For Quick Alerts
  ALLOW NOTIFICATIONS  
  For Daily Alerts

  ಪಬ್ಲಿಕ್‌ನಲ್ಲಿ ಸ್ಮೋಕಿಂಗ್; ಸಲ್ಮಾನ್ ಖಾನ್‌ಗೆ ದಂಡ

  By Rajendra
  |

  ಪಂಜಾಬ್‌ನ ಪಾಟಿಯಾಲಾದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಈ ವಿಷಯ ನಟ ಸಲ್ಮಾನ್ ಖಾನ್‌ಗೆ ಗೊತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಅವರು ಕೂಲಾಗಿ ಕಡ್ಡಿ ಗೀಚಿ ಸಿಗರೇಟ್ ಹಚ್ಚಿ ಧಂ ಎಳೆದು ರಿಲ್ಯಾಕ್ಸ್ ಆಗಿದ್ದಾರೆ. ಅಷ್ಟೇ ಕೂಲಾಗಿ ಅಲ್ಲಿನ ಅಧಿಕಾರಿಗಳು ರು.200 ದಂಡ ವಿಧಿಸಿದ್ದಾರೆ.

  'ಬಾಡಿಗಾರ್ಡ್' ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ಸಲ್ಲು ಪಬ್ಲಿಕ್‌ನಲ್ಲಿ ಧಂ ಎಳೆಯುತ್ತಿದ್ದ ಚಿತ್ರಗಳು ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಇದರ ಆಧಾರವಾಗಿ ಅಲ್ಲಿನ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ವಿಶೇಷ ಅಂದರೆ ಅಂದು ವಿಶ್ವ ತಂಬಾಕು ರಹಿತ ದಿನ ಆಚರಿಸಲಾಗುತ್ತಿತ್ತು.

  ಒಂದು ವಾರದ ಹಿಂದೆಯೇ ಬಾಡಿಗಾರ್ಡ್ ಚಿತ್ರೀಕರಣಕ್ಕಾಗಿ ಸಲ್ಲು ಇಲ್ಲಿಗೆ ಆಗಮಿಸಿದ್ದರು. ಇಲ್ಲಿನ ಹೋಟೆಲ್ ನೀಮ್‌ರಾಣಾದಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದ ಸಂಬಂಧ ಸಲ್ಲುಗೆ ದಂಡ ವಿಧಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೊಮ್ಮೆ 2009ರಲ್ಲೂ ಹೀಗೆಯೇ ಆಗಿತ್ತು. (ಏಜೆನ್ಸೀಸ್)

  English summary
  Bollywood actor Salman Khan has been fined of Rs. 200 for smoking in a public place while shooting for his film Bodyguard in Patiala, Punjab. Patiala district administration issued a notice to Salman Khan late Tuesday (May 31), which was coincidentally observed as World No Tobacco Day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X