»   » ಯೋಗಿ ಯಾವ ನಟರಿಗೆ ಏನು ಅಡ್ವೈಸ್ ನೀಡಲು ಬಯಸುತ್ತಾರೆ?

ಯೋಗಿ ಯಾವ ನಟರಿಗೆ ಏನು ಅಡ್ವೈಸ್ ನೀಡಲು ಬಯಸುತ್ತಾರೆ?

Posted By:
Subscribe to Filmibeat Kannada

ಕಿರುತೆರೆ ವೀಕ್ಷಕರು ಮೊದಲೆಲ್ಲಾ ವಿಶೇಷ ಕಾರ್ಯಕ್ರಮಗಳು, ಸೆಲೆಬ್ರಿಟಿ ಸಂದರ್ಶನಗಳನ್ನು ನೋಡಬೇಕೆಂದರೆ ವೀಕೆಂಡ್ ಗಾಗಿ ಕಾಯಬೇಕಿತ್ತು. ಅದರಲ್ಲೂ ಸ್ಪೆಷಲ್ ಪ್ರೋಗ್ರಾಂಗಳು ಬರಬೇಕೆಂದರೆ ಆ ದಿನವು ಹೆಚ್ಚು ಸ್ಪೆಷಲ್ ಆಗಿರಬೇಕಿತ್ತು. ಆದರೆ ಇಂದು ವಾರವಿಡೀ ಮನರಂಜನೆ ನೀಡುವ ವಿವಿಧ ಕಾರ್ಯಕ್ರಮಗಳು ವಿವಿಧ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿವೆ. ಪ್ರಸ್ತುತ ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಗುರುವಾರ-ಶುಕ್ರವಾರ ಪ್ರಸಾರವಾಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮ ತುಂಬಾ ಸ್ಪೆಷಲ್ ಆಗಿದೆ.

ಲೂಸ್ ಮಾದ ಯೋಗಿಗೆ ಇಂಡಸ್ಟ್ರಿಯಲ್ಲಿ ಬೆಸ್ಟ್ ಫ್ರೆಂಡ್ ಯಾರು?

ಅಂದಹಾಗೆ ಲೂಸ್ ಮಾದ ಯೋಗಿ ರವರಿಗೆ ಇಂಡಸ್ಟ್ರಿಯಲ್ಲಿ ಯಾರು ಬೆಸ್ಟ್ ಫ್ರೆಂಡ್ ಎಂಬುದನ್ನು ಅವರು 'ಸೂಪರ್ ಟಾಕ್ ಟೈಮ್' ನಲ್ಲಿ ಹೇಳಿದ ಬಗ್ಗೆ ನಿಮಗೆ ಈ ಹಿಂದೆ ತಿಳಿಸಿದ್ವಿ. ಇಂದಿನ ಲೇಖನದಲ್ಲಿ ಅಕುಲ್ ಬಾಲಾಜಿ ರ್ಯಾಪಿಡ್ ಫೈಯರ್ ರೌಂಡ್ ನಲ್ಲಿ ಕೇಳಿದ ಪ್ರಶ್ನೆಗಳಿಗೆ ಯೋಗಿ ನೀಡಿದ ಇಂಟ್ರೆಸ್ಟಿಂಗ್ ಉತ್ತರಗಳ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ. ಅಲ್ಲದೇ ಯೋಗಿ ಯಾವ ನಟರಿಗೆ ಯಾವ ಸಲಹೆ ನೀಡಲು ಬಯಸುತ್ತಾರೆ ಎಂಬ ಇಂಟ್ರೆಸ್ಟಿಂಗ್ ಉತ್ತರ ಇಲ್ಲಿದೆ. ಆ ಪ್ರಶ್ನೆಗಳು ಮತ್ತು ಉತ್ತರಗಳು ಇಲ್ಲಿವೆ ನೋಡಿ..

ಯೋಗಿ ಯಾರಿಗೆ ಯಾವ ಅಡ್ವೈಸ್ ಕೊಡಲು ಬಯಸುತ್ತಾರೆ?

ಈ ಪ್ರಶ್ನೆ ಕೇಳಿ ಅಕುಲ್ ಹಲವರ ಹೆಸರುಗಳನ್ನು ಹೇಳಿದ್ರು. ಅದಕ್ಕೆ ಉತ್ತರಿಸಿದ ಯೋಗಿ 'ಶ್ರೀನಗರ ಕಿಟ್ಟಿಗೆ' ಹುಡುಗರ ಟೀಶರ್ಟ್ ಹರಿದು ಹಾಕಬೇಡ ಎಂಬ ಅಡ್ವೈಸ್ ನೀಡುತ್ತಾರಂತೆ. ಇನ್ನು ಸಾಧು ಕೋಕಿಲ ರವರಿಗೆ ಕಾಮಿಡಿ ಮಾಡೋದನ್ನ ನಿಲ್ಲಿಸಬೇಡಿ ಅಂತ ಹೇಳೋಕೆ ಇಷ್ಟ ಪಡ್ತೀನಿ. ಪುನೀತ್ ರಾಜ್ ಕುಮಾರ್ ಗೆ ಏನಾದ್ರು ಹೇಳೋದಾದ್ರೆ ಅವರ ಮನೆಯಿಂದ ನನಗೆ ಯಾವುದಾದರೊಂದು ಕಾರನ್ನು ಗಿಫ್ಟ್ ಆಗಿ ಕಳಿಸಿಕೊಡಿ ಎಂದು ಕೇಳುತ್ತೇನೆ ಎಂದರು. ಆದರೆ ಅಕುಲ್, ದುನಿಯಾ ವಿಜಯ್ ಹೆಸರು ಹೇಳಿದಾಗ ಯೋಗಿ ನೆಕ್ಸ್ಟ್ ಎಂದರು.

ಯಾವ ನಟಿ ಜೊತೆ ಮತ್ತೆ ಸಿನಿಮಾ ಮಾಡಲು ಬಯಸುವುದಿಲ್ಲ?

ಈ ಮೇಲಿನ ಪ್ರಶ್ನೆ ಕೇಳಿ ಅಕುಲ್ ಬಾಲಾಜಿ ರಮ್ಯಾ, ರಾಗಿಣಿ ದ್ವಿವೇದಿ, ಮೇಘನಾ ರಾಜ್, ರಾಧಿಕ ಪಂಡಿತ್ ಹೆಸರುಗಳನ್ನು ಹೇಳಿದ್ದರು. ಪ್ರಶ್ನೆಗೆ ಉತ್ತರಿಸಿದ ಯೋಗಿ ತಾವು ರಾಗಿಣಿ ದ್ವಿವೇದಿ ಜೊತೆ ಮತ್ತೆ ಸಿನಿಮಾ ಮಾಡಲು ಬಯಸುವುದಿಲ್ಲ ಎಂದರು. ಆದ್ರೆ ಇದು ತುಂಬಾ ಸೀರಿಯಸ್ ಆಗಿ ನೀಡಿದ ಉತ್ತರವಂತು ಅಲ್ಲ.

ಅವಕಾಶ ಸಿಕ್ಕಲ್ಲಿ ಯಾರ ಜೊತೆ ಡೇಟಿಂಗ್ ಮಾಡುತ್ತೀರಾ?

ಸಿಂಧೂ ಲೋಕನಾಥ್, ರಮ್ಯಾ, ರಾಗಿಣಿ ದ್ವಿವೇದಿ ಈ ಮೂವರು ನಟಿಯರ ಹೆಸರುಗಳನ್ನು ಆಯ್ಕೆಯಾಗಿ ನೀಡಿ ಅಕುಲ್ ಮೇಲಿನ ಪ್ರಶ್ನೆ ಕೇಳಿದ್ದರು. ಯೋಗಿ ರವರು ಸಿಂಧೂ ಲೋಕನಾಥ್ ಎಂದು ಉತ್ತರಿಸಿದ್ದರು.

ಲವ್ 'ಬ್ರೇಕಪ್' ಹ್ಯಾಂಡಲ್ ಗೆ ಸುಲಭ ವಿಧಾನ?

'ಬ್ರೇಕಪ್'ಗಳನ್ನು ಹ್ಯಾಂಡಲ್ ಮಾಡಲು ಇರುವ ಸುಲಭ ವಿಧಾನಗಳು ಯಾವುವು ಎಂಬ ಪ್ರಶ್ನೆಗೆ 'ಫ್ರೆಂಡ್ಸ್ ಜೊತೆ ಪ್ರವಾಸ ಹೋಗುವುದು, ಪಾರ್ಟಿ ಮಾಡುವುದು, ಮರೆಯುವುದು' ಎಂದು ಯೋಗಿ ಉತ್ತರ ನೀಡಿದರು.

English summary
Loose Mada Yogesh gave some advice's to some kannada actors in Super talk time.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada