Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಗವಾನ್ ವಿಷ್ಯದಲ್ಲಿ 'ವೀಕೆಂಡ್ ವಿತ್ ರಮೇಶ್' ಮಾಡುತ್ತಿರುವುದು ಎಷ್ಟು ಸರಿ?
ಕಿರುತೆರೆ ಜನಪ್ರಿಯ ಮತ್ತು ಯಶಸ್ವಿ ಕಾರ್ಯಕ್ರಮಗಳಲ್ಲಿ ವೀಕೆಂಡ್ ವಿತ್ ರಮೇಶ್ ಕೂಡ ಪ್ರಮುಖವಾದದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ, ಇತರರಿಗೆ ಸ್ಫೂರ್ತಿಯಾಗಿರುವ ಗಣ್ಯರನ್ನ ಆಹ್ವಾನಿಸಿ ಅವರ ಯಶೋಗಾಥೆಯನ್ನ ಜನರ ಮುಂದೆ ಇಡುವಂತಹ ಮನಮೋಹಕ ಕಾರ್ಯಕ್ರಮ.
ಈಗಾಗಲೇ ಹಲವು ಸಾಧಕರು ಎನಿಸಿಕೊಂಡಿರುವವರನ್ನ ಇಂತಹ ಕಾರ್ಯಕ್ರಮಕ್ಕೆ ಕರೆಸಿ ಅದ್ಭುತವಾದ ಪ್ರೋಗ್ರಾಂ ಮಾಡಿದೆ. ಪುನೀತ್ ರಾಜ್ ಕುಮಾರ್ ಅವರಿಂದ ಆರಂಭವಾಗಿ, ಶಿವಣ್ಣ, ರವಿಚಂದ್ರನ್, ಉಪೇಂದ್ರ, ಅಂಬರೀಶ್, ಸುದೀಪ್, ದರ್ಶನ್, ಅನಂತ್ ನಾಗ್, ಜಯಂತ್ ಕಾಯ್ಕಿಣಿ, ರವಿ ಡಿ ಚೆನ್ನಣ್ಣವರ್, ಎಚ್ ಡಿ ದೇವೇಗೌಡ, ಸಂತೋಷ್ ಹೆಗ್ಡೆ, ಸಿದ್ದರಾಮಯ್ಯ ಹೀಗೆ ಪಟ್ಟಿ ತುಂಬಾ ದೊಡ್ಡದಿದೆ.
85ನೇ ವಯಸ್ಸಿನಲ್ಲಿ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟ ನಿರ್ದೇಶಕ ಭಗವಾನ್!
ಹೀಗಿದ್ದರೂ ವೀಕೆಂಡ್ ವಿತ್ ರಮೇಶ್ ಮೇಲೆ ಒಂದು ಗಂಭೀರ ಆರೋಪ ಇದೆ. ನಿಜವಾಗಲೂ ಸಾಧಕರು ಎಂದು ಗುರುತಿಸಿಕೊಂಡಿರುವವರನ್ನ ಬಿಟ್ಟು ನಿನ್ನೆ, ಮೊನ್ನೆ ಸಿನಿಮಾ ಇಂಡಸ್ಟ್ರಿಗೆ ಬಂದವರನ್ನ ಕರೆದು ಶೋ ಮಾಡ್ತಾರೆ ಎಂಬ ಟೀಕೆ ಇದೆ. ಈ ಟೀಕೆಯ ಮಧ್ಯೆಯೂ, ಖ್ಯಾತ ನಿರ್ದೇಶಕ ಎಸ್ ಕೆ ಭಗವಾನ್ ಅವರ ವಿಚಾರದಲ್ಲಿ ಕಣ್ಣಿಗೆ ಕಾಣುವ ರೀತಿ ಅಗೌರವ ತೋರುವ ಸನ್ನಿವೇಶ ಪದೇ ಪದೇ ನಡೆಯುತ್ತಿದೆ ಎಂಬುದು ಒಂದು ವರ್ಗದ ಚರ್ಚೆ. ಅಷ್ಟಕ್ಕೂ, ಏನಿದು ಭಗವಾನ್ ಅವರ ವಿಷ್ಯದಲ್ಲಿ ಜೀ ಕನ್ನಡ ಮಾಡುತ್ತಿರುವುದು? ಮುಂದೆ ಓದಿ....

ಸಾಧಕರ ಬಗ್ಗೆ ಮಾತನಾಡಲು ಭಗವಾನ್ ಬೇಕು
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಅತಿಥಿಯಾಗಿ ಭಾಗವಹಿಸಿದ್ದಾಗ ನಿರ್ದೇಶಕ ಎಸ್ ಕೆ ಭಗವಾನ್ ಅವರು ಬಗ್ಗೆ ಮಾತನಾಡಲು ಶೋಗೆ ಬಂದಿದ್ದರು. ಹಿರಿಯ ನಟಿ ಲಕ್ಷ್ಮಿ ಅವರು ಬಂದಾಗಲೂ ಮಾತನಾಡಿದ್ದರು. ಅಷ್ಟೇ ಯಾಕೆ ಇತ್ತೀಚಿಗಷ್ಟೆ ನಡೆದ ರಾಘಣ್ಣ ಎಪಿಸೋಡ್ ಗೂ ಅವರು ಬಂದಿದ್ದರು. ಬರಿ ಬೇರೆಯವರು ಬಗ್ಗೆ ಮಾತನಾಡಲು ಮಾತ್ರನಾ ಎಸ್.ಕೆ ಭಗವಾನ್?

ಭಗವಾನ್ ಸಾಧನೆ ಕಾಣಿಸುತ್ತಿಲ್ವಾ?
ಇಂದಿನ ಜನರೇಷನ್ ನಟ-ನಟಿಯರನ್ನ ಕರೆದು ಸಾಧಕರ ಸೀಟಿನಲ್ಲಿ ಕೂರಿಸಿ ಅವರ ಬಗ್ಗೆ ತೋರಿಸಲಾಗುತ್ತಿದೆ. ಆದ್ರೆ, ಅಂದಿನ ಕಾಲಕ್ಕೆ ಡಾ ರಾಜ್ ಕುಮಾರ್ ಅವರಿಗೆ ಅತಿ ಹೆಚ್ಚು ಸಿನಿಮಾ ನಿರ್ದೇಶನ ಮಾಡಿ, ಕನ್ನಡ ಚಿತ್ರರಂಗಕ್ಕೆ ಅತ್ಯದ್ಭುತ ಚಿತ್ರಗಳನ್ನ ನೀಡಿರುವ ಭಗವಾನ್ ಬಗ್ಗೆ ಶೋ ಮಾಡಲು ಆಸಕ್ತಿ ಯಾಕೇ ಇಲ್ಲ.?

ಜೇಮ್ಸ್ ಬಾಂಡ್ ಟ್ರೆಂಡ್ ಹುಟ್ಟುಹಾಕಿದ ನಿರ್ದೇಶಕ
ಕನ್ನಡ ಚಿತ್ರರಂಗದಲ್ಲಿ ಜೇಮ್ಸ್ ಬಾಂಡ್ ಟ್ರೆಂಡ್ ಗೆ ನಾಂದಿ ಹಾಡಿದ ನಿರ್ದೇಶಕ ಎಸ್.ಕೆ ಭಗವಾನ್. ಗೋವಾದಲ್ಲಿ ಸಿ.ಐ.ಡಿ 999, ಆಪರೇಷನ್ ಜಾಕ್ ಪಾಟ್ ನಲ್ಲಿ ಸಿ.ಐ.ಡಿ 999, ಆಪರೇಷನ್ ಡೈಮಂಡ್ ರಾಕೆಟ್ ಅಂತ ಸಿನಿಮಾ ನೀಡಿದ್ದರು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ದೊರೈ-ಭಗವಾನ್ ಜೋಡಿ ಅಂದ್ರೆ ಬಹುದೊಡ್ಡ ಹೆಮ್ಮೆ. ಈ ಇಬ್ಬರ ಜುಗಲ್ ಬಂದಿಯಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳು ಬಂದಿವೆ. ಆ ಎಲ್ಲ ಚಿತ್ರಗಳು ಸಮಾಜಕ್ಕೆ ಒಂದೊಂದು ಸಂದೇಶ ನೀಡಿದೆ. ಜನರಿಗೆ ಮನರಂಜನೆ ನೀಡಿದೆ. ಇಂಡಸ್ಟ್ರಿಗೆ ಹೆಮ್ಮೆ ತಂದಿದೆ. ಅಂದಿನ ಅದೇಷ್ಟೋ ವಿಷ್ಯಗಳು ಇವರಿಂದ ಇಂದಿನ ಪೀಳಿಗೆಯವರಿಗೆ ತಿಳಿಯುತ್ತೆ ಅಲ್ವಾ?
ಖ್ಯಾತ ನಿರ್ದೇಶಕ ದೊರೈ ಭಗವಾನ್ ಮುಡಿಗೆ ಹೊಸ ಗರಿ

'ಕಸ್ತೂರಿ ನಿವಾಸ'ದ ಸೂತ್ರದಾರ
ಡಾ ರಾಜ್ ಕುಮಾರ್ ಎಂಬ ನಟನ ವೃತ್ತಿ ಜೀವನದಲ್ಲಿ ದೊರೈ ಭಗವಾನ್ ಅತ್ಯಂತ ಪ್ರಮುಖರು ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಕಸ್ತೂರಿ ನಿವಾಸ ಅಂತಹ ಆಲ್ ಟೈಂ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ. ಎರಡು ಕನಸು, ಬಯಲು ದಾರಿ, ಗಿರಿ ಕನ್ಯೆ, ಚಂದನದ ಗೊಂಬೆ, ನಾನೊಬ್ಬ ಕಳ್ಳ, ವಸಂತ ಗೀತೆ, ಹೊಸ ಬೆಳಕು, ಜೀವನ ಚೈತ್ರ, ಒಡಹುಟ್ಟಿದವರು ಸೇರಿದಂತೆ ಅನೇಕ ಸಿನಿಮಾ ನೀಡಿದ್ದಾರೆ. ರಾಜ್, ವಿಷ್ಣು, ಅಂಬಿ, ಅನಂತ್ ನಾಗ್, ಶಂಕರ್ ನಾಗ್ ಸೇರಿದಂತೆ ಹಲವರಿಗೆ ನಿರ್ದೇಶನ ಮಾಡಿದ್ದಾರೆ. ಇದಕ್ಕಿಂತ ಸಾಧನೆ ಬೇಕಾ?
ಡಾ ರಾಜ್ ಎರಡನೇ ಪುತ್ರನಿಗೆ 'ರಾಘವೇಂದ್ರ' ಎಂದು ಹೆಸರಿಡಲು ಕಾರಣವೇನು?

ರಮೇಶ್ ಅವರಿಗೆ ಈ ಭಾವನೆ ಬಂದಿದೆ.!
ಎಸ್ ಕೆ ಭಗವಾನ್ ಅವರ ಎಪಿಸೋಡ್ ಯಾಕೆ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಮಾಡಬಾರದು ಎಂದು ಸ್ವತಃ ರಮೇಶ್ ಅವರಿಗೆ ಅನಿಸಿಲಿಲ್ಲವಾ? ಮೊನ್ನೆಯೂ ರಮೇಶ್ ಒಂದು ಮಾತು ಹೇಳಿದ್ರು. 'ಇವರೇ ದೊಡ್ಡ ಸಾಧಕರು, ಪ್ರತಿಯೊಬ್ಬ ಸಾಧಕರು ಬಂದಾಗಲೂ ಅವರು ಬಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ, ಅವರಿಗೆ ನನ್ನ ಪರ್ಸನಲ್ ಸಲ್ಯೂಟ್'' ಎಂದಿದ್ದರು.
ಸ್ವಿಮ್ ಸೂಟ್ ಹಾಕ್ತೀಯಾ ಅಂದಿದ್ದಕ್ಕೆ, ಕಾಲು ತೋರಿಸಿಬಿಟ್ರು ನಟಿ ಲಕ್ಷ್ಮಿ!

ಆರು ಸಿನಿಮಾ ಮಾಡಿದವರು ಸಾಧಕರು, ಇವರೇಕೆ ಆಗಿಲ್ಲ?
ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಸಿನಿಮಾ ಬಿಟ್ಟು ಬೇರೆ ಕ್ಷೇತ್ರದವರು ಅತಿಥಿಯಾಗಿ ಕೂತಿದ್ದಾರೆ. ಆದ್ರೆ, ಸಿನಿಮಾ ರಂಗಕ್ಕೆ ಸಂಬಂಧಪಟ್ಟಂತೆ ಆರು ಸಿನಿಮಾ, ಹತ್ತು ಸಿನಿಮಾ ಮಾಡಿದವರೇ ಸಾಧಕರ ಸೀಟಿನಲ್ಲಿ ಕೂತಿದ್ದಾರೆ. ಬಟ್, ಸುಮಾರು 55 ಚಿತ್ರಗಳಿಗಿಂತ ಹೆಚ್ಚು ಸಿನಿಮಾ ಮಾಡಿರುವ ಭಗವಾನ್ ಸಾಧಕರು ಎನಿಸಲಿಲ್ವಾ? ಭಗವಾನ್ ಮಾತ್ರವಲ್ಲ, ಇಂತಹ ಅನೇಕ ನಟ, ನಿರ್ದೇಶಕರು ಇಂಡಸ್ಟ್ರಿಯಲ್ಲಿದ್ದಾರೆ. ಈ ಮಾತುಗಳು ಇಂಡಸ್ಟ್ರಿಯಲ್ಲೇ ಹಲವರು ಹೇಳಿದ್ದಾರೆ. ನಾವು ತಲುಪಿಸಬಹುದು. ಆದ್ರೆ, ನಿರ್ಧಾರ ಆಯೋಜಕರಿಗೆ ಬಿಟ್ಟಿದ್ದು.