»   » ದೊಡ್ಡಣ್ಣಗೆ ತಮ್ಮ ಪತ್ನಿ ಶಾಂತ ಮೇಲೆ ಯಾಕೆ ಅಷ್ಟು ಕೋಪ?

ದೊಡ್ಡಣ್ಣಗೆ ತಮ್ಮ ಪತ್ನಿ ಶಾಂತ ಮೇಲೆ ಯಾಕೆ ಅಷ್ಟು ಕೋಪ?

Posted By:
Subscribe to Filmibeat Kannada

ಫ್ಯಾಕ್ಟರಿಯಲ್ಲಿ ಕೆಲಸ ಮಾಡುವಾಗಲೇ ನಾಟಕದಲ್ಲಿ ಆಸಕ್ತಿ ತೋರಿಸಿದ್ದ ನಟ ದೊಡ್ಡಣ್ಣಗೆ ಮದುವೆ ಆಗಲು ಕಿಂಚಿತ್ತೂ ಇಷ್ಟವಿರಲಿಲ್ಲವಂತೆ.

ಮನೆಯವರ ಬಲವಂತಕ್ಕೆ ಮಣಿದ ದೊಡ್ಡಣ್ಣ ಶಾಂತ ಅವರನ್ನ ಮದುವೆ ಆದರು. ವಿವಾಹದ ನಂತರ ದೊಡ್ಡಣ್ಣಗೆ ಪತ್ನಿ ಶಾಂತ ಕಂಡ್ರೆ ಕೆಂಡದಷ್ಟು ಕೋಪ. ಸಿನಿಮಾಗೆ ಅಂತ ಥಿಯೇಟರ್ ಗೆ ಹೋದರೆ, ಪತ್ನಿ ಪಕ್ಕ ದೊಡ್ಡಣ್ಣ ಕೂರುತ್ತಲೇ ಇರಲಿಲ್ಲವಂತೆ. [ತೆಳ್ಳಗಿದ್ದ ದೊಡ್ಡಣ್ಣ ಇದ್ದಕ್ಕಿದ್ದ ಹಾಗೆ ದಢೂತಿ ಆಗಿದ್ದು ಹೇಗೆ ಗೊತ್ತಾ?]

ಹೀಗೆಲ್ಲಾ ನಟ ದೊಡ್ಡಣ್ಣ ಯಾಕೆ ಮಾಡ್ತಿದ್ರು ಅಂತ ಪತ್ನಿ ಶಾಂತ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಿಚ್ಚಿಟ್ಟರು. ದೊಡ್ಡಣ್ಣ ರವರ ಲವ್ ಸ್ಟೋರಿ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

ಹುಡುಗಿ ಚೆನ್ನಾಗಿಲ್ಲ!

''ನನ್ನ ನೋಡೋಕೆ ಬಂದಾಗ ನೀವು ತುಂಬಾ ಸ್ಮಾರ್ಟ್ ಆಗಿ ಇದ್ರಿ. ನಿಮ್ಮನ್ನ ನೋಡಿ ನನಗೆ ಇಷ್ಟ ಆಯ್ತು. ಆದ್ರೆ ನೀವು ನನ್ನ ನೋಡಿಕೊಂಡು ಹೋದ ಮೇಲೆ ಹುಡುಗಿ ಚೆನ್ನಾಗಿಲ್ಲ, ಇಷ್ಟ ಇಲ್ಲ ಅಂತ ಜಗಳ ಮಾಡಿದ್ರಂತೆ'' - ಶಾಂತ, ದೊಡ್ಡಣ್ಣ ಪತ್ನಿ.

ಇಷ್ಟವಿಲ್ಲದ ಮದುವೆ!

''ಮದುವೆ ಆದಾಗ ಇಷ್ಟವಿಲ್ಲದ ಮದುವೆ ನಿಮ್ಮದು. ಆದರೂ ಜೀವನ ಸಾಗ್ತಿತ್ತು. ಮೂರು ಮಕ್ಕಳು ಆಯ್ತು. ಆಮೇಲೆ ಎಲ್ಲಾ ಸರಿಹೋಯ್ತು'' - ಶಾಂತ, ದೊಡ್ಡಣ್ಣ ಪತ್ನಿ.

ತವರಿನಲ್ಲೇ ಪತ್ನಿ!

''ಮದುವೆ ಆದ್ಮೇಲೆ ಎರಡು ತಿಂಗಳು ನಾನು ಹಾಸನದಲ್ಲೇ ಇದ್ದೆ. ಯಾವಾಗಲೋ ಒಮ್ಮೆ ಅವರು ಬಂದಾಗ, 'ರೋಮ್ ಗೆ ಹೋಗಿ ಕಾಫಿ ಕೊಡಮ್ಮ' ಅಂತ ನನಗೆ ಹೇಳಿದ್ರೂ, ನಾನು ಅವರು ಇರುವ ರೂಮ್ ಗೆ ಹೋಗ್ತಿರ್ಲಿಲ್ಲ. ನನಗೆ ಅಷ್ಟು ಭಯ ಇತ್ತು'' - ಶಾಂತ, ದೊಡ್ಡಣ್ಣ ಪತ್ನಿ.

ಥಿಯೇಟರ್ ನಲ್ಲಿ....

''ಮದುವೆ ಇಷ್ಟ ಇಲ್ಲ ಅಂತ ಯಾವ ಸಿನಿಮಾಗೂ ಕರ್ಕೊಂಡು ಹೋಗ್ತಿರ್ಲಿಲ್ಲ. ಯಾವಾಗಲೋ ಒಮ್ಮೆ ಹೋಗಿದ್ದಾಗ, ನೀವು ಒಂದು ಮೂಲೆ, ನಾನು ಒಂದು ಮೂಲೆ ಕೂತಿದ್ದೆ'' - ಶಾಂತ, ದೊಡ್ಡಣ್ಣ ಪತ್ನಿ.

ತುಂಬಾ ಸಿಟ್ಟು!

''ತುಂಬಾ ಸಿಟ್ಟು ಇತ್ತು ನಿಮಗೆ. ತಲೆ ಎತ್ತಿ ಮಾತನಾಡಿಸಿದರೂ ನಿಮಗೆ ಇಷ್ಟ ಆಗ್ತಿರ್ಲಿಲ್ಲ. ತಲೆ ಬಗ್ಗಿಸಿ ಮಾತನಾಡಿದಾಗಲೂ ಬೈಯ್ತಿದ್ರಿ'' - ಶಾಂತ, ದೊಡ್ಡಣ್ಣ ಪತ್ನಿ.

ಹೊಡೆದು ಮದುವೆ ಮಾಡಿಸಿದ್ರಂತೆ!

''ನನಗೆ ಹೊಡೆದು ಮದುವೆ ಮಾಡಿಸಿದ್ದು ನಂಜಪ್ಪಣ್ಣ. ಒಂದೆರಡು ವರ್ಷ ಸಿಡಾರು-ಬಡಾರು ಅಂದೆ, ಆಮೇಲೆ ಸುಮ್ಮನಾಗ್ಬಿಟ್ಟೆ. 40 ವರ್ಷ ಆಯ್ತು ಮದುವೆ ಆಗಿ.'' - ದೊಡ್ಡಣ್ಣ

ದೊಡ್ಡಣ್ಣನ ಲವ್ ಸ್ಟೋರಿ

''ಅವರು ಯಾವುದೋ ಒಂದು ಹುಡುಗೀನ ಲವ್ ಮಾಡಿದ್ರು. ಅದನ್ನ ಇಟ್ಕೊಂಡು ಆರು ತಿಂಗಳು ಸಿಟ್ಟಾಗಿದ್ದರು. ಅದಕ್ಕೆ ನನ್ನ ಮೇಲೆ ಹಾಗೆ ಮಾಡ್ತಿದ್ರು. ಆಮೇಲೆ ಸರಿ ಹೋದರು. ನನ್ನ ಜೊತೆ ಎಲ್ಲಾ ಹಂಚಿಕೊಂಡಿದ್ದಾರೆ. ಯಾವುದನ್ನೂ ಮುಚ್ಚಿಟ್ಟುಕೊಂಡಿಲ್ಲ'' - ಶಾಂತ, ದೊಡ್ಡಣ್ಣ ಪತ್ನಿ.

ಪ್ರಪೋಸ್ ಮಾಡಿದ ದೊಡ್ಡಣ್ಣ

ಪತಿಯ ಬಗ್ಗೆ ಇಷ್ಟೆಲ್ಲಾ ಹೇಳಿ 'ಐ ಲವ್ ಯು' ಅಂತ ಪತ್ನಿ ಶಾಂತ ಹೇಳಿದರು. ಇದೇ ಖುಷಿಯಲ್ಲಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದೊಡ್ಡಣ್ಣ ಪತ್ನಿಗೆ ಹಾಡು ಹೇಳಿ ಪ್ರಪೋಸ್ ಮಾಡಿದರು.

ಐ ಲವ್ ಯು

''ಬುಲ್ ಬುಲ್ ಐ ಲವ್ ಯು. ಕಷ್ಟದಲ್ಲಿ ಸುಖದಲ್ಲಿ ನಿನ್ನ ಜೊತೆ ಯಾವಾಗಲೂ ಇರ್ತೀನಿ. ಏಳೇಳು ಜನ್ಮದಲ್ಲೂ ನೀನೇ ನನ್ನ ಹೆಂಡತಿ ಆಗ್ಬೇಕು. ಇನ್ನೂ 40 ವರ್ಷ ಚೆನ್ನಾಗಿರಲಿ ಅಂತ ನೀವೂ ಆಶೀರ್ವಾದ ಮಾಡಿ'' - ದೊಡ್ಡಣ್ಣ

ಈಗಲೂ ಜಗಳ ಇದೆ!

''ಈಗಲೂ ಆರೋಗ್ಯದ ವಿಚಾರದಲ್ಲಿ ನಾವು ಪ್ರತಿದಿನ ಜಗಳ ಆಡುತ್ತೇವೆ'' - ಶಾಂತ, ದೊಡ್ಡಣ್ಣ ಪತ್ನಿ.

ದೊಡ್ಡಣ್ಣ ಚಿತ್ರರಂಗದಲ್ಲಿ ಚಾನ್ಸ್ ಗಿಟ್ಟಿಸಿಕೊಂಡಿದ್ದು..

''ವೆಂಕಟಪ್ಪ ಅಂತ ಇದ್ರು. ಅವರ ಸ್ನೇಹಿತ ಸಿದ್ದಲಿಂಗಯ್ಯ. ಅವರ ಹತ್ತಿರ ಹೋದಾಗ, ಅಳಿಸುವುದು ಸುಲಭ ಅಲ್ಲ ಅಂತ ಹೇಳಿದ್ರು. ನಾನು ಸುಲಭ ಅಂತ್ಹೇಳಿ 'ಅಂಗುಲಿ ಮಾಲ' ನಾಟಕದ್ದು ಡೈಲಾಗ್ ಪ್ರದರ್ಶನ ಮಾಡಿದೆ. ಅದನ್ನ ನೋಡಿ ಅವರ ಕಣ್ಣಲ್ಲಿ ನೀರು ಬಂತು. ಹೀಗಾಗಿ 'ಕೂಡಿ ಬಾಳಿದರೆ ಸ್ವರ್ಗ ಸುಖ' ಸಿನಿಮಾದಲ್ಲಿ ಚಾನ್ಸ್ ಸಿಕ್ತು'' - ದೊಡ್ಡಣ್ಣ

ವಿಲನ್ ನಿಂದ ಹಾಸ್ಯಕ್ಕೆ ಶಿಫ್ಟ್

''ವಿಲನ್ ಪಾತ್ರಗಳನ್ನ ಮಾಡಿ ಮಾಡಿ ಸಾಕಾಗಿತ್ತು. ಒಂದು ದಿನ ಅಭಿಮಾನ್ ಸ್ಟುಡಿಯೋಗೆ ಹೋಗಿದ್ದಾಗ ಬಾಲಕೃಷ್ಣ ಹೇಳಿದ್ರು. ವಿಲನ್ ಜೊತೆಗೆ ಹಾಸ್ಯ ಮಿಕ್ಸ್ ಮಾಡಿಕೊಳ್ಳುವುದಕ್ಕೆ ಸಲಹೆ ನೀಡಿದ್ರು. ಅಲ್ಲಿಂದ ನಾನು ಹಾಸ್ಯ ಮಾಡೋಕೆ ಶುರುಮಾಡಿದೆ'' - ದೊಡ್ಡಣ್ಣ

ಅಪ್ಪನೇ ಬೆಸ್ಟ್!

''ನಾನು ಇವತ್ತು ಇಲ್ಲಿ ಕೂತುಕೊಂಡಿದ್ದೀನಿ ಅಂದ್ರೆ ಅದಕ್ಕೆ ಅಮ್ಮ, ಅಪ್ಪ, ಪತಿ ಕಾರಣ. ಅಪ್ಪ ಪ್ರತಿದಿನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರ್ತಿದ್ರು. ಅಪ್ಪನೇ ಬೆಸ್ಟ್'' - ಉಷಾರಾಣಿ, ದೊಡ್ಡಣ್ಣ ಪುತ್ರಿ

ಮಗಳು ಬದುಕುತ್ತಿರಲಿಲ್ಲ!

''ಡಾಕ್ಟರ್ ಹೇಳಿದ್ರು. 99% ಆಗಲ್ಲ ಅಂತ ಹೇಳಿದ್ರೂ, ಅಪ್ಪ ಅಮ್ಮ ತುಂಬಾ ಕಾನ್ಫಿಡೆಂಟ್ ಆಗಿದ್ರು. ನಮ್ಮ ಅಪ್ಪನೇ ಬೆಸ್ಟ್'' - ಚೈತ್ರ, ದೊಡ್ಡಣ್ಣ ಪುತ್ರಿ

ಅಳಿಯನಿಗೆ ಧನ್ಯವಾದ

''ಮಗಳು ಉಳಿಯುತ್ತಾಳೋ, ಇಲ್ವೋ ಅಂತ ಆಗಿದ್ಲು. ನನ್ನ ಅತ್ಯಂತ ಪ್ರೀತಿ ಮಗಳು ಅವಳು. ನನ್ನ ಅಳಿಯ ಕೂಡ ತುಂಬಾ ಖರ್ಚು ಮಾಡಿದ್ರು. ನೀರು ಖರ್ಚು ಮಾಡಿದ ಹಾಗೆ ಮಾಡಿದ್ರು. ಹ್ಯಾಟ್ಸ್ ಆಫ್ ಟು ಚಿಕ್ಕ ಅಳಿಯ'' - ದೊಡ್ಡಣ್ಣ

English summary
Kannada Actor Doddanna's love story was revealed in Zee Kannada Channel's popular show Weekend With Ramesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada