For Quick Alerts
  ALLOW NOTIFICATIONS  
  For Daily Alerts

  ಈ ನಟಿಗೆ ದಿನಕ್ಕೆ 20 ಸಿಗರೇಟ್ ಸೇದಿಸುತ್ತಿದ್ದಾರೆ!

  By Rajendra
  |

  ಈಕೆಯ ಹೆಸರು ಮಧುಶಾಲಿನಿ. ದಕ್ಷಿಣ ಭಾರತದ ಕೆಲವು ಚಿತ್ರಗಳಲ್ಲಿ ಸೆಕೆಂಡ್ ಗ್ರೇಡ್ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದಾರೆ. ಈಕೆಗೆ ರಾಮ್ ಗೋಪಾಲ್ ವರ್ಮಾ ಅವರ 'ಡಿಪಾರ್ಟ್‌ಮೆಂಟ್' ಚಿತ್ರದಲ್ಲಿ ಅಭಿನಯಿಸುವ ಮಸ್ತ್ ಚಾನ್ಸ್ ಸಿಕ್ಕಿದೆ. ಆದರೆ ಈಕೆಯ ಗೋಳು ಮಾತ್ರ ಕೇಳೋರಿಲ್ಲ.

  ಈ ಚಿತ್ರದಲ್ಲಿ ಮಧುಶಾಲಿನಿ ಅವರದು ಗ್ಯಾಂಗ್ ಸ್ಟರ್ ಪಾತ್ರ. ಈ ಚಿತ್ರದಲ್ಲಿ ಸಿಗರೇಟ್‌ಗಳನ್ನು ಸೇದುತ್ತಾ ಮಧು ಕಾಣಿಸುತ್ತಾರೆ. ಈಕೆಯ ಪಾತ್ರದ ಭಾಗವಾಗಿ ದಿನವೊಂದಕ್ಕೆ 20 ಸಿಗರೇಟ್‌ಗಳನ್ನು ಸೇದಿಸುತ್ತಿದ್ದಾರಂತೆ ರಾಮ್ ಗೋಪಾಲ್ ವರ್ಮ.

  ಈ ಬಗ್ಗೆ ಮಧುಶಾಲಿನಿ ಮಾತನಾಡುತ್ತಾ, ಸಿಗರೇಟ್ ವಾಸನೆ ಎಂದರೆ ನನಗೆ ಆಗಲ್ಲ. ಆದರೇನು ಮಾಡುವುದು ಪಾತ್ರಕ್ಕೆ ನ್ಯಾಯ ಸಲ್ಲಿಸಲು ದಿನಕ್ಕೆ ಸರಿಸುಮಾರು 20 ಸಿಗರೇಟ್‌ಗಳನ್ನು ಸೇದಬೇಕಾಗಿದೆ. ಅಭಿನಯಿಸುವುದಕ್ಕಿಂತ ಈ ರೀತಿ ಸಿಗರೇಟ್‌ಗಳನ್ನು ಸೇದುವುದೇ ತುಂಬಾ ಕಷ್ಟವಾಗಿದೆ ಎಂದು ತಮ್ಮ ಕಷ್ಟ ಸುಖ ಹೇಳಿಕೊಂಡಿದ್ದಾರೆ.

  ರಾಮ್ ಗೋಪಾಲ್ ವರ್ಮಾಗೂ ತನಗೂ ಸಂಬಂಧವಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ವೃತ್ತಿಯಲ್ಲಿ ಒಬ್ಬರಿಗೊಬ್ಬರು ಆತ್ಮೀಯವಾಗಿರಬೇಕಾಗುತ್ತದೆ. ಅದನ್ನೇ ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ ಮಧು. ಈ ಚಿತ್ರದಲ್ಲಿ ಮಧು ಶಾಲಿನಿ ಜೊತೆಗೆ ರಾಣಾ ದಗ್ಗುಬಾಟಿ, ಮಂಚು ಲಕ್ಷ್ಮಿ ಸೇರಿದಂತೆ ಅಮಿತಾಬ್ ಬಚ್ಚನ್, ಸಂಜಯ್ ದತ್ ಪ್ರಮುಖ ಪಾತ್ರಗಳನ್ನು ಪೋಷಿಸುತ್ತಿದ್ದಾರೆ. (ಏಜೆನ್ಸೀಸ್)

  English summary
  Actress Madhushalini is hoping her RGV directed Department is completed soon, so that the hard time RGV is giving her will stop.The non-smoking Madhushalini plays a female gangster in the film and is required to smoke cigars.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X