»   » ಅಮಿತಾಬ್, ರಜನಿ, ಸಿಲ್ವೆಸ್ಟರ್..ಎಲ್ಲರಿಗೂ 'ಇವರೇ' ಬೇಕು! ಯಾರದು?

ಅಮಿತಾಬ್, ರಜನಿ, ಸಿಲ್ವೆಸ್ಟರ್..ಎಲ್ಲರಿಗೂ 'ಇವರೇ' ಬೇಕು! ಯಾರದು?

Posted By:
Subscribe to Filmibeat Kannada

ಡೈಲಾಗ್ ಕಿಂಗ್ ಸಾಯಿ ಕುಮಾರ್ ಅಂದ ತಕ್ಷಣ ಎಲ್ಲರಿಗೂ ಥಟ್ ಅಂತ ನೆನಪಾಗುವುದು 'ಪೊಲೀಸ್'. ಅನೇಕ ಚಿತ್ರಗಳಲ್ಲಿ ಭ್ರಷ್ಟಾಚಾರ ವಿರುದ್ಧ ಸಮರ ಸಾರುವ ದಕ್ಷ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಸಾಯಿ ಕುಮಾರ್ ಅಭಿನಯಿಸಿದ್ದಾರೆ.

ಹಾಗ್ನೋಡಿದ್ರೆ, ಸಾಯಿ ಕುಮಾರ್ ಬಣ್ಣ ಹಚ್ಚುವ ಮೊದಲು ಚಿತ್ರರಂಗಕ್ಕೆ ಕಾಲಿಟ್ಟಿದ್ದು ಕಂಠದಾನ ಕಲಾವಿದರಾಗಿ. ತೆಲುಗು ಸಿನಿ ಅಂಗಳದಲ್ಲಿ ಅನೇಕ ಕಲಾವಿದರಿಗೆ ಡಬ್ಬಿಂಗ್ ಮಾಡಿದ್ದಾರೆ ಈ 'ಡೈಲಾಗ್ ಕಿಂಗ್'.

ಬರೀ ಟಾಲಿವುಡ್ ಮಂದಿಗೆ ಮಾತ್ರ ಅಲ್ಲ, ತೆಲುಗಿಗೆ ಡಬ್ ಆಗುವ ಬಾಲಿವುಡ್ ನ 'ಬಿಗ್ ಬಿ' ಅಮಿತಾಬ್ ಬಚ್ಚನ್, ಸೂಪರ್ ಸ್ಟಾರ್ ರಜನಿಕಾಂತ್, ಹಾಲಿವುಡ್ ನಟ ಸಿಲ್ವೆಸ್ಟರ್ ಸ್ಟಾಲ್ಲೋನ್ ಅಭಿನಯದ ಸೂಪರ್ ಹಿಟ್ ಚಿತ್ರಗಳಿಗೆ ವಾಯ್ಸ್ ನೀಡುತ್ತಿದ್ದವರು ಇದೇ ಸಾಯಿ ಕುಮಾರ್. ಹೀಗಾಗಿ, ಡಬ್ಬಿಂಗ್ ದುನಿಯಾದಲ್ಲಿ ಸಾಯಿ ಕುಮಾರ್ ಗೆ ಬಹು ಬೇಡಿಕೆ. [ಮೂರು ಬಾರಿ ಯಮಲೋಕದ ಕದ ತಟ್ಟಿದ್ದ ನಟ ಸಾಯಿಕುಮಾರ್!]

ಎಲ್ಲಾ ಭಾಷೆಯ ಸೂಪರ್ ಸ್ಟಾರ್ ಗಳಿಗೆ ತೆಲುಗಿನಲ್ಲಿ ಧ್ವನಿ ನೀಡಿ 1500ಕ್ಕೂ ಹೆಚ್ಚು ಚಿತ್ರಗಳಿಗೆ ಡಬ್ಬಿಂಗ್ ಮಾಡಿರುವ ಖ್ಯಾತಿ ಸಾಯಿ ಕುಮಾರ್ ರದ್ದು.

ಈ ಬಗ್ಗೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಸಾಯಿ ಕುಮಾರ್ ಕೆಲ ವಿಷಯಗಳನ್ನ ಹಂಚಿಕೊಂಡರು. ಅದನ್ನೆಲ್ಲಾ ಅವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ...

ಅಪ್ಪ ದೊಡ್ಡ ಡಬ್ಬಿಂಗ್ ಆರ್ಟಿಸ್ಟ್!

''ಅಪ್ಪ ಜೋಗೀಶ್ವರ್ ಶರ್ಮಾ ದೊಡ್ಡ ಡಬ್ಬಿಂಗ್ ಆರ್ಟಿಸ್ಟ್. ರಾಜ್ ಕುಮಾರ್ ರವರ 'ನಾ ನಿನ್ನ ಮರೆಯಲಾರೆ', 'ಮಯೂರ', 'ಭಕ್ತ ಪ್ರಹ್ಲಾದ' ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ತಂದೆ ತೆಲುಗಿನಲ್ಲಿ ರಾಜ್ ಕುಮಾರ್ ಗೆ ವಾಯ್ಸ್ ಕೊಟ್ಟಿದ್ದಾರೆ'' - ಸಾಯಿ ಕುಮಾರ್

ಡಬ್ಬಿಂಗ್ ನಿಂದಲೇ ದುಡ್ಡು ಮಾಡಿದ್ದು!

''ಮೊದಲು 50 ರೂಪಾಯಿ ಬಾಡಿಗೆ ಮನೆಯಲ್ಲಿ ಇದ್ವಿ. ಆಮೇಲೆ 25 ರೂಪಾಯಿ, 500 ರೂಪಾಯಿ ಬಾಡಿಗೆ ಕೊಡುವ ಮಟ್ಟಕ್ಕೆ ಬಂದ್ವಿ. ಅದಕ್ಕೆ ಕಾರಣ ಡಬ್ಬಿಂಗ್. ಅದರಿಂದಲೇ ನಾವು ಊಟ ಮಾಡುತ್ತಿದ್ದದ್ದು'' - ಸಾಯಿ ಕುಮಾರ್

ಮೊದಲ ಡಬ್ಬಿಂಗ್....

''ಚಿಕ್ಕವಯಸ್ಸಿನಲ್ಲಿ ನಾನು ಮೊದಲು ಡಬ್ಬಿಂಗ್ ಮಾಡಿದ್ದು ಎನ್.ಟಿ.ರಾಮಾರಾವ್ ಜೊತೆ. ನಂತರ ಬಾಲನಟನಾಗಿ ಅವರ ಜೊತೆಗೆ ನಟಿಸಿದೆ'' - ಸಾಯಿ ಕುಮಾರ್

10ನೇ ಕ್ಲಾಸ್ ನಲ್ಲಿ ಡಬ್ಬಿಂಗ್ ಅನುಭವ!

''ನಾನು ಎಸ್.ಎಸ್.ಎಲ್.ಸಿ ಓದುವಾಗ, ಒಂದು ಡಾಕ್ಯುಮೆಂಟರಿಗೆ ವಾಯ್ಸ್ ಕೊಡಲು ಅವಕಾಶ ಸಿಕ್ತು. ಮಾರನೇ ದಿನ ಎಕ್ಸಾಂ ಇತ್ತು. ಆದರೂ, 250 ರೂಪಾಯಿ ಬರುತ್ತೆ ಅಂತ ಅಮ್ಮ ನನ್ನ ಕರ್ಕೊಂಡು ಹೋಗಿ ವಾಯ್ಸ್ ಕೊಡಿಸಿದರು. ಆಮೇಲೆ ರಾತ್ರಿಯೆಲ್ಲಾ ಕೂತ್ಕೊಂಡು ಎಕ್ಸಾಂಗೆ ಓದಿದೆ. ಚೆನ್ನಾಗಿ ಮಾರ್ಕ್ಸ್ ಬಂತು'' - ಸಾಯಿ ಕುಮಾರ್

250 ರೂಪಾಯಿ ಇಂದ ಶುರು ಮಾಡಿದ್ದು!

''250 ರೂಪಾಯಿ ಇಂದ ಶುರು ಮಾಡಿ, ಡಬ್ಬಿಂಗ್ ನಲ್ಲಿ ಅತಿ ಹೆಚ್ಚು ಸಂಭಾವನೆಯನ್ನ ನಾನು ಪಡೆದಿದ್ದೇನೆ'' - ಸಾಯಿ ಕುಮಾರ್

ಡಬ್ಬಿಂಗ್ ಸುಲಭ ಅಲ್ಲ!

''ಡಬ್ಬಿಂಗ್ ಮಾಡುವುದು ಅಷ್ಟು ಸುಲಭ ಅಲ್ಲ. ನಮಗೆ ಮೈಕ್ ಎಲ್ಲಾ. ಏನೇ ಮಾಡಿದರೂ, ಮೈಕ್ ನಲ್ಲಿ ಮಾತ್ರ ಮಾಡಬೇಕು'' - ಸಾಯಿ ಕುಮಾರ್

ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದೆ!

''ಅಮ್ಮನಿಗೆ ನಾನು ಐ.ಎ.ಎಸ್ ಮಾಡ್ಬೇಕು ಅಂತ ಆಸೆ ಇತ್ತು. ಎಂ.ಎ ಮಾಡಿ ಎಂ.ಫಿಲ್ ಮಾಡಿದ್ದೆ. ಆಗ ನನಗೆ ಅಸಿಸ್ಟೆಂಟ್ ಪ್ರೊಫೆಸರ್ ಆಗುವ ಅವಕಾಶ ಸಿಕ್ತು. ಅಲ್ಲಿ ಜನ ನನ್ನ ವಾಯ್ಸ್ ಗುರುತಿಸುವುದಕ್ಕೆ ಶುರು ಮಾಡಿದ್ಮೇಲೆ ಒಂದು ವೃತ್ತಿಯನ್ನ ಮಾತ್ರ ಆರಿಸಿಕೊಳ್ಳಬೇಕು ಅಂತ ಕಾಲೇಜ್ ನಿಂದ ಹೇಳಿದರು. ಅಲ್ಲಿಂದ ಪ್ರೊಫೆಸರ್ ಕೆಲಸ ಬಿಟ್ಟು, ಡಬ್ಬಿಂಗ್ ಮಾತ್ರ ಮಾಡೋಕೆ ಶುರು ಮಾಡಿದೆ'' - ಸಾಯಿ ಕುಮಾರ್

ದಿಗ್ಗಜರಿಗೆ ನನ್ನ ವಾಯ್ಸ್!

''ಅಮಿತಾಬ್ ಬಚ್ಚನ್, ಮಮ್ಮೂಟಿ, ಅನಂತ್ ನಾಗ್, ರಜನಿಕಾಂತ್, ಸಿಲ್ವೆಸ್ಟರ್ ಸ್ಟಾಲ್ಲೋನ್ ಗೆ ನಾನು ತೆಲುಗಿನಲ್ಲಿ ವಾಯ್ಸ್ ಕೊಟ್ಟಿದ್ದೇನೆ'' - ಸಾಯಿ ಕುಮಾರ್

ಸಾಯಿ ಕುಮಾರ್ ಬಗ್ಗೆ ಸುಮನ್ ಮಾತು!

''ನನ್ನ ವಾಯ್ಸ್ ಗಿಂತ ಸಾಯಿ ಕುಮಾರ್ ವಾಯ್ಸ್ ಇದ್ರೆ ಚೆನ್ನ ಅಂತ ನಿರ್ದೇಶಕ ಕೋಡಿ ರಾಮಕೃಷ್ಣ ಹೇಳಿದರು. ಹೀಗಾಗಿ ನನ್ನ ಮೊದಲ ಸಿನಿಮಾದಿಂದ ಸಾಯಿ ಕುಮಾರ್ ನನಗೆ ವಾಯ್ಸ್ ಕೊಟ್ಟಿದ್ದಾರೆ'' - ಸುಮನ್, ತೆಲುಗು ನಟ

ಸಾಯಿ ಕುಮಾರ್ ಬಗ್ಗೆ ನಿರ್ಮಾಪಕರಿಗೆ ಸೆಂಟಿಮೆಂಟ್!

''ಸಾಯಿ ಕುಮಾರ್ ವಾಯ್ಸ್ ಕೊಡುವ ಸಿನಿಮಾಗಳು ಹಿಟ್ ಆಗುತ್ತೆ ಅನ್ನೋ ಸೆಂಟಿಮೆಂಟ್ ನಿರ್ಮಾಪಕರಿಗೂ ಇತ್ತು'' - ಸುಮನ್, ತೆಲುಗು ನಟ

ಒಳ್ಳೆ ಡಬ್ಬಿಂಗ್ ಆರ್ಟಿಸ್ಟ್!

''ಸಾಯಿ ಕುಮಾರ್ ತುಂಬಾ ಒಳ್ಳೆ ಡಬ್ಬಿಂಗ್ ಆರ್ಟಿಸ್ಟ್'' - ಸುಮನ್, ತೆಲುಗು ನಟ

ಸಾಯಿ ಕುಮಾರ್ ಆಕ್ಟಿಂಗ್ ಮಾಡಿದಾಗ...

''ನಾನು ಸುಮನ್ ಗೆ ವಾಯ್ಸ್ ಕೊಟ್ಟು, ನಾನು ಆಕ್ಟ್ ಮಾಡಲು ಶುರು ಮಾಡಿದಾಗ, ಸುಮನ್ ನನಗೆ ವಾಯ್ಸ್ ಕೊಡ್ತಿದ್ದಾರೆ ಅಂತ ಕೆಲವರು ಮಾತನಾಡಿಕೊಂಡರು'' - ಸಾಯಿ ಕುಮಾರ್

ನಟಿಸಿದ ಮೊದಲ ಕನ್ನಡ ಸಿನಿಮಾ ನೋಡಿ ಅಳು!

''ನನ್ನ ಮೊದಲ ಕನ್ನಡ ಸಿನಿಮಾಗೆ ನಾನೇ ಡಬ್ಬಿಂಗ್ ಮಾಡ್ತೀನಿ ಅಂದೆ. ಆದ್ರೆ, ನನ್ನ ಕನ್ನಡ ತೆಲುಗು ತರಹ ಕೇಳಿಸಬಹುದು ಅಂತ ಬೇರೆಯವರ ಕೈಲಿ ಡಬ್ಬಿಂಗ್ ಮಾಡಿಸಿದರು. ಮೊದಲ ಬಾರಿಗೆ ಪ್ರೀಮಿಯರ್ ನೋಡಿದಾಗ, ಫುಲ್ ಅಳ್ತಿದ್ದೆ. ನಾನು ಬೇರೆಯವರಿಗೆಲ್ಲಾ ವಾಯ್ಸ್ ಕೊಟ್ಟಿದ್ದೇನೆ. ನನಗೆ ಬೇರೆಯವರು ವಾಯ್ಸ್ ಕೊಡುವ ಹಾಗೆ ಆಯ್ತಲ್ಲಾ ಅಂತ ಅಳು ನನಗೆ'' - ಸಾಯಿ ಕುಮಾರ್

ಡಬ್ಬಿಂಗ್ ನಿಲ್ಲಿಸುವುದು ಅಮ್ಮನಿಗೆ ಇಷ್ಟ ಇರ್ಲಿಲ್ಲ!

''ನಾನು 'ಪೋಲೀಸ್ ಸ್ಟೋರಿ' ಸಿನಿಮಾ ಮಾಡಿದ್ಮೇಲೆ, ಬೇರೆ ನಟರಿಗೆ ವಾಯ್ಸ್ ಕೊಡುವುದು ಬಿಟ್ಟೆ. ಡಬ್ಬಿಂಗ್ ನಿಲ್ಲಿಸಿದೆ. ಆದ್ರೆ, ಅದು ಅಮ್ಮನಿಗೆ ಇಷ್ಟ ಇರಲಿಲ್ಲ. ಅವರು ಸತ್ತ ಮೇಲೆ, ಅವರು ಬರೆದಿದ್ದ ಡೈರಿ ನೋಡಿದ್ಮೇಲೆ ಗೊತ್ತಾಗಿದ್ದು ಅಮ್ಮನಿಗೆ ನಾನು ಡಬ್ಬಿಂಗ್ ನಿಲ್ಲಿಸುವುದು ಇಷ್ಟ ಇರ್ಲಿಲ್ಲ ಅಂತ. ಹೀಗಾಗಿ, ಈಗಲೂ ನಾನು ಡಬ್ಬಿಂಗ್ ಮಾಡುತ್ತಿದ್ದೇನೆ, ಅಮ್ಮನಿಗಾಗಿ'' - ಸಾಯಿ ಕುಮಾರ್

English summary
Kannada Actor cum Dubbing Artist Saikumar spoke about his Dubbing Career in Zee Kannada Channel's popular show Weekend With Ramesh season 2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada