For Quick Alerts
  ALLOW NOTIFICATIONS  
  For Daily Alerts

  ಬ್ರಿಟಿಷ್ ಮಾಡೆಲ್ ಜೊತೆ ಸಲ್ಮಾನ್ ಖಾನ್‌‍ಗೆ ಲವ್ವೋ ಲವ್ವು!

  By Rajendra
  |

  ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್‌ಗೆ ಈಗ ಬ್ರಿಟಿಷ್ ಮಾಡೆಲ್ ಹಾಗೂ ನಟಿ ಹಾಝಲ್ ಮೇಲೆ ಕಣ್ಣುಬಿದ್ದಿದೆ. ಈಗ ಆಕೆಯ ಹಿಂದೆ ಪ್ರೀತಿ ಪ್ರೇಮ ಪ್ರಣಯ ಎಂದು ಸಲ್ಲು ಬಿದ್ದಿದ್ದಾರೆ ಎಂಬುದು ಬಾಲಿವುಡ್‌‍ನ ಲೇಟೆಸ್ಟ್ ಸುದ್ದಿ. ಅತುಲ್ ಅಗ್ನಿಹೋತ್ರಿ ನಿರ್ದೇಶನದ 'ಬಾಡಿಗಾರ್ಡ್' ಚಿತ್ರದಲ್ಲಿ ಹಾಝಲ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ನಾಯಕ ನಟ ಸಲ್ಮಾನ್ ಖಾನ್.

  ಚಿತ್ರೀಕರಣ ಮುಗಿಯುತ್ತಿದ್ದಂತೆ ಸಲ್ಲು ಮತ್ತು ಹಾಝಲ್ ಒಟ್ಟಿಗೆ ಕಾಣೆಯಾಗುತ್ತಿದ್ದರಂತೆ. ಒಬ್ಬರ ಕಂಪನಿಯನ್ನು ಮತ್ತೊಬ್ಬರು ಸಖತ್ ಇಷ್ಟಪಡುತ್ತಿರುವುದಾಗಿ 'ಬಾಡಿಗಾರ್ಡ್' ಚಿತ್ರತಂಡದ ಕೆಲವರು ಸುದ್ದಿಯನ್ನು ಲೀಕ್ ಮಾಡಿದ್ದಾರೆ. ಮುಂದೇನಾಗುತ್ತದೋ ಎಂದು ಇವರಿಬ್ಬರ ತಿರುಗಾಟವನ್ನ್ನು ಬಾಲಿವುಡ್ ನಿಬ್ಬೆರಗಾಗಿ ನೋಡುತ್ತಿದೆ.

  ಬಾಲಿವುಡ್‌ಗೆ ಯಾರೇ ಹೊಸ ಬೆಡಗಿ ಅಡಿಯಿಟ್ಟರೂ ಅವರೆಲ್ಲಾ ಸಲ್ಮಾನ್‌ಗೆ ತುಂಬಾ ಹತ್ತಿರದರವಾಗುತ್ತಾರೆ. ಆದರೆ ಹಾಝಲ್ ವಿಷಯದಲ್ಲಿ ಹಾಗಾಗಲಿಲ್ಲ. ಇಬರಿಬ್ಬರ ನಡುವೆ ಲವ್‌ಗಿಂತಲೂ ಮುಖ್ಯವಾಗಿ ಸ್ನೇಹ ಸಂಬಂಧವಿದೆ ಎಂದು ಕೆಲವರು ವಿಭಿನ್ನ ಅರ್ಥ ಕಲ್ಪಿಸಿದ್ದಾರೆ. ಪುಣೆಯಲ್ಲಿ ಚಿತ್ರೀಕರಣ ನಡೆಯಬೇಕಾದರೆ ಹಾಝಲ್‌ರನ್ನು ಸಲ್ಲು ಬೈಕ್‌ನಲ್ಲಿ ಊರೆಲ್ಲಾ ಸುತ್ತಾಡಿಸಿದ್ದು ಮಾತ್ರ ಇನ್ನೂ ಗುಸುಗುಸು ಎನ್ನುತ್ತಲೇ ಇದೆ.

  English summary
  Salman Khan again falls for a girl. Well, it is none other than British Model Hazel, co-star to the actor in the upcoming film Bodyguard. Looks like Salmans shell to heart has been broken by Hazel's but shell.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X