For Quick Alerts
  ALLOW NOTIFICATIONS  
  For Daily Alerts

  ಜೀ ಕನ್ನಡದಿಂದ 'ಬೃಹತ್ ಬ್ರಹ್ಮಾಂಡ'ಕ್ಕೆ ಗೇಟ್‌ಪಾಸ್

  By * ಉದಯರವಿ
  |

  ಟಿವಿ ವಾಹಿನಿಗಳ ಮೂಲಕ ಖ್ಯಾತಿಯ ಉತ್ತುಂಗಕ್ಕೇರಿದ್ದ ನರೇಂದ್ರ ಬಾಬು ಶರ್ಮ ಅವರ ಭವಿಷ್ಯವೇ ಈಗ ಅತಂತ್ರವಾಗಿದೆ. ಎಲ್ಲರ ಭವಿಷ್ಯವನ್ನು ಹೇಳುತ್ತಿದ್ದ ಇವರ ಭವವಿಷ್ಯಕ್ಕೇ ಈಗ ಸಂಚಕಾರ ಬಂದಿದೆ. ಯಾಕೋ ಏನೋ ಅವರ ಟೈಮೇ ಸರಿಯಿದ್ದಂಗಿಲ್ಲ.

  ಕೈಯಲ್ಲಿ ಸುಬ್ರಹ್ಮಣ್ಯನ ಅಸ್ತ್ರವನ್ನು ಹಿಡಿದು ಜೀ ಕನ್ನಡದಲ್ಲಿ 'ಬ್ರಹ್ಮಾಂಡ' ಎಂಬ ಜ್ಯೋತಿಷ್ಯ ಕಾರ್ಯಕ್ರಮವನ್ನು ನರೇಂದ್ರ ಬಾಬು ಶರ್ಮ ಇಷ್ಟು ದಿನ ಸಾಂಗವಾಗಿ ನಡೆಸಿಕೊಂಡು ಬರುತ್ತಿದ್ದರು. ಈಗ ಅವರಿಗೆ ಕೊಕ್ ನೀಡಿ ಅವರ ಜಾಗಕ್ಕೆ ರವಿಶಂಕರ್ ಗುರೂಜಿ ಬಂದಿದ್ದಾರೆ. 'ಬೃಹತ್ ಬ್ರಹ್ಮಾಂಡ' ಹೋಗಿ 'ಓಂಕಾರ' ಶುರುವಾಗಿದೆ.

  ಜೀ ಕನ್ನಡದಿಂದ ಹೊರಬಿದ್ದಿರುವ 'ಬ್ರಹ್ಮಾಂಡ' ಜ್ಯೋತಿಷಿಗಳು ಈಗ ಯಾವ ವಾಹಿನಿಯಲ್ಲೂ ಕಾಣಿಸುತ್ತಿಲ್ಲ. ತಮ್ಮ ಉದ್ದಟತನದಿಂದ ನರೇಂದ್ರ ಬಾಬು ಶರ್ಮಾ ಅವರಿಗೆ ಎಲ್ಲಿಯೂ ನೆಲೆ ಸಿಗದಂತಾಗಿದೆ. ಎಲ್ಲರ ಭವಿಷ್ಯ ಹೇಳುವ ಇವರ ಭವಿಷ್ಯದ ಬಗ್ಗೆ ಇವರಿಗೆ ಅರಿವಿಲ್ಲದಿರುವುದು ಜಗತ್ತಿನ ಎಂಟನೇ ಅದ್ಭುತ ಎನ್ನಬಹುದು ಅಥವಾ ದುರಂತ ಅನ್ನಿ.

  ಬಾಯಿಗೆ ಬಂದಂತೆ ಮಾತನಾಡುತ್ತಾ, ಅನ್ಯ ಜಾತಿಗಳನ್ನು ಹೀಯಾಳಿಸುತ್ತಾ ಉದ್ದಟತನ ತೋರಿಸುತ್ತಿದ್ದ 'ಬ್ರಹ್ಮಾಂಡ' ಜ್ಯೋತಿಷಿಗಳಿಗೆ ಗೇಟ್ ಪಾಸ್ ನೀಡುವ ಮೂಲಕ ಜೀ ಕನ್ನಡ ವಾಹಿನಿ ಉತ್ತಮ ಕೆಲಸ ಮಾಡಿದೆ ಎಂಬ ಮಾತುಗಳು ವೀಕ್ಷಕರ ವಲಯದಿಂದ ಕೇಳಿಬಂದಿವೆ.

  English summary
  Zee Kannada's N. Narendra Babu Sharma programme Bhavya Brahmanda replaced by Omkara, it is the Special spiritual program of Zee Kannada. Sri Ravi Shankar Guruji is also a popular astrologer and numerologist. Guruji is a pioneer in Mudra Yoga.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X