For Quick Alerts
  ALLOW NOTIFICATIONS  
  For Daily Alerts

  ನಟಿ ಮಂಜುಳ ಸಾವಿನ ಕಡೆ ಕ್ಷಣಗಳನ್ನ ತೆರೆದಿಟ್ಟ ನಟ ಶ್ರೀನಾಥ್

  By Harshitha
  |

  ಮಿನುಗುತಾರೆ ಕಲ್ಪನಾ, ಲೀಲಾವತಿ, ಭಾರತಿ, ಆರತಿ, ಜಯಂತಿ ಅವರಂತಹ ಅತ್ಯದ್ಭುತ ತಾರೆಯರ ಮುಂದೆ ಮಂಕಾಗದೆ 70 ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿನುಗಿದ ನಟಿ ಮಂಜುಳ.

  ವರನಟ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಶಂಕರ್ ನಾಗ್ ಅವರಂತಹ ಸ್ಟಾರ್ ನಟರ ಜೊತೆ ಅಭಿನಯಿಸಿದ್ದರೂ, ನಟಿ ಮಂಜುಳ ಅತ್ಯದ್ಭುತ ಯಶಸ್ಸು ಗಳಿಸಿದ್ದು ಪ್ರಣಯ ರಾಜ ಶ್ರೀನಾಥ್ ಜೊತೆಗೆ. [ಗುಟ್ಟಾಗಿದ್ದ 'ಪ್ರಣಯ ರಾಜ' ನಟ ಶ್ರೀನಾಥ್ ರ ಪ್ರಣಯ ಪುರಾಣ ಬಯಲು]

  'ಪಾಯಿಂಟ್ ಪರಿಮಳ', 'ಬೆಸುಗೆ', 'ಹೆಣ್ಣು ಸಂಸಾರದ ಕಣ್ಣು', 'ಪಟ್ಟಣಕ್ಕೆ ಬಂದ ಪತ್ನಿಯರು' ಸೇರಿದಂತೆ 30 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ಶ್ರೀನಾಥ್ ಹಾಗೂ ಮಂಜುಳ 'ಪ್ರಣಯ ಜೋಡಿ' ಅಂತಲೇ ಹೆಸರುವಾಸಿ.

  ಕನ್ನಡ ಚಿತ್ರರಂಗದಲ್ಲಿ ಅತಿ ವೇಗವಾಗಿ ಬೆಳೆದ ಮಂಜುಳ, ಅಷ್ಟೇ ವೇಗವಾಗಿ ಮೂವತ್ತೈದೇ ವರ್ಷಕ್ಕೆ ವಿಧಿವಶರಾದರು. ನಟಿ ಮಂಜುಳ ಬದುಕಿನ ಕಡೆ ಕ್ಷಣಗಳ ಬಗ್ಗೆ ನಟ ಶ್ರೀನಾಥ್ ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಂದೆ ಓದಿ....

  ನಟಿ ಮಂಜುಳ ನೆನೆದು ಗದ್ಗದಿತರಾದ ನಟ ಶ್ರೀನಾಥ್

  ನಟಿ ಮಂಜುಳ ನೆನೆದು ಗದ್ಗದಿತರಾದ ನಟ ಶ್ರೀನಾಥ್

  ನಟಿ ಮಂಜುಳ ಫೋಟೋ ನೋಡುತ್ತಿದ್ದಂತೆಯೇ ನಟ ಶ್ರೀನಾಥ್ ಗದ್ಗದಿತರಾದರು.

  ಮಂಜುಳ ಬಗ್ಗೆ ಶ್ರೀನಾಥ್ ಏನಂದರು?

  ಮಂಜುಳ ಬಗ್ಗೆ ಶ್ರೀನಾಥ್ ಏನಂದರು?

  ''ನಾನು ಮತ್ತು ಮಂಜುಳ ಸುಮಾರು 35 ಸಿನಿಮಾಗಳಲ್ಲಿ ಒಟ್ಟಾಗಿ ಆಕ್ಟ್ ಮಾಡಿದ್ದೀವಿ. ನಮ್ಮಿಬ್ಬರ ಪೇರ್ ಸೂಪರ್ ಹಿಟ್. ಅರಳು ಹುರಿದ ಹಾಗೆ ಮಾತನಾಡುತ್ತಿದ್ದರು ಮಂಜುಳ. ಅವಳ ಜೊತೆ ಆಕ್ಟ್ ಮಾಡುವಾಗ ತುಂಬಾ ಹೆಲ್ಪ್ ಮಾಡೋರು. ಡ್ಯಾನ್ಸ್ ಮಾಡುವಾಗ ನನಗೆ ತುಂಬಾ ಸಪೋರ್ಟ್ ಮಾಡುತ್ತಿದ್ದರು'' - ಶ್ರೀನಾಥ್

  ಮಂಜುಳಾ ಸಾವು...

  ಮಂಜುಳಾ ಸಾವು...

  ''ಆ ಹುಡುಗಿ ಆ ತರಹ ಒಂದು ಅಪಘಾತ ಆಗಿ ಸಾಯುತ್ತಾಳೆ ಅಂತ ಅಂದುಕೊಂಡಿರಲಿಲ್ಲ'' - ಶ್ರೀನಾಥ್

  ನಾವಿಬ್ಬರು ಅಣ್ಣ-ತಂಗಿ

  ನಾವಿಬ್ಬರು ಅಣ್ಣ-ತಂಗಿ

  ''ಇಂತಹ ಪ್ರೋಗ್ರಾಂನಲ್ಲಿ ನಾನು ಒಂದು ಮಾತು ಹೇಳಲೇಬೇಕು. ನಾನು ಮುಂಚೆ ನಾಟಕ ಮಾಡುವಾಗ ನನ್ನ ತಂಗಿ ಪಾರ್ಟ್ ಮಾಡುತ್ತಿದ್ದರು ಮಂಜುಳ. ಅಲ್ಲಿ ಅವಾಗ ಅವಳು ಮೊದಲ ಬಾರಿ ನನಗೆ ಅಣ್ಣ ಅಂದಿದ್ದು. 30 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾವಿಬ್ಬರು ಪ್ರಣಯ ರಾಜ, ಪ್ರಣಯ ರಾಣಿ ಆಗಿ ಆಕ್ಟ್ ಮಾಡಿದ್ದೀವಿ. ಆದರೂ ನಾವಿಬ್ಬರು ಅಣ್ಣ-ತಂಗಿ'' - ಶ್ರೀನಾಥ್

  ಸಾಯುವ ಮುನ್ನ

  ಸಾಯುವ ಮುನ್ನ

  ''ಸಾಯುವ ಮುನ್ನ ಕೊನೆಯ ಪದ ಆಕೆ ಹೇಳಿದ್ದು 'ಶ್ರೀನಾಥ್ ಅಣ್ಣ ನಾನು ವಾಪಸ್ ಬರ್ತೀನೇನೋ' ಅಂತ'' - ಶ್ರೀನಾಥ್

  ಬರಲೇ ಇಲ್ಲ!

  ಬರಲೇ ಇಲ್ಲ!

  ''ನೀ ಬಂದೇ ಬರ್ತೀಯಾ, ಖಂಡಿತ ಬರ್ತೀಯಾ' ಅಂದಿದ್ದೆ. ಆದರೆ ಅವಳು ವಾಪಸ್ ಬರಲೇ ಇಲ್ಲ'' - ಶ್ರೀನಾಥ್

  ಕೊನೆ ಪದ

  ಕೊನೆ ಪದ

  ''ಇದೇ ಅವಳ ಕೊನೆಯ ಪದ. ಅವತ್ತು ರಾತ್ರಿ ಮಂಜುಳ ಹೋಗ್ಬಿಟ್ಟಳು. 'ಶ್ರೀನಾಥ್ ಅಣ್ಣ' ಅನ್ನೋದು ಅವಳ ಮನಸ್ಸಲ್ಲಿ ಅಷ್ಟು ಇತ್ತು. ನನ್ನ ಮೇಲೆ ಅಷ್ಟು ವಿಶ್ವಾಸ ಇಟ್ಕೊಂಡಿದ್ದ ಹುಡುಗಿ ಅವಳು. ಇವತ್ತು ಇರಬೇಕಿತ್ತು. ಆದ್ರೆ unfortunate, ಸ್ಟೋವ್ ಸಿಡಿದು ಹಾಗೆ ಆಯ್ತು'' - ಶ್ರೀನಾಥ್

  ಜೊತೆಗೆ ಇರ್ತಿದ್ವಿ!

  ಜೊತೆಗೆ ಇರ್ತಿದ್ವಿ!

  ''ಅಷ್ಟು ಸಿನಿಮಾ ಒಟ್ಟಿಗೆ ಮಾಡಿದ್ದೀವಿ. ತಿಂಗಳಿಗೆ 20 ದಿನಗಳು ಒಟ್ಟಿಗೆ ಇರ್ತಿದ್ವಿ. ಬೆಳಗ್ಗೆ ಇಂದ ರಾತ್ರಿ ವರೆಗೂ. ಅವಳು ಮಾತನಾಡುತ್ತಿದ್ದೆಲ್ಲಾ ನೆನಪಿಗೆ ಬರುತ್ತೆ'' - ಶ್ರೀನಾಥ್

  ನೋವು ಇದ್ದದ್ದು ನಿಜ

  ನೋವು ಇದ್ದದ್ದು ನಿಜ

  ''ಅವಳಿಗೆ ಜೀವನದಲ್ಲಿ ಕೆಲವು ನೋವುಗಳು ಆಗಿವೆ. ಆ ನೋವನ್ನ ಮೀರಿ, ಲೈಫ್ ನ ಬಹಳ ಇಷ್ಟ ಪಡುತ್ತಿದ್ದ ಹುಡುಗಿ ಅವಳು. ಅನ್ಯಾಯವಾಗಿ ಆ ತರಹ ಹೋಗ್ಬಿಟ್ಟಳು'' - ಶ್ರೀನಾಥ್

  ಮಂಜುಳ ಸಾವು

  ಮಂಜುಳ ಸಾವು

  ''ನಾನು ಆಸ್ಪತ್ರೆಗೆ ಹೋಗ್ತಾಯಿದ್ದೆ. ಅವಳನ್ನ ನೋಡಿಕೊಳ್ಳುತ್ತಿದ್ದೆ. ಅವಳಿಗೆ ಮೈಯೆಲ್ಲಾ ಸುಟ್ಟು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿ ಸರಿ ಹೋಗಲಿಲ್ಲ. ಅಲ್ಲಿಂದ ಸೇಂಟ್ಸ್ ಜಾನ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಿದರು. ಎಂಟು ದಿನ ಆಸ್ಪತ್ರೆಯಲ್ಲಿ ಇದ್ದಳು. ಪ್ರತಿ ದಿನ ಕೇಳುತ್ತಿದ್ದಳು, 'ಇವತ್ತು ಪರ್ವಾಗಿಲ್ವಾ' ಅಂತ. 'ನಾನು ದಿನಾ ಬರ್ತಿದ್ದೀನಿ. ನನಗೆ ಗೊತ್ತಾಗುತ್ತಿಲ್ಲ. ನಾಳೆ ಬರಲ್ಲ. ನಾಡಿದ್ದು ಬರ್ತೀನಿ. ಅವಾಗ ವ್ಯತ್ಯಾಸ ಗೊತ್ತಾಗುತ್ತೆ, ಹೇಳ್ತೀನಿ' ಅಂದಿದ್ದೆ. ಆದ್ರೆ ಆ ನಾಡಿದ್ದು ಬರಲೇ ಇಲ್ಲ. I feel so bad for her'' - ಶ್ರೀನಾಥ್

  ಆರತಿ ಬಗ್ಗೆ ಶ್ರೀನಾಥ್ ಏನಂತಾರೆ?

  ಆರತಿ ಬಗ್ಗೆ ಶ್ರೀನಾಥ್ ಏನಂತಾರೆ?

  ''She is a wonderful lady. ಅವರು ತುಂಬಾ ಓದುತ್ತಾಯಿದ್ದರು. ಇಡೀ ಪ್ರಪಂಚದ ಬಗ್ಗೆ ತುಂಬಾ ವಿಷಯಗಳನ್ನ ತಿಳಿದುಕೊಳ್ಳುತ್ತಿದ್ದರು. ಅವರು ತುಂಬಾ ಫ್ರೆಂಡ್ಲಿ'' - ಶ್ರೀನಾಥ್

  ಕಲ್ಪನಾ ಬಗ್ಗೆ ಏನಂದ್ರು?

  ಕಲ್ಪನಾ ಬಗ್ಗೆ ಏನಂದ್ರು?

  ''ಅವರ ಜೊತೆಗೆ ನಾನು ಮೊದಲ ಚಿತ್ರದಲ್ಲೇ ಬರಬೇಕಿತ್ತು. ಅವರು ತುಂಬಾ matured ಆರ್ಟಿಸ್ಟ್. ನನಗೆ ಅವರು ಯಾವಾಗಲೂ ಮಿನುಗುತಾರೆ'' - ಶ್ರೀನಾಥ್

  ಶ್ರೀನಾಥ್ ಬಗ್ಗೆ ಪದ್ಮಾ ವಾಸಂತಿ ಕಾಮೆಂಟ್

  ಶ್ರೀನಾಥ್ ಬಗ್ಗೆ ಪದ್ಮಾ ವಾಸಂತಿ ಕಾಮೆಂಟ್

  ''ತುಂಬಾ ಚಬ್ಬಿ ಚೀಕ್ಸ್ ಕೆನ್ನೆ ನಿಮಗೆ. ನಾವೆಲ್ಲಾ ನಿಮಗೆ ಬೆಣ್ಣೆ ಬಿಸ್ಕೆಟ್ ಕೆನ್ನೆ ಅಂತ ರೇಗಿಸುತ್ತಿದ್ವಿ. ನನಗೆ ಮೊದಲ ಹೀರೋ, ಮೊದಲ ನಿರ್ಮಾಪಕರು, ಮೊದಲ ಫ್ರೆಂಡ್ ಕೂಡ ನೀವೇ'' - ಪದ್ಮಾ ವಾಸಂತಿ, ನಟಿ

  ಶ್ರೀನಾಥ್ ರನ್ನ ಅನು ಪ್ರಭಾಕರ್ ಮದುವೆ ಆಗ್ಬೇಕಿತ್ತಂತೆ!

  ಶ್ರೀನಾಥ್ ರನ್ನ ಅನು ಪ್ರಭಾಕರ್ ಮದುವೆ ಆಗ್ಬೇಕಿತ್ತಂತೆ!

  ''ನಾನು ಚಿಕ್ಕವಳಿದ್ದಾಗ, 'ದೊಡ್ಡವಳಾದ್ಮೇಲೆ ನೀನು ಏನಾಗ್ತೀಯಾ' ಅಂತ ಯಾರಾದರೂ ಕೇಳಿದ್ರೆ, ''ಶ್ರೀನಾಥ್ ಅಂಕಲ್ ನ ಮದುವೆ ಆಗ್ತೀನಿ'' ಅಂತ ಹೇಳ್ತಿದ್ದೆ. ಇವತ್ತು ಸಿಕ್ಕಿದಾಗ ಶ್ರೀನಾಥ್ ಅಂಕಲ್ ಕೇಳ್ತಾರೆ, ''ಛೇ ಮಿಸ್ ಆಗ್ಬಿಟ್ಟೆ ಕಣಮ್ಮಾ ನೀನು'' ಅಂತ. ಹಾಗೆ, ನಾನು ಮಾತ್ರ ಅಲ್ಲ ಎಲ್ಲಾ ಹುಡುಗಿಯರು ನಿಮಗೆ ಫ್ಯಾನ್'' - ಅನು ಪ್ರಭಾಕರ್, ನಟಿ

  English summary
  Kannada Actor Srinath revealed last days of Kannada Actress Manjula in Zee Kannada Channel's popular show Weekend With Ramesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X