For Quick Alerts
  ALLOW NOTIFICATIONS  
  For Daily Alerts

  ಮತ್ತೆ ಎಲ್ಲರ ಮನೆಯಲ್ಲೂ ಮರಿಕೋಗಿಲೆಗಳ ಕುಹೂ ಕುಹೂ ಗಾನ

  By Suneetha
  |

  ಕರ್ನಾಟಕದ ಅತ್ಯಂತ ಯಶಸ್ವಿ ರಿಯಾಲಿಟಿ ಟ್ಯಾಲೆಂಟ್ ಶೋ ಆದ 'ಸ ರೆ ಗ ಮ ಪ ಲಿಟಲ್ ಚಾಂಪ್ಸ್', ತನ್ನ 12ನೇ ಸೀಸನ್ ನನ್ನು ಆರಂಭಿಸುತ್ತಿದೆ. ಈ ಹಿಂದಿನ ಸೀಸನ್ ಗಳ ಮೂಲಕ ಗಾಯನ ಲೋಕಕ್ಕೆ ಅಮೂಲ್ಯ ರತ್ನಗಳನ್ನು ಸಮರ್ಪಿಸುವ 'ಸ ರೆ ಗ ಮ ಪ' ಸಂಗೀತ ಶೋ ಒಂದು ಉತ್ಕೃಷ್ಟ ವೇದಿಕೆ ಎನಿಸಿಕೊಂಡಿದೆ.

  'ಡಾನ್ಸ್ ಕರ್ನಾಟಕ ಡಾನ್ಸ್' ಕಾರ್ಯಕ್ರಮದ ಯಶಸ್ಸಿನ ನಂತರ, ಮತ್ತೊಮ್ಮೆ ನಟಿ ಕಮ್ ನಿರೂಪಕಿ ಅನುಶ್ರೀ ಅವರು ಎಂದಿನಂತೆ 'ಸ ರೆ ಗ ಮ ಪ' ಕಾರ್ಯಕ್ರಮದ ನಿರೂಪಣೆಯ ಹೊಣೆ ಹೊತ್ತಿದ್ದಾರೆ.['ಜೀ ಕನ್ನಡ' ಸಕ್ಸಸ್ ಸೂತ್ರಧಾರ ರಾಘವೇಂದ್ರ ಹುಣಸೂರು ಎಕ್ಸ್ ಕ್ಲೂಸಿವ್ ಸಂದರ್ಶನ]

  ತೀರ್ಪುಗಾರರಾಗಿ ಸೂಪರ್ ಹಿಟ್ ಕಾಂಬಿನೇಷನ್ ಎನಿಸಿಕೊಂಡಿರುವ ಗಾಯಕ ವಿಜಯ್ ಪ್ರಕಾಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಗಾಯಕ ರಾಜೇಶ್ ಕೃಷ್ಣನ್ ಅವರು ಮಕ್ಕಳ ಬೆಳವಣಿಗೆಗೆ ಕಾರಣಕರ್ತರಾಗಲಿದ್ದು, ಸೀಸನ್ 12ರ 'ಲಿಟಲ್ ಚಾಂಪ್ಸ್' ಯಾರಾಗುತ್ತಾರೆ ಅನ್ನೋದನ್ನು ನಿರ್ಧರಿಸಲಿದ್ದಾರೆ.

  'ಸ ರೆ ಗ ಮ ಪ' ಸೀಸನ್ 10 ಮತ್ತು 11ರಲ್ಲಿ ಈ ಮೂರು ಜನ ತೀರ್ಪುಗಾರರು ಹಾಗೂ ಅನುಶ್ರೀ ಅವರ ಕಾಂಬಿನೇಷನ್ ಜನರಿಗೆ ಬಲು ಪ್ರಿಯವಾಗಿದ್ದು, ಇದೀಗ ಮತ್ತೊಮ್ಮೆ ಅದರ ಮುಂದುವರೆದ ಭಾಗ ಜನರ ಮುಂದೆ ಬರಲಿದೆ. ಮುಂದೆ ಓದಿ....

  ವಿಶೇಷ ಸೀಸನ್

  ವಿಶೇಷ ಸೀಸನ್

  ಈಗಾಗಲೇ ಪ್ರೊಮೋ ಕೂಡ ರಿಲೀಸ್ ಆಗಿದ್ದು, ಕೊಂಚ ವಿಭಿನ್ನ ಅಂತೆನಿಸುತ್ತದೆ. ಇನ್ನು ಈ ಸೀಸನ್ ಕೊಡೋ ಮಜಾನೇ ಬೇರೆ ಎಂದು ಹೇಳಹೊರಟಿರುವ ತಂಡ, ಕನ್ನಡ ಸರೆಗಮಪದ ಇತಿಹಾಸದಲ್ಲೇ ಹಿಂದೆಂದೂ ಕಾಣದ ವಿಶೇಷತೆಯೊಂದನ್ನ ತರಲಿದೆ.[ಕನ್ನಡ ಕಿರುತೆರೆ ಇತಿಹಾಸದಲ್ಲಿ ಜೀ ಕನ್ನಡ ಹೊಸ ಮೈಲಿಗಲ್ಲು.!]

  20 ಜ್ಯೂರಿ ಪ್ಯಾನೆಲ್

  20 ಜ್ಯೂರಿ ಪ್ಯಾನೆಲ್

  ಪ್ರತಿ ಕಂತಿನಲ್ಲೂ ಸಂಗೀತ ಲೋಕದ ಪಂಡಿತರೆನಿಸಿಕೊಂಡಿರುವ ಗಾಯಕರು, ಸಂಗೀತ ನಿರ್ದೇಶಕರು, ತಂತ್ರಜ್ಞರು, ವಾದ್ಯದವರು ಹೀಗೆ ಸಂಗೀತದ ವಿವಿಧ ಮಜಲುಗಳಲ್ಲಿ ಸಾಧನೆಗೈದಿರುವ 20 ಜನರ ಜ್ಯೂರಿ ಪ್ಯಾನೆಲ್ ಮಕ್ಕಳ ಗಾಯನವನ್ನ ನೋಡಿ ತೀರ್ಪು ನೀಡಲಿದ್ದಾರೆ. ಹಾಗಾದರೆ, ತೀರ್ಪುಗಾರರ ಪಾತ್ರವೇನು, ಜ್ಯೂರಿ ಪಾತ್ರವೇನು, ಹೇಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ, ಹೇಗೆ ಎಲಿಮಿನೇಷನ್ ನಡೆಯುತ್ತದೆ ಎನ್ನುವುದು ಕಾರ್ಯಕ್ರಮದಲ್ಲೇ ಬಹಿರಂಗವಾಗಲಿದೆ.[ಚಿತ್ರಗಳು: 'ಜೀ ಕನ್ನಡ' ದಶಕದ ಸಂಭ್ರಮದ ವರ್ಣರಂಜಿತ ಸಮಾರಂಭ]

  ಸದ್ಯದಲ್ಲೇ ಮೆಗಾ ಆಡಿಷನ್

  ಸದ್ಯದಲ್ಲೇ ಮೆಗಾ ಆಡಿಷನ್

  ಕರ್ನಾಟಕದಾದ್ಯಂತ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ, ಸುಮಾರು 5000 ಮಕ್ಕಳ ಆಡಿಷನ್ ಮಾಡಿ, ಅದರಲ್ಲಿ 30 ಗಾಯಕರನ್ನ ಆಯ್ಕೆ ಮಾಡಲಾಗಿದೆ. ಇನ್ನು ಮೆಗಾ ಆಡಿಷನ್ ನಲ್ಲಿ 15 ಮಕ್ಕಳನ್ನು ಆಯ್ಕೆ ಮಾಡುವ ಯೋಜನೆ ಇದೆ.[ಚಿತ್ರಗಳು: ಜೀ ಕನ್ನಡ ದಶಕದ ಸಂಭ್ರಮದಲ್ಲಿ ತಾರೆಯರ ರಂಗು]

  ಪುಟ್ಟ ಮಕ್ಕಳು

  ಪುಟ್ಟ ಮಕ್ಕಳು

  ಕಳೆದ ಸೀಸನ್ ಗಳಂತೆ ಈ ಬಾರಿಯೂ 5 ವರ್ಷದಿಂದ 13 ವರ್ಷ ವಯಸ್ಸಿನ ಮಕ್ಕಳು ಆಯ್ಕೆಯಾಗಿದ್ದು, ಮುದ್ದು ಧ್ವನಿಯ ಮುಗ್ಧ ಮಕ್ಕಳ ಗಾಯನ ಕೇಳುವ ಅವಕಾಶ ಮಗದೊಮ್ಮೆ ನಿಮಗೆ ದಕ್ಕಲಿದೆ. ಇನ್ನು ಪುಟ್ಟ-ಪುಟ್ಟ ಮಕ್ಕಳು ಹಿಂದೆಂದಿಗಿಂತಲೂ ಕಠಿಣ ಸ್ಪರ್ಧೆ ಹಾಗೂ ಪರೀಕ್ಷೆ ಎದುರಿಸಲು ಸಿದ್ಧರಾಗಲಿದ್ದಾರೆ.

  ಕನ್ನಡಿಗರ ಅಚ್ಚು-ಮೆಚ್ಚಿನ ಚಾನೆಲ್

  ಕನ್ನಡಿಗರ ಅಚ್ಚು-ಮೆಚ್ಚಿನ ಚಾನೆಲ್

  'ಜೀ ಕನ್ನಡ' ವಾಹಿನಿಯು ಕಳೆದ ಹಲವು ವರ್ಷದಿಂದ ಜವಾಬ್ದಾರಿಯುತ ಮನೋರಂಜನೆಗೆ ಒತ್ತು ನೀಡಿ, ಸದಭಿರುಚಿ ಕಾರ್ಯಕ್ರಮಗಳನ್ನೇ ಮಾಡಿಕೊಂಡು ಬಂದಿದ್ದು, ಕನ್ನಡಿಗರು ಅದನ್ನು ಸಹೃದಯದಿಂದ ಸ್ವೀಕರಿಸಿದ್ದಾರೆ. ಹಾಗೆ ಈ ಕಾರ್ಯಕ್ರಮದಲ್ಲಿ ಕೂಡ ಆರೋಗ್ಯಕರ ಮನೋರಂಜನೆಯ ಮೂಲಕ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗುವ ಇರಾದೆ 'ಸ ರೆ ಗ ಮ ಪ' ತಂಡದ್ದು.

  ಡ್ರಾಮಾ ಮುಗಿತು

  ಡ್ರಾಮಾ ಮುಗಿತು

  ಈಗಾಗಲೇ ಡ್ರಾಮಾ ಜೂನಿಯರ್ಸ್ ವೇದಿಕೆಯಲ್ಲಿ ಮಕ್ಕಳ ಡೈಲಾಗುಗಳು, ತುಂಟಾಟಗಳು, ಮುಗ್ಧ ಮಾತುಗಳನ್ನ ನೋಡಿ ಕೇಳಿ ಆನಂದಿಸಿರುವ ಕನ್ನಡಿಗರು, ಇನ್ನು ಮುಂದೆ ತಮ್ಮದೇ ಧಾಟಿಯಲ್ಲಿ ಹಾಡುವ ಮಕ್ಕಳ ಧ್ವನಿಯಲ್ಲಿನ ಮಾಧುರ್ಯತೆಯ ಸವಿಯನ್ನ ಸವಿಯಬಹುದಾಗಿದೆ.

  ಯಾವಾಗ ಆರಂಭ

  ಯಾವಾಗ ಆರಂಭ

  'ಸ ರೆ ಗ ಮ ಪ' ಲಿಟಲ್ ಚಾಂಪ್ಸ್ ನ 12ನೇ ಸೀಸನ್ ಇದೇ ಶನಿವಾರ ಅಂದರೆ, ಸೆಪ್ಟೆಂಬರ್ 17ರಿಂದ, ರಾತ್ರಿ 7.30ಕ್ಕೆ ಎಲ್ಲರ ಮನೆಗಳಿಗೆ ಬರಲಿದೆ. ಸಂಗೀತ ಚೈತ್ರಕಾಲ ಮತ್ತೊಮ್ಮೆ ಪ್ರಾರಂಭವಾಗಲಿದ್ದು, ಮರಿಕೋಗಿಲೆಗಳ ಕುಹೂ ಕುಹೂ ನಾದ ಇನ್ನು ಮುಂದೆ ಪ್ರತಿ ವೀಕೆಂಡ್ ಎಲ್ಲರ ಮನೆ-ಮನೆಯಲ್ಲೂ ಮೊಳಗಲಿದೆ.

  English summary
  Celebrating the 12th Season of Karnataka’s biggest singing talent show 'Sa Re Ga Ma Pa li’l Champs season 12'. 'Sa Re Ga Ma Pa li’l Champs', the longest running music reality show in the history of Indian television, is back in a new avatar. This show is one such platform which nurtures the hidden talents of budding singers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X