»   » ಬಾಂಬೆಯಲ್ಲಿದ್ದ ಕಾಯ್ಕಿಣಿ ಬೆಂಗಳೂರಿಗೆ ಬರಲು ಪ್ರೇರಣೆ ಯಾರು ಗೊತ್ತಾ?

ಬಾಂಬೆಯಲ್ಲಿದ್ದ ಕಾಯ್ಕಿಣಿ ಬೆಂಗಳೂರಿಗೆ ಬರಲು ಪ್ರೇರಣೆ ಯಾರು ಗೊತ್ತಾ?

Posted By:
Subscribe to Filmibeat Kannada

ನಿಮಗೆಲ್ಲಾ ಗೊತ್ತಿರುವಂತೆ ಸಾಹಿತಿ ಜಯಂತ್ ಕಾಯ್ಕಿಣಿ ರವರು ತಮ್ಮ 21 ನೇ ವರ್ಷಕ್ಕೆ ಮುಂಬೈಗೆ ಹೋದವರು. ನಂತರ ಅಲ್ಲಿಯೇ ಶಿಕ್ಷಣ ಮುಗಿಸಿ ಬಯೋ ಕೆಮಿಸ್ಟ್ ಆಗಿ ಉದ್ಯೋಗ ಆರಂಭಿಸಿದರು. ಬಾಂಬೆಯಲ್ಲಿಯೇ ಇದ್ದುಕೊಂಡು ಉದ್ಯೋಗದ ಜೊತೆಗೆ ಸಾಹಿತ್ಯ ಚಟುವಟಿಕೆಗಳನ್ನು ಮಾಡುತ್ತಿದ್ದವರು. ಹಾಗೆ ಉದ್ಯೋಗ ಮಾಡುತ್ತಿದ್ದ ಕಂಪನಿಯಲ್ಲಿದ್ದ ಸ್ಮಿತಾ ರವರ ಮೇಲೆ ಪ್ರೇಮವಾಗಿ ಮದುವೆ ಸಹ ಆಯಿತು.[ಭಾವಲೋಕದ ರಾಯಭಾರಿ ಕಾಯ್ಕಿಣಿ ಪ್ರೇಮಕಥೆ ಸುಂದರ-ಸುಮಧುರ!]

ಆದರೆ ಕಾಯ್ಕಿಣಿ ಬಾಂಬೆಯಲ್ಲಿ ಸೆಟೆಲ್ಡ್ ಆಗಿದ್ದವರು, ಬೆಂಗಳೂರಿಗೆ ಬರಲು ಕಾರಣವೇನು? ಪ್ರೇರಣೆ ಯಾರು?.... ಈ ಬಗ್ಗೆ ಕಾಯ್ಕಿಣಿ ಅವರೇ ಹೇಳಿದ ಮಾತುಗಳು ಇಲ್ಲಿದೆ ಓದಿ..

who was inspired to Jayant KaiKini to come to Bangalore from Bombay?

"ನಾನು ಬೆಂಗಳೂರಿಗೆ ಬರಲು ಮುಖ್ಯವಾದ ಪ್ರೇರಣೆ, ಶಕ್ತಿ ಎಲ್ಲ ಬಂದಿದ್ದು ಸ್ಮಿತಾಳಿಂದ. ನೀವು ಕನ್ನಡ ರೈಟರ್. ಕನ್ನಡ ನಿನ್ನ ಕರ್ಮ ಭೂಮಿ. ಅದೇ ನಿಮ್ಮ ಸಾಂಸ್ಕೃತಿಕ ನೆಲೆ. ತಂದೆ-ತಾಯಿ ಗೋಕರ್ಣದಲ್ಲಿದ್ದಾರೆ. ಏನೇ ಸಮಸ್ಯೆ ಬಂದರೂ ನೋಡಿಕೊಳ್ಳೋಣ. ಹೇಗಿದ್ರು ಬಾಂಬೆಯಲ್ಲಿಯೇ ಬೇರೆ ಕೆಲಸ ಹುಡುಕ ಬೇಕಲ್ಲ. ಬದಲಾಗಿ ಬೆಂಗಳೂರಿನಲ್ಲೇ ಹುಡುಕಿ ಅಂತ ಪ್ರೇರಣೆ ನೀಡಿದ್ದು ಸ್ಮಿತಾ. ಅವಳ ಮಾತು ಕೇಳಿಯೇ ನಾನು ಬಾಂಬೆಯಿಂದ ಬೆಂಗಳೂರಿಗೆ ಬಂದಿದ್ದು" ಎಂದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಜಯಂತ್ ಕಾಯ್ಕಿಣಿ ಹೇಳಿದರು.[ಕಾಯ್ಕಿಣಿ ಸಾಹಿತ್ಯವನ್ನು ಮುಕ್ತಕಂಠದಿಂದ ಹೊಗಳಿದ ಪ್ರಕಾಶ್ ರೈ, ಸೀತಾರಾಂ]

who was inspired to Jayant KaiKini to come to Bangalore from Bombay?

"ನಾನು ಬಾಂಬೆಯಿಂದ ವಾಪಸ್ಸು ಬಂದು, ಇವತ್ತು ನಾನು ಕನ್ನಡ ನಾಡಲ್ಲಿ ಇದ್ದುಕೊಂಡು ನನ್ನ ಜೀವನದಲ್ಲಿ ಏನಾದ್ರು ಬದಲಾವಣೆ, ಬೆಳವಣಿಗೆ ಆಗಿದೆ ಅಂದ್ರೆ, ಅದರ ಎಲ್ಲಾ ಕ್ರೆಡಿಟ್ ಸ್ಮಿತಾ ಅವರಿಗೆ" - ಜಯಂತ್ ಕಾಯ್ಕಿಣಿ, ಸಾಹಿತಿ.[ಯುವ ಬರಹಗಾರರಿಗೆ ಜಯಂತ್ ಕಾಯ್ಕಿಣಿ'ಯ ಸ್ಫೂರ್ತಿಯ ಕಿವಿಮಾತುಗಳಿವು..!]

English summary
Here is who was inspired to Jayant KaiKini to come to Bangalore from Mumbai?. Jayant Kaikini revealed in 'Weekend With Ramesh'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada