For Quick Alerts
  ALLOW NOTIFICATIONS  
  For Daily Alerts

  ಈ ಐವರಲ್ಲಿ ಅರ್ಧಕೋಟಿ ಗೆಲ್ಲೋದು ಯಾರು?

  |

  ಬಿಗ್ ಬಾಸ್ ಕನ್ನಡ ಸೀಸನ್ 6 ಫೈನಲ್ ಹಂತಕ್ಕೆ ಬಂದಿದೆ. ಶನಿವಾರ ಮತ್ತು ಭಾನುವಾರ ಫಿನಾಲೆ ಎಪಿಸೋಡ್ ನಡೆಯಲಿದ್ದು, ವಿನ್ನರ್ ಯಾರು ಎಂದು ನಾಳೆ ಬಹಿರಂಗವಾಗಲಿದೆ.

  ಗಾಯಕ ನವೀನ್ ಸಜ್ಜು, ಆಂಡ್ರ್ಯೂ, ಶಶಿಕುಮಾರ್, ರಶ್ಮಿ ಹಾಗೂ ಕವಿತಾ ಗೌಡ ಐವರು ಫಿನಾಲೆಗೆ ಎಂಟ್ರಿಯಾಗಿದ್ದಾರೆ. ಈ ಐವರ ಪೈಕಿ ಯಾರು ಈ ಸಲ ಬಿಗ್ ಬಾಸ್ ಗೆಲ್ಲಲಿದ್ದಾರೆ ಎನ್ನುವುದು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗ್ತಿದೆ.

  ಸಹಜವಾಗಿ ಬಿಗ್ ಬಾಸ್ ಗೆಲ್ಲೋರಿಗೆ ಅರ್ಧಕೋಟಿ ಅಂದ್ರೆ 50 ಲಕ್ಷ ನಗದು ಮತ್ತು ಟ್ರೋಫಿ ಬಹುಮಾನ ನೀಡಲಾಗುತ್ತೆ. ರನ್ನರ್ ಸ್ಪರ್ಧಿಗೆ ನಗದು ಬಹುಮಾನ ನೀಡಲಾಗುತ್ತೆ.

  ಬಿಗ್ ಬಾಸ್ ಫೈನಲ್ ಗೂ ಮುಂಚೆ ಸುದೀಪ್ ಅಂತರಾಳದ ಮಾತು

  ನಿರೀಕ್ಷೆಯಂತೆ ಶನಿವಾರ ಒಬ್ಬರು ಅಥವಾ ಇಬ್ಬರು ಮನೆಯಿಂದ ಎಲಿಮಿನೇಟ್ ಆಗಬಹುದು. ಭಾನುವಾರವೂ ಒಬ್ಬರನ್ನ ಎಲಿಮಿನೇಟ್ ಮಾಡಿ, ಕೊನೆಯಲ್ಲಿ ಇಬ್ಬರನ್ನ ವೇದಿಕೆ ಮೇಲೆ ಕರೆದುಕೊಂಡು ಬರಲಾಗುತ್ತೆ. ನಂತರ ಕೊನೆಯಲ್ಲಿ ವಿನ್ನರ್ ಯಾರು ಎಂದು ಸ್ವತಃ ಸುದೀಪ್ ಅವರೇ ಘೋಷಿಸಲಿದ್ದಾರೆ.

  ಈ ಹಿಂದೆ ಬಿಗ್ ಬಾಸ್ ಗೆದ್ದ ಸ್ಪರ್ಧಿಗಳು ಕೆಳಗಿನಂತಿದ್ದಾರೆ.

  ಬಿಗ್ ಬಾಸ್ ಸೀಸನ್ 1 ವಿನ್ನರ್: ವಿಜಯ್ ರಾಘವೇಂದ್ರ

  ಬಿಗ್ ಬಾಸ್ ಸೀಸನ್ 2 ವಿನ್ನರ್: ಅಕುಲ್ ಬಾಲಾಜಿ

  ಬಿಗ್ ಬಾಸ್ ಸೀಸನ್ 3 ವಿನ್ನರ್: ಶ್ರುತಿ

  ಬಿಗ್ ಬಾಸ್ ಸೀಸನ್ 4 ವಿನ್ನರ್: ಪ್ರಥಮ್

  ಬಿಗ್ ಬಾಸ್ ಸೀಸನ್ 5 ವಿನ್ನರ್: ಚಂದನ್ ಶೆಟ್ಟಿ

  English summary
  Rapid rashmi, naveen sajju, shashi kumar, andrew, kavitha gowda enter to bigg boss kannada 6 finale. who will win this season.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X