»   » ನಟಿ ಹೇಮಶ್ರೀ ಮರಣೋತ್ತರ ಪರೀಕ್ಷೆ ಏನಾಯಿತು?

ನಟಿ ಹೇಮಶ್ರೀ ಮರಣೋತ್ತರ ಪರೀಕ್ಷೆ ಏನಾಯಿತು?

Posted By:
Subscribe to Filmibeat Kannada
ಸಂಶಯಾಸ್ಪದವಾಗಿ ಮೃತಪಟ್ಟ ಕಿರುತೆರೆ ತಾರೆ ಹೇಮಶ್ರೀ (38) ಅವರ ಮರಣೋತ್ತರ ಪರೀಕ್ಷೆಯ ಸಂಪೂರ್ಣ ವರದಿ ಏನಾಯಿತು? ಮಹತ್ವದ ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಇನ್ನೂ ಸಾಕಷ್ಟು ಸಮಯ ಕಾಲಬೇಕಾಗುತ್ತದೆ. ಏಕೆಂದರೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಪೊಲೀಸರ ಕೈಸೇರಲು ಇನ್ನೂ ಒಂದು ವಾರ ಕಾಲ ತಡವಾಗುವ ಸಾಧ್ಯತೆಗಳಿವೆ.

ಹೇಮಶ್ರೀ ಅವರ ಪತಿ ಸುರೇಂದ್ರ ಬಾಬು ಅವರನ್ನು ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದು ಅವರಿಂದ ಸಾಕಷ್ಟು ಮಾಹಿತಿಯನ್ನು ಕಲೆಹಾಕಿದ್ದಾರೆ. ಅವುಗಳನ್ನು ದೃಢೀಕರಿಸಲು ವಿಧಿ ವಿಜ್ಞಾನ ಪ್ರಯೋಗಾಲಯದ ಪೂರ್ಣ ವರದಿ ಬರಬೇಕಾಗಿದೆ.

ಅನುಮಾನಾಸ್ಪದವಾಗಿ ಮೃತಪಟ್ಟ ಹೇಮಶ್ರೀ ಅವರ ಹೊಟ್ಟೆಯಲ್ಲಿ ದ್ರಾವಣವೊಂದು ಪತ್ತೆಯಾಗಿತ್ತ್ತು. ಆದರೆ ಈ ದ್ರಾವಣ ಏನು ಎಂದು ಪತ್ತೆ ಹಚ್ಚಲು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದರು.

ಆದರೆ ವರದಿ ಬರುವುದು ಇನ್ನೂ ತಡವಾಗುತ್ತವೆ ಎನ್ನುತ್ತವೆ ಮೂಲಗಳು. ಏತನ್ಮಧ್ಯೆ ಸುರೇಂದ್ರ ಬಾಬು ಅವರ ಪೊಲೀಸ್ ಕಸ್ಟಡಿ ಅವಧಿ ಸಹ ಪೂರ್ಣಗೊಂಡಿದೆ. ಪೊಲೀಸರ ಮುಂದಿನ ನಡೆಯೇನು ಎಂಬುದು ಕುತೂಹಲ ಕೆರಳಿಸಿದೆ. [ಹೇಮಶ್ರೀ ಕಟ್ಟಕಡೆಯ ಮಾತುಗಳು]

ಅಕ್ಟೋಬರ್ 1೦ರಂದು ಹೇಮಶ್ರೀ ಅವರ ಸಾವಿನ ಪ್ರಕರಣ ಬಯಲಿಗೆ ಬಂದಿತ್ತು. ಅದಾದ ಬಳಿಕ ಅ.10ರಂದೇ ಹೇಮಶ್ರೀ ಅವರ ಮರಣೋತ್ತರ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿತ್ತು. ವೈದ್ಯರಾದ ಡಾ.ಸುಮಂಗಲಾ, ಡಾ.ವೆಂಕಟರಾಘವ ರಾವ್ ಹಾಗೂ ಡಾ. ಕೆ.ವಿ ಸತೀಶ್ ಅವರು ನಡೆಸಿದ್ದರು.

ಹೇಮಶ್ರೀ ದೇಹದಲ್ಲಿ ಮೂರು ಕಡೆ ಗಾಯದ ಗುರುತುಗಳಾಗಿದ್ದು, ಹೊಟ್ಟೆಯಲ್ಲಿ ರಸಾಯನಿಕವೂ ಪತ್ತೆಯಾಗಿತ್ತು. ಬಹುಶಃ ವಿಷಪ್ರಾಶನವಾಗಿರುವ ಸಾಧ್ಯತೆಗಳಿವೆ ಎಂಬ ಅನುಮಾನಗಳು ವ್ಯಕ್ತವಾಗಿದ್ದವು. ಹೆಚ್ಚಿನ ತನಿಖೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ಕಳುಹಿಸಲಾಗಿತ್ತು. (ಏಜೆನ್ಸೀಸ್)

English summary
What happened actress Hemashree forensic laboratory report? Sources says that the report delayed one more week. The actress died under mysterious circumstances on 10th October.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada