನ್ನ ನೋಡಿ, ಬೇಡ ಕಾಲೇಜು ಅಂತ ಮನೆಗೆ ಬಂದುಬಿಟ್ಟೆ. ನನಗೆ ಇಷ್ಟವಾಗಲಿಲ್ಲ ಅಂದ್ರೆ ಏನನ್ನೂ ಮಾಡಲ್ಲ. ಹಾಗೇ ಕಾಲೇಜು ಬಿಟ್ಟುಬಿಟ್ಟೆ. ಅದು ಬಿಟ್ಟ ಮೇಲೆ ಮೂರು ಸಿನಿಮಾ ಆಫರ್ ಬಂತು. ಅಲ್ಲಿಂದ ಸಿನಿಮಾದಲ್ಲೇ ಮುಂದುವರಿದೆ'' - ಲಕ್ಷ್ಮಿ

ಅಮ್ಮ ಸತ್ತಮೇಲೆ ಕ್ಷಮೆ ಕೇಳಿದ್ದೆ!

''ನಾನು ತಾಯಿ ತೀರಿಕೊಳ್ಳುವಾಗ ನಾನು ಯಾವುದೇ ಸಿನಿಮಾ ಮಾಡ್ಲಿಲ್ಲ. ಮೂರು ತಿಂಗಳು ಅವರನ್ನ ನೋಡಿಕೊಂಡೆ. ಅಮ್ಮ ತೀರಿಕೊಂಡ ಮೇಲೆ ಕಾಲು ಹಿಡ್ಕೊಂಡು ಅತ್ತು, ಅವರಿಗೆ ಕ್ಷಮೆ ಕೇಳಿದೆ'' - ಲಕ್ಷ್ಮಿ

ನಟನೆ ಮತ್ತು ಮಗು!

''ಸ್ಕೂಲ್ ನಲ್ಲಿ ಓದುವಾಗಲೇ ನಾನು ಆಕ್ಟಿಂಗ್ ಶುರು ಮಾಡಿದೆ. ನನ್ನ ಫ್ರೆಂಡ್ಸ್ ಎಲ್ಲಾ ಇನ್ನೂ ಕಾಲೇಜ್ ನಲ್ಲಿ ಓದುವಾಗಲೇ ನನಗೆ ಮಗು ಆಯ್ತು. ಅಲ್ಲಿಗೆ, ಲೈಫ್ ಮುಗಿಯಿತು ಅಂತ ಸುಮ್ಮನೆ ಕೂರಲಿಲ್ಲ'' - ಲಕ್ಷ್ಮಿ

ಚೆನ್ನೈನಲ್ಲಿನ ಪ್ರವಾಹ ಪರಿಸ್ಥಿತಿ

''ಚೆನ್ನೈನಲ್ಲಿ ಪ್ರವಾಹ ಬಂದಾಗ, ಮನೆಯಲ್ಲಿ ಆರು ಅಡಿ ನೀರು. ಅಂತಹ ಪ್ರವಾಹ ನಾನು ನೋಡೇ ಇಲ್ಲ. ಒಂದು ತಿಂಗಳು ಮಳೆ ಬಿದ್ದಿದೆ'' - ಲಕ್ಷ್ಮಿ

ಮೊದಲೇ ನೋವಿತ್ತು!

''ಸುನಾಮಿ ಅಲ್ಲಿ ನಮ್ಮ ಸಂಬಂಧಿಕರ ಮಕ್ಕಳು ಇಬ್ಬರು ತೀರಿಕೊಂಡಿದ್ದಾರೆ. ಅದೇ ನೋವಿತ್ತು. ಈ ಪ್ರವಾಹ ಮಾತ್ರ ಭಯ ಬಂದುಬಿಡ್ತು'' - ಲಕ್ಷ್ಮಿ

ಸಾವಿನ ಕದ ತಟ್ಟಿದ್ದ ನಟಿ ಲಕ್ಷ್ಮಿ

''ಅವತ್ತು ನಾನು ನನ್ನ ಸಾವು ನೋಡಿದ್ದೀನಿ. 10 ಅಡಿ ನೀರಿನಲ್ಲಿ ಹೋಗ್ತಾಯಿದ್ದೀನಿ. ಪಕ್ಕದಲ್ಲೇ ಸತ್ತ ಹೆಣಗಳು ತೇಲುತ್ತಿವೆ. ನಮ್ಮ ಬೀದಿಯಲ್ಲೇ ಎಷ್ಟೋ ಹೆಣಗಳು. ಜನಗಳ ಕೂಗಾಟ ಕೇಳುವುದಕ್ಕೆ ಆಗ್ತಿಲ್ಲ. ನಾವು ಅಸಹಾಯಕರಾಗಿದ್ವಿ'' - ಲಕ್ಷ್ಮಿ

English summary
Multilingual Actress Lakshmi revealed her life story in Zee Kannada Channel's popular show Weekend With Ramesh season 2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada