Don't Miss!
- Sports
IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವೀಕೆಂಡ್ ಸಾಧಕರ ಸೀಟಿನಲ್ಲಿ ಇವರನ್ನ ನೋಡಲೇಬೇಕಂತೆ ಜನರು
Recommended Video
ವೀಕೆಂಡ್ ವಿತ್ ರಮೇಶ್ ನಾಲ್ಕನೇ ಆವೃತ್ತಿಗೆ ದಿನಗಣನೆ ಶುರುವಾಗಿದ್ದು, ಈ ಸಲ ಯಾರೆಲ್ಲಾ ಅತಿಥಿಯಾಗಿ ಬರ್ತಾರೆ ಎಂಬುದು ಭಾರಿ ಕುತೂಹಲ ಮೂಡಿಸಿದೆ. ಹೊಸ ಆವೃತ್ತಿಯ ಮೊದಲ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಾಧಕರ ಸೀಟಿನಲ್ಲಿ ಕೂರುತಿದ್ದಾರೆ ಎಂದು ಈಗಾಗಲೇ ಅಧಿಕೃತವಾಗಿದೆ.
ಅದಾದ ಬಳಿಕ ಹಿರಿಯ ನಟಿ ಪ್ರೇಮಾ ಮತ್ತು ನಟ ರಾಘವೇಂದ್ರ ರಾಜ್ ಕುಮಾರ್ ಎರಡನೇ ವಾರದಲ್ಲಿ ವೀಕೆಂಡ್ ವಿತ್ ರಮೇಶ್ ಶೋಗೆ ಬರ್ತಾರಂತೆ. ಸದ್ಯಕ್ಕೆ ಈ ಮೂವರು ಹೆಸರು ಅಂತಿಮವಾಗಿದ್ದು, ಇನ್ನು ಕೆಲವು ಗಣ್ಯರನ್ನ ಶೋಗೆ ಕರೆದುಕೊಂಡು ಬರಲು ಪ್ರಯತ್ನ ಪಡುತ್ತಿದ್ದಾರೆ.
'ವೀಕೆಂಡ್
ವಿತ್
ರಮೇಶ್'
ಟಿ.ಆರ್.ಪಿಗೆ
ಎದುರಾಯ್ತು
ಆತಂಕ.!
ಕಳೆದ ಮೂರು ಸೀಸನ್ ನಿಂದಲೂ ಕಾರ್ಯಕ್ರಮಕ್ಕೆ ಬರದೇ ಇರುವ ವ್ಯಕ್ತಿಗಳಿಗಾಗಿ ಈ ಬಾರಿಯೂ ಬೇಡಿಕೆ ಹೆಚ್ಚಿದೆ. ಈ ಬಗ್ಗೆ ಫಿಲ್ಮಿಬೀಟ್ ನಲ್ಲಿ ಒಂದು ಪೋಲ್ ಕೇಳಲಾಗಿತ್ತು. ಈ ಸಲ ಯಾರನ್ನು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ನೋಡಲು ಕಾಯುತ್ತಿದ್ದೀರಾ ಎಂಬ ಪ್ರಶ್ನೆಗೆ ಓದುಗರು ಉತ್ತರಿಸಿದ್ದಾರೆ. ಹಾಗಿದ್ರೆ, ಓದುಗರ ಪ್ರಕಾರ ಯಾರ ಸಂಚಿಕೆಗಾಗಿ ಹೆಚ್ಚು ಜನ ಕಾಯ್ತಿದ್ದೀರಾ? ಮುಂದೆ ಓದಿ....

ದ್ರಾವಿಡ್ ಗಾಗಿ ಕಾಯುತ್ತಿದೆ ಮನ
ಭಾರತ ಕ್ರಿಕೆಟ್ ದಿಗ್ಗಜ, ಗೋಡೆ ಖ್ಯಾತಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನೋಡಬೇಕು ಎಂಬುದು ಕೋಟ್ಯಾಂತರ ಅಭಿಮಾನಿಗಳ ಕೋರಿಕೆ. ಈ ಸಲನಾದರೂ ದ್ರಾವಿಡ್ ಅವರನ್ನ ಕರೆಯಿಸಿ ಎಂದು ಬೇಡಿಕೆಯಿಟ್ಟಿದ್ದಾರೆ. ಫಿಲ್ಮಿಬೀಟ್ ಪೋಲ್ ನಲ್ಲೂ ಶೇಕಡಾ 20.21 ರಷ್ಟು ಜನ ದ್ರಾವಿಡ್ ಸಂಚಿಕೆ ನೋಡಲು ಕಾಯುತ್ತಿದ್ದಾರೆ.
'ವೀಕೆಂಡ್
ವಿತ್
ರಮೇಶ್'ಗೆ
ದ್ರಾವಿಡ್
ಬರಬೇಕೆ?,
ಹಾಗಾದ್ರೆ
ಹೀಗೆ
ಮಾಡಿ!

ಸುಧಾಮೂರ್ತಿ ನೋಡಬೇಕು
ಇನ್ಫೋಸಿಸ್ ಒಡತಿ ಸುಧಾಮೂರ್ತಿ ಅವರನ್ನ ವೀಕೆಂಡ್ ಸಾಧಕರ ಸೀಟಿನಲ್ಲಿ ನೋಡಬೇಕು ಎಂಬುದು ಕಿರುತೆರೆ ಪ್ರೇಕ್ಷಕರ ಆಸೆಯಾಗಿದೆ. ಸದ್ಯದ ಮಾಹಿತಿ ಪ್ರಕಾರ, ಈ ಆವೃತ್ತಿಯಲ್ಲಿ ಸುಧಾಮೂರ್ತಿ ಅವರು ಬರಲಿದ್ದಾರೆ ಎನ್ನಲಾಗಿದೆ. ಫಿಲ್ಮಿಬೀಟ್ ಪೋಲ್ ನಲ್ಲಿ ಶೇಕಡಾ 20.56 ರಷ್ಟು ಜನ ಮತ ಹಾಕಿದ್ದಾರೆ.

ವೀರೇಂದ್ರ ಹೆಗ್ಗಡೆ ಖಚಿತ
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಈ ಆವೃತ್ತಿಯ ಮೊದಲ ಅತಿಥಿ. ಕಳೆದ ಮೂರು ಆವೃತ್ತಿಯಲ್ಲೂ ಇವರ ಹೆಸರು ಕೇಳಿಬರ್ತಿತ್ತು. ಕೊನೆಗೂ ನಾಲ್ಕನೇ ಸೀಸನ್ ನಲ್ಲಿ ಇದು ಸಫಲವಾಗಿದೆ. ಈ ಸಂಚಿಕೆಯನ್ನ ನೋಡಲು ಶೇಕಡಾ 23.37 ರಷ್ಟು ಜನರ ಕಾಯುತ್ತಿದ್ದೇವೆ ಎಂದು ವೋಟ್ ಹಾಕಿದ್ದಾರೆ.
'ವೀಕೆಂಡ್
ವಿತ್
ರಮೇಶ್'ನಲ್ಲಿ
ಅತಿ
ಹೆಚ್ಚು
ಟಿ.ಆರ್.ಪಿ
ಬಂದಿದ್ದು
ಇವರ
ಸಂಚಿಕೆಗೆ.!

ಯಾರೆಲ್ಲಾ ಬರಬೇಕು
ಇವರ ಜೊತೆಗೆ ಅನಿಲ್ ಕುಂಬ್ಳೆ, ಹಂಸಲೇಖ, ಸಾಲು ಮರದ ತಿಮ್ಮಕ್ಕ, ಎಸಿಪಿ ಅಣ್ಣಾಮಲೈ ಅವರನ್ನ ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟಿನಲ್ಲಿ ನೋಡಬೇಕು ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.