For Quick Alerts
  ALLOW NOTIFICATIONS  
  For Daily Alerts

  ಸುಳ್ಳಿನ ಜಾಡು ಹಿಡಿದು ಹೋದ ಎಜೆಗೆ ಸತ್ಯ ಗೊತ್ತಾಗುತ್ತಾ? ಬಯಲಾಗುತ್ತಾ ದುರ್ಗಾ ಮುಖವಾಡ?

  By ಪೂರ್ವ
  |

  ಹಿಟ್ಲರ್ ಕಲ್ಯಾಣ ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ಅಂದು ಪಾರ್ಟಿಲಿ ನಡೆದಿರುವುದು ಸತ್ಯನೋ...ಸುಳ್ಳೋ ಎಂದು ತಿಳಿದುಕೊಳ್ಳಲು ಎಜೆ ಹೊರಟ್ಟಿದ್ದಾನೆ.

  ಏಜೆ ಅಮ್ಮ, ಲೀಲಾ ಮನೆ ಬಿಟ್ಟು ತೆರಳಿರುವುದನ್ನೆ ನೆನಪಿಸಿಕೊಂಡು ಅಳುತ್ತಿದ್ದಾರೆ, ಈ ವೇಳೆ ತಾಯಿ ಬಳಿ ಆಗಮಿಸಿದ ಎಜೆ ತಾಯಿಗೆ ಸಾಂತ್ವಾನದ ಮಾತುಗಳನ್ನು ಹೇಳಿ ತಾಯಿಗೆ ಊಟ ಮಾಡಲು ಎಷ್ಟೆಲ್ಲ ಒತ್ತಾಯಿಸಿದರು ಊಟ ಮಾಡದೇ ಲೀಲಾ ಮನೆಗೆ ಬರಬೇಕು, ಆಮೇಲೆ ಊಟ ಮಾಡುವೆ ಎಂದು ಅಳುತ್ತಾ ಹೇಳುತ್ತಾರೆ.

  ಇನ್ನೂ ಏಜೆ, ಲೀಲಾಳನ್ನು ವಾಪಸ್ಸು ಮನೆಗೆ ಕರೆತರುವುದಾಗಿ ಅಮ್ಮನಿಗೆ ಹೇಳಿದ್ದಾರೆ. ಇತ್ತ ಲೀಲಾ ಬಹಳ ದುಃಖದಲ್ಲಿ ಇದ್ದಾಳೆ. ತಂದೆಯ ಸ್ಥಿತಿ ನೋಡಲಾಗದೆ ಮನದಲ್ಲಿ ಎಜೆಗೆ ಶಪಿಸುತ್ತಿದ್ದಾಳೆ. ಏಜೆ ಸರಿಯಾಗಿ ನ್ಯಾಯ ಒದಗಿಸಬಹುದಿತ್ತು. ಪರ್ಫೆಕ್ಟ್ ಏಜೆ ಮನೇಲಿ ಇಂತಹ ಅವಘಡ ಸಂಭವಿಸದಂತೆ ನಿಗಾ ವಹಿಸಬಹುದಿತ್ತು. ಇನ್ನೂ ಆ ಮನೆಗೆ ಎಂದಿಗು ಕಾಲಿಡುವುದಿಲ್ಲ. ತಂದೆ ಅವಮಾನವಾದ ಜಾಗದಲ್ಲಿ ಒಂದು ಕ್ಷಣ ಇರುವುದಿಲ್ಲ ಎಂದು ಮನದಲ್ಲಿ ಶಪಥ ಮಾಡಿಕೊಂಡಿದ್ದಾಳೆ ಲೀಲಾ.

  ದುರ್ಗಾಳ ಸುಳ್ಳಿನ ಗೋಪುರಕ್ಕೆ ಬೀಳುತ್ತಾ ಕೊಡಲಿ ಏಟು?

  ದುರ್ಗಾಳ ಸುಳ್ಳಿನ ಗೋಪುರಕ್ಕೆ ಬೀಳುತ್ತಾ ಕೊಡಲಿ ಏಟು?

  ಇತ್ತ ಏಜೆ ತನ್ನ ಪಿ.ಎಯನ್ನೂ ಕರೆದು ಅತ್ಯಾಚಾರ ಆರೋಪ ಮಾಡಿದ ಹುಡುಗಿಯನ್ನು ಕರೆತರುವಂತೆ ಹೇಳಿದ್ದಾನೆ .ಎಲ್ಲಿದ್ದರೂ ಸರಿ, ಕೂಡಲೇ ನನ್ನ ಬಳಿ ಮಾತನಾಡಲು ಬರಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ. ಪಿ.ಎ ಮನದಲ್ಲಿ ಎಜೆಗೆ ಎಕೆ ಈ ದುರಾಲೋಚನೆ, ಮದುವೆಯಾಗಿದ್ದರು ಬೇರೆ ಹುಡುಗಿ ಬೇಕಾ ಎಂದು ಯೋಚನೆಗಳು ಸುಳಿದಾಡುತ್ತಿತ್ತು. ಎಜೆ ಮಾತ್ರ ಈ ಘಟನೆಯ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ಮಾಡಲು ಹೊರಟಿದ್ದಾನೆ. ಈ ಬಗ್ಗೆ ದುರ್ಗಾಗೆ ತಿಳಿದೇ ಇಲ್ಲ. ನಾನು ಮಾಡಿದ್ದೆ ಎಲ್ಲಾ, ಎಜೆ ಮನೆಯಲ್ಲಿ ನನ್ನದೇ ಕಾರುಬಾರು ಎಂದು ಮನದಲ್ಲಿ ಅಹಂಕಾರವನ್ನು ಮೂಡಿಸುತ್ತಿದ್ದಾಳೆ.

  ಜನರ ಆರೋಪಕ್ಕೆ ನೊಂದ ಲೀಲಾ ತಾಯಿ

  ಜನರ ಆರೋಪಕ್ಕೆ ನೊಂದ ಲೀಲಾ ತಾಯಿ

  ಲೀಲಾ ತಾಯಿ ತರಕಾರಿ ಕೊಳ್ಳಲೆಂದು ತರಕಾರಿ ಗಾಡಿ ಬಳಿ ಬಂದಾಗ ಪಕ್ಕದ ಮನೆಯವರು ಅವರನ್ನು ಮಾತನಾಡಿಸದೇ ದೂರ ತಳ್ಳಿದ್ದಾರೆ. ಚುಚ್ಚು ಮಾತುಗಳಿಂದ ಲೀಲಾ ತಾಯಿಗೆ ನೋಯಿಸಿ ಮಾತನಾಡಿಸಿದ್ದಾರೆ. ಗಂಡನ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಇದನ್ನು ಕೇಳಿಸಿ ಕೊಂಡ ಲೀಲಾ ತಾಯಿ ಅಳು ತಡೆಯಲಾಗದೆ ಮನೆಗೆ ಒಡೋಡಿ ಬರುತ್ತಾರೆ. ಇದನ್ನು ಕಂಡ ಲೀಲಾ ಯಾಕೆ ಅಮ್ಮ ಏನಾಯಿತು ಎಂದು ಕೇಳಿದಾಗ ನಡೆದ ವಿಚಾರವನ್ನು ಹೇಳುತ್ತಾಳೆ. ತಾಯಿ ಸಮಾಧಾನ ಪಡಿಸಿದ ಲೀಲಾಳು ಬಹಳ ನೊಂದುಕೊಳ್ಳುತ್ತಾಳೆ. ಇತ್ತ ಲೀಲಾಳ ತಂದೆ ನಿದ್ದೆಯಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಂಡು ಬೇಡ ನನಗೆ ಹೊಡಿಬೇಡಿ ನಾನೇನು ಮಾಡಿಲ್ಲ ಎಂದು ಕನವರಿಸುತ್ತಿರುವುದನ್ನು ಕಂಡು ಲೀಲಾ ಆತಂಕಕ್ಕೀಡಾಗುತ್ತಾಳೆ. ತಂದೆಯನ್ನು ನಿದ್ದೆಯಿಂದ ಎಬ್ಬಿಸಿ ಸಮಾಧಾನ ಮಾಡುತ್ತಾಳೆ.

  ಆರೋಪ ಮಾಡಿದಾಕೆ ಎಜೆ ಮನೆಗೆ ಎಂಟ್ರಿ

  ಆರೋಪ ಮಾಡಿದಾಕೆ ಎಜೆ ಮನೆಗೆ ಎಂಟ್ರಿ

  ಸರಸ್ವತಿ ಸೆಲ್ಪಿ ತೆಗೆದುಕೊಳ್ಳಲೆಂದು ಮನೆಯ ಹೊರಗೆ ಬಂದಾಗ ಲೀಲಾ ತಂದೆಯ ಮೇಲೆ ಆರೋಪ ಮಾಡಿದ ಮಹಿಳೆಯನ್ನು ಕಂಡು ಶಾಕ್ ಆಗುತ್ತಾಳೆ, ಈ ವಿಚಾರವನ್ನು ದುರ್ಗಾ ಬಳಿ ಹೇಳಬೇಕು ಎಂದು ಓಡೋಡಿ ಬರುತ್ತಾಳೆ. ದುರ್ಗಾಳನ್ನು ಕಂಡ ಸರಸ್ವತಿ ಹೇಳುತ್ತಾಳೆ ಆ ಹುಡುಗಿ ಮತ್ತೆ ಬಂದಿದ್ದಾಳೆ ಎಂದು ಏನು ಅರ್ಥವಾಗದ ದುರ್ಗಾ ಏನು ಸರಿಯಾಗಿ ಹೇಳು ಎಂದು ಹೇಳುತ್ತಾಳೆ. ಆಗ ಹೇಳುತ್ತಾಳೆ ಲೀಲಾ ತಂದೆ ಮೇಲೆ ಆರೋಪ ಮಾಡಿದ ಹುಡುಗಿ ಪುನಃ ಮನೆಗೆ ಬಂದಿದ್ದಾಳೆ ಎಂದು ಇದನ್ನು ಕೇಳಿದ ದುರ್ಗಾಗೆ ಶಾಕ್ ಆಗುತ್ತೆ.

  ಕಳಚುತ್ತಾ ದುರ್ಗಾ ಮುಖವಾಡ?

  ಕಳಚುತ್ತಾ ದುರ್ಗಾ ಮುಖವಾಡ?

  ಆಕೆಯನ್ನು ಹುಡುಕಿಕೊಂಡು ಹೋದಾಗ ಅಲ್ಲಿ ಆಕೆ ಇರದ್ದನ್ನು ಕಂಡ ದುರ್ಗಾ, ಸರೂ ನಿನಗೆ ಏನೋ ಭ್ರಮೆಯಾಗಿದೆ ಎಂದು ಹೇಳುತ್ತಾಳೆ. ಇನ್ನೂ ಸರಿಯಾಗಿ ಹುಡುಕುತ್ತಿರಬೇಕಾದರೆ ಸೋಫಮೇಲೆ ಕುಳಿತಿರುವುದು ಕಾಣಿಸುತ್ತದೆ ದುರ್ಗಾಗೆ. ಆಗ ತಿಳಿಯುತ್ತದೆ ಈಕೆಯನ್ನು ಕರೆಸಿಕೊಂಡಿದ್ದು ಎ.ಜೆ ಎಂದು ತಿಳಿದು ಭಯಗೊಂಡ ದುರ್ಗಾ ಎಜೆ ಬರುವ ಮೊದಲು ಆಕೆಯನ್ನು ಬೇರೆಡೆಗೆ ಕರೆದುಕೊಂಡು ಹೋಗಬೇಕು ಎಂದು ಬರುವಾಗ ಎಜೆ ಬರುತ್ತಾರೆ, ಸುಳ್ಳಿನ ಜಾಡು ಹಿಡಿದು ಹೋದ ಎಜೆಗೆ ಇನ್ನಾದರೂ ಸತ್ಯದ ಅರಿವಾಗುತ್ತಾ? ದುರ್ಗಾ ಮುಖವಾಡ ಕಳಚುತ್ತಾ? ಕಾದು ನೋಡಬೇಕಿದೆ

  English summary
  Zee Kannada Serial Hitler kalyana Written Update on May 18th episode. Hear is more details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X