For Quick Alerts
  ALLOW NOTIFICATIONS  
  For Daily Alerts

  ವೆಂಕಟಣ್ಣ ಇಲ್ಲದ ಬಿಗ್ ಬಾಸ್ ನಾನ್ ನೋಡಲ್ಲ, ಅಷ್ಟೇ!

  By ಮಪ
  |

  ''ನಿಮ್ಮ ತಂದೆ ತಾಯಿ ಚಪ್ಪಲಿ ಸೈಜ್ ನಿಮ್ಗೆ ಗೊತ್ತಾ...ಎಲ್ರೂ ಕನ್ನಡ ಮಾತಾಡ್ ಬೇಕ್, ನಾನ್‌ ನಾಮಿನೇಶನ್ ಮಾಡಲ್ಲ,'' ಹೌದು ಈ ಬಗೆಯ ಸಂದೇಶ ಸಾರುವ ಡೈಲಾಗ್ ಗಳ ಆರ್ಭಟ ಒಂದು ವಾರದಿಂದ ಬಿಗ್ ಬಾಸ್ ಮನೆಯಿಂದ್ ಕೇಳಿ ಬರ್ತಾ ಇಲ್ಲ. ಅದು ಏಕೆ ಎಂಬುದನ್ನು ಮತ್ತೆ ಹೇಳ್ಬೇಕಾಗಿಲ್ಲ.

  ಪ್ರತಿದಿನ ರಾತ್ರಿ ಒಂಭತ್ತು ಗಂಟೆ ಆತು ಅಂದ್ರೆ ಸಾಕು, ಎಲ್ಲೇ ಇದ್ರೂ ನಾನು, ನನ್ನ ಹೆಂಡತಿ ಎಲ್ಲರೂ ಮಾಯಾ ಪೆಟ್ಟಿಗೆ ಮುಂದೆ ಹಾಜರ್, ಯಾಕಂದ್ರೆ ಬಿಗ್ ಬಾಸ್ ಬಿಗ್ ಬಾಸ್ ಗಿಂತ ಹೆಚ್ಚಾಗಿ ವೆಂಕಟ್, ಹುಚ್ಚ ವೆಂಕಟ್. ಸೊಂಟದ ಮೇಲೆ ಸ್ಟಿಪ್ಪಾಗಿ ಕೂತಿರುವ ಎಡಗೈ, ಉದ್ದುದ್ದ ಹೆಜ್ಜೆಗಳು, ಕೆದರಿದ ಕೂದಲು, ಪೊಗದಸ್ತಾಗಿ ಬೆಳೆದ ಗಡ್ಡ ಇದೆಲ್ಲವನ್ನು ಮೀರಿಸುವ ಮ್ಯಾನರಿಸಂ, ಬಿಗ್ ಬಾಸ್ ಗೆ ಆವಾಜ್ ಹಾಕುವ ಪರಿ ಇದೆಲ್ಲ ಈಗ ಸಿಕ್ತಾ ಇಲ್ಲ ಬಿಡಿ.[ಕವಿಯೊಬ್ಬರಿಂದ ಹುಚ್ಚ ವೆಂಕಟ್ ಗಾಗಿ ಒಂದು ಕವನ.!]

  ವಾರದಿಂದ ಬಿಗ್ ಬಾಸ್ ರುಚಿಸ್ತಿಲ್ಲ. ಸಪ್ಪೆ ಹೊಡಿತೀದೆ. ವೆಂಕಟ್ ಖದರ್ ಇಲ್ಲ. ಕಿತ್ತೋಗಿರೋ ಟಾಸ್ಕ್ ಮಾಡೋರ ನೋಡೋಕೂ ಆಗ್ತಿಲ್ಲ. ಇನ್ನು ಮುಂದೆ ನಾನು ಸಹ ವೆಂಕಟಣ್ಣ ಇಲ್ಲದ ಬಿಗ್ ಬಾಸ್ ನಾನು ನೋಡಲ್ಲ. ನಮ್ಮ ಮನೆಯವರಿಗೂ ನೋಡೋಕೆ ಬಿಡಲ್ಲ. ಅಷ್ಟೇ!

  ಅಷ್ಟಕ್ಕೆ ನಾನೇನು ವೆಂಕಟ್ ನ ದೊಡ್ಡ್ ಫ್ಯಾನ್ ಅಂದ್ಕೊಬೇಡಿ. ಆದ್ರೂ ವೆಂಕಟ್ ಅಭಿಮಾನಿ. ನಿಮ್ಮನ್ನು ಹಿಡಿದು ನಾವೆಲ್ಲ ವೆಂಕಟ್ ಗೆ ಬೈಯುತ್ತಲೇ ಹತ್ತಿರವಾದೆವು. ವೆಂಕಟ್ ಏನೇ ಮಾಡಲಿ ನಮಗೆ ಅಲ್ಲಿ ಒಂದು ಚಿಕ್ಕ ಕುತೂಹಲ ಇದ್ದೇ ಇದೆ. ಅದಕ್ಕೆ ಹೇಳೋದು ವೆಂಕಟ್ ಮೀನ್ಸ್ ಟಿ ಆರ್ ಪಿ ಕಿಂಗ್.[ಹುಚ್ಚ ವೆಂಕಟ್ ನ ಬೈಯ್ಯೋರು ಇದ್ದಾರೆ ಸ್ವಾಮಿ..!]

  ರವಿ ಮೂರುರು ಮೇಲೆ ಹಲ್ಲೆ ಮಾಡಿದ ವೆಂಕಟ್, ಬಿಗ್ ಬಾಸ್ ಮನೆಯಿಂದ ವೆಂಕಟ್ ಹೊರಕ್ಕೆ, ಮಾಧ್ಯಮಗಳಲ್ಲಿ ವೆಂಕಟ್ ಅವರ ಅರ್ಧ ದಿನದ ಸಂದರ್ಶನ, ಪ್ಯಾನಲ್ ಡಿಸ್ಕಶನ್, ದಲಿತರ ಮೇಲೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ದೂರು, ವೆಂಕಟ್ ಹಿಂದೆಯೇ ಮದುವೆಯಾಗಿದ್ದಾರೆ ಎಂದು ಹರಿದಾಡಿದ ಫೋಟೋಗಳು.. ಪೊಲೀಸರಿಂದ ವೆಂಕಟ್ ಬಂಧನ, ಡಿಸೆಂಬರ್ 4 ರವರೆಗೆ ವೆಂಕಟ್ ನ್ಯಾಯಾಂಗ ಬಂಧನಕ್ಕೆ,,, ಇದೆಲ್ಲಾ ಸದ್ಯ ನಡೆದು ಹೋದ ಘಟನೆಗಳ ಒಂದು ಝಲಕ್.

  ಇವೆಲ್ಲಾ ಒತ್ತಟ್ಟಿಗೆ ಇರಲಿ, ನೇರವಾಗಿ ಹೇಳಿಬಿಡ್ತೇನೆ.. ಹುಚ್ಚ ವೆಂಕಟ್, ಯೂಟ್ಯೂಬ್ ಸ್ಟಾರ್ ವೆಂಕಟ್ ಇದೀಗ ಫೈರಿಂಗ್ ಸ್ಟಾರ್ ವೆಂಕಟ್ ಇಲ್ಲದ ಬಿಗ್ ಬಾಸ್ ಅನ್ನು ನಾನು ಇನ್ನು ಮುಂದೆ ನೋಡಲ್ಲ. ನೀವ್ ನನ್ನ ಹುಚ್ಚ ಅಂದ್ಕಂಡ್ರೂ ಪರ್ವಾಗಿಲ್ಲ. ಯಾಕಂದ್ರೆ.... ಕಾರಣ ಕೊಟ್ಟಿದ್ದೇನೆ ಸುಮ್ನೆ ಓದ್ಕಂಡ್ ಹೋಗ್ ಬೇಕ್....

  ಮನರಂಜನೆ ಕೊರತೆ

  ಮನರಂಜನೆ ಕೊರತೆ

  ವೆಂಕಟ್ ಇದ್ದಾಗ ಇರುತ್ತಿದ್ದ ಮನರಂಜನೆಗೂ ಈಗ ಸಿಗುತ್ತಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಯಾವ ಬಗೆಯ ಮನರಂಜೆನೆ ಅನ್ನೋದು ಅವರವರ ವಿವೇಚನೆಗೆ ಬಿಟ್ಟಿದ್ದು.

  ಕುಟುಂಬದವರ ಶೋ ಆಗಿ ಉಳಿದಿಲ್ಲ

  ಕುಟುಂಬದವರ ಶೋ ಆಗಿ ಉಳಿದಿಲ್ಲ

  ಬಿಗ್ ಬಾಸ್ ಮನೆಯಲ್ಲಿ ಇರುವ ಹೆಣ್ಣು ಮಕ್ಕಳು, ನಟಿ ಮಣಿಗಳು ಅರ್ಧಂಬರ್ದ ಬಟ್ಟೆ ಧರಿಸಿದರೆ ವೆಂಕಟ್ ಕೆಂಡಾಮಂಡಲವಾಗುತ್ತಿದ್ದರು. ವೆಂಕಟ್ ಭಯಕ್ಕಾದರೂ ನಟಿ ಮಣಿಗಳು ತಕ್ಕ ಮಟ್ಟಿನ ಬಟ್ಟೆ ಧರಿಸುತ್ತಿದ್ದರು. ವೆಂಕಟ್ ಹೊರ ಬಂದ ಮೇಲೆ ಮನೆಯವರು ಆಡುತ್ತಿದ್ದ ರೀತಿಯನ್ನು ಹೊಸದಾಗಿ ಹೇಳಬೇಕಿಲ್ಲ.

  ಮರೆಯಾದ ಡೈಲಾಗ್ ಪಂಚ್ ಗಳು

  ಮರೆಯಾದ ಡೈಲಾಗ್ ಪಂಚ್ ಗಳು

  ವೆಂಕಟ್ ಇದ್ದಾಗ ಅವರ ಬಾಯಿಂದ ಬರುತ್ತಿದ್ದ ಡೈಲಾಗ್ ಗಳ ಮಜಾ ಈಗ ಸಿಗುತ್ತಿಲ್ಲ. ಬೇರೆ ಸ್ಪರ್ಧಿಗಳು ಧ್ವನಿ ಏರಿಸಿ ಕೂಗಾಡಬಹುದೇ ವಿನಃ ವೆಂಕಟ್ ಸ್ಟೈಲ್ ನಲ್ಲಿ ಖಡಕ್ ಡೈಲಾಗ್ ಉದುರಿಸಲು ಸಾಧ್ಯವೇ ಇಲ್ಲ ಬಿಡಿ.

  ತತ್ವಜ್ಞಾನಿಯನ್ನು ಕಳಕೊಂಡ ಮನೆ

  ತತ್ವಜ್ಞಾನಿಯನ್ನು ಕಳಕೊಂಡ ಮನೆ

  ವೆಂಕಟ್ ಹೇಳುವ ವಿಚಾರಗಳು ಸಮಾಜಕ್ಕೆ ಹತ್ತಿರವಾದವೇ, ಒಳ್ಳೆಯ ಧ್ಯೇಯ ಸಾರುವಂಥದ್ದೆ ಇದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಈಗ ಬಿಗ್ ಬಾ್ ಮನೆ ಒಂದು ಶೋ ರೂಂ ಆಗಿದೆಯೇ ವಿನಹ ಸಂದೇಶ ಸಾರುವ ಮನೆಯಾಗಿ ಉಳಿದುಕೊಂಡಿಲ್ಲ.

   ಸಿನಿಮಾ ಪ್ರೀತಿ

  ಸಿನಿಮಾ ಪ್ರೀತಿ

  ಹೌದು ವೆಂಕಟ್ ಗೆ ಇದ್ದ ಸಿನಿಮಾ ಮೇಲಿನ ಪ್ರೀತಿ ಬೇರೆ ಯಾವ ಸ್ಪರ್ಧಿಯಲ್ಲೂ ಇಲ್ಲ. ದೊಡ್ಡ ದೊಡ್ಡ ನಟಿಯರೇ ಶೋ ದಲ್ಲಿ ಇರಬಹುದು. ಆದರೆ ಸಿನಿಮಾ ಎಂಬ ಸಂಗತಿ ಬಂದಾಗ ವೆಂಕಟ್ ಅವರನ್ನು ಮೀರಿಸಲು ಸಾಧ್ಯವಿಲ್ಲ.

  English summary
  Bigg Boss Kannada 3: After the Controversies of Huchha Venkat I just stop watching Big boss. Why I am stop watching here is the answer.
  Saturday, November 21, 2015, 16:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X