Don't Miss!
- News
Breaking; ಹಾಲಿ ಶಾಸಕನಿಗೆ ಟಿಕೆಟ್ ನೀಡದಂತೆ ಎಚ್ಡಿಕೆಗೆ ಮನವಿ!
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Sports
ಜಿಂಬಾಬ್ವೆ vs ವೆಸ್ಟ್ ಇಂಡೀಸ್: ಮೊದಲ ಟೆಸ್ಟ್ 2ನೇ ದಿನ: Live score
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Drama Juniors Season 4 Contestants : ಡ್ರಾಮಾ ಜೂನಿಯರ್ಸ್ ಮೆಗಾ ಆಡಿಷನ್ ಗೆದ್ದ ಪುಟಾಣಿಗಳ ಪಂಟರ್‌ಗಳ ಲಿಸ್ಟ್ ಇಲ್ಲಿದೆ
ಸರಿಗಮಪ, ಕಾಮಿಡಿ ಕಿಲಾಡಿಗಳು, ಡ್ರಾಮ ಜೂನಿಯರ್ಸ್ ಸೇರಿದಂತೆ ಡ್ಯಾನ್ಸ್ ಶೋ, ಟಾಕ್ ಶೋ ಗಳನ್ನು ಜೀ ಕನ್ನಡ ನೀಡುತ್ತಿದೆ. ಹಲವು ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರ ಮನಗೆದ್ದ ಮತ್ತೊಂದು ಕಾರ್ಯಕ್ರಮವೆಂದರೆ ಅದು ಡ್ರಾಮಾ ಜೂನಿಯರ್ಸ್. ಈಗ ಡ್ರಾಮ ಜೂನಿಯರ್ಸ್ ಸೀಸನ್ 4ರ ಮೆಗಾ ಆಡಿಷನ್ ಆರಂಭ ಆಗಿದೆ.
ಇಡೀ ಕರ್ನಾಟಕದ ಮೂಲೆ ಮೂಲೆಗಳಿಂದಲೂ ತೊದಲು ನುಡಿವ ಮಕ್ಕಳನ್ನು ಒಂದು ಕಡೆ ಸೇರಿಸಿ, ಮಕ್ಕಳಲ್ಲಿ ಅಭಿನಯದ ಕಲೆ ಬಗ್ಗೆ ಮೊಳಕೆಯಲ್ಲಿ ಪಾಠ ಮಾಡುವ ಶಾಲೆಯೇ 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮ. 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದ ಮೂಲಕ ನೂರಾರು ಪುಟಾಣಿಗಳು ಕಿರುತೆರೆಯಲ್ಲಿ ಮಿಂಚಿದ್ದಾರೆ. ಡ್ರಾಮಾ ಜೂನಿಯರ್ಸ್‌ನಲ್ಲಿ ಭಾಗವಹಿಸಿದ ಕೆಲ ಮಕ್ಕಳು ಕಿರುತೆರೆ ಹಾಗೂ ಬೆಳ್ಳಿಪರದೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
Sathya
Serial:
ಮನದಲ್ಲೇ
ಗುಟ್ಟಾಗಿ
ಪ್ರೀತಿಸಿದ
ಪ್ರೇಯಸಿ
'ಸತ್ಯ'ಗೆ
ಕಾರ್ತಿಕ್
ಚಾಲೆಂಜ್

ಮೆಗಾ ಆಡಿಷನ್ ಗೆದ್ದವರು ಯಾರು?
ಪುಟಾಣಿಗಳ ಅಭಿನಯ ಕಂಡು, ನಗುವ ಜೊತೆಗೆ ಪ್ರೇಕ್ಷಕರು ಕಂಬನಿಯನ್ನೂ ಮಿಡಿದಿದ್ದಾರೆ. ಇನ್ನು ಪ್ರಪಂಚದ ಅರಿವಿಲ್ಲದ ಮಕ್ಕಳು, ತಪ್ಪು-ಸರಿಗಳ ಬಗ್ಗೆ ನಾಟಕವಾಡಿ ಡೈಲಾಗ್‌ಗಳನ್ನು ಹೇಳುವ ಮೂಲಕ ದೊಡ್ಡವರಿಗೂ ಪಾಠ ಮಾಡಿದ್ದೂ ಉಂಟು. ಡ್ರಾಮಾ ಜೂನಿಯರ್ಸ್‌ನ ಮೊದಲ ಸೀಸನ್‌ನಲ್ಲಿ ಹಿರಿಯ ನಟಿ ಲಕ್ಷ್ಮೀ, ವಿಜಯ್ ರಾಘವೇಂದ್ರ ಹಾಗೂ ಟಿಎನ್ ಸೀತಾರಾಮ್ ಜಡ್ಜ್ ಆಗಿ ಕುಳಿತು ಪುಟಾಣಿಗಳಿಗೆ ಪಾಠ ಮಾಡಿದ್ದರು. ಇದೀಗ ನಾಲ್ಕನೇ ಸೀಸನ್ ಆರಂಭವಾಗಿದ್ದು, ಹಲವು ಕನಸುಗಳನ್ನು ಹೊತ್ತು ಬಂದಿರುವ ಮಕ್ಕಳಿಗೆ ನಟಿ ಲಕ್ಷ್ಮೀ, ರವಿಚಂದ್ರನ್ ಹಾಗೂ ರಚಿತಾ ರಾಮ್ ಕೈ ಹಿಡಿದು ಮುನ್ನೆಡೆಸಲು ಮುಂದಾಗಿದ್ದಾರೆ.
ATM
ಕಾರ್ಡ್
ಗಾಗಿ
ಒಳ್ಳೆ
ಹುಡುಗ
ಪ್ರಥಮ್
ಜೊತೆ
ಸೇರಿದ್ರಾ
ಹಿರಿಯ
ನಟ
ಬಿರಾದರ್...!

ಪರೀಕ್ಕ್ಷಿತ್ ಪಾಸ್
ಡ್ರಾಮಾ ಜೂನಿಯರ್ಸ್ ಹೊಸ ಸೀಸನ್ ಮೆಗಾ ಆಡಿಷನ್ ಪ್ರಾರಂಭವಾಗಿದ್ದು, ಮಾಸ್ಟರ್ ಆನಂದ್ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ನಾಲ್ಕನೇ ಸೀಸನ್‌ಗೆ ಬಂದ ಮೊದಲ ಸ್ಪರ್ಧಿ ವಯಸ್ಸು ಕೇವಲ ನಾಲ್ಕು ವರ್ಷ. ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಬಂದ ಆನೇಕಲ್‌ನ ಪರೀಕ್ಷಿತ್. ಬಬ್ರುವಾಹನ ಸಿನಿಮಾದ ಡೈಲಾಗ್ ಅನ್ನು ತನ್ನ ತೊದಲು ನುಡಿಯಲ್ಲೇ ಸುಲಲಿತವಾಗಿ ಹೇಳಿದ. ಏನು ಪಾರ್ಥ.. ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನನ್ನು ಗೆಲ್ಲಲಾರೆ. ಈಗ ಆ ಶಕ್ತಿ ನಿನ್ನಲ್ಲಿಲ್ಲ. ಪರಮ ಪತಿವ್ರತೆಯನ್ನು ನಿಂದಿಸಿದ ಮರುಕ್ಷಣವೇ ನಿನ್ನ ಪುಣ್ಯವೆಲ್ಲಾ ಉರಿದು ಹೋಗಿ, ಪಾಪದ ಮೂಟೆ ನಿನ್ನ ಹೆಗಲು ಹತ್ತಿದೆ. ಹಾ.. ಎತ್ತು ನಿನ್ನ ಗಾಂಢೀವ ಹೂಡು ಪರಮೇಶ್ವರನು ಕೊಟ್ಟ ಆ ನಿನ್ನ ಪಾಶುಪತಾಸ್ತ್ರ. ಶಿವನನ್ನು ಗೆದ್ದ ನಿನ್ನ ಶೌರ್ಯ, ನನಗೂ ಸ್ವಲ್ಪ ತಿಳಿಯಲಿ ಅಥವಾ ಶಿವನನ್ನು ಗೆದ್ದೇ ಎಂಬ ನಿನ್ನ ಅಹಂಕಾರ ನನ್ನಿಂದಲೇ ಮಣ್ಣಾಗಲಿ ಎಂದು ಡೈಲಾಗ್ ಬಿಟ್ಟು ಜಡ್ಜ್‌ಗಳ ಮನ ಗೆದ್ದು ಸೆಲೆಕ್ಟ್ ಆಗಿದ್ದಾನೆ.

ಸಿಂಹಾದ್ರಿ ಜಿತಿನ್
ಇನ್ನೂ ನಾಲ್ಕು ವರ್ಷದ ಪುಟ್ಟ ಬಾಲಕ ಜಿತಿನ್ ಬೆಂಗಳೂರಿನವ. 'ಸಿಂಹಾದ್ರಿಯ ಸಿಂಹ' ಚಿತ್ರದಲ್ಲಿನ ಡಾ.ವಿಷ್ಣುವರ್ಧನ್ ಉಡುಗೆಯನ್ನು ತೊಟ್ಟು ವೇದಿಕೆ ಮೇಲೆ ಅರಾಮವಾಗಿ ಬಂದು, ಪೀಠದ ಮೇಲೆ ಕುಳಿತು ತಕಾರದ ಡೈಲಾಗ್ ಹೊಡೆದು ಜಡ್ಜ್‌ಗಳ ಮನ ಗೆದ್ದ. ಪುನೀತ್ ರಾಜ್ ಕುಮಾರ್ ನಟನೆಯ ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ ಹಾಡು ಹಾಡಿ ಮುದ್ದು ಮುದ್ದಾಗಿ ಮಾತನಾಡಿ ಡ್ರಾಮಾ ಜೂನಿಯರ್ಸ್‌ನಲ್ಲಿ ಜಾಗ ಪಡೆದಿದ್ದಾನೆ ಜಿತಿನ್. ಜಿತಿನ್ ಮಾತುಗಳಿಗೆ ಜಡ್ಜ್‌ಗಳು ಹಾಗೂ ಮಾಸ್ಟರ್ ಆನಂದ್ ಫಿದಾ ಆಗಿ ಬಿಟ್ಟರು. ರಚಿತಾ ರಾಮ್ ವೇದಿಕೆ ಮೇಲೆ ಬಂದು ಜಿತಿನ್‌ಗೆ ಮುತ್ತು ಕೊಟ್ಟು ಗ್ರೀನ್ ಸಿಗ್ನಲ್ ಕೊಟ್ಟು ಬಿಟ್ಟರು.
Mahanayaka
Serial:
'ಮಹಾನಾಯಕ'
ಧಾರಾವಾಹಿಗೆ
ಬೆದರಿಕೆ
ಹಾಕಿದಾಗ
ಬೆನ್ನೆಲುಬಾಗಿ
ನಿಂತಿದ್ದ
ಯಶ್!

ಅಣ್ಣಾವ್ರ ಹುಟ್ಟೂರಿನ ಪ್ರತಿಭೆ ಗೌತಮ್
ಅಣ್ಣಾವ್ರ ಹುಟ್ಟೂರಿನಿಂದ ಕಲೆ ಹೊತ್ತು ತಂದ ಹದಿಮೂರು ವರ್ಷದ ಗೌತಮ್ ರಾಜ್ ಆರ್. ಊರಿಂದ ಇಲ್ಲಿಗೆ ಬಂದು ಕಥೆ ಹೇಳುತ್ತಾ ಕಂಸಾಳೆ ಹಾಡಿ ಎಲ್ಲರ ಮನ ಗೆದ್ದ. ತನ್ನಲಿನ ಕಲೆಯನ್ನೆಲ್ಲಾ ಕ್ಷಣಾರ್ಧದಲ್ಲಿ ಜಡ್ಜ್‌ಗಳ ಮುಂದಿಟ್ಟು, ಡ್ರಾಮಾ ಜೂನಿಯರ್ಸ್‌ನಲ್ಲಿ ತನ್ನ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಗೌತಮ್ ಯಶಸ್ವಿಯಾದ. ಜಡ್ಜ್‌ಗಳ ಕೈ ಮುಟ್ಟಿ ನಮಸ್ಕರಿಸಿ, ಪದಕ ಸ್ವೀಕರಿಸಿದ. ಮೆಗಾ ಆಡಿಷನಲ್ಲೇ ಡೈಲಾಗ್‌ಗಳ ಸುರಿಮಳೆ ಸುರಿದು ಜಡ್ಜ್‌ಗಳು ನಕ್ಕು ಉರುಳಾಡುವಂತೆ ಮಾಡಿದ ಪುಟಾಣಿಗಳು ಮುಂದೇನೇನು ಮಾಡುತ್ತಾರೋ..? ಇನ್ನು ಇಂದಿನ ಸಂಚಿಕೆಯಲ್ಲಿ ಇನ್ನೆಷ್ಟು ಪ್ರಭೆಗಳು ವೇದಿಕೆ ಮೇಲೆ ಏನೇನು ಮಾಡುತ್ತಾರೆ ಎಂಬುದನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.