»   » ತಮಿಳು ನಟ ಆರ್ಯ ಪಾಲಿಗೆ ಯಶ್ 'ಸ್ಟೈಲ್ ಐಕಾನ್'!

ತಮಿಳು ನಟ ಆರ್ಯ ಪಾಲಿಗೆ ಯಶ್ 'ಸ್ಟೈಲ್ ಐಕಾನ್'!

Posted By:
Subscribe to Filmibeat Kannada
ಈ ತಮಿಳು ನಟನಿಗೆ ಯಶ್ ಸ್ಟೈಲ್ ಐಕಾನ್ | Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಂದ್ರೆ ಯಾರಿಗ್ತಾನೆ ಇಷ್ಟ ಇಲ್ಲ ಹೇಳಿ... ಅದೆಷ್ಟೋ ಹುಡುಗಿಯರ ಪಾಲಿಗೆ ಯಶ್ ಡ್ರೀಮ್ ಬಾಯ್. ನಟಿ ರಾಧಿಕಾ ಪಂಡಿತ್ ರನ್ನ ಯಶ್ ಮದುವೆ ಆದಾಗ ಲೆಕ್ಕವಿಲ್ಲದಷ್ಟು ಹುಡುಗಿಯರ ಹಾರ್ಟ್ ಬ್ರೇಕ್ ಆಗಿತ್ತು.

ನಟ ಯಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರೂ, ಅವರಿಗೆ 'ಐ ಲವ್ ಯು' ಮೆಸೇಜ್ ಗಳು ಮಾತ್ರ ಇನ್ನೂ ಕಮ್ಮಿ ಆಗಿರಲಿಕ್ಕಿಲ್ಲ.

ಯಶ್ ರವರ ಸ್ಟೈಲ್, ಮಾತನಾಡುವ ಶೈಲಿ ನೋಡಿದ್ರೆ, ಎಂಥವರಿಗೂ ಇಷ್ಟ ಆಗುತ್ತೆ. ಇದೇ ಕಾರಣಕ್ಕೆ ಯಶ್ ಅಂದ್ರೆ ಬಹುತೇಕರಿಗೆ ಅಚ್ಚುಮೆಚ್ಚು.

Yash is my style icon says Tamil Actor Arya

ಚಿತ್ರರಂಗದಲ್ಲಿ ಇರುವ ಅನೇಕರ ಪಾಲಿಗೆ ಯಶ್ 'ಸ್ಟೈಲ್ ಐಕಾನ್'. ಬರೀ ಕನ್ನಡ ಚಿತ್ರರಂಗದಲ್ಲಿ ಇರುವವರ ಪಾಲಿಗೆ ಮಾತ್ರ ಅಲ್ಲ, ತಮಿಳು ನಟ ಆರ್ಯ ಪಾಲಿಗೂ ಯಶ್ 'ಸ್ಟೈಲ್ ಐಕಾನ್' ಅಂದ್ರೆ ನೀವು ನಂಬಲೇಬೇಕು. ಹಾಗಂತ ಸ್ವತಃ ನಟ ಆರ್ಯ ಹೇಳಿದ್ದಾರೆ. ಅದು 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ.

ಕನ್ನಡದ ಈ ನಟಿ ಜೊತೆಗೆ ಆರ್ಯ ಡೇಟಿಂಗ್ ಮಾಡ್ತಾರೆ

'ಚಿತ್ರರಂಗದಲ್ಲಿ ನಿಮ್ಮ ಸ್ಟೈಲ್ ಐಕಾನ್ ಯಾರು.?' ಎಂದು ಶಿವರಾಜ್ ಕುಮಾರ್ ಕೇಳಿದಾಗ ತಮಿಳು ನಟ ಆರ್ಯ ಥಟ್ ಅಂತ ನೀಡಿದ ಉತ್ತರ ''ಯಶ್''.

English summary
Yash is my style icon says Tamil Actor Arya in No.1 Yari with Shivanna show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X