For Quick Alerts
  ALLOW NOTIFICATIONS  
  For Daily Alerts

  ಅಮಿತಾಬ್ ಜೋಡಿಯಾಗಿ ಶ್ರೀದೇವಿ ರೀ ಎಂಟ್ರಿ ?

  By Mahesh
  |

  14 ವರ್ಷ ಗೃಹಸ್ಥ ಜೀವನದ ನಂತರ ಅಭಿನಯದತ್ತ ಮತ್ತೆ ಮೋಹಕ ತಾರೆ ಶ್ರೀದೇವಿ ಮರಳಿದ್ದಾರೆ. ನಿರ್ದೇಶಕ ಆರ್ ಬಾಲ್ಕಿ ಅವರ ಪತ್ನಿ ಗೌರಿ ಶಿಂಧೆ ನಿರ್ದೇಶನದ ಇಂಗ್ಲೀಷ್ ವಂಗ್ಲೀಷ್ ಚಿತ್ರಕ್ಕೆ ಶ್ರೀದೇವಿ ಬಣ್ಣ ಹಚ್ಚುವುದು ಖಾತ್ರಿಯಾಗಿದೆ.

  ಮಿ. ಇಂಡಿಯಾ ಭಾಗ 2 ಮೂಲಕ ಶ್ರೀದೇವಿ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡ್ತಾರೆ ಎನ್ನಲಾಗಿತ್ತು. ಆದರೆ, ಯಾಕೋ ಚಿತ್ರ ಇನ್ನು ಮೇಲೆಕ್ಕೆದ್ದಿಲ್ಲ. ಆದರೆ, ಪ್ರತಿಭಾವಂತ ನಿರ್ದೇಶಕ ಬಾಲ್ಕಿಗೆ ಕಾಲ್ ಶೀಟ್ ನೀಡಿರುವ ಶ್ರೀದೇವಿ, ಇಂಗ್ಲೀಷ್ ವಿಂಗ್ಲೀಷ್ ಚಿತ್ರಕ್ಕೆ ಸಹಿ ಹಾಕಿದ್ದಾರೆ.

  ಅಮಿತಾಬ್ ಬಚ್ಚನ್ ಜೋಡಿಯಾಗಿ ಈ ಚಿತ್ರದಲ್ಲಿ ನಟಿಸುವ ಸಾಧ್ಯತೆಯಿದೆ. ಇಬ್ಬರು ಹೆಣ್ಣು ಮಕ್ಕಳ ತಾಯಿಯಾದ 47 ವರ್ಷದ ಶ್ರೀದೇವಿ, ನವರಸ ನಾಯಕಿಯಾಗಿ ಮೆರೆದವರು, ಅವರ ಅಭಿಮಾನಿಗಳು ಶ್ರೀದೇವಿ ರೀ ಎಂಟ್ರಿಗಾಗಿ ಕಾತುರದಿಂದ ಕಾದಿದ್ದಾರೆ.

  ಪ್ರಥಮ ಬಾರಿಗೆ ಮಹಿಳಾ ನಿರ್ದೇಶಕಿ ಕೈ ಕೆಳಗೆ ಅಭಿನಯಿಸುತ್ತಿರುವ ಶ್ರೀದೇವಿ, 1997ರಲ್ಲಿ ಜುದಾಯಿ ಚಿತ್ರದ ನಂತರ ಹಿರಿತೆರೆಯತ್ತ ಮುಖ ಮಾಡಿರಲಿಲ್ಲ. ಪತಿ ಬೋನಿ ಕಪೂರ್ ಚಿತ್ರ ನಿರ್ಮಾಣದ ಬಗ್ಗೆ ಕೂಡಾ ಹೆಚ್ಚಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಮಾಲಿನಿ ಅಯ್ಯರ್ ಆಗಿ ಸಹಾರಾ ಟಿವಿಯಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ಶ್ರೀದೇವಿ ಮತ್ತೆ ಬಣ್ಣ ಹಚ್ಚಿರಲಿಲ್ಲ. ರೀ ಎಂಟ್ರಿ ಕೊಡುತ್ತಿರುವ ಶ್ರೀದೇವಿ, ಮಾಧುರಿಯಂತೆ ಕೋಟಿಗಟ್ಟಲೆ ಸಂಭಾವನೆ ಕೇಳಿಲ್ಲ ಎಂಬುದು ನಿರ್ಮಾಪಕರ ಪಾಲಿಗೆ ಸಿಹಿ ಸುದ್ದಿ.

  English summary
  The diva is all set to make a comeback after 14 years. Sridevi will soon start shooting for the film English Vinglish to be directed by Gauri Shinde, wife of R. Balki.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X