»   » ನಟಿ ಸಂಯುಕ್ತ ಹೆಗಡೆಗೆ 'ರೋಡೀಸ್'ನಲ್ಲಿ ಸಿಗುತ್ತಾ ಸೆಕೆಂಡ್ ಚಾನ್ಸ್.?

ನಟಿ ಸಂಯುಕ್ತ ಹೆಗಡೆಗೆ 'ರೋಡೀಸ್'ನಲ್ಲಿ ಸಿಗುತ್ತಾ ಸೆಕೆಂಡ್ ಚಾನ್ಸ್.?

Posted By:
Subscribe to Filmibeat Kannada

ಸೆಮಿ ಫೈನಲ್ ಗೆ ಇನ್ನೊಂದೇ ಹೆಜ್ಜೆ ಬಾಕಿ ಇರುವಾಗ, ಎಂ.ಟಿವಿ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ರೋಡೀಸ್'ನಿಂದ ನಟಿ ಸಂಯುಕ್ತ ಹೆಗಡೆ ಔಟ್ ಆದರು. ಟಾಸ್ಕ್ ನಲ್ಲಿ ಕಳಪೆ ಪರ್ಫಾಮೆನ್ಸ್ ನೀಡಿದ ಸಂಯುಕ್ತ, ವೋಟ್ ಔಟ್ ಇಲ್ಲದೇ ಡೈರೆಕ್ಟ್ ಆಗಿ ಎಲಿಮಿನೇಟ್ ಆದರು.

ಆದ್ರೆ, 'ರೋಡೀಸ್'ನಲ್ಲಿ ನಟಿ ಸಂಯುಕ್ತ ಜರ್ನಿ ಇಷ್ಟಕ್ಕೆ ಮುಗಿದ ಹಾಗೆ ಕಾಣುತ್ತಿಲ್ಲ. ವೋಟ್ ಔಟ್ ವೇಳೆ ಪುನಃ ಕಾಣಿಸಿಕೊಂಡ ಸಂಯುಕ್ತ, ಸೆಕೆಂಡ್ ಚಾನ್ಸ್ ಗಿಟ್ಟಿಸಿಕೊಳ್ಳುವ ತವಕದಲ್ಲಿ ಇದ್ದಾರೆ. ಮುಂದೆ ಓದಿರಿ...

ಟಾಸ್ಕ್ ನಲ್ಲಿ ಔಟ್ ಆಗಿದ್ದ ಸಂಯುಕ್ತ

ಟಾಸ್ಕ್ ನಲ್ಲಿ ಮೂರನೇ ಸ್ಥಾನ ಪಡೆದು ನಟಿ ಸಂಯುಕ್ತ ಹಾಗೂ ಪ್ರಿಯಾಂಕ್ ಔಟ್ ಆಗಿದ್ದರು. ಇನ್ನೂ ವೋಟ್ ಔಟ್ ಮೂಲಕ ಸಮರ್ ಎಲಿಮಿನೇಟ್ ಆಗಿದ್ದರು. ಈಗ ಈ ಮೂವರ ಪೈಕಿ ಒಬ್ಬರಿಗೆ 'ರೋಡೀಸ್' ರಿಯಾಲಿಟಿ ಶೋನಲ್ಲಿ ಸೆಕೆಂಡ್ ಚಾನ್ಸ್' ಲಭಿಸಲಿದೆ.

ಮಾಜಿ ಸ್ಪರ್ಧಿಗಳಿಂದ ಅವಕಾಶ

ಸಂಯುಕ್ತ, ಪ್ರಿಯಾಂಕ್ ಹಾಗೂ ಸಮರ್... ಈ ಮೂವರ ಪೈಕಿ ಯಾರಿಗೆ 'ಸೆಕೆಂಡ್ ಚಾನ್ಸ್' ಸಿಗಬೇಕು ಎಂಬುದನ್ನ ಈಗಾಗಲೇ 'ರೋಡೀಸ್' ಶೋನಿಂದ ಔಟ್ ಆಗಿರುವ ಸ್ಪರ್ಧಿಗಳು ನಿರ್ಧರಿಸಲಿದ್ದಾರೆ.

'ರೋಡೀಸ್' ಚಿತ್ರೀಕರಣ ಮುಗಿದಿದೆ.!

ಹಾಗ್ನೋಡಿದ್ರೆ, ಮಾರ್ಚ್ ತಿಂಗಳಿನಲ್ಲಿಯೇ 'ರೋಡೀಸ್' ಕಾರ್ಯಕ್ರಮದ ಚಿತ್ರೀಕರಣ ಮುಗಿದಿದೆ. ಪ್ರತಿ ಶನಿವಾರ (ವಾರಕ್ಕೆ ಒಮ್ಮೆ) ಸಂಜೆ 7ಕ್ಕೆ ಸಂಚಿಕೆಗಳ ರೂಪದಲ್ಲಿ ಎಂ.ಟಿವಿಯಲ್ಲಿ 'ರೋಡೀಸ್' ಪ್ರಸಾರ ಆಗುತ್ತಿದೆ.

ನಿನ್ನೆ ಪ್ರಸಾರ ಆದ ಸಂಚಿಕೆಯಲ್ಲಿ...

ನಿನ್ನೆ (ಶನಿವಾರ) ಪ್ರಸಾರವಾದ ಸಂಚಿಕೆಯಲ್ಲಿ ನಟಿ ಸಂಯುಕ್ತ ಔಟ್ ಆಗಿ, ಪುನಃ ವೋಟ್ ಔಟ್ ವೇಳೆ ಪ್ರತ್ಯಕ್ಷರಾದರು. ಸಂಯುಕ್ತ, ಪ್ರಿಯಾಂಕ್ ಹಾಗೂ ಸಮರ್... ಮೂವರ ಪೈಕಿ ಒಬ್ಬರಿಗೆ 'ಸೆಕೆಂಡ್ ಚಾನ್ಸ್' ಲಭಿಸಲಿದೆ ಎಂದು ಕಾರ್ಯಕ್ರಮದ ನಿರೂಪಕರು ತಿಳಿಸಿದರು.

ಮುಂದಿನ ವಾರ ಬಹಿರಂಗ.!

ಸಂಯುಕ್ತಗೆ 'ರೋಡೀಸ್'ನಲ್ಲಿ ಸೆಕೆಂಡ್ ಚಾನ್ಸ್ ಸಿಗುತ್ತೋ, ಇಲ್ವೋ ಎಂಬುದನ್ನು ತಿಳಿಯಲು ಮುಂದಿನ ಶನಿವಾರದವರೆಗೂ ಕಾಯಲೇಬೇಕು.

ಮುಂದಿನ ವಾರವೇ ಗ್ರ್ಯಾಂಡ್ ಫಿನಾಲೆ.!

ಅಂದ್ಹಾಗೆ, ಮುಂದಿನ ವಾರವೇ (ಶನಿವಾರ) 'ರೋಡೀಸ್' ಗ್ರ್ಯಾಂಡ್ ಫಿನಾಲೆ ಸಂಚಿಕೆ ಪ್ರಸಾರ ಆಗಲಿದೆ. ಈ ಬಾರಿಯ 'ರೋಡೀಸ್' ವಿಜೇತ ಯಾರಾಗುತ್ತಾರೆ ಎಂಬುದನ್ನು ಕಾದು ನೋಡಬೇಕು.

English summary
Will Kannada Actress Samyuktha Hegde get second chance in 'Roadies' reality show.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada