»   » ಗಾಯಕ ವಿಜಯ್ ಪ್ರಕಾಶ್ ರವರ ಕೇಳರಿಯದ ಕಣ್ಣೀರ ಕಥೆ

ಗಾಯಕ ವಿಜಯ್ ಪ್ರಕಾಶ್ ರವರ ಕೇಳರಿಯದ ಕಣ್ಣೀರ ಕಥೆ

Posted By:
Subscribe to Filmibeat Kannada

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಸರಿಗಮಪ' 11ನೇ ಆವೃತ್ತಿಯನ್ನ ನೀವೆಲ್ಲಾ ವೀಕ್ಷಿಸಿರಬಹುದು. ಅದರಲ್ಲಿ ಗಾಯಕ ರಾಜೇಶ್ ಕೃಷ್ಣನ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜೊತೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಕೂಡ ತೀರ್ಪುಗಾರರು.

ಇಂದು ತೀರ್ಪುಗಾರರಾಗಿ ಯುವ ಪ್ರತಿಭೆಗಳನ್ನ ಪರೀಕ್ಷೆ ಮಾಡುವ ಗಾಯಕ ವಿಜಯ್ ಪ್ರಕಾಶ್ ಸುಮಾರು 12 ವರ್ಷಗಳ ಹಿಂದೆ ಇದೇ ಜೀ ಸಮೂಹದ 'ಸರಿಗಮಪ' (ಹಿಂದಿ) ವೇದಿಕೆಯಲ್ಲಿ ಸ್ಪರ್ಧಿಯಾಗಿದ್ದರು ಅನ್ನೋದು ನಿಮಗೆ ಗೊತ್ತಾ?

500 ಕ್ಕೂ ಹೆಚ್ಚಿನ ಹಾಡುಗಳಿಗೆ ಹಿನ್ನಲೆ ಗಾಯನ ಮಾಡಿದ, 10,000 ಕ್ಕೂ ಹೆಚ್ಚು ಆಡ್ ಗಳಿಗೆ ವಾಯ್ಸ್ ಓವರ್ ನೀಡಿದ, ಪ್ರತಿಷ್ಟಿತ ಆಸ್ಕರ್ ಮತ್ತು ಗ್ರ್ಯಾಮಿ ಪ್ರಶಸ್ತಿ ಪಡೆದ 'ಜೈ ಹೋ' ಹಾಡಿನ ಗಾಯಕ ವಿಜಯ್ ಪ್ರಕಾಶ್ ಇಂದು ಈ ಮಟ್ಟಕ್ಕೆ ಬೆಳೆಯುವುದಕ್ಕೆ ಮುಂಬೈ ಬೀದಿಬೀದಿಗಳಲ್ಲಿ ಅವರು ಪಟ್ಟಿರುವ ಕಷ್ಟ ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅನಾವರಣವಾಯ್ತು. [ನಿಮಗೆ ಗೊತ್ತಿಲ್ಲದ 'ಸುಂಟರಗಾಳಿ' ರಕ್ಷಿತ ರಿಯಲ್ ಕಹಾನಿ]

ಮೈಸೂರಿನಲ್ಲಿ ಹುಟ್ಟಿ ಬೆಳೆದು, ಡಿಗ್ರಿ ಕಂಪ್ಲೀಟ್ ಮಾಡದೆ ಮನೆ ಬಿಟ್ಟು ಸೀದಾ ಮುಂಬೈಗೆ ಹೋದ ವಿಜಯ್ ಪ್ರಕಾಶ್ ರವರ ಜೀವನಕಥೆಯನ್ನ ಅವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ......

ವಿಜಯ್ ಪ್ರಕಾಶ್ ಬಗ್ಗೆ.....

ಹುಟ್ಟಿದ ಊರು - ಮೈಸೂರು
ಜನನ - ಫೆಬ್ರವರಿ 21, 1976
ತಂದೆ - ಎಲ್.ರಾಮಶೇಷು, ತಾಯಿ - ಆರ್.ಲೋಪ ಮುದ್ರಾ
ತಾತ - ಕರ್ನಾಟಕದ ಕಲಾತಿಲಕ ಲಕ್ಷ್ಮಿಪತಿ ಭಾಗವತರ್
ಅಣ್ಣ - ಫಣೇಂದ್ರ ಕುಮಾರ್
ಪತ್ನಿ - ಮಹತಿ
ಮಗಳು - ಕಾವ್ಯ

ಸಂಗೀತ ಅಂದ್ರೆ ಪ್ರಾಣ

''ಚಿಕ್ಕವಯಸ್ಸಿಂದ ಸಂಗೀತ ಅಂದ್ರೆ ಪ್ರಾಣ. ಅವನ ಫ್ರೆಂಡ್ ಒಬ್ಬ ಲಂಡನ್ ಗೆ ಹೋಗಿದ್ದ. ಅವನು western instrument ತೆಗೆದುಕೊಂಡಿದ್ದ. ಅದನ್ನ ನೋಡಿ ನನಗೂ ತೆಗೆದುಕೊಡಮ್ಮ ಅಂತ ಕೇಳಿದ್ದ. ನಾವು ಆಗಿದ್ದ ಪರಿಸ್ಥಿತಿಯಲ್ಲಿ ಬರೀ ಸಂಗೀತದಲ್ಲಿ ಮಕ್ಕಳನ್ನ ಸಾಕ್ತಾಯಿದ್ದದ್ದು. ಆಗ ತೆಗೆದುಕೊಡೋಕೆ ಆಗ್ಲಿಲ್ಲ. ಇವತ್ತಿಗೂ ನನ್ನ ಮನಸ್ಸಲ್ಲಿ ಅದು ಕೊರೆಯುತ್ತಿದೆ. ಕ್ಷಮಿಸು ಮಗನೇ'' - ಲೋಪ ಮುದ್ರಾ (ವಿಜಯ್ ಪ್ರಕಾಶ್ ತಾಯಿ)

ಮೊದಲ ಬಹುಮಾನ ಪಡೆದದ್ದು

''ಕನ್ನಡ ರಾಜ್ಯೋತ್ಸವ ಮಾಡುವಾಗ ಸ್ಪರ್ಧೆ ಮಾಡಿದ್ರು. ಆಗ ಹೋಗಿ ನಾನು ಹಾಡಿದ್ದು. ಮೊದಲನೇ ಬಾರಿ ಸ್ಟೇಜ್ ಪರ್ಫಾಮೆನ್ಸ್. ಲಂಬೋಧರ...ಹಾಡು ಹಾಡಿದ್ದೆ. ಸಿಕ್ಕಿದ ಮೊದಲ ಬಹುಮಾನ ಗ್ಲಾಸ್'' - ವಿಜಯ್ ಪ್ರಕಾಶ್

ಓದಿದ ಶಾಲೆ...

''ಸೇಂಟ್ ಥಾಮಸ್ ಕಾನ್ವೆಂಟ್ ನಲ್ಲಿ ಓದಿದ್ದು. ಮೋರಿ ಮೇಲೆ ನಡೆದುಕೊಂಡು ಹೋದರೇನೇ ಒಂದು ಸಾಧನೆ ಮಾಡಿದ ಅನುಭವ. ಒಂದೆರಡು ಬಾರಿ ಚರಂಡಿ ಒಳಗೆ ಬಿದ್ದಿದ್ದೆ'' - ವಿಜಯ್ ಪ್ರಕಾಶ್

ಮನೆ ಬಿಟ್ಟು ಹೊರಟ ಕ್ಷಣ

''ಇಂಜಿನೀಯರಿಂಗ್ ಸೇರಿದೆ. ಸೇರಿದ್ಮೇಲೆ ಅದರಲ್ಲಿ ನನಗೆ ಗಮನ ಇರ್ಲಿಲ್ಲ. ಏನಾದರೂ ಮಾಡ್ಬೇಕು ಅಂತಿದ್ದೆ. ಬಹಳ ದೊಡ್ಡ ತೀರ್ಮಾನ ತೆಗೆದುಕೊಂಡಿದ್ದು ಅವಾಗಲೇ. ಅಪ್ಪ-ಅಮ್ಮಗೆ ಹೇಳದೆ ಕೈಯಲ್ಲಿ 700 ರೂಪಾಯಿ ಇಟ್ಕೊಂಡು, ಚೀಲದಲ್ಲಿ ಒಂದು ಪ್ಯಾಂಟ್-ಶರ್ಟ್ ಹಾಕೊಂಡು ಮನೆಯಿಂದ ಹೊರಟೆ. ಯಾಕೆ ಹೊರಟೆ, ಎಲ್ಲಿಗೆ ಹೊರಟೆ ಗೊತ್ತಿಲ್ಲ. ಆದ್ರೆ ಏನಾದರೂ ಸಾಧಿಸುವ ಛಲ ಇತ್ತು'' - ವಿಜಯ್ ಪ್ರಕಾಶ್

ಪತ್ರದಲ್ಲಿ ಏನಿತ್ತು?

''ಒಂದು ಪತ್ರ ಬರೆದು ಇಟ್ಟಿದ್ದೆ. ಮನೆಯಿಂದ ಮೊದಲು ಬೆಂಗಳೂರಿಗೆ ಹೋದೆ. ಅಲ್ಲಿ ತಿರುಪತಿ ಬಸ್ ನೋಡ್ದೆ. ಅಲ್ಲಿ ಹೋಗಿ ದೇವರ ದರ್ಶನ ಮಾಡ್ದೆ. ಅಲ್ಲಿಂದ ಇವತ್ತಿನ ವರೆಗೂ ಪ್ರತಿ ವರ್ಷ ತಿರುಪತಿಗೆ ಹೋಗಿ ಬಾಲಾಜಿ ದರ್ಶನ ಮಾಡ್ತೀನಿ'' - ವಿಜಯ್ ಪ್ರಕಾಶ್

ಬಾಂಬೆಗೆ ಹೋದ್ಮೇಲೆ...

''ತಿರುಪತಿಯಿಂದ ಬಾಂಬೆಗೆ ಹೋದೆ. ಅಲ್ಲಿ ಯಾರೂ ಗೊತ್ತಿಲ್ಲ. ತುಂಬಾ ಟೈಯರ್ಡ್ ಆಗಿದ್ದೆ. ಉಡುಪಿ ರೆಸ್ಟೋರೆಂಟ್ ನಲ್ಲಿ ಪುಲಾವ್ ತಿಂದು ಮತ್ತೆ ಹೋಟೆಲ್ ಕಡೆ ಹೋಗಲೇ ಇಲ್ಲ. ಯಾಕಂದ್ರೆ ನನ್ನ ಹತ್ರ ದುಡ್ಡು ಇರ್ಲಿಲ್ಲ. ರೇಲ್ವೆ ಸ್ಟೇಷನ್ ನಲ್ಲೇ ಮಲಗುತ್ತಿದ್ದೆ. ರಾತ್ರಿ ಹೊತ್ತು ಪೊಲೀಸ್ ನವರು ಬಂದು ಒದಿಯೋರು'' - ವಿಜಯ್ ಪ್ರಕಾಶ್

ತಿನ್ನೋಕೂ ದುಡ್ಡು ಇರ್ಲಿಲ್ಲ!

''ನನ್ನ ಗುರು ಸುರೇಶ್ ವಾಡ್ಕರ್. ಇವತ್ತಿಗೂ ನಾನು ಅವರನ್ನ ನೆನಪಿಸಿಕೊಳ್ತೀನಿ. ಮೊದಲು ನಾನು ಮುಂಬೈಗೆ ಹೋದಾಗ ಆನಂದ್ ಮಿಲಿಂದ್ ಅಂತ ಮ್ಯೂಸಿಕ್ ಡೈರೆಕ್ಟರ್ ರವರ ಮನೆ ಗೊತ್ತಾಯ್ತು. ಅಲ್ಲಿ ಹೋದಾಗ ಅವರು ಸುರೇಶ್ ವಾಡ್ಕರ್ ಹತ್ರ ಕಳುಹಿಸಿದ್ರು. ಅವರ ಹತ್ರ ಹೋಗಿ ಹಾಡಿದ್ಮೇಲೆ ನನ್ನ ವಾಯ್ಸ್ ಇಷ್ಟ ಪಟ್ಟರು. ನಂತರ ರಾಧಾ ಕೃಷ್ಣ ದೇವಸ್ಥಾನದಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿದ್ರು. ಇದ್ದ ಒಂದು ಬಟ್ಟೆಯನ್ನ ಸಮುದ್ರದ ನೀರಲ್ಲಿ ಒಗೆದು ಒಣಗಿಸಿ ಹಾಕೊಳ್ತಿದ್ದೆ. ತಿನ್ನೋಕೆ ದುಡ್ಡು ಇರ್ಲಿಲ್ಲ. ನಾನು ಇದ್ದ ಸ್ಥಿತಿ ನೋಡಿ ಅವರು ನನಗೆ 100 ರೂಪಾಯಿ ಕೊಟ್ಟು ಊಟ ಮಾಡಿ ಬಾ ಅಂತ ಹೇಳಿದ್ರು.

ಹಸಿವು...

''ಜೀವನದಲ್ಲಿ ಎರಡು ತರಹ ಹಸಿವು ಇರುತ್ತೆ. ದೇವರ ದಯೆಯಿಂದ ಎಲ್ಲಾ ಇದ್ದರೂ ತಿನ್ನುವುದಕ್ಕೆ ಟೈಮ್ ಇರಲ್ಲ. ಅದೊಂಥರಾ ದರ್ಪದ ಹಸಿವು. ಆದರೆ ಎದುರುಗಡೆ ಊಟ ಇದ್ದರೂ, ಕೊಂಡುಕೊಳ್ಳುವುದಕ್ಕೆ ದುಡ್ಡಿರಲ್ಲ. ಆ ಹಸಿವು ಬಹಳ ಕಷ್ಟ. ಅವತ್ತು ನಾನು ದುಡ್ಡು ತಗೊಂಡು ಹೊಟ್ಟೆ ತುಂಬಾ ತಿಂದೆ. ಅಂದಿನಿಂದ ಇವತ್ತಿನವರೆಗೂ ಅಂತಹ ಪರಿಸ್ಥಿತಿ ನನಗೆ ಬರ್ಲಿಲ್ಲ'' - ವಿಜಯ್ ಪ್ರಕಾಶ್

ಮೊದಲ ರೆಕಾರ್ಡಿಂಗ್

''ಸುರೇಶ್ ವಾಡ್ಕರ್ ಅವರ ಫ್ರೆಂಡ್ ಮುಖಾಂತರ ಜಾಹೀರಾತುಗಳಿಗೆ ವಾಯ್ಸ್ ಕೊಡಬಹುದು ಅಂತ 'ವರ್ಡ್ಸ್ ಅಂಡ್ ವಾಯ್ಸಸ್' ಕಂಪನಿಗೆ ಕಳುಹಿಸಿದರು. ನನಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ. 'ನಿರ್ಮಾ ಆಡ್' ಕೊಟ್ಟರು. ಚೆನ್ನಾಗಿ ಹೇಳ್ದೆ. ಮೊದಲ ರೆಕಾರ್ಡಿಂಗ್ ಮಾಡಿದ್ದು 'ಕೆಲ್ಲಾಗ್ಸ್ ಆಡ್'ಗಾಗಿ.

ಮೊದಲು ದುಡ್ಡು ಸಿಕ್ಕಾಗ...

''ಆಡ್ ನಂತರ ದುಡ್ಡು ಕೊಡ್ತೀವಿ ಅಂದರು. ಆಗ ಎಷ್ಟು ಖುಷಿ ಆಯ್ತು ಅಂದ್ರೆ ಫ್ರೆಂಡ್ಸ್ ಹತ್ರ ಸಮೋಸ ತಿನ್ಕೊಂಡು ಬದುಕ್ತಾಯಿದ್ದೆ. ದುಡ್ಡು ಸಿಕ್ತಲ್ಲಾ ಅಂತ ಸಖತ್ ಖುಷಿ. 2700 ರೂಪಾಯಿ ಚೆಕ್ ಕೊಟ್ಟರು. ಅವತ್ತು ರಾತ್ರಿ ನನ್ನ ಫ್ರೆಂಡ್ಸ್ ಗೆಲ್ಲಾ ಪಾರ್ಟಿ ಕೊಡಿಸ್ದೆ'' - ವಿಜಯ್ ಪ್ರಕಾಶ್

ಲವ್ ಸ್ಟೋರಿ....

''ರೇಡಿಯೋವಾಣಿ ಅಂತ ಸ್ಟುಡಿಯೋ. ಅದರಲ್ಲಿ ರೆಕಾರ್ಡಿಂಗ್ ಗೆ ಅಂತ ಹೋಗಿದ್ದೆ. ಅಲ್ಲಿ ಮಹತಿ..ಮಹತಿ ಅಂತ ಎಲ್ಲರೂ ಚರ್ಚೆ ಮಾಡುತ್ತಿದ್ದರು. ಯಾರಪ್ಪಾ ಈ ಮಹತಿ ಅಂತ ನಾನು ನೋಡ್ತಾಯಿದ್ದೆ. ಅಲ್ಲಿಗೆ ನಾನಿನ್ನೂ ಹೊಸಬ. ಆದ್ರೆ, ಮಹತಿ ಆಗಲೇ ವಾಯ್ಸ್ ಓವರ್ ನಲ್ಲಿ ಸ್ಟಾರ್. ನಾನಾಗ ಅವರಿಗೆ ಒಂದು ಲುಕ್ ಕೊಟ್ಟೆ, ಅವರು ನನಗೆ ಒಂದು ಲುಕ್ ಕೊಟ್ಟಿದ್ರು. ಆಮೇಲೆ ಸ್ಟುಡಿಯೋದಲ್ಲಿ ನನಗೆ ಅವರು ಸಿಗುವುದಕ್ಕೆ ಶುರು ಮಾಡಿದರು'' - ವಿಜಯ್ ಪ್ರಕಾಶ್

ಪ್ರಪೋಸ್ ಮಾಡಿದ್ದು....

''ಮಹತಿಗೆ ನನ್ನ ಮೇಲೆ ಕನಿಕರ ಇತ್ತು ಅಂತ ಕಾಣುತ್ತೆ. ತೆಲುಗು ಸೀರಿಯಲ್ ಗೆ ಹಾಡುವುದಕ್ಕೆ ಅಂತ ನನ್ನ ಕರ್ಸಿದ್ರು. ಜೊತೆಗೆ ಅವರೂ ಹಾಡಿದ್ರು. ಒಳಗೊಳಗೆ ನನಗೆ ಒಂಥರಾ ಫೀಲಿಂಗ್. ಒಂದಿನ ಲಂಚ್ ಗೆ ಕರ್ಕೊಂಡು ಹೋಗಿ ಮಾತನಾಡಿದೆ. ಅವಳು ನನ್ನ ಆಟವಾಡಿಸುತ್ತಿದ್ದಳು. ನಂತರ ಪ್ರಪೋಸ್ ಮಾಡ್ದೆ. ಅವಳು ಒಪ್ಪಿಕೊಂಡಳು. ಅವತ್ತೆ ಮನೆಗೆ ಫೋನ್ ಮಾಡಿ ಹೇಳ್ದೆ. ಅಪ್ಪ-ಅಮ್ಮ ಕೂಡ ಮುಂಬೈಗೆ ಬಂದು ಅವಳ ಅಪ್ಪ-ಅಮ್ಮ ಜೊತೆ ಮಾತನಾಡಿದರು'' - ವಿಜಯ್ ಪ್ರಕಾಶ್

ಮದುವೆಗೆ ಎರಡು ಕಂಡೀಷನ್

''ಮಹತಿ ಅಪ್ಪ-ಅಮ್ಮ ಎರಡು ಕಂಡೀಷನ್ ಹಾಕಿದ್ರು. ನಾನಾಗ ಪೇಯಿಂಗ್ ಗೆಸ್ಟ್ ನಲ್ಲಿ ಇದ್ದಿದ್ರಿಂದ ಒಂದು ಮನೆ ತೆಗೆದುಕೊಳ್ಳಬೇಕು ಹಾಗೇ ಡಿಗ್ರಿ ಕಂಪ್ಲೀಟ್ ಮಾಡ್ಬೇಕು ಅಂತ ಕಂಡೀಷನ್ ಹಾಕಿದ್ರು. ನನಗೆ ಮನೆ ತೆಗೆದುಕೊಳ್ಳುವ ನಂಬಿಕೆ ಇತ್ತು. ಒಪ್ಪಿಕೊಂಡೆ'' - ವಿಜಯ್ ಪ್ರಕಾಶ್

ನಾಲ್ಕು ವರ್ಷಗಳಲ್ಲಿ ಮನೆ ಕೊಂಡೆ

''ಮುಂಬೈಗೆ ಹೋದ 4 ವರ್ಷದಲ್ಲೇ ಅಂದ್ರೆ 1999ನಲ್ಲೇ ಸ್ವಂತ ಮನೆ ತೆಗೆದುಕೊಂಡೆ. ಆದ್ರೆ, ಡಿಗ್ರಿ ಮಾಡ್ಲಿಲ್ಲ. ನನಗೆ ಡಿಗ್ರಿ ಕಂಪ್ಲೀಟ್ ಮಾಡೋಕೆ ಆಗಲ್ಲ ಅಂತ ಅವರ ಅಪ್ಪ-ಅಮ್ಮಗೆ ಹೇಳಿ 2001 ನಲ್ಲಿ ತಿರುಪತಿಯಲ್ಲಿ ಮದುವೆ ಆದ್ವಿ'' - ವಿಜಯ್ ಪ್ರಕಾಶ್

ಸಿನಿಮಾದಲ್ಲಿ ಚಾನ್ಸ್ ಸಿಕ್ಕಿದ್ದು...

''ಮದುವೆ ಆದ್ಮೇಲೆ ಸೆಟ್ಲ್ ಆಗಿದ್ವಿ. ಸಿನಿಮಾದಲ್ಲಿ ಹಾಡಬೇಕು ಅಂತ ಆಸೆ ಇತ್ತು. ನನ್ನ ಸ್ನೇಹಿತ ಬಾಲ್ಕಿ ಅಂತ ಇದ್ರು. 'ಚೀನಿ ಕಮ್' ಸಿನಿಮಾ ನಿರ್ದೇಶನ ಮಾಡ್ತಿದ್ರು. ಅದಕ್ಕೆ ಇಳಯರಾಜ ಸಂಗೀತ ನಿರ್ದೇಶಕ. ಇಳಯರಾಜ ಜೊತೆ ಫೋನ್ ನಲ್ಲಿ ಮಾತನಾಡಿದೆ. ನಂತರ ಸ್ಟುಡಿಯೋಗೆ ಕರೆಸಿ ಹಾಡೋಕೆ ಹೇಳಿದ್ರು. ಆಗ ಅಮಿತಾಬ್ ಬಚ್ಚನ್ ಗೆ ಮೊದಲು ಪ್ಲೇ ಬ್ಯಾಕ್ ಹಾಡಿದ್ದು.

ಶಾರುಖ್ ಖಾನ್ ಸಿನಿಮಾಗೆ ಹಾಡಿದ್ದು...

''ನಂತರ ಎ.ಆರ್.ರೆಹಮಾನ್ ಆಫೀಸ್ ನಿಂದ ಫೋನ್ ಬಂತು. ಅವರ ಸ್ಟುಡಿಯೋಗೆ ಹೋದೆ. 'ಸ್ವದೇಸ್' ಸಿನಿಮಾಗೆ ಹಾಡಿದೆ. ಶಾರುಖ್ ಖಾನ್ ಮುಂದೆ. ಅಲ್ಲೇ, ಎ.ಆರ್.ರೆಹಮಾನ್ ತಮಿಳು ಸಿನಿಮಾಗೆ ಹಾಡಿಸಿದರು'' - ವಿಜಯ್ ಪ್ರಕಾಶ್

ಆಸ್ಕರ್ ಅವಾರ್ಡ್

''ಜೈ ಹೋ' ಹಾಡು ಈಗಲೂ ನನಗೆ ನಂಬೋಕೆ ಆಗಲ್ಲ. ಅದಕ್ಕೆ ಆಸ್ಕರ್ ಮತ್ತು ಗ್ರ್ಯಾಮಿ ಪ್ರಶಸ್ತಿ ಸಿಕ್ತು. ಈ ಪ್ರಶಸ್ತಿ ನಂತರ ನನ್ನ ಲೈಫ್ ಬದಲಾಗಿದ್ದು. ನನಗೆ ನಂಬಲಾರದ ಮೆರಗು ಕೊಟ್ಟ ಹಾಡು. ಇದೇ ಹಾಡಿಂದ ನಾನು ಕನ್ನಡಿಗ ಅಂತ ಕರ್ನಾಟಕದಲ್ಲಿ ಪರಿಚಯವಾಗಿದ್ದು'' - ವಿಜಯ್ ಪ್ರಕಾಶ್

ಕನ್ನಡದ ಮೊದಲ ಹಾಡು

''ಗಾಳಿಪಟ' ಚಿತ್ರದ 'ಕವಿತೆ' ಹಾಡು ನಾನು ಮೊದಲು ಕನ್ನಡದಲ್ಲಿ ಹಾಡಿದ್ದು. ನಮ್ಮ ಇಡೀ ಮೈಸೂರು ಫ್ಯಾಮಿಲಿ ಕಾಲರ್ ಟ್ಯೂನ್ ಅದೇ'' - ವಿಜಯ್ ಪ್ರಕಾಶ್

ವಿಜಯ್ ಪ್ರಕಾಶ್...ದಿ ಹೀರೋ...

''ನನಗೆ ವಿಜಯ್ ಪ್ರಕಾಶ್ ಈಸ್ ದಿ ಹೀರೋ ಆಫ್ ಮೈ ಲೈಫ್. ಅದನ್ನ ಎಷ್ಟು ಗ್ಲೋರಿಫೈ ಮಾಡೋಕೆ ಆಗುತ್ತೋ ಅದನ್ನ ಮಾಡ್ತೀನಿ. ಅದೇ ರೀತಿ ವಿಜಯ್ ಪ್ರಕಾಶ್ ಕೈಯಲ್ಲಿ ಎಷ್ಟು ಒಳ್ಳೆ ಕೆಲಸ ಆಗುತ್ತೋ, ಅಷ್ಟನ್ನ ಮಾಡಿಸ್ತೀನಿ'' - ವಿಜಯ್ ಪ್ರಕಾಶ್

English summary
Singer Vijay Prakash's life story was revealed in Zee Kannada Channel's popular show Weekend With Ramesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada