»   » ರಾಜಕೀಯಕ್ಕೆ ಧುಮುಕಲಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ!?

ರಾಜಕೀಯಕ್ಕೆ ಧುಮುಕಲಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ!?

Posted By:
Subscribe to Filmibeat Kannada

ಇದ್ಯಾವುದೋ 'ಏಪ್ರಿಲ್ ಫೂಲ್' ಸುದ್ದಿ ಇರ್ಬಹುದು ಅಂದುಕೊಳ್ಳಬೇಡಿ. ಗಾಂಧಿನಗರದ ಗಲ್ಲಿ ಗಾಸಿಪ್ ಅಂತ ಮೂಗು ಮುರಿಯಬೇಡಿ. ಕಾಲ ಕೂಡಿ ಬಂದ್ರೆ ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಬರುವುದು ನಿಶ್ಚಿತ.

ಹಾಗಂತ ಖುದ್ದು ಉಪೇಂದ್ರ ಬಾಯ್ಬಿಟ್ಟಿದ್ದಾರೆ. ಕಿಚ್ಚ ಸುದೀಪ್ ಹೋಸ್ಟ್ ಮಾಡುವ 'ಬಿಗ್ ಬಾಸ್ ವೇದಿಕೆಯ 'ಸೂಪರ್ ಸಂಡೆ ವಿತ್ ಸುದೀಪ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಪ್ಪಿ ತಮ್ಮ ಮನದಾಳವನ್ನ ಹಂಚಿಕೊಂಡಿದ್ದಾರೆ.

ಜನರ ಹಿತ ಬಯಸುತ್ತಿರುವ ಉಪೇಂದ್ರ, ಸನ್ನಿವೇಶ ಒದಗಿ ಬಂದ್ರೆ ರಾಜಕೀಯಕ್ಕೆ ಕಾಲಿಡುವ ಸುಳಿವು ನೀಡಿದ್ದಾರೆ. [ಅಂದು 'ನಾನು', ಇಂದು 'ನೀನು' ಮುಂದೆ 'ಯಾರು'?]

'ಸೂಪರ್ ಸಂಡೆ ವಿತ್ ಸುದೀಪ್' ಕಾರ್ಯಕ್ರಮದಲ್ಲಿ ಉಪೇಂದ್ರ ಏನು ಹೇಳಿದರು ಅಂತ ಅವರ ಮಾತುಗಳಲ್ಲೇ ಓದಿ ಕೆಳಗಿರುವ ಸ್ಲೈಡ್ ಗಳಲ್ಲಿ......

'ಉಪ್ಪಿ-2' ಚಿತ್ರದಲ್ಲಿ ಹೇಳಿದ್ದೇನು?

''ಉಪ್ಪಿ-2' ಕೊನೆ ಪಿಕ್ಚರ್ ತರಹ ನನಗೆ. Actually ಹೇಳ್ಬೇಕು ಅಂದ್ರೆ. ಯೋಚನೆ ಮಾಡ್ಬೇಡಿ, ಅಷ್ಟೇ ಜೀವನ ಅಂತ ಹೇಳಿದ್ದೆ. ಆದ್ರೆ, ಅದು ತುಂಬಾ ಕಷ್ಟ. ಸುಲಭ ಅಲ್ಲ ಯೋಚನೆ ಮಾಡದೆ ಇರುವುದು. ಅಂದ್ರೆ ಪ್ರೆಸೆಂಟ್ ನಲ್ಲೇ ಬದುಕುವುದು ಚೆನ್ನಾಗಿರುತ್ತೆ ಅಂತ ಹೇಳಿದ್ದು'' - ಉಪೇಂದ್ರ [ಉಪ್ಪಿ-2 ರುಚಿಯಾಗಿದೆ, ಆದ್ರೇ ಜೀರ್ಣ ಆಗೋದ್ ಕಷ್ಟ!]

ಉಪ್ಪಿಗೆ ಕಾಡುತ್ತಿರುವುದೇನು?

''ನನ್ನನ್ನ ನಾನೇ ವಾಪಸ್ ಮಾಡಿಕೊಳ್ತೀನಿ. ನಾನು ಹಾಗೇ ಇದ್ದೀನಾ..ಪ್ರೆಸೆಂಟ್ ನಲ್ಲೇ ಇದ್ದೀನಾ ಅಂದಾಗ ಇನ್ನೊಂದೇನೋ ಕಾಡ್ತಾನೇ ಇದೆ. ನಾನು ಎಲ್ಲಿಂದ ಹೊರಟ್ನೋ ಅದಿನ್ನೂ ನನಗೆ ಆರಿಲ್ಲ'' - ಉಪೇಂದ್ರ [ಪತ್ನಿಯ ಹುಟ್ಟುಹಬ್ಬಕ್ಕೆ ಬಿಗ್ ಸರ್ ಪ್ರೈಸ್ ನೀಡಿದ ಉಪ್ಪಿ!]

ಉಪ್ಪಿಗೆ ಇರುವ ಆಸೆ ಏನು?

''ಎಲ್ಲರೂ ಸುಖವಾಗಿರ್ಬೇಕು, ಚೆನ್ನಾಗಿರ್ಬೇಕು. ಅದಕ್ಕೆ ಏನಾದರೂ ಒಂದು ಮಾಡ್ಬೇಕು ಅಂತ ಆಸೆ ಅಷ್ಟೆ. ಅದಕ್ಕೆ ಸಿನಿಮಾ ಮೂಲಕ ಟ್ರೈ ಮಾಡ್ದೆ'' - ಉಪೇಂದ್ರ [ಕಿಚ್ಚ-ಉಪ್ಪಿ ಅವರ ಹೊಸ ಚಿತ್ರದ ಹೆಸರೇನು ಗೊತ್ತಾ?]

ಪಾಲಿಟಿಕ್ಸ್ ಗೆ ಬಂದ್ರೆ?

''ರಿಯಲ್ ಲೈಫ್ ನಲ್ಲಿ ಏನಾದರೂ ಒಂದು ಟ್ರೈ ಮಾಡೋಕೆ ಆಗುತ್ತಾ? ಪಾಲಿಟಿಕ್ಸ್ ಗೆ ಬಂದು ಏನಾದರೂ ಮಾಡೋಕೆ ಸಾಧ್ಯನಾ? ಗೊತ್ತಿಲ್ಲ ನನಗೆ ಅದು. ದೇವರು ಡಿಸೈಡ್ ಮಾಡ್ಬೇಕು'' - ಉಪೇಂದ್ರ

ಗೊತ್ತಿಲ್ಲ ಏನಾಗುತ್ತೆ ಅಂತ!

''ರಾಜಕೀಯಕ್ಕೆ ಎಂಟ್ರಿ ಆಗುವುದು...ಗೊತ್ತಿಲ್ಲ ಏನಾಗುತ್ತೆ ಅಂತ. ನಾನೀಗ ಪ್ರೆಸೆಂಟ್ ನಲ್ಲಿದ್ದೀನಿ. ಗೊತ್ತಿಲ್ಲ ಅದು ಎಲ್ಲಿ ನನ್ನನ್ನ ಕರ್ಕೊಂಡು ಹೋಗುತ್ತೆ ಅಂತ'' - ಉಪೇಂದ್ರ

ಮನಸ್ಸು ಶುದ್ಧ ಆಗಿರ್ಬೇಕು!

''ನನಗೆ ಅನ್ಸಿದ್ದು ಒಂದೇ ಒಂದು. ನಾನು ಏನಾದರೂ ಒಳ್ಳೆಯದ್ದು ಮಾಡ್ಬೇಕು ಅಂದ್ರೆ ಮನಸ್ಸಲ್ಲಿ ಮೊದಲು ಪ್ಯೂರ್ ಆಗ್ಬೇಕು. ಆ ಪ್ಯೂರಿಟಿ ಪ್ರೋಸೆಸ್ ನಲ್ಲಿದ್ದೀನಿ ಅ‍ಷ್ಟೆ. ಸತ್ಯ ಹೇಳ್ಬೇಕು ಅಂದ್ರೆ ನಾನಿನ್ನೂ ಪ್ಯೂರ್ ಆಗಿಲ್ಲ'' - ಉಪೇಂದ್ರ

ನನಗಿನ್ನೂ ಕೋಪ ಇದೆ!

''ಇನ್ನೂ ನನಗೆ ಕೋಪ ಇದೆ. ಅದರಿಂದ ಹೊರಗೆ ಬರುವುದಕ್ಕೆ ಸಾಧ್ಯನಾ ಅನ್ನೋದನ್ನ ತಿಳ್ಕೋಬೇಕು. ಕಂಪ್ಲೀಟ್ ಆಗಿ ಪ್ಯೂರ್ ಆದ್ರೆ ಅಲ್ಲಿ ಏನಾದರೂ ಎನರ್ಜಿ ವರ್ಕ್ ಆಗುತ್ತೆ ಅನ್ನೋದನ್ನ ನಂಬಿದ್ದೀನಿ ನಾನು'' - ಉಪೇಂದ್ರ

English summary
Kannada Actor Real Star Upendra has given the hint of entering into Politics during a chit-chat with Sudeep in Super Sunday with Sudeep (Bigg Boss Kannada-3) show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada