Don't Miss!
- News
ಫೆಬ್ರವರಿ 2023ರ ಮಾಸಭವಿಷ್ಯ: ಸಂಕ್ರಮಣದ ನಂತರದ ಫೆಬ್ರವರಿ ತಿಂಗಳಿನಲ್ಲಿ ಯಾವೆಲ್ಲ ರಾಶಿಗಳಿಗೆ ಶುಭವಾಗಲಿದೆ?
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚೈತ್ರಾಲಿಯ ಅಪೂರ್ವ ಪ್ರತಿಭೆಗೆ ತಲೆ ಬಾಗಿದ ಅಭಿಜಿತ್, ಕಂಬನಿ ಮಿಡಿದ ಪ್ರಣವ್
ಜೋಡಿ ನಂಬರ್ ವನ್ ರಿಯಾಲಿಟಿ ಶೋ ನೋಡುಗರ ಗಮನ ಸೆಳೆಯುತ್ತಿದೆ. ಅದರಲ್ಲೂ ಸಂತು ಜನರನ್ನು ನಗಿಸುತ್ತಾ ಮನೋರಂಜನೆ ನೀಡುತ್ತಿದ್ದಾರೆ. ನವರಾತ್ರಿ ಹಬ್ಬ ಶುರುವಾದ ಕಾರಣ ಚೈತ್ರಾಲಿ ಹಾಗೂ ತಂಡ ದೇವರ ನೃತ್ಯವನ್ನೂ ಮಾಡಿ ಜನರ ಮನಸೂರೆಗೊಳಿಸಿದರು. ಹಾಗೆಯೇ ಚೈತ್ರಾ ಪ್ರತಿಭೆಗೆ ಮಾಳವಿಕಾ ಶಭಾಷ್ ಎಂದು ಹೇಳಿದರೆ ಪ್ರೇಮ್ ನಿಬ್ಬೆರಗಾದರು. ಕಿವಿ ಕೇಳದೆ ಇದ್ದರೂ ಮಾತನಾಡಲು ಆಗದಿದ್ದರೂ ಚೈತ್ರಾಲಿಗೆ ಡಾನ್ಸ್ ಅಂದರೆ ಬಲು ಇಷ್ಟ. ಇಂಥ ವಿಶಿಷ್ಟ ಪ್ರತಿಭೆಗೆ ಅಲ್ಲಿರುವ ಜೋಡಿಗಳು ಕೈ ಮುಗಿದು ನಮಸ್ಕಾರ ಮಾಡಿದ್ದಾರೆ.
ಅದರಲ್ಲೂ ಎರಡು ಜೋಡಿಗಳು ನನಗೆ ಬಲು ಇಷ್ಟ ಎಂದು ಚೈತ್ರಲಿ ಹೇಳಿದ್ದಾರೆ. ಅಭಿಜಿತ್ ಹಾಗೂ ಅವರ ಹೆಂಡತಿ ಎಂದರೆ ಚೈತ್ರಾಲಿಗೆ ಬಹಳ ಇಷ್ಟವಂತೆ ವಿಷ್ಟುವರ್ಧನ್ ಹಾಗೆ ಮಾಡುವ ರೀತಿ ಅವರ ನೃತ್ಯ ಅಂದರೆ ಚೈತ್ರಾಲಿಗೆ ಬಹಳ ಇಷ್ಟವಂತೆ. ಇದನ್ನು ಕೇಳಿ ಅಭಿಜಿತ್ ಗೆ ಬಹಳ ಸಂತಸವಾಗುತ್ತದೆ. ಅವರ ಕಣ್ಣು ಗಳಿಂದ ಆನಂದ ಬಾಷ್ಪ ಹರಿಯಿತು. ಹಾಗೆಯೇ ಇನ್ನೊಂದು ಜೋಡಿ ನನಗೆ ಬಹಳ ಇಷ್ಟ ಅದು ಯಾರು ಎಂದರೆ ಪ್ರಣವ್ ಹಾಗೂ ನೇಹಾ ಎಂದು ಹೇಳುತ್ತಾರೆ. ಪ್ರಣವ್ ನೇಹಾನ ತುಂಬಾ ಪ್ರೀತಿ ಮಾಡುತ್ತಾರೆ. ಹಾಗೆಯೇ ಗಿಫ್ಟ್ ಗಳನ್ನೂ ತುಂಬಾ ಪ್ರೀತಿಯಿಂದ ನೀಡುತ್ತಾರೆ ಇದರಿಂದ ನನಗೆ ಬಹಳ ಖುಷಿ ಆಗಿದೆ. ಎಂದು ಹೇಳುತ್ತಾರೆ ಇದನ್ನು ಕೇಳಿದ ಪ್ರಣವ್‌ಗೆ ಮಾತೇ ಬಾರದ ಹಾಗೆ ಆಗುತ್ತದೆ. ಇಷ್ಟು ವರುಷ ನಾನು ಯಾರು ಎಂದು ಯಾರಿಗೂ ತಿಳಿದಿರಲಿಲ್ಲ. ಜೀ ವಾಹಿನಿಯವರು ನನಗೆ ಉತ್ತಮ ಅವಕಾಶವನ್ನು ಕೊಟ್ಟಿದ್ದಾರೆ ಎಂದರು.

ಹೆಂಡತಿ ಕಾಲೆಳೆದ ತಪ್ಪಿಗೆ ಸಂತುಗೆ ಟಾಸ್ಕ್ ಶಿಕ್ಷೆ
ಬಳಿಕ ಮಾತನಾಡಿದ ಅವರು ನಾನು ಯಾವಾಗಲೂ ಆಭಾರಿ ಆಗಿದ್ದೇನೆ. ಚೈತ್ರಾಲಿ ವಿಶಿಷ್ಟ ಪ್ರತಿಭೆ ಆದರೂ ತನ್ನಲ್ಲಿರುವ ಉತ್ತಮವಾಗಿ ಪ್ರತಿಭೆಯನ್ನು ಬೆಳೆಸಿ ಉಳಿದಿರುವುದು ಖುಷಿ ನೀಡಿದೆ ಎಂದು ಹೇಳುತ್ತಾರೆ. ಇದನ್ನೆಲ್ಲ ಕೇಳಿದ ಚೈತ್ರಾಲಿಗೆ ಬಹಳ ಖುಷಿ ಆಗುತ್ತದೆ. ಕೀರ್ತಿ ದಂಪತಿ ಹಾಗೂ ಸಂತು ಮಾನಸ ದಂಪತಿ ಮಧ್ಯೆ ದೀಪ ಹಚ್ಚುವ ಕಾಂಪಿಟಿಷನ್ ನಡೆಯುತ್ತದೆ. ಇದರಲ್ಲಿ ಮಾನಸ ದೀಪವನ್ನು ಬೇಗ ಬೆಳಗುತ್ತಾರೆ. ಅದಕ್ಕೆ ಸಂತು ಹೆಂಡತಿಯ ಕಾಲು ಎಳೆಯುತ್ತಾರೆ.

ದೀಪ ಹಚ್ಚಲು ತಡಕಾಡಿದ ಸಂತು
ಇತ್ತ ಹೆಂಡತಿ ಸಲೀಸಾಗಿ ದೀಪ ಹಚ್ಚಿದ್ದನ್ನೂ ನೋಡಿದ ಸಂತು ಇಷ್ಟೇನಾ ಇದನ್ನು ನಾನು ಹಚ್ಚಿ ತೋರಿಸುತ್ತೇನೆ ಎಂದು ಹೇಳಿದರು. ಆ ವೇಳೆ ಆತನಿಗೂ ಕಣ್ಣಿಗೆ ಪಟ್ಟಿ ಕಟ್ಟಿ ದೀಪ ಹಚ್ಚಲು ಬಿಡಲಾಯಿತು ಈ ವೇಳೆ ಕೀರ್ತಿ ಸಂತು ದೀಪದ ಹತ್ತಿರ ಬಂದಾಗ ದೀಪವನ್ನು ದೂರ ತೆಗೆದುಕೊಂಡು ಇಡುತ್ತಿದ್ದ. ಆ ವೇಳೆ ಸಂತು ದೀಪ ಇಲ್ಲಿ ತಾನೇ ಇತ್ತು ಎಲ್ಲಿಗೆ ಹೋಯಿತು ಎಂದೆಲ್ಲ ಹೇಳುತ್ತಾನೆ ಅದನ್ನೆಲ್ಲ ನೋಡಿದ ಸಭಿಕರು ನಕ್ಕು ನಕ್ಕು ಸುಸ್ತಾದರು. ಬಳಿಕ ಕಣ್ಣಿನ ಪಟ್ಟಿ ತೆಗೆದ ಸಂತು ಹೇಳುತ್ತಾನೆ ಯಾವುದಾದರೂ ದೀಪ ಕೈ ಟಚ್ ಆಗಿ ಬಿಟ್ಟು ಅದಾಗದೆ ಓಡಿ ಬಿಡುತ್ತಾ ಎಂದೆಲ್ಲ ಹೇಳುತ್ತಾನೆ.

ಸಂತು ಪಜೀತಿಗೆ ನಕ್ಕ ಜಡ್ಜ್‌ಗಳು
ಹೆಂಡತಿ ಏನು ಮಾಡಿದರು ಸಲಿಸಾಗುತ್ತದೆ ನಾನು ಏನು ಮಾಡಲು ಹೋದರು ಉಲ್ಟಾ ಆಗುತ್ತದೆ ಎಂದು ಹೇಳಿದಾಗ ಎಲ್ಲರೂ ಗೊಳ್ಳೆಂದು ನಗುತ್ತಾರೆ. ಬಳಿಕ ಮೈಸೂರು ದಸರಾದ ಬಗ್ಗೆ ಪ್ರೇಮ್ ಹೇಳಿದ ಮಾತುಗಳು ಎಲ್ಲರ ಮನ ಮುಟ್ಟುತ್ತದೆ. ಮೈಸೂರಿನ ದಸರಾವನ್ನು ವರ್ಣಿಸಲು ಅಸಾಧ್ಯ. ಸಣ್ಣ ವಯಸ್ಸಿನಲ್ಲಿ ಬೊಂಬೆ ಎಂದರೆ ಆದರೆ ತೆಗೆದುಕೊಳ್ಳಲು ಶಕ್ತಿ ಇಲ್ಲ. ಮನೆಯಲ್ಲಿ ಸಣ್ಣ ಬೊಂಬೆ ಇದ್ದಾರೆ ಅದನ್ನು ಇತ್ತು ಆಚರಣೆ ಮಾಡುತ್ತಿದ್ದೆವು. ಪ್ರತಿ ಅಂಗಡಿ ಹೋಗಿ ಅಕ್ಕಿಯನ್ನು ಅಮ್ಮ ಸ್ಯಾಂಪಲ್ ನೋಡಬೇಕು ಎಂದು ಹೇಳಿದರು ಕೊಡುತ್ತೀರಾ ಎಂದು ಹೇಳಿ ತೆಗೆದುಕೊಂಡು ಹೋಗಿ ಪ್ರಸಾದ ಮಾಡಿ ಹಂಚಿದ್ದು ಇದೆ. ಇದೆ ತರ ಒಬ್ಬ ಅಕ್ಕಿ ತೆಗೆದುಕೊಳ್ಳುವುದು ಒಬ್ಬ ಬೇಳೆ ತೆಗೆದುಕೊಳ್ಳುವುದು ಹೀಗೆ ಅದರಲ್ಲಿ ಪ್ರಸಾದ ಮಾಡಿ ಎಲ್ಲರಿಗೂ ಹಂಚುತ್ತಿದ್ದೇವು ಎಂದು ಚಿಕ್ಕ ವಯಸ್ಸಿನ ನಡೆದ ಸವಿ ನೆನಪುಗಳನ್ನು ಹೇಳುತ್ತಾರೆ.

ಜಾಮೂನು ಬಾಯಲ್ಲಿ ಇಟ್ಟುಕೊಂಡು ಹಾಡಿದ ರಮ್ಯಾ
ಬಳಿಕ ಜಾಮೂನ್ ಬಾಯಲ್ಲಿ ಇಡ್ಕೊಂಡು ಹಾಡು ಹೇಳಬೇಕು. ಇದು ಈ ಜೋಡಿಗಳ ಟಾಸ್ಕ್ ಅಷ್ಟಕ್ಕೂ ಆ ಜೋಡಿಗಳು ಯಾರು ಗೊತ್ತಾ ಕಂಬದ ರಂಗಯ್ಯ ದಂಪತಿ ಹಾಗೂ ನಿನಾದ ದಂಪತಿ ಈ ಟಾಸ್ಕ್ ಅನ್ನು ನೀಡಲಾಗುತ್ತದೆ. ಆದರೆ ಜಾಮೂನನ್ನು ಕಚ್ಚುವ ಹಾಗೆ ಇಲ್ಲ ಹಾಗೆಯೇ ಖಾಲಿ ಮಾಡುವ ಹಾಗಿಲ್ಲ. ಬಾಯಲ್ಲಿ ಜಾಮೂನ್ ಹಾಗೆಯೇ ಇರಬೇಕು ಹಾಡನ್ನ ಹಾಡುತ್ತಾ ಇರಬೇಕು ಬಳಿಕ ಶ್ವೇತಾ ರಮ್ಯ ಯಾವ ಹಾಡು ಹೇಳಬೇಕು ಎಂಬುವುದನ್ನು ಗುಟ್ಟಾಗಿ ಹೇಳುತ್ತಾರೆ. ಬಳಿಕ ಜಾಮೂನ್ ಬಾಯಿಗೆ ಹಾಕಿ ಕೊಂಡು ಸಾಂಗ್ ಹಾಡುತ್ತಾರೆ ರಮ್ಯ ಅದನ್ನು ನೋಡಿದ ನಿನಾದ ಗೆ ಎನು ಮಾಡಬೇಕು ಎಂದು ತಿಳಿಯುವುದಿಲ್ಲ.