»   » ನಟಿ ಬಿ.ಸರೋಜಾದೇವಿ ಬದುಕಿನಲ್ಲಿ 'ವಿಧಿ ಬರಹ ಎಂಥ ಘೋರ'.!

ನಟಿ ಬಿ.ಸರೋಜಾದೇವಿ ಬದುಕಿನಲ್ಲಿ 'ವಿಧಿ ಬರಹ ಎಂಥ ಘೋರ'.!

Posted By:
Subscribe to Filmibeat Kannada

ಕೈತುಂಬಾ ಸಿನಿಮಾಗಳಿರುವಾಗಲೇ, ಚಿತ್ರರಂಗದಲ್ಲಿ ನಂಬರ್ 1 ನಟಿ ಅಂತ ಯಶಸ್ಸಿನ ಉತ್ತುಂಗದಲ್ಲಿ ಮೆರೆಯುತ್ತಿರುವಾಗಲೇ ನಟಿ ಸರೋಜಾದೇವಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಎಂಜಿನಿಯರ್ ಆಗಿದ್ದ ಶ್ರೀಹರ್ಷ ರವರೊಂದಿಗೆ ನಟಿ ಸರೋಜಾದೇವಿ ಮಾರ್ಚ್ 1, 1967 ರಂದು ಸಪ್ತಪದಿ ತುಳಿದರು.

ಮದುವೆ ನಂತರ ಪತಿಯ ಸಹಕಾರದೊಂದಿಗೆ ನಟನೆಯನ್ನೂ ಮುಂದುವರಿಸಿಕೊಂಡು ಖುಷಿ ಖುಷಿಯಿಂದ ಸಂಸಾರ ಸಾಗಿಸುತ್ತಿದ್ದ ನಟಿ ಸರೋಜಾದೇವಿ ಬದುಕಿನಲ್ಲಿ ಬರಸಿಡಿಲು ಬಡಿದದ್ದು 1986 ರಲ್ಲಿ. [ಶೂನ್ಯದಿಂದ ಬಾನೆತ್ತರದ ಸಾಧನೆ ಮಾಡಿದ ಡಾ.ಬಿ.ಸರೋಜಾದೇವಿ.!]

ಹೃದಯಾಘಾತದಿಂದ ಶ್ರೀಹರ್ಷ 1986 ರಲ್ಲಿ ಮೃತಪಟ್ಟರು. ಅಲ್ಲಿಂದಲೇ ಸರೋಜಾದೇವಿಯವರ ಕಷ್ಟದ ದಿನಗಳು ಆರಂಭವಾಗಿದ್ದು.

ತಮ್ಮ ವೈಯುಕ್ತಿಕ ಬದುಕಿನಲ್ಲಾದ ದುರ್ಘಟನೆ ಬಗ್ಗೆ ನಟಿ ಡಾ.ಬಿ.ಸರೋಜಾದೇವಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಾಯ್ಬಿಟ್ಟರು. ಅದನ್ನೆಲ್ಲಾ ಅವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ.......

''ಲವ್ ಮಾಡುವ ಹಾಗಿಲ್ಲ!''

''ನನ್ನ ತಾಯಿ ನನಗೆ ಮೊದಲೇ ಹೇಳಿಬಿಟ್ಟಿದ್ದರು. 'ನೀನು ಯಾರನ್ನೂ ಲವ್ ಮಾಡಬಾರದು. ನಮ್ಮ ಜಾತಿ ಹುಡುಗನ ಜೊತೆಗೆ ನಿನ್ನ ಮದುವೆ' ಅಂತ. ನಮ್ಮ ಮನೆಯವರ ಕೋಟೆ ದಾಟಿ ಲವ್ ಮಾಡುವುದು ಸಾಧ್ಯವೇ ಇರಲಿಲ್ಲ'' - ಡಾ.ಬಿ.ಸರೋಜಾದೇವಿ

ಆಗ ಸೂಪರ್ ಸ್ಟಾರ್.!

''ನಾನು ಅವಾಗ ಸೂಪರ್ ಸ್ಟಾರ್. ಟಾಪ್ ನಲ್ಲಿ ಇರುವಾಗಲೇ, ಮದುವೆಯಾದೆ. ಕೈಯಲ್ಲಿ ಇನ್ನೂ ಎಷ್ಟೊಂದು ಸಿನಿಮಾ ಇತ್ತು'' - ಡಾ.ಬಿ.ಸರೋಜಾದೇವಿ

ಪತಿ ಮೆಕಾನಿಕಲ್ ಎಂಜಿನಿಯರ್

''ಜರ್ಮನಿಯಲ್ಲಿ ಮೆಕಾನಿಕಲ್ ಎಂಜಿನಿಯರ್ ಶ್ರೀ ಹರ್ಷ. ಅವರು ನನ್ನ ನೋಡೋಕೆ ಬಂದಿದ್ದರು. 'ನಾನು ಇಂಜಿನಿಯರ್, ನೀವು ಆಕ್ಟರ್. ಇಬ್ಬರೂ ಅಡ್ಜಸ್ಟ್ ಆಗುತ್ತಾ' ಅಂತ ನನಗೆ ಕೇಳಿದರು. ನಾನು 'ಹ್ಹೂಂ' ಅಂತ ತಲೆ ಅಲ್ಲಾಡಿಸಿದೆ. ಯಾಕಂದ್ರೆ 'ಏನೂ ಮಾತಾಡಬಾರದು' ಅಂತ ನನ್ನ ತಾಯಿ ಕಟ್ಟಪ್ಪಣೆ ಮಾಡಿದ್ದರು'' - ಡಾ.ಬಿ.ಸರೋಜಾದೇವಿ

ಅದ್ಧೂರಿ ಮದುವೆ

''ಮನೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡ್ವಿ. ಬೆಂಗಳೂರಿನ ವುಡ್ ಲ್ಯಾಂಡ್ಸ್ ಹೋಟೆಲ್ ನಲ್ಲಿ ಅದ್ಧೂರಿಯಾಗಿ ಮದುವೆ ನಡೆಯಿತು'' - ಡಾ.ಬಿ.ಸರೋಜಾದೇವಿ

ಹನಿಮೂನ್ ಗೆ ಮೂರು ಟಿಕೆಟ್!

''ಹನಿಮೂನ್ ಗೆ ನನ್ನ ತಾಯಿ ಕೂಡ ನನ್ನ ಜೊತೆ ಬಂದಿದ್ದರು. ಮೂರು ಟಿಕೆಟ್ ಬುಕ್ ಮಾಡಿದ್ದರು. ಕಾಶೀರ್ ಗೆ ಹೋಗಿದ್ವಿ. ಅವರು ಬೇರೆ ರೂಮ್. ನಾವು ಬೇರೆ ರೂಮ್ ನಲ್ಲಿ ಇದ್ವಿ'' - ಡಾ.ಬಿ.ಸರೋಜಾದೇವಿ

ಶ್ರೀಹರ್ಷ ಕೊಟ್ಟ ಸಪೋರ್ಟ್

''ಮದುವೆ ಆದ್ಮೇಲೆ ಸಿನಿಮಾ ಬೇಡ ಅಂತ ನನ್ನ ತಾಯಿ ಹೇಳಿದ್ರು. ಆದ್ರೆ, ಸಿನಿಮಾ ಮಾಡೋಕೆ ಶ್ರೀಹರ್ಷ ಸಪೋರ್ಟ್ ಮಾಡಿದರು'' - ಡಾ.ಬಿ.ಸರೋಜಾದೇವಿ

ಮದುವೆ ಆದ್ಮೇಲೆ ಲಕ್!

''ಮದುವೆ ಆದ್ಮೇಲೆ ನನಗೆ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಸಿಕ್ಕಿದ್ದು'' - ಡಾ.ಬಿ.ಸರೋಜಾದೇವಿ

ಮಗಳು ಇಂದಿರಾ....

''ಮಗಳು ಹುಟ್ಟಿದ್ದು ಗಣರಾಜ್ಯೋತ್ಸವದಂದು. ನಾನು ಇಂದಿರಾ ಗಾಂಧಿ ಅಭಿಮಾನಿ ಆಗಿದ್ರಿಂದ ಮಗಳಿಗೆ ಇಂದಿರಾ ಅಂತ ಹೆಸರಿಟ್ಟೆ'' - ಡಾ.ಬಿ.ಸರೋಜಾದೇವಿ

ಮಗ ಗೌತಮ್ ರಾಮಚಂದ್ರನ್...

''ಮಗನ ಹೆಸರು ಗೌತಮ್ ರಾಮಚಂದ್ರನ್ ಅಂತ. ಎಂ.ಜಿ.ಆರ್ ರವರು ಮಗುನ ಎತ್ತಿಕೊಂಡು ರಾಮಚಂದ್ರ ಅಂತಿದ್ರು. ಅದಕ್ಕೆ ಆ ಹೆಸರನ್ನಿಟ್ಟೆ'' - ಡಾ.ಬಿ.ಸರೋಜಾದೇವಿ

ಶ್ರೀಹರ್ಷ ತೀರಿಕೊಂಡ ಮೇಲೆ

''ನಾನು ಕಣ್ಣೀರು ಹಾಕ್ಲಿಲ್ಲ. 'ಅತ್ತುಬಿಡಿ, ಇಲ್ಲಾ ಅಂದ್ರೆ ಶಾಕ್ ಆಗುತ್ತೆ' ಅಂತ ಎಲ್ಲರೂ ಹೇಳ್ತಿದ್ರು. ನಾನು ಹಾಗೇ ನಿಂತಿದ್ದೆ. ಡಾಕ್ಟರ್ ಬಂದು ಕಪ್ಪಾಳಕ್ಕೆ ಹೊಡೆದರು. ಆಗ ನಾನು ಜೋರಾಗಿ ಕಿರುಚಿಕೊಂಡು, ಫಿಯೆಟ್ ಕಾರ್ ನ ಜಜ್ಜಿ ಹಾಕ್ಬಿಟ್ಟೆ'' - ಡಾ.ಬಿ.ಸರೋಜಾದೇವಿ

ಅಲ್ಲಿಂದ ಕಷ್ಟ ಶುರು ಆಯ್ತು!

''ಆಗ ಎಂ.ಜಿ.ಆರ್ ಫೋನ್ ಮಾಡಿ ಸಮಾಧಾನ ಮಾಡಿದರು. ಅಲ್ಲಿವರೆಗೂ ಎಷ್ಟು ಸುಖದಲ್ಲಿ ಇದ್ದೆ. ಅಲ್ಲಿಂದ ನನಗೆ ಕಷ್ಟ ಶುರು ಆಯ್ತು. I suffered quite a lot'' - ಡಾ.ಬಿ.ಸರೋಜಾದೇವಿ

ಕುಂಕುಮ ಕೊಡುತ್ತಿರಲಿಲ್ಲ!

''ಯಾರಾದರೂ ಕುಂಕುಮ ಕೊಡೋಕೆ ಬಂದ್ರೆ, ಮನೆಯಲ್ಲಿ ಇರುವವರಿಗೆಲ್ಲಾ ಕೊಟ್ಟರೆ, ನನಗೆ ಮಾತ್ರ ಕೊಡ್ತಿರ್ಲಿಲ್ಲ'' - ಡಾ.ಬಿ.ಸರೋಜಾದೇವಿ

ಶುಭ ಕಾರ್ಯಕ್ಕೆ ಸೇರಿಸುತ್ತಿರಲಿಲ್ಲ!

''ಯಾವ ಶುಭ ಕಾರ್ಯಕ್ಕೂ ನನ್ನ ಸೇರಿಸುತ್ತಿರಲಿಲ್ಲ. ಎಷ್ಟೋ ಬಾರಿ ಒಳಗೆ ಹೋಗಿ ಗೊಳೋ ಅಂತ ಅತ್ತಿದ್ದೇನೆ'' - ಡಾ.ಬಿ.ಸರೋಜಾದೇವಿ

ಇನ್ನೊಂದು ಮದುವೆ ಆಗಿದ್ರೆ?

''ಒಂದು ಪ್ರಶ್ನೆ ನನಗೆ ಸದಾ ಕಾಡುತ್ತೆ. ಒಂದ್ವೇಳೆ ನಾನು ಇನ್ನೊಂದು ಮದುವೆ ಆಗ್ಬಿಟಿದ್ರೆ, ನಾನು ಸುಮಂಗಲಿ ಆಗ್ಬಿಡ್ತಿದ್ನಾ?'' - ಡಾ.ಬಿ.ಸರೋಜಾದೇವಿ

ಮನಸ್ಸು ಒಪ್ಪಲಿಲ್ಲ!

''ಸಮಾಜ ನನ್ನನ್ನ ಚುಚ್ತಾಯಿತ್ತು. ಇನ್ನೊಂದು ಮದುವೆ ಆಗ್ಬೇಕು ಅಂತ ತಾಯಿ ಹಠ ಹಿಡಿದರು. ಆದ್ರೆ, ಹರ್ಷ ಜಾಗಕ್ಕೆ ಮತ್ತೊಬ್ಬರನ್ನ ತರೋಕೆ ನನ್ನ ಮನಸ್ಸು ಒಪ್ಪಿಕೊಳ್ಳಲಿಲ್ಲ. ಅಲ್ಲಿಂದ ನಾನು ಪಟ್ಟ ಕಷ್ಟ ಮರೆಯೋಕೆ ಸಾಧ್ಯ ಇಲ್ಲ. ಅತ್ತು-ಅತ್ತು ನನ್ನ ಕಣ್ಣು ಬತ್ತಿಹೋಗಿತ್ತು'' - ಡಾ.ಬಿ.ಸರೋಜಾದೇವಿ

ಕಷ್ಟಕ್ಕೆ ಸ್ಪಂದಿಸಿದ ರಾಜಣ್ಣ

''ನಾನು ಸಾವಿರಾರು ಜನರನ್ನ ನೋಡಿದ್ದೀನಿ. ಸಾವಿರಾರು ಜನರನ್ನ ಭೇಟಿ ಮಾಡಿದ್ದೀನಿ. ಆದ್ರೆ, ನಮ್ಮ ರಾಜ್ ಕುಮಾರ್ ಅಷ್ಟು ಸರಳಜೀವಿ ಯಾರೂ ಇಲ್ಲ. ನನ್ನ ಕಷ್ಟ ಎಲ್ಲಾ ಅವರ ಹತ್ತಿರ ಹೇಳಿಕೊಳ್ಳುತ್ತಿದ್ದೆ'' - ಡಾ.ಬಿ.ಸರೋಜಾದೇವಿ

ರಾಜಣ್ಣ-ಪಾರ್ವತಮ್ಮಗೆ ಥ್ಯಾಂಕ್ಸ್!

''ರಾಜ್ ಕುಮಾರ್ ಮತ್ತು ಪಾರ್ವತಮ್ಮ ತುಂಬಾ ಸಪೋರ್ಟ್ ಮಾಡಿದ್ದಾರೆ. ಅವರನ್ನ ನೆನಪಿಸಿಕೊಳ್ಳಬೇಕು'' - ಡಾ.ಬಿ.ಸರೋಜಾದೇವಿ

English summary
Kannada Veteran Actress Dr.B.Saroja Devi spoke about her husband Shriharsha in Zee Kannada Channel's popular show Weekend With Ramesh season 2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada