»   » ಲೈಫ್ ಸೂಪರ್ ಗುರೂಗೆ ನಟಿ ಸಂಗೀತಾ ಭಟ್ ಎಂಟ್ರಿ

ಲೈಫ್ ಸೂಪರ್ ಗುರೂಗೆ ನಟಿ ಸಂಗೀತಾ ಭಟ್ ಎಂಟ್ರಿ

Posted By:
Subscribe to Filmibeat Kannada

ಒಂದೇ ತೆರನಾದ ರಿಯಾಲಿಟಿ ಶೋಗಳನ್ನು ನೋಡಿ ನೋಡಿ ಬೇಸರಗೊಂಡಿದ್ದ ಕಿರುತೆರೆ ವಾಹಿನಿ ವೀಕ್ಷಕರಿಗೆ ಒಂದು ವಿಭಿನ್ನ ಅನುಭವವನ್ನು ನೀಡುತ್ತಿದೆ 'ಲೈಫ್ ಸೂಪರ್ ಗುರೂ' ಶೋ. ಈಗಾಗಲೆ ಈ ಶೋನಲ್ಲಿ ಐದು ಸೂಪರ್ ಸೀನಿಯರ್ಸ್ ಹಾಗೂ ಐದು ಮಂದಿ ಜಾಲಿ ಜೂನಿಯರ್ಸ್ ಪರಿಚಯಿಸಲಾಗಿದೆ.

ಮೂರನೇ ಎಪಿಸೋಡ್ ನಲ್ಲಿ ಇನ್ನಷ್ಟು ಮಂದಿ ಸೂಪರ್ ಸ್ಪರ್ಧಿಗಳು ಗಮನಸೆಳೆದರು. ಮೂರನೇ ದಿನ ಐದು ಹೊಸ ಸ್ಪರ್ಧಿಗಳನ್ನು ಪರಿಚಯಿಸಲಾಯಿತು. ಯುವಕರ ಚಿಲುಮೆಯಂತಹ ಉತ್ಸಾಹ ಒಂದೆಡೆಯಾದರೆ, ಹಿರಿಯರ ಬತ್ತದ ಉತ್ಸಾಹ ಒಂದೆಡೆ. ಈ ವಾರ ಲೈಫ್ ಸೂಪರ್ ಗುರೂ ಗೆ ಬಂದ ಸ್ಪರ್ಧಿಗಳ ವಿವರ ಇಲ್ಲಿದೆ ಓದಿ.

ಉತ್ಸಾಹಕ್ಕೆ ವಯಸ್ಸಿಲ್ಲ ಎಂಬುದಕ್ಕೆ ಇವರೇ ಸಾಕ್ಷಿ. ಕೊಡಗಿನ ಕಾವೇರಿ ಹಾಡಿನ ಮೂಲಕ ವೇದಿಗೆ ಅಡಿಯಿಟ್ಟರು ಕೊಡಗಿನ ವೀರ ನಾರಿ ಬೋಜಮ್ಮ. ವಯಸ್ಸು 60 ಆಗಿದ್ದರೂ ಡಾನ್ಸ್ ಎಂದರೆ ಇವರಿಗೆ ಇಷ್ಟ. ವೃತ್ತಿಯಲ್ಲಿ ನರ್ಸ್ ಆದರೆ ಪ್ರವೃತ್ತಿಯಲ್ಲಿ ಕಲಾವಿದೆ. [ಕುತೂಹಲದ ಕಣವಾದ 'ಲೈಫ್ ಸೂಪರ್ ಗುರೂ']

ವೃತ್ತಿಯಲ್ಲಿ ನರ್ಸ್ ಪ್ರವೃತ್ತಿಯಲ್ಲಿ ಕಲಾವಿದೆ ಬೋಜಮ್ಮ

ವಯಸ್ಸನ್ನು ಮರೀಬೇಕು ಎನ್ನುವ ಇವರು ಗೆಲ್ಲಲಿಕ್ಕೆ ಇಲ್ಲಿಗೆ ಬಂದಿಲ್ಲ, ಗೆದ್ದು ಸಾಧಿಸಲು ಬಂದಿದ್ದೇನೆ ಎಂದರು. ಈ ಕಾಲದ ಹುಡುಗಿಯರಿಗಿಂತ ನಾನೇನೂ ಕಮ್ಮಿ ಇಲ್ಲ ಎಂದರು. ಈ ಏಜಲ್ಲಿ ಆಕ್ಟಿಂಗ್ ಮಾಡಿ ವಯಸ್ಸನ್ನು ಮರೀಬೇಕು ಎನ್ನುತ್ತಾರೆ ಬೊಜಮ್ಮ.

ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಇವರಿಗೆ ಸಾಟಿ ಇಲ್ಲ

ಈಕೆಯ ಹೆಸರಷ್ಟೇ ಸೌಮ್ಯ. ಆದರೆ ಮಾತಿಗೆ ನಿಂತರೆ ಗೆಲ್ಲುವುದು ಕಷ್ಟ. ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಇವರಿಗೆ. ನಾನು ಮಿಸ್ ವರ್ಲ್ಡ್ ಅಲ್ಲ. ಆದರೆ ನನ್ನ ಮುಂದೆ ಹೋಗುವ ಯಾವುದೇ ಹುಡುಗ್ರೂ ನನ್ನನ್ನು ನೋಡ್ದೆ ಹೋಗಲ್ಲ. ಬ್ಯಾಂಡ್ ಬಜಾಯಿಸಲು ಬರ್ತಾ ಇದ್ದೀನಿ ಎಂದರು. ಹೆಸರಷ್ಟೇ ಸೌಮ್ಯಾ ಉಳಿದಂತೆ ಮಾರಿ ಮುತ್ತು ಎಂದು ಪರಿಚಯಿಸಿದರು ಲೂಸ್ ಮಾದ ಯೋಗೇಶ್.

ರಂಗಭೂಮಿ ಹಿನ್ನೆಲೆಯ ಶಮನ್

ಬಳಿಕ ಬಂದವರು ಧಾರವಾಡ ಪೇಡ, ರಂಗಭೂಮಿ ಹಿನ್ನೆಲೆಯ ಶಮನ್. ಕನ್ನಡದ ಕತ್ರಿನಾ ಎಂದು ಪರಿಚಯಿಸಿದರು ಯೋಗಿ. ದ.ರಾ. ಬೇಂದ್ರೆ, ಗಾಂಧೀಜಿ ಹೀಗೆ ಹಲವಾರು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 1969ರಲ್ಲಿ ಡಿಗ್ರಿ ಮಾಡಿದ್ದಷ್ಟೇ ಅಲ್ಲ, ಬಿಎ ಎಕನಾಮಿಕ್ಸ್ ನಲ್ಲಿ ಗೋಲ್ಡ್ ಮೆಡಲ್ ವಿನ್ನರ್. ಎಷ್ಟೋ ನಾಟಕಗಳನ್ನು ಬರೆದು, ನಿರ್ದೇಶಿಸಿದ್ದಾರೆ. ಅರುವತ್ತನೇ ವರ್ಷಕ್ಕೇ ನನ್ನ ಜೀವನ ಶುರುವಾಯಿತು ಎಂದು ತಿಳಿದುಕೊಂಡು ಈಗಿನ ಜನರೇಷನ್ ಬಗ್ಗೆ ಪಾಠ ಕಲಿಸಲು ಬಂದಿದ್ದೇನೆ ಎಂದರು ಶಮನ್.

ಲೈಫ್ ಸೂಪರ್ ಗುರೂಗೆ ನಟಿ ಸಂಗೀತಾ ಭಟ್ ಎಂಟ್ರಿ

ಈ ಬಾರಿ ಈ ಶೋನಲ್ಲಿ ಕಾಣಿಸಿಕೊಳ್ಳುತ್ತಿರುವ ಸೆಲೆಬ್ರಿಟಿ ಎಂದರೆ ನಟಿ ಸಂಗೀತಾ ಭಟ್. ಪ್ರೀತಿ ಗೀತಿ ಇತ್ಯಾದಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟಿರುವ ಸಂಗೀತಾ ತುಂಬಾ ಸಂಪ್ರದಾಯಸ್ತ ಕುಟುಂಬದಿಂದ ಬಂದಿದ್ದರೂ ಅದನ್ಯಾವುದನ್ನೂ ಫಾಲೋ ಮಾಡಲ್ಲ ಎನ್ನುತ್ತಾರೆ. ಇಪ್ಪತ್ತೆರಡರ ಈ ಚೆಲುವೆ ಹಿಂದಿನ ಕಾಲದವರ ಹಳೆ ರೂಲ್ಸನ್ನು ಬ್ರೇಕ್ ಮಾಡಲು ಬರುತ್ತಿದ್ದೇನೆ ಎಂದರು.

ಈ ಕೃಷ್ಣಾನಂದನಿಗೆ ಕೈಯಲ್ಲಿ ಕೊಳಲಿಲ್ಲ ಅಷ್ಟೇ

ಮೈಕೋದಲ್ಲಿ ಕೆಲಸ ಮಾಡಿದ ಇವರ ಹೆಸರು ಕೃಷ್ಣಾನಂದ. ಕೈಯಲ್ಲಿ ಕೊಳಲು ಇಲ್ಲ ಎಂಬುದನ್ನು ಬಿಟ್ಟರೆ ಇವರು ಕೃಷ್ಣನಿದ್ದಂತೆ. ಇವರ ಸೊಸೆಯೇ ಇವನ್ನು ಲೈಫ್ ಸೂಪರ್ ಗುರೂ ಕಾರ್ಯಕ್ರಮಕ್ಕೆ ಕಳುಹಿಸಿದ್ದು. ಅಣ್ಣಾವ್ರ ನಟನೆ, ಸಂಗೀತವನ್ನು ನೋಡಿ ಬೆಳೆದವನು. ವಯಸ್ಸು 70 ಆಗಿದ್ದರೂ ಮನಸ್ಸು ಮಾತ್ರ ನವಯುವಕನದ್ದು. ಇದುವರೆಗೂ ಯಾವುದೇ ಅನಾರೋಗ್ಯಕ್ಕೆ ತುತ್ತಾಗಿಲ್ಲ. ರಂಗಭೂಮಿಗೆ ಬಂದ ಕೃಷ್ಣಾನಂದ ಅವರು ಮೊದಲು ಹಾಕಿದ್ದೇ ಹೆಣ್ಣಿನ ವೇಷ.

ಕಲಿಯುಗ ಅರ್ಜುನ ಕಾರ್ ಓಡಿಸುವುದರಲ್ಲಿ ಎಕ್ಸ್ ಪರ್ಟ್

ಇವರ ತಂದೆ ಮಾಜಿ ಶಾಸಕ. ಇವರ ಹೆಸರು ಅರ್ಜುನ್. ಆ ದ್ವಾಪರಯುಗದ ಅರ್ಜುನ ಬಾಣಹೂಡುವುದರಲ್ಲಿ ಎಕ್ಸ್ ಪರ್ಟ್ ಆದರೆ ಈ ಕಲಿಯುಗ ಅರ್ಜುನ ಕಾರನ್ನು ಓಡಿಸುವುದಲ್ಲ ಹಾರಿಸುವುದರಲ್ಲಿ ಎಕ್ಸ್ ಪರ್ಟ್. ಮದುವೆಯಾಗಿ ವಿಚ್ಛೇದನವನ್ನೂ ಪಡೆದರು.

ಫೇಸ್ ಬುಕ್ ಮೂಲಕ ಲವ್, ಎರಡನೇ ಮದುವೆ

ಇಪ್ಪತ್ತೈದನೇ ವಯಸ್ಸಿಗೇ ನೂರು ವರ್ಷದ ಅನುಭವ ಪಡೆದಿದ್ದೀನಿ ಎನ್ನುವ ಇವರು, ಏನೇನೋ ಗೆದ್ದಿದ್ದೀನಿ ಲೈಫಲಿ ವಯಸ್ಸಾದವರನ್ನು ಗೆಲ್ಲೂದು ನನಗೇನು ಕಷ್ಟವಿಲ್ಲ ಎನ್ನುತ್ತಾರೆ. ಪಾರ್ಟಿ ಮುಗಿಸಿಕೊಂಡು ರಾತ್ರಿ 3 ಗಂಟೆಗೆ ಮನೆಗೆ ಹೋಗುತ್ತಿದವನ್ನು ನನ್ನ ಪತ್ನಿ ಎಂಟಕ್ಕೆ ಮನೆಗೆ ಬರುವಂತೆ ಮಾಡಿದ್ದಾರೆ. ವಿಚ್ಛೇದನ ಪಡೆದ ಬಳಿಕ ಫೇಸ್ ಬುಕ್ ನಲ್ಲೇ ಲವ್ ಆಗಿ ಹೊಸ ಜೀವನ ನಡೆಸುತ್ತಾ ಇದೀಗ ಸುಖಿ ಸಂಸಾರ ನಡೆಸುತ್ತಿದ್ದಾರೆ.

English summary
Zee Kannada show Life Super Guru day 3 highlights. The reality show features a nurse who had a dream to become an actress, she shows the audience that she is a brave old woman. To compete the old woman, Somya a nineteen years old girl makes her way to the stage.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada