Just In
Don't Miss!
- News
ಜ.26 ರಂದು ಬೆಂಗಳೂರಿನಲ್ಲಿ ಬೃಹತ್ ರೈತ ಪರ್ಯಾಯ ಪರೇಡ್
- Sports
ಆಸ್ಟ್ರೇಲಿಯಾ ನೆಲದಲ್ಲಿ ಟೀಮ್ ಇಂಡಿಯಾ ಪರಾಕ್ರಮಕ್ಕೆ ಪಾಕ್ ದಿಗ್ಗಜ ಅಕ್ರಮ್ ಪ್ರಶಂಸೆ
- Finance
ಆಕ್ಸಿಸ್ ಬ್ಯಾಂಕ್ Aura ಕ್ರೆಡಿಟ್ ಕಾರ್ಡ್ ಆರಂಭ; ಏನೇನು ಅನುಕೂಲ?
- Automobiles
ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಸ್ವದೇಶಿ ಕಾರು
- Lifestyle
ಚಳಿಗಾಲದಲ್ಲಿ ಕೂದಲ ಆರೈಕೆಗೆ ಇಲ್ಲಿವೆ ಸರಳ ಮನೆಮದ್ದುಗಳು
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಈ ವೀಕೆಂಡ್ ನಲ್ಲಿ ಕಿರುತೆರೆ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ
ಈ ವೀಕೆಂಡ್ ಪ್ಲಾನ್ ಮಾಡಿರುವ ಅಥವಾ ಇನ್ನು ಮಾಡಿಕೊಳ್ಳದ ಜನರಿಗೆ ಒಂದು ಮಾಹಿತಿ. ಹೊರಗೆ ಹೋಗೋರು ಹೋಗಿ ಬನ್ನಿ, ಸಿನಿಮಾ ನೋಡೋಕೆ ಥಿಯೇಟರ್ ಗೆ ಹೋಗೋರು ಹೋಗಿ ಬನ್ನಿ, ಒಂದು ದಿನದ ಪ್ರವಾಸಕ್ಕೆ ಹೋಗೋರು ಹೋಗಿ ಬನ್ನಿ. ಬೆಳಿಗ್ಗೆ ಹೋಗಿ ಸಂಜೆ ಮನೆಗೆ ಬಂದ್ಮೇಲೆ ಟಿವಿ ಹಾಕೋದು ಮರೆಯುವುದಿಲ್ಲ. ಟಿವಿ ಹಾಕಿದ್ರೆ ಯಾವ ಚಾನಲ್ ನೋಡೋದು, ಯಾವ ಕಾರ್ಯಕ್ರಮ ನೋಡೋದು ಎಂಬ ಟೆನ್ಷನ್ ಬೇರೆ ಇರುತ್ತೆ.
ಅದಕ್ಕಾಗಿಯೇ ಈ ಮಾಹಿತಿ. ಈ ವೀಕೆಂಡ್ ನಲ್ಲಿ ಕಿರುತೆರೆಯಲ್ಲಿ ಕೆಲವು ಸ್ಪೆಷಲ್ ಶೋಗಳು ಪ್ರಸಾರವಾಗಲಿದೆ. ಯಾವ ಚಾನಲ್ ನಲ್ಲಿ, ಎಷ್ಟು ಗಂಟೆಗೆ, ಯಾವ ಪ್ರೋಗ್ರಾಂ ಎಂಬುದನ್ನ ನಾವು ಹೇಳ್ತೀವಿ.
ಹಂಸಲೇಖ ಹುಟ್ಟುಹಬ್ಬಕ್ಕೆ ದೊಡ್ಡ ಸರ್ಪ್ರೈಸ್ ನೀಡಿದ ಸರಿಗಮಪ ತಂಡ
ನಿರೀಕ್ಷೆಯಂತೆ ಹಳೆಯ ಕಾರ್ಯಕ್ರಮಗಳು ಹೊಸ ಹೊಸ ಅತಿಥಿಗಳೊಂದಿಗೆ ಬರ್ತಿದೆ. ಅದರ ಜೊತೆಗೆ ಹೊಸ ಶೋ ಕೂಡ ಆರಂಭವಾಗ್ತಿದೆ. ಮಜಾ ಟಾಕೀಸ್, ಸರಿಗಪಮ ವಿಶೇಷತೆ ಏನು? ಈ ವಾರದಿಂದ ಆರಂಭವಾಗ್ತಿರುವ ಶೋ ಯಾವುದು ಎಂದು ತಿಳಿಯಲು ಮುಂದೆ ಓದಿ...
.

ಈ ವಾರದಿಂದ ಕನ್ನಡದ ಕೋಟ್ಯಧಿಪತಿ
ಪುನೀತ್ ರಾಜ್ ಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಕನ್ನಡದ ಕೋಟ್ಯಧಿಪತಿ ನಾಲ್ಕನೇ ಆವೃತ್ತಿ ಇಂದಿನಿಂದ ಆರಂಭವಾಗುತ್ತಿದೆ. ಇದೇ ಮೊದಲ ಬಾರಿಗೆ ಕಲರ್ಸ್ ಕನ್ನಡದ ವಾಹಿನಿಯಲ್ಲಿ ಈ ಶೋ ಪ್ರಸಾರವಾಗುತ್ತಿದ್ದು, ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಟೆಲಿಕಾಸ್ಟ್ ಆಗ್ತಿದೆ.
ಈ ಸಲ ಕನ್ನಡದ ಕೋಟ್ಯಧಿಪತಿಯಲ್ಲಿ ಒಂದೇ ಒಂದು ಬದಲಾವಣೆ.!

ಎರಡೂ ದಿನ ಹಂಸಲೇಖ ಸಂಚಿಕೆ
ನಾದಬ್ರಹ್ಮ ಅವರ ಹುಟ್ಟುಹಬ್ಬದ ಪ್ರಯುಕ್ತ ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಸಿಂಗಿಂಗ್ ಕಾರ್ಯಕ್ರಮದಲ್ಲಿ ಎರಡೂ ದಿನವೂ ಹಂಸಲೇಖ ಹಾಡುಗಳ ಸಂಚಿಕೆ ಪ್ರಸಾರವಾಗಲಿದೆ. ಜೂನ್ 23 ಭಾನುವಾರ ಹಂಸಲೇಖ ಹುಟ್ಟುಹಬ್ಬ. ಹಂಸಲೇಖ ಅವರು 68 ವರ್ಷ ಪೂರೈಸಲಿದ್ದಾರೆ. 68 ವರ್ಷಕ್ಕೆ 68 ಸ್ಪರ್ಧಿಗಳನ್ನು ಕರೆಸಿ, ಅವರ ಕಡೆಯಿಂದ ಹಾಡು ಹಾಡಿಸಿ, ಹುಟ್ಟುಹಬ್ಬಕ್ಕೆ ಮರೆಯಲಾದ ಉಡುಗೊರೆಯನ್ನು ಸರಿಗಮಪ ತಂಡ ನೀಡಿದೆ.

ವೀಕೆಂಡ್ ವಿತ್ ರಮೇಶ್
ಜೀ ಕನ್ನಡದ ಮತ್ತೊಂದು ಸೂಪರ್ ಹಿಟ್ ಶೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಈ ವಾರ ಇಬ್ಬರು ಹಾಸ್ಯಕಲಾವಿದರು ಭಾಗವಹಿಸಲಿದ್ದಾರೆ. ಹಾಸ್ಯ ನಟ ಚಿಕ್ಕಣ್ಣ ಮತ್ತು ಹಿರಿಯ ಹಾಸ್ಯನಟ ಬಿರಾದರ್ ಸಾಧಕರ ಕುರ್ಚಿಯಲ್ಲಿ ಕುಳಿತುಕೊಂಡಿದ್ದಾರೆ. ಬಿರಾದರ್ ಅವರ ಎಪಿಸೋಡ್ ಶನಿವಾರ ಮತ್ತು ಚಿಕ್ಕಣ್ಣ ಎಪಿಸೋಡ್ ಭಾನುವಾರ ಮೂಡಿಬರಲಿದೆ.
ಡಬಲ್ ಸಂಭ್ರಮ: ಭಾನುವಾರ ಚಿಕ್ಕಣ್ಣ, ಶನಿವಾರ ಮತ್ತೊಬ್ಬ ಹಾಸ್ಯನಟ

ಪಂಚತಂತ್ರ ಸಿನಿಮಾ
ಇದೇ ಭಾನುವಾರ ಮಧ್ಯಾಹ್ನ 3 ಗಂಟೆಗೆ ಯೋಗರಾಜ್ ಭಟ್ ನಿರ್ದೇಶನದಲ್ಲಿ ರಿಲೀಸ್ ಆಗಿದ್ದ ಪಂಚತಂತ್ರ ಸಿನಿಮಾ ಪ್ರಸಾರವಾಗ್ತಿದೆ. ಚಿತ್ರಮಂದಿರದಲ್ಲಿ ಮಿಸ್ ಮಾಡಿಕೊಂಡಿದ್ದ ಪ್ರೇಕ್ಷಕರು, ಭಾನುವಾರ ಮಧ್ಯಾಹ್ನ ಆರಾಮಾಗಿ ಕೂತು ಮನೆಯಲ್ಲಿ ಈ ಸಿನಿಮಾ ನೋಡಬಹುದು.

ಮಜಾ ಟಾಕೀಸ್ ಪ್ರಿಯಾಂಕಾ ಉಪೇಂದ್ರ
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಟಾಕ್ ಶೋ ಮಜಾ ಟಾಕೀಸ್ ನಲ್ಲಿ ಶನಿವಾರ ಪ್ರಿಯಾಂಕಾ ಉಪೇಂದ್ರ ಅವರು ಭಾಗವಹಿಸಿದ್ದಾರೆ. ಕಳೆದ ವಾರ ಉಪೇಂದ್ರ ಅವರು ಭಾಗಿಯಾಗಿದ್ದರು. ಈ ವಾರ ಪ್ರಿಯಾಂಕಾ ಉಪೇಂದ್ರ ಬರ್ತಿದ್ದಾರೆ.