For Quick Alerts
  ALLOW NOTIFICATIONS  
  For Daily Alerts

  ಮೂರು ವರ್ಷದ ಹಿಂದೆ ನಟ ಶ್ರೀನಾಥ್ ರವರಿಗೆ ಏನಾಗಿತ್ತು ಗೊತ್ತಾ?

  By Harshitha
  |

  ಬರೋಬ್ಬರಿ 49 ವರ್ಷಗಳ ಸಿನಿ ಪಯಣದಲ್ಲಿ 250 ಕ್ಕೂ ಹೆಚ್ಚು ಸಿನಿಮಾಗಳಲ್ಲಿ 'ಪ್ರಣಯ ರಾಜ' ನಟ ಶ್ರೀನಾಥ್ ಮಿಂಚಿದ್ದಾರೆ. ಐದು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ ಶ್ರೀನಾಥ್ ಇಂದಿಗೂ ಗಾಂಧಿನಗರದಲ್ಲಿ ಬೇಡಿಕೆ ಉಳಿಸಿಕೊಂಡಿರುವ ನಟ.

  ನಾಯಕನಾಗಿ ಸೂಪರ್ ಹಿಟ್ ಚಿತ್ರಗಳನ್ನ ನೀಡುತ್ತಿದ್ದ ಶ್ರೀನಾಥ್, ಇದ್ದಕ್ಕಿದ್ದಂತೆ ಸಿಕ್ಕ ಪಾತ್ರಗಳನ್ನೆಲ್ಲಾ ಒಪ್ಪಿಕೊಂಡು ನಟಿಸುವುದಕ್ಕೆ ಶುರು ಮಾಡಿದರು. ಇನ್ನೂ ಯಂಗ್ ಅಂಡ್ ಎನರ್ಜಿಟಿಕ್ ಆಗಿರುವಾಗಲೇ ತೆರೆ ಮೇಲೆ 'ಅಪ್ಪ'ನಾಗಿ ಕಾಣಿಸಿಕೊಂಡರು ನಟ ಶ್ರೀನಾಥ್. [ನಟಿ ಮಂಜುಳ ಸಾವಿನ ಕಡೆ ಕ್ಷಣಗಳನ್ನ ತೆರೆದಿಟ್ಟ ನಟ ಶ್ರೀನಾಥ್]

  ಕಿರುತೆರೆ ಕಡೆಗೂ ವಾಲಿದ ಶ್ರೀನಾಥ್ ಧಾರಾವಾಹಿಗಳಲ್ಲೂ ಅಭಿನಯಿಸಿದರು. ಇದಕ್ಕೆಲ್ಲಾ ಕಾರಣ ನಟ ಶ್ರೀನಾಥ್ ಮಗಳ ಮದುವೆ ದಿನ ಆದ ಕಹಿ ಘಟನೆ.

  ಜೀವನದಲ್ಲಿ ಏರುಪೇರುಗಳನ್ನ ಸಮನಾಗಿ ಕಂಡಿರುವ ನಟ ಶ್ರೀನಾಥ್, ಮೂರು ವರ್ಷಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದರು.

  ಅಪ್ಪನ ಅಂದಿನ ಸ್ಥಿತಿಯನ್ನ ನೆನೆದು ಮಗ ರೋಹಿತ್ ಜೀ ಕನ್ನಡ ವಾಹಿನಿಯ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟರು. ಮುಂದೆ ಓದಿ.....

  ಮಗಳ ಮದುವೆ ದಿನ ಆಗಿದ್ದೇನು?

  ಮಗಳ ಮದುವೆ ದಿನ ಆಗಿದ್ದೇನು?

  ''ಜೀವನದಲ್ಲಿ ಕೆಲವು ಘಟನೆಗಳನ್ನ ನೆನಪಿಸಿಕೊಂಡಾಗ ತುಂಬಾ ನೋವಾಗುತ್ತೆ. ನನ್ನ ಮಗಳ ಮದುವೆ ಟೈಮ್ ನಲ್ಲಿ, ಅವತ್ತು ಸಾಯಂಕಾಲ ನಮ್ಮ ಮನೆಯಲ್ಲಿ ಕಳ್ಳತನ ಆಗೋಯ್ತು. ರಿಸೆಪ್ಷನ್ ನಡೆಯುತ್ತಿರುವಾಗಲೇ'' - ಶ್ರೀನಾಥ್ [ಗುಟ್ಟಾಗಿದ್ದ 'ಪ್ರಣಯ ರಾಜ' ನಟ ಶ್ರೀನಾಥ್ ರ ಪ್ರಣಯ ಪುರಾಣ ಬಯಲು]

  ಎಲ್ಲಾ ಮೈನಸ್ ಆಗಿದ್ದು ಅಲ್ಲೇ!

  ಎಲ್ಲಾ ಮೈನಸ್ ಆಗಿದ್ದು ಅಲ್ಲೇ!

  ''ಆಗ ನಾನು ಝೀರೋ ಅಲ್ಲ, ಮೈನಸ್ ಗೆ ಹೊರಟು ಹೋದೆ. ನನಗೆ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ. ನನ್ನ ಸ್ನೇಹಿತರು ನನಗೆ ಒತ್ತಾಸೆ ಆಗಿ ನಿಂತರು'' - ಶ್ರೀನಾಥ್

  ಬಂದ ಅವಕಾಶವನ್ನೆಲ್ಲಾ ಒಪ್ಪಿಕೊಂಡೆ

  ಬಂದ ಅವಕಾಶವನ್ನೆಲ್ಲಾ ಒಪ್ಪಿಕೊಂಡೆ

  ''ನನಗೆ ಆಗ ಅನಿಸಿದ್ದು ಇಷ್ಟು. ಬಂದ ಸಿನಿಮಾಗಳೆಲ್ಲಾ ಒಪ್ಪಿಕೊಂಡರೆ, ಮೈನಸ್ ನಿಂದ ಝೀರೋಗೆ ಬರಬಹುದು. ಹಾಗೇ ಅದು ಪ್ಲಸ್ ಕೂಡ ಆಗಬಹುದು. ನನ್ನ ಮತ್ತೊಂದು ಬದುಕು ಶುರುವಾಗಿದ್ದು ಆಮೇಲೆ'' - ಶ್ರೀನಾಥ್

  ಅಪ್ಪನ ಪಾತ್ರ ಮಾಡಲು ಶುರು ಮಾಡಿದೆ!

  ಅಪ್ಪನ ಪಾತ್ರ ಮಾಡಲು ಶುರು ಮಾಡಿದೆ!

  ''ಸಿನಿಮಾಗಳಲ್ಲಿ ಅಪ್ಪನ ಪಾತ್ರ ಮಾಡೋಕೆ ಶುರು ಮಾಡಿದೆ. ಅಂಬರೀಶ್ ಗೆ ಮೊದಲು ಅಪ್ಪ ಆಗಿ ಆಕ್ಟ್ ಮಾಡಿದ್ದು. ನನಗೆ ಏನೂ ಅನಿಸಲೇ ಇಲ್ಲ. ಆದರೂ ಚಿತ್ರರಂಗ ನನ್ನನ್ನ ನೋಡಿದ ರೀತಿ ಬದಲಾಗಲಿಲ್ಲ'' - ಶ್ರೀನಾಥ್

  ಆದರ್ಶ ದಂಪತಿ ಕಾರ್ಯಕ್ರಮ

  ಆದರ್ಶ ದಂಪತಿ ಕಾರ್ಯಕ್ರಮ

  ''94ನಲ್ಲಿ 'ಆದರ್ಶ ದಂಪತಿ' ಶೋ ಮಾಡೋಣ ಅಂತ ಪ್ಲಾನ್ ಆಯ್ತು. ಸಂಸಾರದ ಸಣ್ಣ ಪುಟ್ಟ ವಿಷಯಗಳನ್ನಿಟ್ಟುಕೊಂಡು ಮಾಡಿದ ಶೋ ಅದು. ತುಂಬಾ ಜನಪ್ರಿಯತೆ ತಂದುಕೊಡ್ತು. 16 ವರ್ಷ ಮಾಡಿದ ಶೋ ಅದು. ಆ ಶೋನಿಂದ ನಾನು ಜೀವನದಲ್ಲಿ ತುಂಬಾ ಪಾಠ ಕಲಿತಿದ್ದೇನೆ'' - ಶ್ರೀನಾಥ್

  ರಾಜಕೀಯ ಆಗ್ಲಿಲ್ಲ!

  ರಾಜಕೀಯ ಆಗ್ಲಿಲ್ಲ!

  ''ಬಿಜೆಪಿ ಸೇರಿದ್ದೆ. ರಾಜಕೀಯ ನನಗೆ ಅಷ್ಟು ಆಗ್ಬರಲ್ಲ. ಹೀಗಾಗಿ ನಾನಾಗಿ ನಾನೇ ಸ್ವಲ್ಪ ದೂರ ಸರಿದೆ'' - ಶ್ರೀನಾಥ್

  ಇಬ್ಬರು ಮಕ್ಕಳು!

  ಇಬ್ಬರು ಮಕ್ಕಳು!

  ''ಮಗ ಸಾಫ್ಟ್ ವೇರ್ ಎಂಜಿನಿಯರ್. ಅವನದ್ದೇ ಕಂಪನಿ ಇದೆ. ಮಗಳು ಅಮೂಲ್ಯ ಅಮೇರಿಕಾದಲ್ಲಿ ಇದ್ದಾಳೆ'' - ಶ್ರೀನಾಥ್

  ಮೂರು ವರ್ಷದ ಹಿಂದೆ ಏನಾಗಿತ್ತು?

  ಮೂರು ವರ್ಷದ ಹಿಂದೆ ಏನಾಗಿತ್ತು?

  ''ಮೂರು ವರ್ಷದ ಹಿಂದೆ ಅವರಿಗೆ Mild Aneurysm ಆಗಿತ್ತು. ಅಮ್ಮ ಅಮೇರಿಕದಲ್ಲಿ ಇದ್ದರು. ಬೆಳಗ್ಗೆ ಎದ್ದು ಅಪ್ಪ ಎಲ್ಲೋ ಹೋಗಿದ್ದಾರೆ. ಅವತ್ತು ನನ್ನ ಹೆಂಡತಿ ಏನೋ ಡಿಫರೆನ್ಸ್ ಗಮನಿಸಿದ್ದಾರೆ. ನಾನು ಫೋನ್ ಮಾಡಿದೆ. ಅದಕ್ಕೆ ಬರ್ತಾಯಿದ್ದೀನಿ ಅಂತ ಹೇಳಿದ್ರು'' - ರೋಹಿತ್, ಶ್ರೀನಾಥ್ ಪುತ್ರ

  ಆಪರೇಷನ್ ಮಾಡಲೇಬೇಕಾಯ್ತು!

  ಆಪರೇಷನ್ ಮಾಡಲೇಬೇಕಾಯ್ತು!

  ''ಮನೆಗೆ ಬಂದ ಮೇಲೆ ಏನೋ ಮಾತನಾಡುತ್ತಿದ್ದಾರೆ. ಅವರಿಗೆ ಏನು ಹೇಳ್ಬೇಕು ಅಂತ ಗೊತ್ತಾಗುತ್ತಿಲ್ಲ. ಡಾಕ್ಟರ್ ಹತ್ರ ಹೋದ್ಮೇಲೆ, ಸಿ.ಟಿ.ಸ್ಕ್ಯಾನ್ ಮಾಡಿದ್ಮೇಲೆ ಬ್ರೇನ್ ನಲ್ಲಿ ಕ್ಲಾಟ್ ಇದೆ ಅಂತ ಗೊತ್ತಾಯ್ತು. ಆಪರೇಷನ್ ಮಾಡಲೇಬೇಕು ಅಂದರು'' - ರೋಹಿತ್, ಶ್ರೀನಾಥ್ ಪುತ್ರ

  ಸ್ವಲ್ಪ ಹೆಚ್ಚು-ಕಮ್ಮಿ ಆಗಿದ್ರೂ...

  ಸ್ವಲ್ಪ ಹೆಚ್ಚು-ಕಮ್ಮಿ ಆಗಿದ್ರೂ...

  ''ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ದರೂ, ಒಂದು ಕಡೆ ಸ್ವಾಧೀನ ಕಳೆದುಕೊಳ್ಳುತ್ತಿದ್ದರು. ಇಲ್ಲಾ ಅಂದ್ರೆ ವಾಯ್ಸ್ ಹೋಗ್ತಿತ್ತು. ದೇವರು ದಯೆ ಏನೂ ಆಗ್ಲಿಲ್ಲ'' - ರೋಹಿತ್, ಶ್ರೀನಾಥ್ ಪುತ್ರ

  ನನಗೆ ಬೇರೇನೂ ಬೇಡ!

  ನನಗೆ ಬೇರೇನೂ ಬೇಡ!

  ''ಒಳ್ಳೆ ಮಕ್ಕಳು. ಅರ್ಥ ಮಾಡಿಕೊಳ್ಳುವ ಹೆಂಡತಿ. ನನಗೆ ಏನೇನು ಬೇಕೋ ಎಲ್ಲವೂ ದೇವರು ಕೊಟ್ಟಿದ್ದಾನೆ. ಅಷ್ಟು ಸಾಕು. ಸ್ವರ್ಗಕ್ಕೆ ಕಿಚ್ಚು ಹಚ್ಚಿದ ಹಾಗೆ'' - ಶ್ರೀನಾಥ್

  English summary
  Kannada Actor Srinath's struggling life story was revealed in Zee Kannada Channel's popular show Weekend With Ramesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X