Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Priya Kesare:'ಅಶ್ವಿನಿ ನಕ್ಷತ್ರ' ಖ್ಯಾತಿ ನಟಿ ಪ್ರಿಯಾ ಕೆಸರೆ ನಟನೆಯಿಂದ ದೂರ ಉಳಿದಿದ್ದೇಕೆ? ಕಾರಣ ಇದೇನೆ!
'ಅಶ್ವಿನಿ ನಕ್ಷತ್ರ' ಸೀರಿಯಲ್ ಪ್ರಿಯರಿಗೆ ತೀರಾ ಪರಿಚಿತವಾಗಿರುವ ಹೆಸರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ 'ಅಶ್ವಿನಿ ನಕ್ಷತ್ರ'ವೂ ಒಂದು. 'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲಿ ಖಳನಾಯಕಿ ಭಾವನಾ ಆಗಿ ಅಭಿನಯಿಸಿದ್ದ ಪ್ರಿಯಾ ಕೆಸರೆ ಬರೋಬ್ಬರಿ ಎರಡು ವರ್ಷಗಳಿಂದ ಬಣ್ಣದ ಲೋಕದಿಂದ ಕಾಣೆಯಾಗಿದ್ದಾರೆ. ಅರ್ಥಾತ್ ಯಾವ ಧಾರಾವಾಹಿಯಲ್ಲಾಗಲಿ ಅಥವಾ ಸಿನಿಮಾಗಳಲ್ಲಿ ಆಗಲಿ ಆಕೆ ಕಾಣಿಸಿಕೊಳ್ಳುತ್ತಿಲ್ಲ.
ಎರಡು ವರ್ಷದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ ಪ್ರಿಯಾ ಕೆಸರೆ ಸದ್ಯ ಮುದ್ದು ಮಗನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗನ ಆರೈಕೆಯ ಸಲುವಾಗಿ ನಟನೆಯಿಂದ ಪ್ರಿಯಾ ಕೊಂಚ ಬ್ರೇಕ್ ಪಡೆದುಕೊಂಡಿದ್ದರೂ ಅವರನ್ನು ಅರಸಿ ಬರುವ ಅವಕಾಶಗಳಿಗೇನೂ ಕೊರತೆಯಿಲ್ಲ.
ಬ್ರಹ್ಮಗಂಟಿನ
'ಗುಂಡಮ್ಮ'
ಸಿನಿಮಾಗಳಲ್ಲಿ
ಫುಲ್
ಬ್ಯುಸಿ!
"ಇತ್ತೀಚೆಗಷ್ಟೇ ಮಗನಿಗೆ ಮೂರು ವರ್ಷ ತುಂಬಿತು. ಮಗನ ಸಲುವಾಗಿ ನಾನು ಬಣ್ಣದ ಲೋಕದಿಂದ ಬ್ರೇಕ್ ಪಡೆದುಕೊಂಡಿದ್ದೆ. ಈಗ ನಟನಾ ಜಗತ್ತಿನಿಂದ ಆಫರ್‌ಗಳು ಬರುತ್ತಿದೆ. ಒಮ್ಮೆ ನಟನೆಗೆ ಇಳಿದರೆ, ಮತ್ತೆ ಈ ಕ್ಷೇತ್ರದಲ್ಲಿಯೇ ನಾನು ಬ್ಯುಸಿಯಾಗಿ ಬಿಡುತ್ತೇನೆ. ಶೂಟಿಂಗ್, ಮನೆ ಹೆಕ್ಟಿಕ್ ಆಗುತ್ತದೆ. ಸದ್ಯ ಮಗನೊಂದಿಗೆ ಕಾಲ ಕಳೆಯುವ ನಿರ್ಧಾರ ಮಾಡಿದ್ದೇನೆ" ಎಂದು ಹಲವು ಸಂದರ್ಶನಗಳಲ್ಲಿ ನಟಿ ಪ್ರಿಯಾ ಕೆಸರೆ ಹೇಳಿದ್ದಾರೆ.

ಪತ್ರಿಕೋದ್ಯಮ ಪದವೀಧರೆ
ಮಲೆನಾಡ ಬೆಡಗಿ ಪ್ರಿಯಾ ಕೆಸರೆ ಪತ್ರಿಕೋದ್ಯಮದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಪದವಿಯ ಬಳಿಕ ಉದ್ಯೋಗದ ಸಲುವಾಗಿ ಬೆಂಗಳೂರಿನತ್ತ ಮುಖ ಮಾಡಿದ ಪ್ರಿಯಾ ಖಾಸಗಿ ವಾಹಿನಿಯೊಂದರಲ್ಲಿ ಕೆಲಸ ಮಾಡುವ ಅವಕಾಶ ಪಡೆದುಕೊಂಡರು.

ನಟನೆಯತ್ತ ಒಲವು
ಸಣ್ಣ ವಯಸ್ಸಿನಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದ ಪ್ರಿಯಾ ನಾಟಕಗಳಲ್ಲಿ ಬಣ್ಣ ಹಚ್ಚಿದ್ದೇ ಹೆಚ್ಚು. ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಿಯಾಗೆ ಮುಂದೆ ನಟನೆಯಲ್ಲಿ ಮುಂದುವರಿಯುವ ಬಯಕೆ ಉಂಟಾಯಿತು. ಅದೇ ಕಾರಣದಿಂದ ಕೆಲಸಕ್ಕೆ ವಿದಾಯ ಹೇಳಿ ಪೂರ್ಣ ಪ್ರಮಾಣದ ನಟಿಯಾಗುವ ನಿರ್ಧಾರ ಮಾಡಿದರು.

ಅಭಿನಯ ತರಂಗದಲ್ಲಿ ಕಲಿಕೆ
ಯಾವಾಗ ನಟಿಯಾಗಬೇಕು ಎಂದು ಪ್ರಿಯಾ ಕೆಸರೆ ಧೃಡನಿರ್ಧಾರ ಮಾಡಿದ್ರೋ ಆಗ ಅವರು ಅಭಿನಯತರಂಗ ನಾಟಕ ತಂಡ ಸೇರಿದರು. ಆರು ತಿಂಗಳುಗಳ ಕಾಲ ಅಭಿನಯ ತರಂಗ ತಂಡದಲ್ಲಿ ಇದ್ದ ಪ್ರಿಯಾ ನಾಟಕದಲ್ಲಿ ನಟಿಸುವುದನ್ನು ಮತ್ತಷ್ಟು ಚೆನ್ನಾಗಿ ಅಭ್ಯಾಸ ಮಾಡಿದ್ರು. ನಟನೆಯ ಜೊತೆಗೆ ಟೆಕ್ನಿಕಲ್‌ನತ್ತ ವಿಶೇಷ ಆಸಕ್ತಿ ಹೊಂದಿದ್ದ ಪ್ರಿಯಾ ಎಡಿಟಿಂಗ್ ಕೂಡಾ ಕಲಿತುಕೊಂಡರು.

'ಸಿಂಧೂರ' ಮೊದಲ ಧಾರಾವಾಹಿ
'ಸಿಂಧೂರ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಪ್ರಿಯಾ ಮತ್ತೆ ಹಿಂತಿರುಗಿ ನೋಡಿದ್ದಿಲ್ಲ. 'ಒಂದಾನೊಂದು ಕಾಲದಲ್ಲಿ', 'ಮೂಕಾಂಬಿಕಾ', 'ಬಂಗಾರ', 'ರಥಸಪ್ತಮಿ', 'ಯುಗಾದಿ', 'ಮದುಮಗಳು', 'ಕನಕ', 'ಗೃಹಲಕ್ಷ್ಮಿ', 'ಗುಂಡ್ಯಾನ ಹೆಂಡ್ತಿ', 'ಒಲವು', 'ಕಾರ್ತಿಕ ದೀಪ', 'ತಂಗಾಳಿ', 'ಅಮ್ಮ ನಿನಗಾಗಿ', 'ಅಶ್ವಿನಿ ನಕ್ಷತ್ರ' ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಕಿರುತೆರೆ ಜಗತ್ತಿನಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದರು.

ಭಾವನಾ ಪಾತ್ರ ಫೇಮಸ್
ಖಳನಾಯಕಿಯಾಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದ ಪ್ರಿಯಾ ಕೆಸರೆ ಮುಂದೆ ಹೆಚ್ಚಿನ ಧಾರಾವಾಹಿಗಳಲ್ಲಿ ಖಳನಾಯಕಿಯಾಗಿ ಮಿಂಚಿದ್ದು ವಿಶೇಷ. ನೆಗೆಟಿವ್ ಪಾತ್ರಗಳೆಂದರೆ ನನಗೆ ಅಚ್ಚುಮೆಚ್ಚು ಎಂದು ಹೇಳುವ ಪ್ರಿಯಾ ಈಗಲೂ ಅಶ್ವಿನಿ ನಕ್ಷತ್ರದ ಭಾವನಾ ಆಗಿಯೇ ಫೇಮಸ್ಸು. ಧಾರಾವಾಹಿ ಮುಗಿದು ವರ್ಷ ಮೂರು - ನಾಲ್ಕು ಕಳೆಯುತ್ತಾ ಬಂದರೂ ಇಂದಿಗೂ ಪ್ರಿಯಾ ಕೆಸರೆ ಅಂದ ತಕ್ಷಣ ನೆನಪಾಗುವುದು ಭಾವನಾ ಪಾತ್ರ. ಮನೋಜ್ಞ ನಟನೆಯ ಮೂಲಕ ಕಿರುತೆರೆ ರಂಗದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಪ್ರಿಯಾ ಕೆಸರೆ ಮತ್ಯಾವಾಗ ಬಣ್ಣ ಹಚ್ಚುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಮುಂದಿನ ದಿನಗಳಲ್ಲಿ ಸಿಗಬೇಕಿದೆ.