»   » ಕಿರುತೆರೆಗೆ ವಿನಯಾ ಪ್ರಸಾದ್, ಅನಂತ್ ನಾಗ್ ಜೋಡಿ

ಕಿರುತೆರೆಗೆ ವಿನಯಾ ಪ್ರಸಾದ್, ಅನಂತ್ ನಾಗ್ ಜೋಡಿ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರು ಈಗ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಬಿಜಿಯಾಗಿದ್ದಾರೆ. ಈಗಾಗಲೆ ಅವರ ಅಭಿನಯ 'ಚಿಟ್ಟೆ ಹೆಜ್ಜೆ' ಧಾರಾವಾಹಿ ಈಟಿವಿ ಕನ್ನಡದಲ್ಲಿ ಮೂಡಿಬರುತ್ತಿದೆ.

ಈಗ ಮತ್ತೊಂದು ಧಾರಾವಾಹಿ ಮೂಲಕ ಅವರು ಕಿರುತೆರೆ ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗಲು ಬರುತ್ತಿದ್ದಾರೆ. ಜೀ ಕನ್ನಡ ವಾಹಿನಿಗಾಗಿ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ನಿತ್ಯೋತ್ಸವ' ಧಾರಾವಾಹಿಯಲ್ಲಿ ಅನಂತ್ ನಾಗ್ ಅಭಿನಯಿಸುತ್ತಿದ್ದಾರೆ.

Nityotsava serial

ಅನಂತ್ ಜೊತೆ ವಿನಯಾ ಪ್ರಸಾದ್ ಸಹ ಅಭಿನಯಿಸುತ್ತಿರುವುದು ವಿಶೇಷ. 'ಭಲೆ ಬಸವ' ಮಿನಿ ಧಾರಾವಾಹಿ ಬಳಿಕ ಅದೇ ಕಾನ್ಸೆಪ್ಟ್ ನಲ್ಲಿ ಮೂಡಿಬರುತ್ತಿದೆ ಮಿನಿ ಧಾರಾವಾಹಿ 'ನಿತ್ಯೋತ್ಸವ'.

ನಲವತ್ತು ವರ್ಷಗಳ ಕಾಲ ಸರ್ಕಾರಿ ಕೆಲಸ ಮಾಡಿದ ಭಾಸ್ಕರ ರಾಯರು (ಅನಂತನಾಗ್) ನಿವೃತ್ತರಾಗಿದ್ದಾರೆ. ಎರಡನೇ ಪುತ್ರ ಶ್ರಾವಣನೊಂದಿಗೆ ಬೆಂಗಳೂರಿನಲ್ಲಿ ವಾಸ. ಪ್ರತಿಭಾ ಗುಂಟೂರ್ (ವಿನಯಾ ಪ್ರಸಾದ್) ಅವರಿಗೆ ವಯಸ್ಸು ಐವತ್ತೈದಾಗಿದ್ದರೂ ನಲವತ್ತರಂತೆ ಕಾಣುತ್ತಾರೆ.

ಆಕರ್ಷಕ ವ್ಯಕ್ತಿತ್ವದ ಪ್ರತಿಭಾ ಗುಂಟೂರು ಸಹ ತಮ್ಮ ಮಗ ಪ್ರಧಾನ್ ಅವರ ಮನೆಯಲ್ಲಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಎಷ್ಟೋ ಬಾರಿ, ತುಂಬಾ ಆತ್ಮೀಯವಾದ ಸಂಬಂಧ ಕೂಡಾ ಶುರುವಾಗೋದು ಒಂದು ಅನಿರೀಕ್ಷಿತ ಭೇಟಿಯಿಂದಲೇ.

ಹಾಗಾದರೆ ಪರಸ್ಪರ ಪರಿಚಯವೇ ಇಲ್ಲದ ಪ್ರತಿಭಾ ಗುಂಟೂರ್ ಹಾಗೂ ಭಾಸ್ಕರರಾಯರು ಅನಿರೀಕ್ಷಿತವಾಗಿ ಭೇಟಿಯಾದರೆ ಏನಾಗತ್ತೆ? ಪ್ರೀತಿ? ಗೆಳೆತನ? ಮದುವೆ? ಜಗಳ?! ಉತ್ತರಕ್ಕೆ 'ನಿತ್ಯೋತ್ಸವ' ಧಾರಾವಾಹಿಯನ್ನು ನೋಡಬೇಕು.

ಎಂ.ಎಸ್.ಶ್ರೀರಾಮ್ ಅವಾ ಲಾಟರಿ ಕತೆಯನ್ನು ಆಧರಿಸಿ ನಾಗತಿಹಳ್ಳಿ ನಿರ್ದೇಶನದ 'ನಿತ್ಯೋತ್ಸವ' ಇದೇ 30ರಿಂದ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿದೆ ಕನ್ನಡಿಗರ ಕಣ್ಮಣಿ ಜೀ ಕನ್ನಡ ವಾಹಿನಿಯಲ್ಲಿ. (ಒನ್ಇಂಡಿಯಾ ಕನ್ನಡ)

English summary
'Nityotsava', a new tele serial being aired on Zee Kannada from September 30th Monday. The serial starts at 8 pm from Monday to Friday. Serial directed by Nagathihalli Chandrashekhar. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada