»   » ಶಾಹಿದ್ ಈಗ ಏಷ್ಯಾದ ಅತ್ಯಂತ ಶಾಕಾಹಾರಿ ಕಾಮ ಪುರುಷ

ಶಾಹಿದ್ ಈಗ ಏಷ್ಯಾದ ಅತ್ಯಂತ ಶಾಕಾಹಾರಿ ಕಾಮ ಪುರುಷ

Posted By:
Subscribe to Filmibeat Kannada

ಬಾಲಿವುಡ್ ನಟ ಶಾಹಿದ್ ಕಪೂರ್ ಈಗ ವೆಜಿಟೇರಿಯನ್ ಮನ್ಮಥ. ಅದರಲ್ಲೂ ಏಷ್ಯಾದಶಾಕಾಹಾರಿ ಮಹಾನ್ ಕಾಮ ಪುರುಷ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಪೆಟಾ ಏಷ್ಯಾ ಪೆಸಿಫಿಕ್ ಡಾಟ್ ಕಾಮ್ ಶಾಹಿದ್‌ಗೆ ಈ ವರ ಪ್ರಸಾದಿಸಿದೆ.

ಸಂಸ್ಥೆ ನಡೆಸಿದ ಚುನಾವಣೆಯಲ್ಲಿ ಶಾಹಿದ್‌‍ಗೆ ಏಷ್ಯಾದ ಅತ್ಯಂತ ಶಾಕಾಹಾರಿ ಸೆಕ್ಸಿ ಪುರುಷನಾಗಿ ಆಯ್ಕೆಯಾಗಿದ್ದಾನೆ. ಕೈಯಲ್ಲಿ ಕಾಮ ಪುರುಷನ ಟೈಟಲ್ ಹಿಡಿದಿರುವ ಶಾಹಿದ್ ಈಗ ಭೂಮಿ ಮೇಲೆ ನಾನಿಲ್ಲ ಮನಸು ಕೈಗೆ ಸಿಗ್ತಿಲ್ಲ ಎಂದು ಹಾಡುವುದೊಂದು ಬಾಕಿ ಇದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಹಿದ್, ಸಸ್ಯಾಹಾರದ ಮಹತ್ವವನ್ನು ನಾನೂ ಯಾವಾಗಲೂ ಪ್ರತಿಪಾದಿಸುತ್ತಿರುತ್ತೇನೆ.ಅತ್ಯಂತ ಸೆಕ್ಸಿ ಪುರುಷ ಎಂದು ಆಯ್ಕೆಯಾಗಿರುವುದು ಖುಷಿ ಕೊಟ್ಟಿದೆ. ಈ ಮೂಲಕ ಸಸ್ಯಾಹಾರದ ಮಹತ್ವವನ್ನು ಸಾರಿದಂತಾಗಿದೆ ಎಂದಿದ್ದಾರೆ.

ಗಾಯಕಿ ಫಾಯೆ ವಾಂಗ್ ಅತ್ಯಂತ ಶಾಕಾಹಾರಿ ಸೆಕ್ಸಿ ಮಹಿಳೆ ಎಂದು ಆಯ್ಕೆಯಾಗಿದ್ದಾರೆ. ಸ್ಪರ್ಧೆಯಲ್ಲಿ ಕರೀನಾ ಕಪೂರ್, ಆರ್ ಮಾಧವನ್ ಸೇರಿದಂತೆ ಬಾಲಿವುಡ್ ಹಾಲಿವುಡ್ ತಾರೆಗಳು ಇದ್ದರು. ಸಸ್ಯಾಹಾರದಿಂದ ಪ್ರಾಣಿ ಹಿಂಸೆ ತಡೆಯಬಹುದು ಹಾಗೂ ತೆಳ್ಳಗಿನ ಮೈಕಟ್ಟಿನ ಸೆಕ್ಸಿ ಲುಕ್ ಪಡೆಯಬಹುದು ಎಂಬುದು ಪೆಟಾ ಸಂದೇಶ. (ಏಜೆನ್ಸೀಸ್)

English summary
Shahid Kapoor has been voted Asia’s Sexiest Vegetarian Man in a poll conducted by PETAAsiaPacific.com.Singer Faye Wong has been crowned Asia’s Sexiest Vegetarian Woman.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada