For Quick Alerts
  ALLOW NOTIFICATIONS  
  For Daily Alerts

  ಅಂದು ಜಂಗಲ್ ಜಾಕಿ ರಾಜೇಶ, ಇಂದು ಹುಚ್ಚ ವೆಂಕಟ?

  By ಸುಮಾ ಮುದ್ದಾಪುರ, ಬೆಂಗಳೂರು
  |

  ಅಂದು ಆತ ಕೂಡ ಹೀಗೆ ಸೇಮ್ ಹುಚ್ಚ ವೆಂಕಟ್‌ರಂತೆ ಟಿವಿ ಮಾಧ್ಯಮದಲ್ಲಿ ಆರ್ಭಟಿಸಿ ಬೊಬ್ಬಿರಿದಿದ್ದ. 'ಕುಂತ್ರೆ ಕುರುಬ ನಿಂತ್ರೆ ಕಿರುಬ' ಅನ್ನೋ ಡೈಲಾಗ್ ಹೊಡೆದು ಹಳ್ಳಿ ಹೈದ ಪ್ಯಾಟೆಗೆ ಬಂದ ರಿಯಾಲಿಟಿ ಶೋನ ಹೀರೋ ಆಗಿದ್ದ. ಅಷ್ಟೇ ಅಲ್ಲ ನಮ್ಮ ಕನ್ನಡ ಜತೆಯ ಮನಗೆದ್ದು ನಿಜವಾದ ಹೀರೋ ಕೂಡ ಆಗಿಬಿಟ್ಟಿದ್ದ ಜಂಗಲ್ ಜಾಕಿ ರಾಜೇಶ.

  ಮೈಸೂರು - ಮಾನಂತವಾಡಿ ಮಾರ್ಗದಲ್ಲಿ ನಾಗರಹೊಳೆ ಅಭಯಾರಣ್ಯದ ಕಾಕನಕೋಟೆಯ ಕಾನನದ ನಡುವೆ ಇರೋ ಬಳ್ಳೇ ಹಾಡಿಯ ಕೃಷ್ಣಪ್ಪ ಮತ್ತು ಲಕ್ಷ್ಮೀ ದಂಪತಿಯ ಮಗ ಈ ರಾಜೇಶ. ಹಳ್ಳಿ ಹೈದಾ ಪ್ಯಾಟೆಗೆ ಬಂದ ರಿಯಾಲಿಟಿ ಶೋನಲ್ಲಿ ಈ ರಾಜೇಶ ಕೂಡ ಹೆಚ್ಚು ಕಡಿಮೆ, ಹುಚ್ಚ ವೆಂಕಟ್‌ರಂತೆಯೇ ಆಡುತ್ತಿದ್ದ.

  ರಾಜೇಶ ಬಹಳ ನಾಚಿಕೆ ಸ್ವಭಾವದವನಾಗಿದ್ದ. ಹಾಡಿಯ ಇತರ ಹುಡುಗರಂತೆಯೇ ಅತ್ಯಂತ ಮುಗ್ಧನೂ, ಗಟ್ಟಿಗನೂ ಆಗಿದ್ದ. ರಾಜೇಶ, ಹಿಂದೆಂದೂ ನೋಡಿರದ ಬೆಂಗಳೂರು ಪ್ಯಾಟೆಗೆ ಬಂದು ರಿಯಾಲಿಟಿ ಶೋ ನಡೆಸುವವರ ಮನಸ್ಸಿನ ವಿಕೃತ ಟಾಸ್ಕ್‌ಗಳಿಗೆ ಗುರಿಪಡಿಸಲಾಗಿದ್ದ. ಎಷ್ಟೋ ಬಾರಿ ಈ ರಿಯಾಲಿಟಿ ಶೋನಿಂದ ತಪ್ಪಿಸಿಕೊಂಡು ಮನೆಗೆ ಓಡಿ ಹೋಗುವ ಪ್ರಯತ್ನವನ್ನೂ ಮಾಡಿದ್ದ. ['ಹಳ್ಳಿ ಹೈದ' ರಾಜೇಶ್ ವಿಧಿ ವಿಲಾಸಕ್ಕೆ ಬಲಿಯಾದನೇ?]

  ಟಿವಿ ಚಾನೆಲ್‌ನವರು ತಮ್ಮ ಟಿಆರ್‌ಪಿಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಮುಗ್ಧ ರಾಜೇಶನಿಗೂ ಮತ್ತು ಆತನ ಜತೆಗಿದ್ದ ಐಶ್ವರ್ಯಳಿಗೂ ಒಂದು ಹಂತದಲ್ಲಿ ಹೊಡೆದಾಟವಾಗುವಂತೆ ಮಾಡಿ ಅದನ್ನು ತೋರಿಸಿ ಟಿಆರ್‌ಪಿ ಕೂಡ ಹೆಚ್ಚಿಸಿ ಕೊಂಡಿದ್ದರು.

  ಇಂತಹ ರಾಜೇಶ ಕೊನೆಗೆ ರಿಯಾಲಿಟಿ ಶೋನ ವಿನ್ನರ್ ಕೂಡ ಆದ. ಹಾಗೆಯೇ ‘ಜಂಗಲ್ ಜಾಕಿ' ಎಂಬ ಚಿತ್ರಕ್ಕೆ ನಾಯಕ ನಟನಾಗಿಯೂ ಆಯ್ಕೆಯಾದ. ಆದರೆ ಸ್ವಚ್ಛಂದವಾದ ಕಾಡಿನ ಮಧ್ಯೆ ಬೆಳೆದ ಈ ರಾಜೇಶನಿಗೆ ಆ ಕಡೆ ಸಂಪೂರ್ಣವಾಗಿ ಹಳ್ಳಿಯ ಕ್ರಮವನ್ನೂ ಅನುಸರಿಸಲಾಗದೆ, ಇತ್ತ ನಗರ ಜೀವನಕ್ಕೂ ಒಗ್ಗಲಾಗದೆ ಮನಸ್ಸಿನಲ್ಲಿ ಉಂಟಾದ ತೀವ್ರ ತಳಮಳ ಅವನನ್ನು ಮಾನಸಿಕ ಖಿನ್ನತೆಗೆ ಒಳಗಾಗುವಂತೆ ಮಾಡಿತು. ಇದರಿಂದಾಗಿ ಅವನು ‘ಅಕ್ಯೂಟ್ ಮೇನಿಯಾ' ಎಂಬ ಮಾನಸಿಕ ಕಾಯಿಲೆಗೆ ತುತ್ತಾದ.

  ಈ ಮಾನಸಿಕ ಕಾಯಿಲೆಯಿಂದಾಗಿ ರಾಜೇಶ ನವೆಂಬರ್-2013ರಲ್ಲಿ ತಾನು ವಾಸ ಮಾಡುತ್ತಿದ್ದ ಮನೆಯ ಮೇಲಿಂದಲೇ ಹಾರಿ ಪ್ರಾಣ ಬಿಟ್ಟ. ಇಹಲೋಕದ ಎಲ್ಲಾ ಜಂಜಾಟಗಳಿಂದ ಮುಕ್ತಿ ಪಡೆದು, ತನ್ನವರೆಲ್ಲರನ್ನೂ ಬಿಟ್ಟು ಶಾಶ್ವತವಾಗಿ ಮರೆಯಾದ.

  ಈ ಟಿವಿ ಚಾನೆಲ್‌ನ ರಿಯಾಲಿಟಿ ಶೋ ಹೀಗೆ ಒಬ್ಬ ಮುಗ್ದ, ಅಮಾಯಕ ಹುಡುಗನನ್ನು ಬಲಿ ತೆಗೆದುಕೊಂಡು ಇನ್ನೂ ಮೂರು ವರುಷವು ಕಳೆದಿಲ್ಲ, ಅಷ್ಟರಲ್ಲೇ ಮತ್ತೊಬ್ಬ ರಿಯಾಲಿಟಿ ಶೋದಿಂದಲೇ ಇಡೀ ಕರ್ನಾಟಕದ ಜನರಿಗೆ ಪರಿಚಿತನಾಗಿದ್ದಲ್ಲದೆ, ಮಾಧ್ಯಮಗಳ ವಿಪರೀತ ಪ್ರಚಾರದಿಂದಾಗಿ ಸ್ಟಾರ್ ಗಿರಿ ಗಿಟ್ಟಿಸಿಕೊಂಡಿದ್ದಾರೆ. [ಹುಚ್ಚ ವೆಂಕಟ್ ಔಟ್ ; ನಮ್ಮ ಓದುಗರು ಏನಂತಾರೆ?]

  ಹೌದು ಹುಚ್ಚ ವೆಂಕಟ್ ಎಂಬ ವ್ಯಕ್ತಿಯಲ್ಲಿ ಹುಚ್ಚುತನ ಎಂಬುದು ಸ್ವಯಂಘೋಷಿತ. ಆತನಿಗೆ ಈಗ ಮಾತಾಡಿದ್ದನ್ನು ಸ್ವಲ್ಪ ಹೊತ್ತು ಬಿಟ್ಟು ಕೇಳಿದರೆ ನೆನಪಿರುವುದಿಲ್ಲ. ಇಂತಹ ವ್ಯಕ್ತಿಯನ್ನು ಇಟ್ಟುಕೊಂಡು ಈ ಸುದ್ದಿ ವಾಹಿನಿಗಳು ತಾಸು ಗಟ್ಟಲೆ ಲೈವ್ ಡಿಸ್ಕಷನ್‌ಗಳನ್ನು ಮಾಡುತ್ತಿವೆ. ಆತನನ್ನು ರೊಚ್ಚಿಗೆಬ್ಬಿಸಿ ಅಸಹಜ ಹೇಳಿಕೆಗಳನ್ನು ನೀಡುವಂತೆ ಪ್ರೇರೇಪಿಸುತ್ತಿವೆ.

  ಇಂತಹ ಕಾರ್ಯಕ್ರಮ ಆಯೋಜಿಸುತ್ತಾ ಜನರಲ್ಲಿನ ಹುಚ್ಚುತನಗಳ ಪ್ರಚೋದಿಸಿ ಸಮಾಜದ ಮಾನಸಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವವರ ವಿರುದ್ಧ ಈ ಸುದ್ದಿ ವಾಹಿನಿಗಳು ದನಿ ಎತ್ತುತ್ತಿಲ್ಲವೇಕೆ? ದಯವಿಟ್ಟು ಮಾಧ್ಯಮಗಳು ಹುಚ್ಚ ವೆಂಕಟ್‌ನನ್ನು ಆವನಂತೆಯೇ ಬದುಕಲು ಬಿಡಿ. ಇಲ್ಲವೇ ನಿಮ್ಮಿಂದ ಸಾಧ್ಯವಾದರೆ ಅವನ ಬದುಕನ್ನು ಅವನಿಗೇ ಕಟ್ಟಿಕೊಳ್ಳಲು ಸಹಕರಿಸಿ..... [ಹುಚ್ಚ ವೆಂಕಟ್ ರನ್ನ ಗೇಲಿ ಮಾಡಿದ 'ಬಿಗ್ ಬಾಸ್'?]

  English summary
  Will Huccha Venkat become another victim of reality show like Rajesh, who attained fame by winning Halli Hyda Pyateg Banda reality show and committed suicide unable to face the cruel reality. Huccha Venkat should not be given unnecessary importance and should be left to live as he wants.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X