»   » ಅಮೀರ್ ಖಾನ್ ಗೆ ಪಿತೃ ವಿಯೋಗ

ಅಮೀರ್ ಖಾನ್ ಗೆ ಪಿತೃ ವಿಯೋಗ

Posted By:
Subscribe to Filmibeat Kannada

ಹೆಸರಾಂತ ಚಿತ್ರ ನಿರ್ಮಾಪಕ ಮತ್ತು ಬಾಲಿವುಡ್ ನಟ ಅಮೀರ್ ಖಾನ್ ಅವರ ತಂದೆ ತಾಹಿರ್ ಹುಸೈನ್ ಇಂದು ಬೆಳಗ್ಗೆ ಮುಂಬೈ ನಲ್ಲಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು. ಅವರು ಪತ್ನಿ, ಇಬ್ಬರು ಪುತ್ರರು ( ಅಮೀರ್ ಖಾನ್, ಫೈಸಲ್ ಖಾನ್) ಮತ್ತು ಇಬ್ಬರು ಪುತ್ರಿಯರನ್ನು ( ನಿಖತ್ ಖಾನ್, ಫಾರ್ಹತ್ ಖಾನ್) ಅಗಲಿದ್ದಾರೆ. ಅಮೀರ್ ಖಾನ್ ಅವರ ಬಾಂದ್ರ ನಿವಾಸದಲ್ಲಿ ಅವರು ಕೊನೆಯುಸಿರೆಳೆದರು.

ತಾಹಿರ್ ಹುಸೈನ್ ಅವರು ಕಾರವಾನ್, ಅನಾಮಿಕ, ದುಲಾ ಬಿಕ್ತಾ ಹೈ, ಜಕ್ಮೀ, ಹಮ್ ಹೇ ರಾಹಿ ಪ್ಯಾರ್ ಕೆ ಮುಂತಾದ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದರು. 1990 ರಲ್ಲಿ ಪುತ್ರ ಅಮೀರ್ ಖಾನ್ ಗಾಗಿ ' ತುಮ್ ಮೇರೆ ಹೋ' ಚಿತ್ರ ನಿರ್ದೇಶಿಸಿದ್ದರು. ಭಾರತದಲ್ಲಿ ಹುಟ್ಟಿ ಬೆಳೆದಿದ್ದ ಹುಸೈನ್ ಮೌಲಾನ ಅಬ್ದುಲ್ ಕಲಾಮ್ ಆಜಾದ್ ವಂಶಸ್ಥರಾಗಿದ್ದರು. ಅಮೀರ್ ಖಾನ್ ತನ್ನ ಪತ್ನಿ ಕಿರಣ್ ರಾವ್ ಜೊತೆ ಸದ್ಯ ಅಮೆರಿಕಾದಲ್ಲಿ ಸಿಂದ್ರೆನ್ ಉತ್ಸವದಲ್ಲಿದ್ದು ಬುಧವಾರ ಮುಂಜಾನೆ ( ಫೆ .3 ) ಮುಂಬೈ ತಲುಪಲಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada