For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಫಿನಾಲೆಯಲ್ಲಿ ಗೆಲ್ಲೋದು ಸೆಲೆಬ್ರಿಟಿನಾ ಅಥವಾ ಸಾಮಾನ್ಯನಾ?

  By Bharath Kumar
  |
  ಬಿಗ್ ಬಾಸ್ ಫಿನಾಲೆಯಲ್ಲಿ ಗೆಲ್ಲೋದು ಸೆಲೆಬ್ರಿಟಿನಾ ಅಥವಾ ಸಾಮಾನ್ಯನಾ? | Filmibeat Kannada

  'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಫನಾಲೆಗೆ ಕೇವಲ ನಾಲ್ಕು ದಿನ ಮಾತ್ರ ಬಾಕಿಯಿದೆ. ಅಂತಿಮ ಹಂತಕ್ಕೆ 5 ಜನ ಸ್ಫರ್ಧಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಕಳೆದ ವಾರ ಅನುಪಮಾ ಗೌಡ ಬಿಗ್ ಮನೆಯಿಂದ ಹೊರಹೋಗಿದ್ದರು.

  6 ಜನ ಇದ್ದ ಮನೆಯಲ್ಲಿ ಸಮೀರಾಚಾರ್ಯ ನಿನ್ನೆ ಎಲಿಮಿನೇಟ್ ಆಗಿದ್ದಾರೆ. ಈ ಮೂಲಕ ಉಳಿದ ಐದು ಸ್ಪರ್ಧಿಗಳು ನೇರವಾಗಿ ಫಿನಾಲೆಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

  ಈ ಐದು ಜನರಲ್ಲಿ ಫೈನಲ್ ಯಾರು ಗೆಲ್ಲಬಹುದು ಎಂದು ಎಲ್ಲೆಡೆ ಚರ್ಚೆಯಾಗ್ತಿದೆ. ಈ ಚರ್ಚೆಯ ಮಧ್ಯೆ ಈ ಬಾರಿಯ ಬಿಗ್ ಬಾಸ್ ಕಿರೀಟಕ್ಕೆ ಮುತ್ತಿಡುವುದು ಸೆಲೆಬ್ರಿಟಿನಾ ಅಥವಾ ಕಾಮನ್ ಮ್ಯಾನ್ ಎಂಬ ಕುತೂಹಲ ಹೆಚ್ಚಾಗಿದೆ. ಈ ಬಗ್ಗೆ ವಿಶೇಷ ವರದಿ ಇಲ್ಲಿದೆ ಓದಿ.....

  2 ಸಾಮಾನ್ಯ, 3 ಸೆಲೆಬ್ರಿಟಿ

  2 ಸಾಮಾನ್ಯ, 3 ಸೆಲೆಬ್ರಿಟಿ

  ಬಿಗ್ ಬಾಸ್ ಕನ್ನಡ 5 ಫಿನಾಲೆ ಹಂತಕ್ಕೆ ಒಟ್ಟು ಐದು ಜನ ಪ್ರವೇಶ ಪಡೆದುಕೊಂಡಿದ್ದು, ಇದರಲ್ಲಿ ಇಬ್ಬರು ಸಾಮಾನ್ಯರಿದ್ದು, 3 ಜನ ಸೆಲೆಬ್ರಿಟಿಗಳು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

  ಇಬ್ಬರು ಸ್ಟ್ರಾಂಗ್ ಸ್ಪರ್ಧಿಗಳು

  ಇಬ್ಬರು ಸ್ಟ್ರಾಂಗ್ ಸ್ಪರ್ಧಿಗಳು

  ಇಬ್ಬರು ಕಾಮಾನ್ಯ ಮ್ಯಾನ್ ಗಳ ಪೈಕಿ ನಿವೇದಿತಾ ಗೌಡ ಮತ್ತು ದಿವಾಕರ್ ಫೈನಲ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇಬ್ಬರು ಕೂಡ ಸ್ಟ್ರಾಂಗ್ ಸ್ಪರ್ಧಿಗಳಾಗಿದ್ದು, ಯಾರಿಗೆ ಪ್ರೇಕ್ಷಕ ಪ್ರಭು ಒಲಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

  ಸೆಲೆಬ್ರಿಟಿಗಳು ಯಾರು

  ಸೆಲೆಬ್ರಿಟಿಗಳು ಯಾರು

  ಇನ್ನು ಸೆಲೆಬ್ರಿಟಿಗಳ ಪೈಕಿ ಕಾರ್ತಿಕ್ ಜಯರಾಂ, ಚಂದನ್ ಶೆಟ್ಟಿ ಮತ್ತು ಶ್ರುತಿ ಪ್ರಕಾಶ್ ಅಂತಿಮ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದಾರೆ. ಮೂವರು ಕೂಡ ತಮ್ಮದೇ ಅಭಿಮಾನ ಬಳಗವನ್ನ ಹೊಂದಿದ್ದು, ಯಾರಿಗೆ ವಿಜಯಮಾಲೆ ಒಲಿಯುತ್ತೆ ಎಂಬುದು ಚರ್ಚೆಯಾಗುತ್ತಿದೆ.

  ಮೊದಲ ಸಲ ಕಾಮನ್ ಮ್ಯಾನ್ ಎಂಟ್ರಿ.!

  ಮೊದಲ ಸಲ ಕಾಮನ್ ಮ್ಯಾನ್ ಎಂಟ್ರಿ.!

  ಅಂದ್ಹಾಗೆ, ಕಳೆದ ಐದು ಆವೃತ್ತಿಗಳಲ್ಲಿ ಇದೇ ಮೊದಲ ಸಲ ಕಾಮನ್ ಮ್ಯಾನ್ ಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಒಟ್ಟು ಆರು ಜನ ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಸುಮಾ ರಾಜ್ ಕುಮಾರ್, ಸಮೀರಾಚಾರ್ಯ, ರಿಯಾಜ್, ನಿವೇದಿತಾ ಗೌಡ, ದಿವಾಕರ್ ಮತ್ತು ಮೇಘಾ ಮನೆಗೆ ಬಂದಿದ್ದರು. ಎಲ್ಲರೂ ಎಲಿಮಿನೇಟ್ ಆಗಿ, ಕೊನೆಗೆ ದಿವಾಕರ್ ಮತ್ತು ನಿವೇದಿತಾ ಉಳಿದಿಕೊಂಡಿದ್ದಾರೆ. ಒಂದು ವೇಳೆ ಕಾಮನ್ ಮ್ಯಾನ್ ಯಾರಾದ್ರು ಗೆದ್ರೆ, ಮೊದಲ ಆವೃತ್ತಿಯಲ್ಲೇ ಈ ಸಾಧನೆ ಮಾಡಲಿದ್ದಾರೆ.

  ಟಾಪ್ 3 ಯಾರು?

  ಟಾಪ್ 3 ಯಾರು?

  ಇದೇ ಭಾನುವಾರ ಬಿಗ್ ಬಾಸ್ 5ನೇ ಆವೃತ್ತಿ ಫಿನಾಲೆ ನಡೆಯಲಿದ್ದು, ಐದು ಜನರಲ್ಲಿ ಇಬ್ಬರು ಮನೆಯಲ್ಲೇ ಔಟ್ ಆಗಲಿದ್ದಾರೆ. ಇನ್ನುಳಿದಂತೆ ವೇದಿಕೆ ಮೇಲೆ ಟಾಪ್ 3 ಸ್ಪರ್ಧಿಗಳು ನಿಲ್ಲಲಿದ್ದು, ಅವರಲ್ಲಿ ಇಬ್ಬರು ಕೈ ಸುದೀಪ್ ಹಿಡಿಯಲಿದ್ದಾರೆ. ಒಬ್ಬರನ್ನ ಕಿಚ್ಚ ವಿನ್ನರ್ ಎಂದು ಘೋಷಿಸಲಿದ್ದಾರೆ. 28 ರಂದು ಸಂಜೆ 8ಕ್ಕೆ ಫಿನಾಲೆ ಪ್ರಸಾರವಾಗಲಿದೆ.

  English summary
  Kannada actor Karthik Jayaram, Rap singer Chandan Shetty, Nivedita Gowda, Divakar, Shruti Prakash have got admission to Big Boss Kannada 5 Finale.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X