For Quick Alerts
  ALLOW NOTIFICATIONS  
  For Daily Alerts

  ಗಿಟಾರ್ ಹಿಡಿದು ಬೆತ್ತಲಾಗಿದ್ರಾ ಗಾಯಕ ರಘು ದೀಕ್ಷಿತ್?

  By Harshitha
  |

  'ಪಿಕೆ' ಚಿತ್ರದ ಪೋಸ್ಟರ್ ನೆನಪಿದ್ಯಾ? ಟ್ರಾನ್ಸಿಸ್ಟರ್ ಹಿಡಿದು ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅರೆನಗ್ನವಾಗಿ ಕಾಣಿಸಿಕೊಂಡಿದ್ದ 'ಪಿಕೆ' ಪೋಸ್ಟರ್ ವಿವಾದ ಸೃಷ್ಟಿಸಿತ್ತು. ಆದ್ರೆ, ಅದು ಜಸ್ಟ್ ರೀಲ್ ಸುದ್ದಿ ಬಿಡಿ.

  ವರ್ಷಗಳ ಹಿಂದೆಯೇ ಗಾಯಕ ರಘು ದೀಕ್ಷಿತ್ ಕ್ಯಾಮರಾ ಮುಂದೆ ಅಂತದ್ದೇ ಪೋಸ್ ಕೊಟ್ಟಿದ್ರು ಅಂದ್ರೆ ನೀವು ನಂಬ್ತೀರಾ? ನಂಬದೇ ಬೇರೆ ದಾರಿ ಇಲ್ಲ.

  ಆಮೀರ್ ಖಾನ್ ಟ್ರಾನ್ಸಿಸ್ಟರ್ ಹಿಡಿದುಕೊಂಡಿರುವ ಹಾಗೆ, ರಘು ದೀಕ್ಷಿತ್ ಗಿಟಾರ್ ಹಿಡಿದುಕೊಂಡಿರುವುದು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದೆ. ['ಗಂಡಸ್ತನ ಇದ್ರೆ ಗಿಟಾರ್ ನುಡಿಸು' - ರಘು ದೀಕ್ಷಿತ್ ಬದುಕು ಬದಲಿಸಿದ ಚಾಲೆಂಜ್]

  ಅಷ್ಟಕ್ಕೂ ರಘು ದೀಕ್ಷಿತ್ ಹಾಗೆ ಪೋಸ್ ಕೊಟ್ಟಿದ್ದು ಯಾಕೆ? ಅದನ್ನ ರಘು ದೀಕ್ಷಿತ್ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ....

  ಮೊಟ್ಟಮೊದಲ ಬಾರಿಗೆ ಮನೆಯಿಂದ ಹೊರ ಹೋಗುವ ಅವಕಾಶ

  ಮೊಟ್ಟಮೊದಲ ಬಾರಿಗೆ ಮನೆಯಿಂದ ಹೊರ ಹೋಗುವ ಅವಕಾಶ

  ''ಯುವರಾಜ ಕಾಲೇಜಿನಲ್ಲಿ ಓದಿದ್ದು. ಅಲ್ಲಿ ಓದುವಾಗ, ಮೊಟ್ಟಮೊದಲ ಬಾರಿಗೆ ಮನೆಯಿಂದ ಹೊರಗೆ ಹೋಗಿ, ಪರ್ಫಾಮೆನ್ಸ್ ಮಾಡುವ ಅವಕಾಶ ಸಿಕ್ತು. 5-6 ದಿನ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕ ಅನುಭವ ನನಗೆ. ಮನೆಯಿಂದ ದೂರ, ಏನು ಬೇಕಾದರೂ ಮಾಡಬಹುದು ಅಂತ ಫೀಲಿಂಗ್ ನನಗೆ'' - ರಘು ದೀಕ್ಷಿತ್ [ಗಾಯಕ ರಘು ದೀಕ್ಷಿತ್ ಅಂತಹ ಸಾಧನೆ ಏನು ಮಾಡಿದ್ದಾರೆ?]

  BITS Pilani ಕಾಲೇಜ್ ಫೆಸ್ಟ್

  BITS Pilani ಕಾಲೇಜ್ ಫೆಸ್ಟ್

  ''BITS Pilani ಅಂತ ರಾಜಸ್ಥಾನದ ಕಾಲೇಜು. ಅಲ್ಲಿ ಬಿಗ್ಗೆಸ್ಟ್ ಫೆಸ್ಟ್ ಓಯಾಸಿಸ್ ಅಂತ. 1996 ರಲ್ಲಿ ನಾನು ಅಲ್ಲಿ ಹೋಗಿ ಭಾಗವಹಿಸಿದ್ದು. ಅದು ನನ್ನ ಜೀವನದ ಅತ್ಯಂತ ಸಂತೋಷದ ಘಳಿಗೆ'' - ರಘು ದೀಕ್ಷಿತ್ [ರಘು ದೀಕ್ಷಿತ್ ಬಗ್ಗೆ ಶಾರುಖ್, ಪ್ರಿಯಾಂಕ ಛೋಪ್ರಾ ಹೇಳಿದ್ದೇನು ಗೊತ್ತೇ?]

  ಬಹುಮಾನ ಸಿಗುವುದು ಗ್ಯಾರೆಂಟಿ

  ಬಹುಮಾನ ಸಿಗುವುದು ಗ್ಯಾರೆಂಟಿ

  ''ವೆಸ್ಟರ್ನ್ ಕಾಂಪಿಟೇಷನ್ ಗೆ ಅಂತ ಪಾರ್ಟಿಸಿಪೇಟ್ ಮಾಡಲು ನಾನು ಹೋಗಿದ್ದು. ಸ್ವಲ್ಪ ಹಣ ಮಾತ್ರ ತೆಗೆದುಕೊಂಡು ಹೋಗಿದ್ದೆ. ಬರುವಾಗ ಹೇಗಿದ್ದರೂ, ಬಹುಮಾನ ಬಂದೇ ಬರುತ್ತೆ ಅಂತ ಗ್ಯಾರೆಂಟಿ ನನಗೆ. ಅದರ ಮೇಲೆ ಬರೀ ಒನ್ ವೇ ಟಿಕೆಟ್ ಮಾತ್ರ ತೆಗೆದುಕೊಂಡಿದ್ದೆ'' - ರಘು ದೀಕ್ಷಿತ್

  ಬಹುಮಾನ ಬರಲೇ ಇಲ್ಲ!

  ಬಹುಮಾನ ಬರಲೇ ಇಲ್ಲ!

  ''ನನಗೆ ಬಹುಮಾನ ಬರಲಿಲ್ಲ. ಏನು ಮಾಡೋದು ಅಂತ ಸಿಕ್ಕಾಪಟ್ಟೆ ಯೋಚನೆ ಆದಾಗ, ಮಾರನೇ ದಿನ ಭರತನಾಟ್ಯ ಕಾಂಪಿಟೇಷನ್ ಇದೆ ಅಂತ ಬೋರ್ಡ್ ನಲ್ಲಿ ಓದಿದೆ'' - ರಘು ದೀಕ್ಷಿತ್

  ಎಲ್ಲಾ ಸಾಲ

  ಎಲ್ಲಾ ಸಾಲ

  ''ಅವತ್ತು ಅದೇ ಕಾಲೇಜಿನಲ್ಲಿ ಖಾದಿ ಭಂಡಾರ್ ಅಂಗಡಿಯಲ್ಲಿ ಕುರ್ತಾ ಹೊಲಿಸಿಕೊಂಡು, ಪಕ್ಕದ ಹಾಸ್ಟೆಲ್ ಹುಡುಗನ ಹತ್ತಿರ ಪಂಚೆ ತಗೊಂಡು, ಮೌಂಟ್ ಕಾರ್ಮೆಲ್ ಕಾಲೇಜ್ ನಿಂದ ಅನು ಅಂತ ಹುಡುಗಿ, ಅವರ ಬಳಿ ಗೆಜ್ಜೆ ತಗೊಂಡು, ಅವರದ್ದೇ ದಾವಣಿ ತಗೊಂಡು ಭರತನಾಟ್ಯ ಮಾಡಿದೆ. ಅದರಲ್ಲಿ ನನಗೆ ಮೊದಲ ಬಹುಮಾನ ಬಂತು'' - ರಘು ದೀಕ್ಷಿತ್

  ರೂಮ್ ನಲ್ಲಿ ಪೇಂಟಿಂಗ್ ಇತ್ತು!

  ರೂಮ್ ನಲ್ಲಿ ಪೇಂಟಿಂಗ್ ಇತ್ತು!

  ''ಅಲ್ಲಿ, ಉಳಿದುಕೊಳ್ಳಲು ರೂಮ್ ವ್ಯವಸ್ಥೆ ಮಾಡಿದ್ರು. ಆ ರೂಮ್ ನಲ್ಲಿ ಅದೇ ತರಹ ಒಂದು ಪೇಂಟಿಂಗ್ ಇತ್ತು. ಅದನ್ನ ನೋಡಿ ಖುಷಿ ಆಗಿ, ಹಾಗೇ ಬಟ್ಟೆ ಬಿಚ್ಚಿ, ಗಿಟಾರ್ ಹಿಡ್ಕೊಂಡು ನಿಂತುಕೊಂಡೆ. ಅಲ್ಲೇ ಇದ್ದವನಿಗೆ ನನ್ನ ಕ್ಯಾಮರಾ ಕೊಟ್ಟು ಫೋಟೋ ತೆಗೆಯೋಕೆ ಹೇಳಿದೆ'' - ರಘು ದೀಕ್ಷಿತ್

  ಫೋಟೋ ಬಗ್ಗೆ ಅಸಹ್ಯ ಇಲ್ಲ!

  ಫೋಟೋ ಬಗ್ಗೆ ಅಸಹ್ಯ ಇಲ್ಲ!

  ''Its a most memorable photo. I'm not even ashamed of this picture. It personifies liberation and freedom'' - ರಘು ದೀಕ್ಷಿತ್

  ಬೆತ್ತಲಾಗಿದ್ರಾ ರಘು ದೀಕ್ಷಿತ್

  ಬೆತ್ತಲಾಗಿದ್ರಾ ರಘು ದೀಕ್ಷಿತ್

  ''ಒಳಗಡೆ ಹಾಕೊಂಡಿದ್ದೀನೋ, ಇಲ್ವೋ ಅಂತ ಕೇಳ್ಬೇಡಿ. ಅದು Mysterious. ಹಾಗೇ ಇರಲಿ'' - ರಘು ದೀಕ್ಷಿತ್

  English summary
  Bharatanatyam Dancer turned Music Director, Singer Raghu Dixit revealed the story behind his Guitar photo in Zee Kannada Channel's popular show Weekend With Ramesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X