»   »  ಆಸ್ಟ್ರೇಲಿಯಾ ಗೌರವ ಡಾಕ್ಟರೇಟ್ ಒಲ್ಲೆ ಎಂದ ಬಿಗ್ ಬಿ

ಆಸ್ಟ್ರೇಲಿಯಾ ಗೌರವ ಡಾಕ್ಟರೇಟ್ ಒಲ್ಲೆ ಎಂದ ಬಿಗ್ ಬಿ

Posted By:
Subscribe to Filmibeat Kannada
Amitabh rejects Australian doctorate
ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸುವ ಮತ್ತೊಂದು ಅವಕಾಶಕ್ಕಾಗಿ ತಾನು ಕಾಯುವುದಾಗಿ ಕ್ವೀನ್ಸ್ ಲ್ಯಾಂಡ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಹೇಳಿದೆ.

ಇತ್ತೀಚಿಗೆ ಭಾರತೀಯರ ಮೇಲಾಗಿರುವ ಜನಾಂಗೀಯ ಹಲ್ಲೆ ಪ್ರಕರಣಗಳಿಂದ ಮನನೊಂದಿದ್ದ ಅಮಿತಾಬ್ ಕ್ವೀನ್ಸ್ ಲ್ಯಾಂಡ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಕೊಡಲು ಬಯಸಿದ್ದ ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಲು ನಿರಾಕರಿಸಿದ್ದರು. ಬ್ರಿಸ್ಬೇನ್ ನಲ್ಲಿರುವ ಈ ವಿಶ್ವವಿದ್ಯಾಲಯವು, ಜಾಗತಿಕ ಮನೋರಂಜನಾ ಕ್ಷೇತ್ರಕ್ಕೆ ಅಮಿತಾಬ್ ನೀಡಿರುವ ಕಾಣಿಕೆಯನ್ನು ಗೌರವಿಸಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲು ನಿರ್ಧರಿಸಿತ್ತು.

''ಭಾರತೀಯ ಮೇಲೆ ನಡೆಯುತ್ತಿರುವ ಜನಾಂಗೀಯ ಹಲ್ಲೆಗೆ ತಾನು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದೆ. ಇದು ನನ್ನ ವೈಯಕ್ತಿಕ ನಿರ್ಧಾರ. ನನ್ನ ದೇಶದ ಪ್ರಜೆಗಳನ್ನು ಅಗೌರವವಾಗಿ ಕಾಣುವ ಕಡೆ ನಾನು ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲ '' ಎಂದು ಅಮಿತಾಬ್ ಸುದ್ದಿಗಾರರಿಗೆ ಹೇಳಿದ್ದಾರೆ. ಬ್ರಿಸ್ಬೇನ್ ನಲ್ಲಿ ನಡೆಯುವ ಚಲನ ಚಿತ್ರೋತ್ಸವದಲ್ಲೂ ಪಾಲ್ಗೊಳ್ಳುವುದು ಅನುಮಾನ ಎಂದು ಅಮಿತಾಬ್ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada